ನಿಶಿಧಿ ಬಸದಿ, ಹಿರಿಯಂಗಡಿ

ನಿಶಿಧಿ ಬಸದಿ, ಹಿರಿಯಂಗಡಿ

ಸ್ಥಳ ಬದಲಾಯಿಸಿ

ಈ ಬಸದಿಯು ಕಾರ್ಕಳ ತಾಲೂಕು ಹಿರಿಯಂಗಡಿಯಲ್ಲಿರುವ ಇನ್ನೊಂದು ಪ್ರಖ್ಯಾತ ಬಸದಿಯಾಗಿದೆ. ಇದನ್ನು ನಿಶಿಧಿ ಬಸದಿ ಎಂದು ಕರೆಯುತ್ತಾರೆ.

ಮಾರ್ಗ ಬದಲಾಯಿಸಿ

ಇದು ತಾಲೂಕು ಕೇಂದ್ರದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದೆ. ಈ ಬಸದಿಗೆ ತಲುಪಲು ಆನೆಕೆರೆ ಬಳಿಯ ಮುಖ್ಯರಸ್ತೆಯಿಂದ ಹಿರಿಯಂಗಡಿ ರಸ್ತೆ ಮೂಲಕ ಸಾಗಬೇಕು.

ವಾಸ್ತು ಬದಲಾಯಿಸಿ

ಇಲ್ಲಿ ನೇಮಿನಾಥ ಸ್ವಾಮಿ ಬಸದಿಯ ಎದುರು ತಗ್ಗಿನಲ್ಲಿ ಶ್ರೀ ಶಾಂತಿನಾಥ ಸ್ವಾಮಿ ಬಸದಿ ಪಕ್ಕದಲ್ಲಿದೆ. ಇಲ್ಲಿ ನೇಮಿನಾಥಸ್ವಾಮಿ, ಪಾರ್ಶ್ವನಾಥ ಸ್ವಾಮಿ ಮತ್ತು ವರ್ಧಮಾನ ಸ್ವಾಮಿಗಳು ಪೂಜಿಸಲ್ಪಡುತ್ತಿದ್ದಾರೆ. ಈ ಬಸದಿಯು ಪೂರ್ವಾಭಿಮುಖವಾಗಿದ್ದು, ಎದುರಿಗೆ ಗುರು ಬಸದಿ ಇದೆ. ಇದು ಅತ್ಯಂತ ಚಿಕ್ಕಬಸದಿಯಾಗಿದೆ.[೧]

ವಾಸ್ತು ಶಿಲ್ಪ ಬದಲಾಯಿಸಿ

ಕಂಬಗಳಲ್ಲಿ ವಿಶೇಷವಾದ ಯಾವುದೇ ರೀತಿಯ ಕೆತ್ತನೆಗಳು ಕಂಡುಬರುವುದಿಲ್ಲ. ಇದರ ಗೋಡೆಯನ್ನು ಮುರ ಕಲ್ಲಿನಿಂದ ಕಟ್ಟಿ ಮೇಲೆ ಮಾಡಿಗೆ ಹೆಂಚನ್ನು ಹಾಸಲಾಗಿದೆ. ಈ ಬಸದಿಗೆ ಯಾವುದೇ ಮಂಟಪವಿಲ್ಲ. ಇದರ ಮೂರ್ತಿಗಳು ಕಪ್ಪು ಶಿಲಾಫಲಕದಿಂದ ಮಾಡಲ್ಪಟ್ಟಿದೆ. ಹಾಗೂ ಉಬ್ಬು ಶಿಲ್ಪಗಳ ರೀತಿಯಲ್ಲಿದೆ. ಈ ಬಸದಿಯು ಕಾರ್ಕಳ ಜೈನ ಮಠದ ಅಧೀನದಲ್ಲಿದ್ದು, ಸುಮಾರು ೬೦೦ ವರ್ಷಗಳ ಇತಿಹಾಸವಿದೆ ಎಂದು ಹೇಳುತ್ತಾರೆ. ಬಸದಿಯ ಒಳಗೆ ನಾಗಶಿಲಾ ಪ್ರತಿಮೆಯಿದ್ದು ಅದು ಉತ್ತರಾಭಿಮುಖವಾಗಿದೆ.

ಉಲ್ಲೇಖಗಳು ಬದಲಾಯಿಸಿ

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನಮಂದಿರಗಳ ದರ್ಶನ. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. pp. ೩೬.