ನಾ. ಕಾರಂತ ಪೆರಾಜೆ
ನಾ. ಕಾರಂತ ಪೆರಾಜೆ
ಬದಲಾಯಿಸಿಅಂಕಣಗಾರ, ಯಕ್ಷಗಾನ ಕಲಾವಿದ, ಹವ್ಯಾಸಿ ಪತ್ರಕರ್ತರಾಗಿದ್ದಾರೆ. ವಿಶೇಷವಾಗಿ ಯಕ್ಷಗಾನ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಹಿತ್ಯ ಸೇವೆ ಮಾಡಿದವರು.
ಹುಟ್ಟು
ಬದಲಾಯಿಸಿಸುಳ್ಯ ತಾಲೂಕಿನ ಪೆರಾಜೆಯಲ್ಲಿ 1963ರಲ್ಲಿ ಜನಿಸಿದ್ದಾರೆ. 1991ರಿಂದ ಪುತ್ತೂರಿನಲ್ಲಿ ವಾಸವಾಗಿದ್ದಾರೆ.
ಕಾರ್ಯಗಳು
ಬದಲಾಯಿಸಿಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇಲವ ಪತ್ರಕರ್ತರೆನಿಸಿ ಕೊಳ್ಳದೆ. ಕರಾವಳಿಯ ಗಂಡುಕಲೆ ಯಕ್ಷಗಾನ ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಾಯೋಜಕತ್ವದಲ್ಲಿ ಸ್ಥಾಪಿತವಾದ ಸಮುದಾಯ ಬಾನುಲಿ ರೇಡಿಯೋ ಪಾಂಚಜನ್ಯದಲ್ಲಿ ನಿರೂಪಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ಬರಹಗಾರ ಮತ್ತು ಸಾಗಿತಿಯೂ ಆಗಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.
ಸಾಹಿತ್ಯ ಸೇವೆ
ಬದಲಾಯಿಸಿದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಅಡಿಕೆ ಪತ್ರಿಕೆಯ ಉಪಸಂಪಾದಕರಾಗಿರುವ ನಾ. ಕಾರಂತ ಪೆರಾಜೆಯವರು ಕೃಷಿ ಮತ್ತು ಯಕ್ಷಗಾನ ಸಂಬಂಧಿ ಬರಹಗಳಿಂದ ಜನರಿಗೆ ಹತ್ತಿರವಾದವರು. ಪತ್ರಿಕೆಗಳಿಗೆ ನಿರಂತರವಾಗಿ ಅಂಕಣ ಬರೆಯುವ ಇವರು ಕೃಷಿಯ ಕುರಿತು ಗಮನಹರಿಸಿದವರು. ಕೃಷಿಯ ಕುರಿತಾದ ಬರಹಗಳಲ್ಲಿ ವಿಶೇಷವಾಗಿ ಪರಿಸರ ಕಾಳಜಿ ಮತ್ತು ಕರಾವಳಿ ಪ್ರದೇಶದ ಕೃಷಿಯ ಕತೆಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕ್ಷೇತ್ರದಲ್ಲಾಗುತ್ತಿರುವ ಹೊಸ ಆವಿಷ್ಕಾರಗಳು, ಮೌಲ್ಯವರ್ಧನೆಯ ಪ್ರಯೋಗಗಳನ್ನು ಓದುಗರಿಗೆ ತಲುಪಿಸುವಲ್ಲಿ ಗುರುತಿಸಿ ಕೊಂಡಿದ್ದಾರೆ.[೧] ಕೃಷಿ ಇವರ ಆಸಕ್ತಿಯ ಕ್ಷೇತ್ರ, ತಮ್ಮ ತಿರುಗಾಟದ ಮೂಲಕ ಕೃಷಿಯ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ‘ಎಲ್ಲಾ ಕಡೆ ಕೆಲ¸ದÀವರಿಲ್ಲ ಇನ್ನು ಕೃಷಿ ಅಸಾಧ್ಯ’ ಎಂದು ಹತಾಷೆ, ನಿರಾಸೆ ಇರುವಾಗ ಕಾರಂತರು ತಮ್ಮ ಬರವಣಿಗೆಯ ಮೂಲಕ ಹಳ್ಳಿ ಬದುಕಿಗೊಂದು ಹೊಸ ಆಯಾಮ, ಭರವಸೆ ನೀಡುವ ಪ್ರಯತ್ನ ಅವರ ಅಂಕಣಗಳ ಮೂಲಕ ಮಾಡುತ್ತಿದ್ದಾರೆ. ಇದರ ಜೊತೆಗೆ ಯಕ್ಷಗಾನ, ಜಲ ಸಾಕ್ಷರತೆಯೊಂದಿಗೆ ಪರಿಸರ ಪತ್ರಕರ್ತನ ಕಾಳಜಿಯೊಂದಿಗೆ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದಾರೆ. ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಬರೆದ ಲೇಖನ, ವಿಶೇಷ ವರದಿಗಳ ಮೂಲಕ ಅನೇಕ ಪ್ರಶಸ್ತಿ,ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.,[೨]
ನಾ. ಕಾರಂತರ ಕೃತಿಗಳು
ಬದಲಾಯಿಸಿನೀರಲ್ಲ ಅಮೃತ – ಊರಿನ ನೀರಿನ ಕಥೆಗಳು, ಮಣ್ಣಮಾಸು _ ಕೃಷಿ ಲೋಕದ ಆಗುಹೋಗು, ನೆಲದ ನಾಡಿ – ಕೃಷಿ ಗ್ರಾಮೀಣ ಬದುಕಿನ ಸುತ್ತ ಮುಂತಾದ ಅನೇಕ ಪುಸ್ತಕಗಳು ಮತ್ತು ಹಲವಾರು ಅಂಕಣ ಬರಹ, ಲೇಖನಗಳ ಮೂಲಕ ಕೃಷಿ - ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.[೩]
ಕೃತಿ
ಬದಲಾಯಿಸಿಶೇಣಿ ದರ್ಶನ, ಶೇಣಿ ಚಿಂತನ, ನುಡಿ ನಮನ, ಹಾಸ್ಯಗಾರನ ಅಂತರಂಗ, ಯಕ್ಷ ಕೋಗಿಲೆ, ತಳಿ ತಪಸ್ವಿ, ಅಂತಿಕ, ಸಾಮಗ ಪಡಿದನಿ, ದಗಲೆ, ಅವಿಲು, ದಧಿಗಿಣತೋ,
ಕೃಷಿ ಕೃತಿಗಳು
ಬದಲಾಯಿಸಿಹಸಿರ ಮಾತು, ಕಾಡು ಮಾವು, ಎಡ್ವರ್ಡ್ ರೆಬೆಲ್ಲೋ, ಮಣ್ಣ ಮಾಸು, ಮನಮಿಣುಕು, ನೆಲದ ನಾಡಿ 1, ನೆಲದ ನಾಡಿ 2,