ನಿವೃತ್ತಿ ಎಂದರೆ ಒಬ್ಬರ ಸ್ಥಾನ ಅಥವಾ ವೃತ್ತಿ ಅಥವಾ ಸಕ್ರಿಯ ಕಾರ್ಯ ಜೀವನದಿಂದ ಹಿಂದೆ ಸರಿಯುವುದು. ಕೆಲಸದ ಸಮಯವನ್ನು ಕಡಿಮೆ ಮಾಡುವ ಮೂಲಕ ಒಬ್ಬ ವ್ಯಕ್ತಿಯು ಅರೆನಿವೃತ್ತವೂ ಆಗಬಹುದು.

ಪೂರ್ವ ನಿವೃತ್ತಿ ಎಂಬ ಉದಯೋನ್ಮುಖ ಸ್ಥಿತಿಯಲ್ಲಿ ಇರಲು ಆಯ್ಕೆ ಮಾಡುವ ಮೂಲಕ, ಹೆಚ್ಚಿನ ಸಂಖ್ಯೆಯಲ್ಲಿ ವ್ಯಕ್ತಿಗಳು ಪೂರ್ಣ ನಿವೃತ್ತಿಯ ಈ ಬಿಂದುವನ್ನು ಮುಂದೂಡಲು ಆಯ್ದುಕೊಳ್ಳುತ್ತಿದ್ದಾರೆ.[]

ಖಾಸಗಿ ಅಥವಾ ಸಾರ್ವಜನಿಕ ಪಿಂಚಣಿ ಪ್ರಯೋಜನಗಳಿಗೆ ತಾವು ಅರ್ಹರಾಗಿರುವಾಗ, ಅನೇಕ ಜನರು ನಿವೃತ್ತರಾಗಲು ಇಷ್ಟಪಡುತ್ತಾರೆ. ಆದರೆ, ದೈಹಿಕ ಸ್ಥಿತಿಗಳು (ಕಾಯಿಲೆ ಅಥವಾ ಅಪಘಾತ) ಮುಂದೆ ಕೆಲಸ ಮಾಡಲು ವ್ಯಕ್ತಿಗೆ ಅವಕಾಶ ಕೊಡದಿದ್ದಾಗ, ಅಥವಾ ತಮ್ಮ ಸ್ಥಾನಕ್ಕೆ ಸಂಬಂಧಿಸಿದ ಕಾಯಿದೆಯ ಪರಿಣಾಮವಾಗಿ, ಕೆಲವರು ಬಲವಂತವಾಗಿ ನಿವೃತ್ತರಾಗಬೇಕಾಗುತ್ತದೆ. ಬಹುತೇಕ ದೇಶಗಳಲ್ಲಿ, ನಿವೃತ್ತಿಯ ಕಲ್ಪನೆಯು ಇತ್ತೀಚಿನ ಮೂಲದ್ದಾಗಿದೆ, ಮತ್ತು ೧೯ನೇ ಶತಮಾನದ ಉತ್ತರಾರ್ಧ ಹಾಗೂ ೨೦ನೇ ಶತಮಾನದ ಪೂರ್ವಾರ್ಧದ ಅವಧಿಯಲ್ಲಿ ಪರಿಚಯಿಸಲ್ಪಟ್ಟಿತು.

ಉಲ್ಲೇಖಗಳು

ಬದಲಾಯಿಸಿ