ನಿರಂಜನ ವಾನಳ್ಳಿ
ನಿರಂಜನ ವಾನಳ್ಳಿ[೧] ಕವಿ, ವಿಮರ್ಶಕ, ಸಂಶೋಧಕ, ಅಧ್ಯಾಪಕ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ, ಕನ್ನಡದ ಹೆಸರಾಂತ ನುಡಿಚಿತ್ರಕಾರ, ಅಂಕಣಕಾರ, ಫ್ರೀಲಾನ್ಸ್ ಪತ್ರಕರ್ತ. ವೃತ್ತಿಯಲ್ಲಿ ಪತ್ರಕರ್ತ, ಹವ್ಯಾಸದಲ್ಲಿ ಕಾಲೇಜು ಅಧ್ಯಾಪಕ. ಮೈಸೂರು ವಿಶ್ವವಿದ್ಯಾನಿಲಯದ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ. ಸದಾ ಒಂದಲ್ಲೊಂದು ಪತ್ರಿಕೆ, ನಿಯತಕಾಲಿಕಗಳಲ್ಲಿ ವೈವಿಧ್ಯಮಯ ಬರಹಗಳನ್ನು ಪ್ರಕಟಿಸುತ್ತಿದ್ದರು. ನಾಡಿನ ಬಹುತೇಕ ಎಲ್ಲಾ ಪತ್ರಿಕೆಗಳಲ್ಲಿ ವಾನಳ್ಳಿಯವರ ಲೇಖನಗಳನ್ನು ನಿರಂಜನ ವಾನಳ್ಳಿ ರಚಿಸಿದ್ದಾರೆ. ಪ್ರಸ್ತುತ ಸಂಗೀತ ವಿಶ್ವವಿದ್ಯಾನಿಲಯದ ಕುಲಸಚಿವರು. ಐದು ಅಂತಾರಾಷ್ಟ್ರೀಯ, ೨೫ ರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ.
ನಿರಂಜನ ವಾನಳ್ಳಿ | |
---|---|
ಜನನ | ನಿರಂಜನ ೧೯೬೫ ವಾನಳ್ಳಿ, ಕರ್ನಾಟಕ, ಭಾರತ |
ವೃತ್ತಿ | ಕವಿ, ಪತ್ರಕರ್ತ, ಸಾಹಿತ್ಯ ವಿಮರ್ಶಕ, ಚಿಂತಕ |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | MA, Ph.D |
ಪ್ರಮುಖ ಪ್ರಶಸ್ತಿ(ಗಳು) | ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೯೩, ಉಗ್ರಾಣ ಪ್ರಶಸ್ತಿ- ೨೦೦೨, ಗೊರೂರು ಪ್ರಶಸ್ತಿ- ೨೦೦೨,ಕೃಷ್ಣಾನಂದ ಕಾಮತ್ ಪುರಸ್ಕಾರ |
ಜನನ/ಜೀವನ
ಬದಲಾಯಿಸಿನಿರಂಜನ ವಾನಳ್ಳಿ[೨][೩] ಹುಟ್ಟಿದ್ದು ೧೯೬೫ರಲ್ಲಿ, ಉತ್ತರ ಕನ್ನಡ ಜಿಲ್ಲೆಯ 'ವಾನಳ್ಳಿ'ಯಲ್ಲಿ. ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢಶಾಲೆ ವಿದ್ಯಾಭ್ಯಾಸವನ್ನು ಮುಗಿಸಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಸಂವಹನ ಮತ್ತು ಪತ್ರಿಕೋದ್ಯಮ ಪ್ರಾಧ್ಯಾಪಕರು ಇವರು. ಉದಯವಾಣಿ ದಿನಪತ್ರಿಕೆಯ ಅಂಕಣಕಾರರು. ಇಂದಿನವರೆಗೂ ಪ್ರಕಟಿತ ಪುಸ್ತಕಗಳು ೩೧. ನಿರಂಜನ ವಾನಳ್ಳಿ ಅವರ 'ಒಂದು ಅಡಿ ಭೂಮಿ, ಬೊಗಸೆ ತುಂಬ ಪ್ರೀತಿ' ಎಂಬುದು 31 ನೇ ಕೃತಿ. ಇವರು ದ.ಕ.ಜಿಲ್ಲೆಯ ಉಜಿರೆಯ ಎಸ್.ಡಿ.ಎಂ SDM {ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ) ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿದ್ದರು.
