ಉತ್ತರ ಕನ್ನಡದ ಅದ್ಭುತ ಜಲಪಾತಗಳಲ್ಲಿ ನಿಪ್ಲಿ ಜಲಪಾತ ಕೂಡಾ ಒಂದು. ಸಿದ್ದಾಪುರ ತಾಲ್ಲೂಕಿನಿಂದ ಸುಮಾರು ೧೦ ಕಿಲೋಮೀಟರ್ ದೂರದಲ್ಲಿರುವ ನಿಪ್ಲಿ ಎಂಬ ಹಳ್ಳಿಯಲ್ಲಿ ಈ ಜಲಪಾತವು ಕಂಡುಬರುತ್ತವೆ. ಉತ್ತರಕನ್ನಡದ ಪ್ರವಾಸಿ ಸ್ಥಳಗಳಲ್ಲಿನ ಪ್ರೇಕ್ಷಣೀಯ ಸ್ಥಳವಾಗಿ ನಿಪ್ಲಿ ಜಲಪಾತವು ಜನರ ಮನಸೆಳೆದಿದೆ. ಇಲ್ಲಿನ ಸುತ್ತ ಮುತ್ತಲಿನ ಪ್ರದೇಶವು ಅದ್ಭುತವಾಗಿದ್ದು ಹೋಸುದಾರ್ಮ ಎಂಬ ಅಣೆಕಟ್ಟನ್ನು ಈ ನದಿಗೆ ಕಟ್ಟಲಾಗಿದೆ. ಅಣೆಕಟ್ಟಿನ ಹಿನ್ನೀರು ಈ ಜಲಪಾತದ ಹುಟ್ಟಿಗೆ ಕಾರಣವಾಗಿದೆ. ಸುತ್ತಲಿನ ಪ್ರದೇಶ ಹಸಿರಿನಿಂದ ಕೂಡಿದೆ. ವಿಶೇಷವೆಂದರೆ ಮಕ್ಕಳಿಂದ ಹಿಡಿದು ವಯಸ್ಕರ ತನಕ ಎಲ್ಲರೂ ಕುಟುಂಬ ಸಮೇತರಾಗಿ ಈ ಪ್ರೇಕ್ಷಣೀಯ ಸ್ಥಳಕ್ಕೆ ಆಗಮಿಸಿ ಜಲಪಾತದ ಸೊಬಗನ್ನು ಸವಿಯಬಹುದು. ಜಲಪಾತವಾದರೂ ಕೂಡಾ ಸುರಕ್ಷಿತವಾಗಿರುವುದ ಜನರಿಗೆ ಖುಷಿಯ ವಿಷಯ. ಜಲಪಾತದ ಉತ್ತಮ ಜಾಗವೆಂದರೆ ಹೊಸೂರ್ ಅಣೆಕಟ್ಟಿನ ಹಿನ್ನೀರು. ಇಲ್ಲಿ ನಾವು ಯಾವುದೇ ಅಪಾಯವಿಲ್ಲದೇ ಈಜಬಹುದು. ಈಜಲು ತಿಳಿದಿಲ್ಲದ ಜನರು ಸಹ ನೀರಿನೊಂದಿಗೆ ಸುರಕ್ಷಿತವಾಗಿ ಆಟವಾಡಬಹುದು. ಹಾಗೆಯೇ ನೀರಿನ ಮಧ್ಯದಲ್ಲಿ ನಿಂತು ಫೋಟೋಕೂಡಾ ತೆಗೆದುಕೊಳ್ಳಬಹುದು. ಫೋಟೋಗ್ರಾಫರ್ ಅಥವಾ ಫೋಟೋಗೆ ಅತ್ಯುತ್ತಮ ಸ್ಥಳವಾಗಿದೆ ಈ ಜಲಪಾತ.

