ನಿಶ್ಶಬ್ದ (ನೀರವ, ಮೌನ) ಎಂದರೆ ಸುತ್ತಲಿನಲ್ಲಿ ಕೇಳಿಸುವ ಶಬ್ದ ಇಲ್ಲದಿರುವುದು, ತಮ್ಮತ್ತ ಗಮನಸೆಳೆಯದಷ್ಟು ಕಡಿಮೆ ತೀವ್ರತೆಯ ಶಬ್ದಗಳ ಉತ್ಸರ್ಜನ, ಅಥವಾ ಶಬ್ದಗಳನ್ನು ಉತ್ಪತ್ತಿಮಾಡುವುದನ್ನು ನಿಲ್ಲಿಸಿರುವ ಸ್ಥಿತಿ; ಈ ಕೊನೆಯ ಅರ್ಥವನ್ನು, ಮಾತು ಅಥವಾ ಇತರ ಮಾಧ್ಯಮದ ಮೂಲಕ, ಒಟ್ಟಿನಲ್ಲಿ ಯಾವುದೇ ರೂಪದ ಸಂವಹನದ ಸಮಾಪ್ತಿ ಅಥವಾ ಅನುಪಸ್ಥಿತಿಗೆ ಅನ್ವಯಿಸುವಂತೆ ವಿಸ್ತರಿಸಬಹುದು.[೧]

ಕೆಲವೊಮ್ಮೆ ಭಾಷಣಕಾರರು ಒಂದು ಶಬ್ದವನ್ನು ಹುಡುಕುವಲ್ಲಿ ಹಿಂಜರಿದಾಗ ನಿಶ್ಶಬ್ದವಾಗುತ್ತಾರೆ, ಅಥವಾ ತಮ್ಮನ್ನು ತಿದ್ದಿಕೊಳ್ಳುವ ಮುನ್ನ ತಮ್ಮನ್ನು ತಾವು ತಡೆದುಕೊಳ್ಳುತ್ತಾರೆ. ಛಂದಸ್ಸಿನ ಘಟಗಳ ಗಡಿಗಳನ್ನು ಗುರುತಿಸಲು, ಸರದಿಯಲ್ಲಿ ಮಾತನಾಡುವಾಗ, ಅಥವಾ ಪ್ರತಿಕ್ರಿಯಾತ್ಮಕ ಚಿಹ್ನೆಗಳಾಗಿ (ಉದಾ. ಅಸಂತೋಷ, ಅಸಮ್ಮತಿಯ, ಮುಜುಗರ, ಯೋಚಿಸುವ ಬಯಕೆ, ಗೊಂದಲ, ಮುಂತಾದವುಗಳ ಚಿಹ್ನೆಯಾಗಿ) ಜನರು ಅಲ್ಪಾವಧಿಯ ಮೌನಗಳನ್ನು ಬಳಸುತ್ತಾರೆ ಎಂದು ಭಾಷಣ ವಿಶ್ಲೇಷಣೆಯು ತೋರಿಸುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. "Silence | Define Silence at Dictionary.com". Dictionary.reference.com. Retrieved 2013-08-15.