'ಅಮೆರಿಕದ ಹುಚ್ಚು ಸಾಹಸಿ'ಯೆಂದು ಕರೆಯಲ್ಪಡುವ (Crazy) ನಿಕ್‌ ವಾಲೆಂಡಾ, ಅಮೆರಿಕ ಮತ್ತು ಕೆನಡಾವನ್ನು ಪ್ರತ್ಯೇಕಿಸುವ ಭೋರ್ಗರೆಯುವ ನಯಾಗರ ಜಲಪಾತದುದ್ದಕ್ಕೂ ಕಟ್ಟಲಾದ ಬಿಗಿಹಗ್ಗದ ಮೇಲೆ ನಡೆಯುವ ಮೂಲಕ, ಈ ಶತಮಾನದ ಭಾರೀ ಮಹತ್ವದ ಸಾಹಸವೊಂದನ್ನು ವಿಶ್ವದ ಸಾಹಸಿಗಳಿಗೆ ತೋರಿಸಿಕೊಟ್ಟಿದ್ಡಾರೆ. ಈ ಮೂಲಕ ವಾಲೆಂಡ, 'ನೂರುವರ್ಷಗಳಲ್ಲಿ ಈ ವಿಕ್ರಮವನ್ನು ಮಾಡಿದ ವಿಶ್ವದ ಪ್ರಥಮ ವ್ಯಕ್ತಿ' ಎಂಬ ಹೆಗ್ಗಳಿಕೆಗೆ ಪಾತ್ರ ರಾಗಿದ್ದಾರೆ. 'ವೈರ್ ಕೇಬಲ್' ಮೇಲೆ ನಡೆಯುವ ಕಲೆಯನ್ನೇ ಹವ್ಯಾಸವನ್ನಾಗಿಸಿಕೊಂಡ ಕುಟುಂಬದಲ್ಲಿ ಜನಿಸಿರುವ ವಾಲೆಂಡ, ತಮ್ಮ ಬಾಲ್ಯದಿಂದಲೂ ಈ ಕಲೆಯತ್ತ ಹೆಚ್ಚು ಆಸಕ್ತರಾಗಿದ್ದರು. ಈ ಹಿಂದೆ ನಯಾಗರ ಜಲಪಾತದುದ್ದಕ್ಕೂ ಕಟ್ಟಲಾದ ಹಗ್ಗದ ಮೇಲೆ ನಡೆಯುವ ಪ್ರಯತ್ನಗಳು ನಡೆದಿತ್ತವಾದರೂ ಅವೆಲ್ಲವೂ ವಿಫ‌ಲಗೊಂಡಿದ್ದವು. ನಿಕ್ ಮನೆಯಿಂದಲೇ ಈ ಸಾಹಸ ಕಾರ್ಯ ಶುರುವಾಗಿದ್ದು, ಅವರ ಪರಿವಾರದ ಸದಸ್ಯರಿಬ್ಬರು ಜೀವ ಬಿಟ್ಟಿದ್ದರು.

ಚಿತ್ರ:Naigara (OO) 032.JPG
'ಈ ಸ್ಥಳದಲ್ಲೇ ನಿಕ್ ತಮ್ಮ ನಯಾಗರದ ಮೇಲೆ ಹಗ್ಗದದಾರಿಯಲ್ಲಿ ನಡೆಯುವ ಅಭಿಯಾನದಲ್ಲಿ ವಿಕ್ರಮ ಸಾಧಿಸಿದ್ದರು'

ಜನನ,ಬಾಲ್ಯ, ವೃತ್ತಿಜೀವನ

ಬದಲಾಯಿಸಿ

ನಿಕ್ ವಾಲೆಂಡಾ ರವರು, ಸನ್. ೧೯೭೯ ರ ಜನವರಿ, ೨೪ ರಂದು, ಜನಿಸಿದರು. ಅವರ ತಂದೆ ಟೆರ್ರಿ ವಾಲೆಂಡಾ, ತಾಯಿ ಡೆಲಿಲಾ ಮನೆಯ ಕಸುಬಿನ ಬಗ್ಗೆ ಒಂದು ಪುಸ್ತಕ ಬರೆದಿದ್ದಾರೆ.