ತೆರಳುವ ಮಾರ್ಗ ಬದಲಾಯಿಸಿ

ಉತ್ತರ ಕನ್ನಡದಲ್ಲಿ ಸಿದ್ದಾಪುರ ತಾಲ್ಲೂಕಿನಿಂದ ೧೦ ಕಿ.ಮೀ ದೂರದಲ್ಲಿ ನಿಪ್ಲಿ ಫಾಲ್ಸ್ ಇದೆ. ಸಿದ್ದಾಪುರದಿಂದ ಮಾವಿನನಂಗಡಿ ಮಾರ್ಗವನ್ನು ತೆಗೆದುಕೊಂಡು ಅಲ್ಲಿಂದ ಮುಂದೆ ಸಾಗಿ ಸುಮಾರು ೬ ಕಿಲೋಮೀಟರಿಗೆ ಎಡುಕಟ್ಟಾ ಎಂಬ ಊರಿನ ರಸ್ತೆಯ ಎಡಕ್ಕೆ ಸಾಗಬೇಕು. ಅಲ್ಲಿಂದ ಸುಮಾರು ೨ ಕಿಲೋಮೀಟರ್‌ಗೆ ನಿಪ್ಲಿ ಜಲಪಾತವನ್ನು ತಲುಪಬಹುದು. ಪ್ರವಾಸಿಗರಿಗೆ ಹತ್ತಿರದ ರೈಲ್ವೆ ನಿಲ್ದಾಣವು ಬೆಂಗಳೂರು ಮಾರ್ಗದ ರೈಲು ಮಾರ್ಗವಿದೆ. ಹಾಗೆಯೇ ಮೈಸೂರು ತಾಳಗುಪ್ಪದಿಂದ ರೈಲಿನ ಸಂಪರ್ಕವಿದೆ. ಈ ಜಲಪಾತವು ತಾಳಗುಪ್ಪದಿಂದ ಕೇವಲ ೧೬ ಕಿಲೋಮೀಟರ್ ದೂರದಲ್ಲಿದೆ. ತಾಳಗುಪ್ಪ ಜೋಗ ಜಲಪಾತದ ( ಬೆಂಗಳೂರು ಹೊನ್ನಾವರ ರಸ್ತೆ) ರಸ್ತೆಯಲ್ಲಿ ತೆರಳಬೇಕು. ಹಾಗೂ ಅಡುಕಟ್ಟದಲ್ಲಿ ೮ ಕಿಲೋಮೀಟರ್ ನಂತರ ಹಲ್ಗೇರಿ ಊರಿನ ರಸ್ತೆಯಲ್ಲಿ ತೆರಳಬೇಕು. ನಿಪ್ಲಿ ಜಲಪಾತವು ಆಡುಕಟ್ಟದಿಂದ ೮ ಕಿಲೋ ಮೀಟರ್ ದೂರದಲ್ಲಿ ಕಾಣ ಸಿಗುತ್ತದೆ. ಇಲ್ಲಿ ವಾಹನ ನಿಲುಗಡೆಗೆಂದೇ ಉಚಿತವಾದ ಪಾರ್ಕಿಂಗ್ ವ್ಯವಸ್ಥೆ ಕೂಡಾ ಇದೆ. ಆದ್ದರಿಂದ ಪ್ರವಾಸಿಗರು ಜಲಪಾತದ ಸಮೀಪವೇ ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗಬಹುದು. ಹಾಗೆಯೇ ನಿಪ್ಲಿ ಫಾಲ್ಸ್ ಮತ್ತು ಹುಸೂರು ಆಣೆಕಟ್ಟಿನ ಚಿತ್ರವನ್ನು ಸೆರೆ ಹಿಡಿಯಲು ಯಾವುದೇ ಪ್ರವೇಶ ಶುಲ್ಕವನ್ನು ನಿಗದಿಸಿಲ್ಲ. ಆದ್ದರಿಂದ ಪ್ರವಾಸಿಗರು ತಮಗೆ ಬೇಕಾದಷ್ಟು ಪೋಟೋಗಳನ್ನು ಸೆರೆ ಹಿಡಿಯಬಹುದು. ಉಪಹಾರ ಅಥವಾ ಸಣ್ಣ ತಿನಿಸುಗಳನ್ನು ಖರೀದಿಸಲು ಸಣ್ಣದಾದ ಗೂಡಂಗಡಿಯಿದೆ. ಅಲ್ಲಿ ತಂಪು ಪಾನೀಯಗಳು ಹಾಗೆಯೇ ತಿಂಡಿ ತಿನಿಸುಗಳನ್ನು ಖರೀದಿಸಬಹುದು. ಪ್ರವಾಸಿಗರಿಗಾಗಿಯೇ ತ್ವರಿತವಾದ ಆಹಾರ ಕೇಂದ್ರವೂ ಕೂಡಾ ನಿಪ್ಲಿ ಜಲಪಾತದಲ್ಲಿ ಲಭ್ಯವಿದೆ.

