ನಿಪ್ಪಟ್ಟು ದಕ್ಷಿಣ ಭಾರತದ ಒಂದು ಕರಿದ ಲಘು ಆಹಾರವಾಗಿದೆ. ಇದನ್ನು ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಜನ್ಮಾಷ್ಟಮಿ ಅಥವಾ ಶ್ರೀ ಕೃಷ್ಣ ಜಯಂತಿ ಹಬ್ಬದ ಅವಧಿಯಲ್ಲಿ ತಯಾರಿಸಲಾಗುತ್ತದೆ. ಈ ಖಾದ್ಯದ ಉಪ್ಪಿರುವ ಮತ್ತು ಸಿಹಿ ರೂಪಗಳಿವೆ. ಇದನ್ನು ತಮಿಳುನಾಡಿನಲ್ಲಿ "ತಟ್ಟೈ" ಎಂದು ಮತ್ತು ಆಂಧ್ರಪ್ರದೇಶ/ತೆಲಂಗಾಣದಲ್ಲಿ "ಚೆಕ್ಕಲು" ಎಂದು ಕರೆಯಲಾಗುತ್ತದೆ.

ನಿಪ್ಪಟ್ಟು ಖಾದ್ಯ (ಕೆಳಗೆ)

ಘಟಕಾಂಶಗಳು

ಬದಲಾಯಿಸಿ

ಸಾಮಾನ್ಯವಾದ ಘಟಕಾಂಶಗಳೆಂದರೆ ಅಕ್ಕಿ ಹಿಟ್ಟು, ಉದ್ದಿನ ಬೇಳೆ, ಕಡಲೇಕಾಯಿ, ಹುರಿಗಡ್ಲೆ, ಕಡಲೆ ಮತ್ತು ಇತರ ರುಚಿಕಾರಕಗಳು. ಇವೆಲ್ಲವನ್ನು ಅವುಗಳ ಅನುಕ್ರಮವಾದ ಪ್ರಮಾಣಗಳಲ್ಲಿ ಬೆರೆಸಿ ಹಿಟ್ಟು ಕಲಿಸಿ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇದು ಬೆಣ್ಣೆ, ಶುಂಠಿ ಮತ್ತು ಮಸಾಲೆಯಂತಹ ವಿವಿಧ ರುಚಿಗಳಲ್ಲಿ ಲಭ್ಯವಿದೆ.[] ಸೇಲಂ‌, ತಮಿಳುನಾಡು ಅದರ 'ತಟ್ಟುವಡೈ ಸೆಟ್'ಗಳಿಗಾಗಿ ಪರಿಚಿತವಾಗಿದೆ. ಇದನ್ನು ನಿಪ್ಪಟ್ಟನ್ನು ಬಳಸಿ (ಸ್ಯಾಂಡ್‍ವಿಚ್‍ನಲ್ಲಿನ ಬ್ರೆಡ್‍ನಂತೆ) ಮಧ್ಯದಲ್ಲಿ ಬೀಟ್‍ರೂಟ್, ಗಜ್ಜರಿಯಂತಹ ವಿವಿಧ ತರಕಾರಿಗಳು, ಚಟ್ನಿ ಮತ್ತು ಎಣ್ಣೆಗಳನ್ನು ತುಂಬಿ ತಯಾರಿಸಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Foods, Tredy. "thattuvadai". Tredy Foods (in ಇಂಗ್ಲಿಷ್). Retrieved 2019-12-03.