ನಾಹರ್‌ಗಢ್ ಕೋಟೆ
ನಾಹರ್‌ಗಢ್ ಕೋಟೆಯು ಅರಾವಳ್ಳಿ ಬೆಟ್ಟಗಳ ತುದಿಯ ಮೇಲೆ ನಿಂತಿದೆ ಮತ್ತು ಇದು ಭಾರತದ ರಾಜಸ್ಥಾನ ರಾಜ್ಯದ ಜೈಪುರ ನಗರವನ್ನು ಮೇಲಿನಿಂದ ಅವಲೋಕಿಸುತ್ತದೆ. ಆಮೇರ್ ಕೋಟೆ ಮತ್ತು ಜೈಗಢ್ ಕೋಟೆಯ ಜೊತೆಗೆ, ಒಂದು ಕಾಲದಲ್ಲಿ ನಾಹರ್‌ಗಢ್ ಕೋಟೆಯು ನಗರಕ್ಕೆ ಬಲವಾದ ರಕ್ಷಣಾ ವರ್ತುಲವನ್ನು ರೂಪಿಸುತ್ತಿತ್ತು. ಇದನ್ನು ೧೭೩೪ರಲ್ಲಿ ನಿರ್ಮಿಸಲಾಯಿತು. ಈ ಕೋಟೆಗೆ ಮೂಲತಃ ಸುದರ್ಶನ್‍ಗಢ್ ಎಂದು ಹೆಸರಿತ್ತು, ಆದರೆ ಇದು ನಾಹರ್‌ಗಢ್ ಎಂದು ಪರಿಚಿತವಾಯಿತು, ಇದರರ್ಥ ' ಹುಲಿಗಳ ವಾಸಸ್ಥಾನ'. ಜನಪ್ರಿಯ ನಂಬಿಕೆಯ ಪ್ರಕಾರ ಇಲ್ಲಿ ನಾಹರ್ ಎಂಬುದರ ಅರ್ಥ ನಾಹರ್ ಸಿಂಗ್ ಭೋಮಿಯಾ ಎಂಬ ವ್ಯಕ್ತಿ.[೧] ಅವನ ಆತ್ಮವು ಈ ಸ್ಥಳವನ್ನು ಕಾಡುತ್ತಿತ್ತು ಮತ್ತು ಕೋಟೆಯ ನಿರ್ಮಾಣಕ್ಕೆ ಅಡ್ಡಿಯಾಗಿತ್ತು.[೨] ಕೋಟೆಯೊಳಗೆ ಅವನ ನೆನಪಿಗಾಗಿ ದೇವಾಲಯವನ್ನು ನಿರ್ಮಿಸುವ ಮೂಲಕ ನಾಹರ್‌ನ ಆತ್ಮವನ್ನು ಸಮಾಧಾನಪಡಿಸಲಾಯಿತು, ಹಾಗಾಗಿ ಇದು ಅವನ ಹೆಸರಿನಿಂದ ಪ್ರಸಿದ್ಧವಾಯಿತು.[೩]
-
ಜೈಪುರ ನಗರವನ್ನು ನಾಹರ್‌ಗಢ್ ಕೋಟೆಯಿಂದ ನೋಡಲಾದಾಗ
-
ಜೈಪುರ ನಗರವನ್ನು ನಾಹರ್‌ಗಢ್ ಕೋಟೆಯಿಂದ ನೋಡಲಾದಾಗ
-
ಜೈಪುರ ನಗರವನ್ನು ನಾಹರ್‌ಗಢ್ ಕೋಟೆಯಿಂದ ನೋಡಲಾದಾಗ
-
ಚಾವಣಿಯ ತಾರಸಿ ನೆಲದಲ್ಲಿ ಕಲ್ಲಿನ ಕಟಾಂಜನ
-
ನಾಹರ್‌ಗಢ್ ಕೋಟೆಯ ಪೌಳಿ ಜೈಪುರ, ರಾಜಸ್ಥಾನ
-
ನಾಹರ್‌ಗಢ್ ಕೋಟೆಯ ಪೌಳಿ, ಜೈಪುರ, ರಾಜಸ್ಥಾನ
-
ನಾಹರ್‌ಗಢ್ ಕೋಟೆಯ ಪೌಳಿ ಜೈಪುರ, ರಾಜಸ್ಥಾನ
-
ನಾಹರ್‌ಗಢ್ ಕೋಟೆಯ ಮಾಧವೇಂದ್ರ ಅರಮನೆ
-
ಮಾಧವೇಂದ್ರ ಅರಮನೆ
ಉಲ್ಲೇಖಗಳು
ಬದಲಾಯಿಸಿ- ↑ Naravane, M. S. (1999). The Rajputs of Rajputana: a glimpse of medieval Rajasthan. ISBN 9788176481182.
- ↑ "Nahargarh Fort".
- ↑ Jaipur forts and monuments