ವಸತಿ ವ್ಯವಸ್ಥೆ ಬದಲಾಯಿಸಿ

ಇಬ್ಬನಿ ಹೋಮ್ ಸ್ಟೇ : ಇದು ನಿಪ್ಲಿ ಫಾಲ್ಸ್ ನಿಂದ ಸುಮಾರು ೯ ಕಿಲೋ ಮೀಟರ್ ದೂರದಲ್ಲಿದೆ. ಜೋಗ ಜಲಪಾತದ ಬಳಿ ಪ್ರಕೃತಿ ಯಾತ್ರಿ ನಿವಾಸವಿದೆ ಹಾಗೂ ಹಿಲ್ಸ್ ವ್ಯೂ ಸ್ಟೇ, ಮುತ್ತಗ ಸ್ಟೇ ಈ ರೀತಿಯ ಹೋಮ್ ಸ್ಟೇಗಳು ತುಂಬ ಕಾಣಸಿಗುತ್ತವೆ. ಎಲ್ಲಾ ರೆಸಾರ್ಟ‍ ಸ್ಟೇಗಳು ನಿಪ್ಲಿ ಜಲಪಾತಕ್ಕೆ ಸುಮಾರು ೨೦ ಕಿಲೋಮೀಟರ್ ದೂರದಲ್ಲಿವೆ.

ತೆರಳಲು ಉತ್ತಮ ಸಮಯ ಬದಲಾಯಿಸಿ

ಹುಸೂರ್ ಆಣೆಕಟ್ಟಿನ ಹಿಮ್ಮುಖ ನೀರಿನ ಹರಿವು ಯಾವಾಗಲೂ ಇರುತ್ತದೆ. ಈಜಲು ಬಯಸುವವರು ಈ ಸಮಯದಲ್ಲಿ ಹೆಚ್ಚು ಕಂಡುಬರುತ್ತಾರೆ. ಜಲಪಾತದ ಸೌಂದರ್ಯವನ್ನು ಪಡೆಯಲು ಇಚ್ಛಿಸುವವರು ಜೂನ್ - ಅಕ್ಟೋಬರ್ ತಿಂಗಳಿನಲ್ಲಿ ಪ್ರವಾಸ ಕೈಗೊಳ್ಳುವುದು ಉತ್ತಮ.

ಉಲ್ಲೇಖಗಳು ಬದಲಾಯಿಸಿ

  1. http://prashasti-prashantavanam.blogspo.com/2018/08/NipliFalls.html?m=1[ಶಾಶ್ವತವಾಗಿ ಮಡಿದ ಕೊಂಡಿ]
  2. https://www.prajavani.net/district/uthara-kannada/uttar-kannada-land-falls-667641.html[ಶಾಶ್ವತವಾಗಿ ಮಡಿದ ಕೊಂಡಿ]
  3. https://kannada.oneindia.com/news/2013/07/13/districts-beautiful-rain-photos-from-shimoga-075738.html