  • Shrine Circus History

೩೩ ವರ್ಷ ಹರೆಯದ ವಾಲೆಂಡರವರು, ಬಿಗಿ-ತಂತಿಮೇಲೆ ನಡೆಯುವ ವಿಶೇಷ ಕಲಾವಿದರಾಗಿದ್ದಾರೆ. ಗಿನಿಸ್ ದಾಖಲೆ ಸ್ಥಾಪಕ, ಕಾರ್ಲ್ ರ ನೇರ ವಂಶಜ. ತಮ್ಮ ಜೀವನದ ಪರಮೋದ್ದೇಶಗಳಲ್ಲಿ ಒಂದಾದ, ನಯಾಗರ ಜಲಪಾತವನ್ನು ಬಿಗಿ ಕೇಬಲ್ ವೈರಿನಮೇಲೆ ಹತ್ತಿ-ನಡೆದು ಕೆನಡಾದೇಶದಕಡೆಗೆ ಮುಟ್ಟುವ ಆಶೆಯನ್ನು ಹೊತ್ತು ಜೀವನ ಸಾಗಿಸುತ್ತಿದ್ದರು. ಅವರು ಎಲ್ಲ ಎಚ್ಚರಿಕೆಗಳ ಹೊರತಾಗಿಯೂ ನಯಾಗರ ಜಲಪಾತದುದ್ದಕ್ಕೂ ಕಟ್ಟಲಾದ ೧,೮೦೦ ಅಡಿಗಳಷ್ಟು ಉದ್ದದ ೨ ಅಂಗುಲ ವ್ಯಾಸದ ಬಿಗಿ ಹಗ್ಗದ ಮೇಲೆ ನಡೆದು, ೨೫ ನಿಮಿಷಗಳಿಗಿಂತ ಸ್ವಲ್ಪ ಹೆಚ್ಚು ವೇಳೆಯಲ್ಲಿ ಈ ದೂರವನ್ನು ಕ್ರಮಿಸಿ, ಹೊಸ ವಿಕ್ರಮ ಸಾಹಸವನ್ನು ಮೆರೆದರು .ತಮ್ಮ ಅಕ್ರೋಬೇಟ್ ಪ್ರದರ್ಶನದಲ್ಲಿ ಜೀವದ ಹಂಗನ್ನು ತೊರೆದು ಪ್ರದರ್ಶಿಸುವ ಪರಿಪಾಠವಿಟ್ಟುಕೊಂಡು ಬೆಳೆದವರು, ರಕ್ಷಣೆಯ ಪರಿಕರಗಳಿಗೆ ಲೆಕ್ಕಕ್ಕಿಡದೆ ೨೦೦೮ ರ ಅಕ್ಟೋಬರ್ ೧೫ ರಂದು, ೧೩/೧/೨ ಮಹಡಿಯ ಮೇಲೆ ನಿರ್ಮಿಸಿದ ಕೇಬಲ್ ವೈರಿನಮೇಲೆ ಸರಾಗವಾಗಿ ನಡೆದು ಮಹತ್ವದ ಸಾಧನೆಮಾಡಿದ್ದರು. ಈ ಘಟನೆ 'ಟುಡೇ ಪತ್ರಿಕೆ'ಯಲ್ಲಿ ಪ್ರಕಟವಾಗಿದ್ದಲ್ಲದೆ, ಗಿನೀಸ್ ಬುಕ್ ಆಫ್ ರೆಕಾರ್ಡ್ಸ್ ದಾಖಲಿಸಿತು. ನಿಕ್ ವಾಲೆಂಡಾ ವಂಶದ ೭ ನೇ ತಲೆಮಾರಿನ ವ್ಯಕ್ತಿ, ಹಾಗೂ ಪರಿವಾರದ ಸದಸ್ಯ.ಈ ಪರಿವಾರ ಸರ್ಕಸ್ ಗಳಲ್ಲಿ ೧೭೦೦ ರಿಂದಲೂ ಅಕ್ರೊಬೇಟ್ ಕಾರ್ಯದಲ್ಲಿ ತೊಡಗಿ ಜನರನ್ನು ರಂಜಿಸುತ್ತಿದ್ದರು. ಆಗಿನಿಂದಲೂ ತಮ್ಮ ಶೋಗಳಲ್ಲಿ, 'ಸುರಕ್ಷಾ ಕವಚ'ಗಳನ್ನು ಅವರು ಬಳಸಲು ಇಚ್ಛಿಸುತ್ತಿರಲಿಲ್ಲ.

ಗಾಳಿಯ ಒತ್ತಡ ಹಾಗೂ ಗರ್ಜನೆ ಒಂದು ಸವಾಲು

ಬದಲಾಯಿಸಿ

ಗಾಳಿಯ ಅಬ್ಬರ ಹಾಗೂ ಭೋರ್ಗರೆಯುವ ಜಲಪಾತದ ನೀರಿನ ರಭಸದ ನಡುವೆ ಈ ಸಾಹಸ ಅಸಾಧ್ಯ ಎಂದು ಆತನಿಗೆ ಎಚ್ಚರಿಕೆ ನೀಡಲಾಗಿತ್ತಲ್ಲದೆ, ಇಂತಹ ಹುಚ್ಚು ಸಾಹಸಕ್ಕೆ ಮುಂದಾದದ್ದೇ ಆದಲ್ಲಿ ಆತನ ಜೀವಕ್ಕೇ ಅಪಾಯವಿದೆ ಎಂದು ಹೇಳಲಾಗಿತ್ತು. ಆದರೆ ಇದ್ಯಾವುದನ್ನೂ ಲೆಕ್ಕಿಸದ ವಾಲೆಂಡ, ದಿಟ್ಟತನ ಪ್ರದರ್ಶಿಸಿ, ಯಶಸ್ವಿಯಾಗಿ ಮಂಜು ಕವಿದಿರುವ ಜಲಪಾತದುದ್ದಕ್ಕೂ ಕಟ್ಟಲಾದ ಹಗ್ಗದ ಮೇಲೆ ನಡೆಯುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ.

