ನಿಶ್ಚಲ ರಾವ್
ಈ ಲೇಖನದ ವಿಷಯ ವಿಕಿಪೀಡಿಯ ಸಾಮಾನ್ಯ ಗಮನಾರ್ಹತೆ ಮಾರ್ಗದರ್ಶಿ ಹೊಂದಿಲ್ಲ. ವಿಷಯದ ಬಗ್ಗೆ ವಿಶ್ವಾಸಾರ್ಹ, ಮಾಧ್ಯಮಿಕ ಮೂಲಗಳನ್ನು ಸೇರಿಸುವ ಮೂಲಕ ಗಮನವನ್ನು ಸ್ಥಾಪಿಸಲು ದಯವಿಟ್ಟು ಸಹಾಯ ಮಾಡಿ. ಮಹತ್ವವನ್ನು ಸ್ಥಾಪಿಸಲಾಗದಿದ್ದರೆ, ಲೇಖನವನ್ನು ವಿಲೀನಗೊಳಿಸಬಹುದು, ಮರುನಿರ್ದೇಶಿಸಲಾಗುತ್ತದೆ, ಅಥವಾ ಅಳಿಸಬಹುದು. general notability guideline. |
ಡಾ. ನಿಶ್ಚಲರಾವ್,[೧] ದಕ್ಷಿಣ ಕನ್ನಡ ಜಿಲ್ಲೆಯ ಮಣಿಪಾಲ್ ನಗರದ ನೆಹರು ನಗರದ ವಾಸಿ, ಲಂಡನ್ನಲ್ಲಿ ಹೆಸರಾಂತ ವಿಟ್ಟಿಂಗ್ಟನ್ ಆಸ್ಪತ್ರೆಯಲ್ಲಿ ಹೆರಿಗೆವೈದ್ಯರಾಗಿ ('neonatologist) ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾಭ್ಯಾಸ
ಬದಲಾಯಿಸಿನಿಶ್ಚಲರಾವ್, ಕೆ. ಎಮ್. ಸಿ ಮಣಿಪಾಲಿನಲ್ಲಿ, ಎಮ್. ಬಿ. ಬಿಎಸ್ ಪದವಿ, ಲಂಡನ್ ನಲ್ಲಿ ಎಮ್.ಆರ್.ಸಿ.ಪಿ ಪದವಿಗಳನ್ನು ಗಳಿಸಿದ ನಂತರ ೨೦ ವರ್ಷಗಳಿಂದ ಲಂಡನ್ ಆಸ್ಪತ್ರೆಗಳಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಇವರ ತಂದೆ, ಕೆ. ಕಮಲಾಕ್ಷ ಎಮ್. ಐಟಿ ಪ್ರೊಫೆಸರ್, ಹಾಗೂ ಮಾಜಿ ಸ್ನೇಹಪ್ರಭಾ ಕಾರ್ಪೊರೇಶನ್ ಸದಸ್ಯ. ಈಗ ಅವರು ನಿವ್ರುತ್ತರಾಗಿದ್ದಾರೆ. ನಿಶ್ಚಲರಾವ್ ರವರು, ಅವಧಿ ಪೂರ್ವದಲ್ಲೇ ಜಿನಿಸುವ ಮಕ್ಕಳ ಬಗ್ಗೆ ವಿಶೇಷ ಜ್ಞಾನವನ್ನು ಗಳಿಸಿದ್ದಾರೆ. ಒಂದು ಹೆರಿಗೆ ವಿಷಯದಲ್ಲಿ ಯಶಸ್ಸುಗಳಿಸಿದ 'ವಿಸ್ಮಯಕಾರಿ ವೈದ್ಯ'ರೆಂದು ಹೆಸರು ಗಳಿಸಿದ್ದಾರೆ.