ನಿರ್ವಹಿಸಿರುವ/ ನಿಭಾಯಿಸುತ್ತಿರುವ ಜವಾಬ್ದಾರಿಗಳು
ಬದಲಾಯಿಸಿ- ಮೈಸೂರು ವಿಶ್ವವಿದ್ಯಾನಿಲಯದ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರದ ನಿರ್ದೇಶಕರು
- ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಪಕರು
- ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು
- ಉದಯವಾಣಿ ದಿನಪತ್ರಿಕೆಯ ಅಂಕಣಕಾರು
- ಸಂಗೀತ ವಿಶ್ವವಿದ್ಯಾನಿಲಯದ ಕುಲಸಚಿವರು
ಕೃತಿಗಳ ಪಟ್ಟಿ
ಬದಲಾಯಿಸಿಪತ್ರಿಕೋದ್ಯಮ ಪುಸ್ತಕಗಳು
ಬದಲಾಯಿಸಿ- ನಿಯತಕಾಲಿಕ ಪತ್ರಿಕೋದ್ಯಮ
- ಪರಿಸರ ಪತ್ರಿಕೋದ್ಯಮ
- ಎಲ್ಲರಿಗೂ ಬೇಕು ಸಂವಹನದ ಕಲೆ
- ಪತ್ರಿಕಾ ಮಂಡಳಿ ಏನು? ಎತ್ತ?
ಅಂಕಣ ಸಾಹಿತ್ಯ
ಬದಲಾಯಿಸಿ- ಕಂಡಿದ್ದು ಕಾಡಿದ್ದು
ನುಡಿ ಚಿತ್ರಗಳು
ಬದಲಾಯಿಸಿ- ತುಡಿದ ಮನ
ಪ್ರಬಂಧಗಳು
ಬದಲಾಯಿಸಿ- ಪ್ರೀತಿಗೆಷ್ಟು ಮುಖಗಳು
- ಹುಡುಕಾಟದ ಹೊತ್ತು
- ಆ ಕ್ಷಣದ ನೋಟ
ಪ್ರವಾಸ ಸಾಹಿತ್ಯ
ಬದಲಾಯಿಸಿ"ಒಮಾನ್ ಎಂಬ ಒಗಟು"
ಅಭಿನಂದನಾಗ್ರಂಥ
ಬದಲಾಯಿಸಿ- ನುಡಿರಂಜನ
ಕವನ ಸಂಕಲನ
ಬದಲಾಯಿಸಿ- ಒಂದು ಅಡಿ ಭೂಮಿ, ಬೊಗಸೆ ತುಂಬ ಪ್ರೀತಿ
ಮಹಾಪ್ರಬಂಧ
ಬದಲಾಯಿಸಿ- ಕನ್ನಡ ಸಾಹಿತ್ಯ ಪತ್ರಿಕೆಗಳು
ಪ್ರಶಸ್ತಿಗಳು
ಬದಲಾಯಿಸಿ- "ಸುದ್ದಿಯಷ್ಟೇ ಅಲ್ಲ" ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ೧೯೯೩
- "ಪ್ರೀತಿಗೆಷ್ಟು ಮುಖಗಳು" ಪ್ರಬಂಧ ಸಂಕಲನಕ್ಕೆ ಉಗ್ರಾಣ ಪ್ರಶಸ್ತಿ, ೨೦೦೨
- "ಹುಡುಕಾಟದ ಹೊತ್ತು" ಪ್ರಬಂಧ ಸಂಕಲನಕ್ಕೆ ಗೊರೂರು ಪ್ರಶಸ್ತಿ, ೨೦೦೨
- "ಒಮಾನ್ ಎಂಬ ಒಗಟು" ಪ್ರವಾಸ ಸಂಕಲನಕ್ಕೆ ಕೃಷ್ಣಾನಂದ ಕಾಮತ್ ಪುರಸ್ಕಾರ[೪] ಮತ್ತು
- ಶಿವಮೊಗ್ಗ ಕರ್ನಾಟಕ ಸಂಘದ ಪುರಸ್ಕಾರ, ೨೦೧೦
ಉಲ್ಲೇಖ
ಬದಲಾಯಿಸಿ- ↑ http://vijaykarnataka.indiatimes.com/district/uttarakannada/the-challenge-is-to-foster-the-acceptance-of-a-variety-vanalli/articleshow/55000367.cms
- ↑ http://www.sahilonline.net/ka/dist-level-press-day
- ↑ "ಆರ್ಕೈವ್ ನಕಲು". Archived from the original on 2021-12-03. Retrieved 2016-11-07.
- ↑ http://kannada.oneindia.com/news/2011/09/25/krishnananda-kamat-award-to-niranjan-vanalli-aid0037.html