ಮೀಡಿಯಾ ಪಾತ್ರ

ಬದಲಾಯಿಸಿ

ವಾಲೆಂಡಾ ರ ಸಾಹಸವನ್ನು ವೀಕ್ಷಿಸಲು ಜಲಪಾತದ ಇಕ್ಕೆಲಗಳಲ್ಲಿಯೂ ಅಮೆರಿಕ ಮತ್ತು ಕೆನಡಾದೇಶದ ಸಹಸ್ರಾರು ಸಂಖ್ಯೆಯ ಜನರು ಜಮಾಯಿಸಿದ್ದರು. ವಿಶ್ವದಾದ್ಯಂತ ಟೆಲಿವಿಶನ್ ತೆರೆಯನ್ನು ವೀಕ್ಷಿಸುವವರ ಸಂಖ್ಯೆ ಮಿಲಿಯಗಟ್ಟಲೆ ಇದ್ದಿತು. ಉತ್ತರ ಅಮೆರಿಕದ ಈ ಜಲಪಾತದುದ್ದಕ್ಕೂ ೧೯೬ ಅಡಿಗಳಷ್ಟು ಎತ್ತರದಲ್ಲಿ ಕಟ್ಟಲಾದ ಹಗ್ಗದ ಮೇಲೆ‌ ನಡೆಯುವ ಮೂಲಕ ವಾಲೆಂಡ, ಸೇರಿದ್ದ ಜನಸಾಗರ ವನ್ನು ನಿಬ್ಬೆರಗಾಗುವಂತೆ ಮಾಡಿದ. ಅಮೆರಿಕನ್‌ ತುದಿಯಿಂದ ನಡಿಗೆ ಆರಂಭಿಸಿದ ವಾಲೆಂಡ ಕೆನಡಾ ತುದಿಯಲ್ಲಿ ನಡಿಗೆಯನ್ನು ಅಂತ್ಯಗೊಳಿಸುವ ಕೊನೆಯ ಘಟ್ಟದಲ್ಲಿ ಪುಟು-ಪುಟು ಓಡಿ ಎಲ್ಲರನ್ನೂ ಬೆರಗುಗೊಳಿಸಿದರು. ಈ ಜಲಪಾತವನ್ನು ದಾಟಿ ಕೆನಡಾ ಕಡೆ ಹೋಗಲು 'ಪಾಸ್ ಪೋರ್ಟ್' ಅಗತ್ಯವಿತ್ತು. 'ವಾಲೆಂಡಾ' ಅವರಿಗೆ ವಿಶೇಷ ಅನುಮತಿಯನ್ನು ನೀಡಲಾಗಿತ್ತು.

ನಿರಾಯಾಸವಾಗಿ ಯಶಸ್ಸು ದೊರೆಯಿತು

ಬದಲಾಯಿಸಿ

ವಿಕ್ರಮ ಸಾಧಿಸುತ್ತಿರುವಂತೆಯೇ ವಾಲೆಂಡರವರಗೆ ತಮ್ಮ 'ಪಾಸ್ ಪೋರ್ಟ್' ನ್ನು ಅಧಿಕಾರಿಗಳಿಗೆ ಒಪ್ಪಿಸಿ ಅವರ ಪರವಾನಗಿ ಪಡೆಯಬೇಕಾಯಿತು. ನಿಕ್ ತಕ್ಷಣ ತನ್ನ ಅಜ್ಜಿಗೆ ದೂರವಾಣಿ ಕರೆ ಮಾಡಿ, ತನ್ನ ಸಾಧನೆಯನ್ನು ವಿವರಿಸಿದರು.. 'ತಮಗೆ ಹಗ್ಗದ ಮೇಲೆ ನಡೆಯುವಾಗ ಮೋಡದಲ್ಲಿ ನಡೆದಾಡಿದ ಅನುಭವವಾಯಿತು. ಅಸಾಧ್ಯವಾದುದು ಯಾವುದೂ ಇಲ್ಲ. ಎಲ್ಲದಕ್ಕೂ ನೀವು ದೃಢ ಮನಸ್ಸು ಮಾಡಬೇಕಷ್ಟೇ 'ಎಂದು ವಾಲೆಂಡ, ಸಾಹಸದ ಬಳಿಕ ಸುದ್ದಿಗಾರರೊಂದಿಗೆ ತನ್ನ ಅನುಭವವನ್ನು ಹಂಚಿಕೊಂಡರು.

ಯು ಟ್ಯೂಬ್ ನಲ್ಲಿ ಅವರ ವಿಕ್ರಮವನ್ನು ವೀಕ್ಷಿಸಿ :