ಹೆರಿಗೆಯಾದ ಶಿಶು ಉಸಿರಾಡುತ್ತಿರಲಿಲ್ಲ
ಬದಲಾಯಿಸಿಸುಮಾರು ೧೪ ತಿಂಗಳ ಕೆಳಗೆ ಸಡನ್ ದಂಪತಿಗಳು ಲಂಡನ್ ನಗರದ ವಿಟಿಂಗ್ ಟನ್ ಆಸ್ಪತ್ರಯ ಹೆರಿಗೆ ಕಕ್ಷಕ್ಕೆ ದಾಖಲಾಗಿದ್ದು ಅವರಿಗೆ ಜನಿಸಿದ ಶಿಶು ಉಸಿರಾಡುತ್ತಿರಲಿಲ್ಲ, ನಿಶ್ಚಲರಾವ್ ಇದೇ ವಿಟಿಂಗ್ ಟನ್ ಆಸ್ಪತ್ರೆಯಲ್ಲಿ 'neonatologist' ವೈದ್ಯರಾಗಿ ದುಡಿಯುತ್ತಿದ್ದಾರೆ. ಆಗ ಎಲ್ಲರಿಗೂ ಜನಿಸಿದ ಮಗು ಉಳಿಯುವುದಿಲ್ಲವೆಂದು ಭಾವಿಸಿ ಆಸೆಯನ್ನು ತೊರೆದಿದ್ದರು. ಆದರೆ ಡಾ.ರಾವ್ ಹಾಗೂ ತಂಡ ಶಿಶುವಿಗೆ ಎಮರ್ಜೆನ್ಸಿ ನೆರವು ಕೊಟ್ಟು ಬಹಳ ಸಮಯ ಪರಿಣಾಮಕ್ಕೆ ಕಾದರು. ಕೆಲವು ಗಂಟೆಗಳ ಬಳಿಕ ಶಿಶು ಚಿಕಿತ್ಸಾ ಕ್ರಮಕ್ಕೆ ಸ್ಪಂದಿಸುತ್ತಾ ಬಂತು.ಹಾಗೂ ನಿಧಾನವಾಗಿ ಕಣ್ಣುಬಿಟ್ಟು ಉಸಿರಾಡಲು ಪ್ರಾರಂಭಿಸಿತು. ಈಗ ಅದು ಹಿಂದಿನ ಅಪಾಯದಿಂದ ಪಾರಾಗಿರುವಂತಿದೆ. ಆಸ್ಪತ್ರೆಯ ವೈದ್ಯರು ಈ ಮಹತ್ವದ ಘಟನೆಯನ್ನು ಮರೆತಿದ್ದರು. ಆದರೆ ಮಗುವನ್ನು ಹೆತ್ತ ತಂದೆತಾಯಿಗಳು ತಮ್ಮ ಕೃತಜ್ಞೆಯನ್ನು ವ್ಯಕ್ತಪಡಿಸಲು ಲಂಡನ್ ನ, ಬಿ.ಬಿ.ಸಿ ಸುದ್ದಿಮಾಧ್ಯಮಕ್ಕೆ ಡಾ. ನಿಶ್ಚಲರಾವ್ ರವರನ್ನು ಆಹ್ವಾನಿಸಿ ಸಂದರ್ಶನ ನಡೆಸಲು ಬಿನ್ನವಿಸಿಕೊಂಡರು. ಬಿ.ಬಿ.ಸಿ.ಟೆಲಿವಿಶನ್, ಜುಲೈ, ೩ ರಂದು ಒಂದು ಸಂದರ್ಶನವನ್ನು ಆಯೋಜಿಸಿ ಬ್ರಿಟನ್ನಿನ ನಾಗರಿಕರಿಗೆ ಈ ಘಟನೆಯನ್ನು ಸಾದರಪಡಿಸಿದರು. ಇದಾದನಂತರ ಆಸ್ಪತ್ರೆಯ ಆಡಳಿತಾಧಿಕಾರಿಗಳು ಡಾ.ನಿಶ್ಚಲರಾವ್ ರವರಿಗೆ, ‘Amazing Doctor’ ಎಂಬ ಒಂದು ಉಪಾಧಿಯನ್ನು ಕೊಟ್ಟು ಗೌರವಿಸಿದರು. ಇಂತಹ ದೊಡ್ಡಕೆಲಸ ಸಾಧನೆಗೆ ಆಸ್ಪತ್ರೆಯ ಆಡಳಿತ ಅಧಿಕಾರಿಗಳು ಶ್ಲಾಘಿಸಿದಾಗ ನಿಶ್ಚಲರಾವ್ ಪ್ರತಿಕ್ರಯಿಸಿದರು. "ಶಸ್ತ್ರ ಚಿಕಿತ್ಸೆಯ ಯಶಸ್ಸು ತಮ್ಮ ತಂಡದ ಸದಸ್ಯರೆಲ್ಲರ ಸಹಕಾರ ಮತ್ತು ಕಾರ್ಯ ನಿಷ್ಠೆಯಿಂದ ಮಾತ್ರ ಸಾಧ್ಯವಾಗಿದೆ"
ಪ್ರಶಸ್ತಿಗಳು
ಬದಲಾಯಿಸಿ- ಅಮೇಜಿಂಗ್ ಡಾಕ್ಟರೆಂಬ ಪ್ರಶಸ್ತಿ.[೨]