ನಿಟ್ಟೆ

ಭಾರತದಲ್ಲಿರುವ ಒಂದು ವಿಶ್ವವಿದ್ಯಾಲಯ

ನಿಟ್ಟೆ, ಅಧಿಕೃತವಾಗಿ ನಿಟ್ಟೆ (ವಿಶ್ವವಿದ್ಯಾನಿಲಯವೆಂದು ಪರಿಗಣಿಸಲಾಗಿದೆ), ಇದು ಭಾರತದ ಮಂಗಳೂರಿನ ದೇರ್ಲಕಟ್ಟೆಯಲ್ಲಿರುವ ಉನ್ನತ ಶಿಕ್ಷಣದ ಸಂಸ್ಥೆಯಾಗಿದೆ. ಇದು ನಿಟ್ಟೆ ಟ್ರಸ್ಟ್ ಅಡಿಯಲ್ಲಿ ರೂಪುಗೊಂಡಿದೆ. ಇದು ನಿಟ್ಟೆ ಶಿಕ್ಷಣ ಟ್ರಸ್ಟ್ ರವರು ಪ್ರಾಯೋಜಿಸಿದ ಟ್ರಸ್ಟ್ ಆಗಿದ್ದು, [] ನಿಟ್ಟೆ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಮೂರು ಕ್ಯಾಂಪಸ್‌ಗಳಲ್ಲಿ ೩೧ ಸಂಸ್ಥೆಗಳನ್ನು ಸ್ಥಾಪಿಸಿದೆ.

ನಿಟ್ಟೆ (ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿದೆ)
ಧ್ಯೇಯಗುಣಮಟ್ಟದ ಶಿಕ್ಷಣ - ಒಂದು ಅಚಲ ಬದ್ಧತೆ
ಪ್ರಕಾರಡೀಮ್ಡ್ ವಿಶ್ವವಿದ್ಯಾಲಯ
ಸ್ಥಾಪನೆ೨೦೦೮
ಕುಲಪತಿಗಳುಎನ್. ವಿನಯ ಹೆಗ್ಡೆ
ಸ್ಥಳಮಂಗಳೂರು, ಕರ್ನಾಟಕ, ಭಾರತ
ಜಾಲತಾಣnitte.edu.in

ಭಾರತ ಸರ್ಕಾರವು ಜೂನ್ ೨೦೦೮ ರಲ್ಲಿ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯದ ಸ್ಥಾನಮಾನವನ್ನು ನೀಡಿತು.

ಅಲ್ಲದೆ ಈ ಸಂಸ್ಥೆಯು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ(ಎನ್ಎಎಸಿ) ನಿಂದ 'ಎ' ದರ್ಜೆಯೊಂದಿಗೆ ಮಾನ್ಯತೆ ಪಡೆದಿದೆ.

ಶಿಕ್ಷಣ ತಜ್ಞರು

ಬದಲಾಯಿಸಿ

ಎ.ಬಿ ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ (೧೯೮೫ ರಲ್ಲಿ ಸ್ಥಾಪನೆಯಾಯಿತು) ನಿಟ್ಟೆ ವಿಶ್ವವಿದ್ಯಾಲಯದ ಮೊದಲ ಘಟಕ ಕಾಲೇಜು.

ಇಂದು, ಇದು ಐದು ಘಟಕ ಕಾಲೇಜುಗಳನ್ನು ಹೊಂದಿದೆ. ಅಂತೆಯೇ ಉಳಿದ ಇತರ ನಾಲ್ಕು ಕಾಲೇಜು ಯಾವುದೆಂದರೆ: ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ (೧೯೯೯ ರಲ್ಲಿ ಸ್ಥಾಪಿಸಲಾಯಿತು), ಎನ್‍.ಜಿ.ಎಸ್.ಎಮ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ (೧೯೮೩ ರಲ್ಲಿ ಸ್ಥಾಪನೆಯಾಗಿದೆ), ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ (೧೯೯೨ ರಲ್ಲಿ ಸ್ಥಾಪಿಸಲಾಗಿದೆ), ಮತ್ತು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಶಿಯಾ (೧೯೯೭ ರಲ್ಲಿ ಸ್ಥಾಪಿಸಲಾಯಿತು).

ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ (ಕೆಎಸ್ಎಚ್ಇಎಮ್ಎ) ಯು ೨೦೦೯ ರಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಘಟಕವಾಯಿತು.

ಇತ್ತೀಚೆಗೆ ಇದು ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (೨೦೧೨), ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್ (೨೦೧೫) ಮತ್ತು ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (೨೦೨೨) ಎಂಬ ಮೂರು ಕಾಲೇಜುಗಳನ್ನು ಹೊಂದಿದೆ.

ನಿಟ್ಟೆ ಯು ೨೦೨೦ ರಲ್ಲಿ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ (ಎನ್ಐಅರ್‍ಎಫ್) ಮೂಲಕ ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ೭೪ ನೇ ಸ್ಥಾನವನ್ನು ಪಡೆದಿದೆ ಮತ್ತು ಒಟ್ಟಾರೆಯಾಗಿ ೧೦೧-೧೫೦ ಬ್ಯಾಂಡ್‌ನಲ್ಲಿದೆ.[]

ಛಾಯಾಂಕಣ

ಬದಲಾಯಿಸಿ

 

ಉಲ್ಲೇಖಗಳು

ಬದಲಾಯಿಸಿ

ಹೊರಗಿನ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ನಿಟ್ಟೆ&oldid=1134636" ಇಂದ ಪಡೆಯಲ್ಪಟ್ಟಿದೆ