ನಾಟಿ ಕೋಳಿ ಸಾರು ಮಂಗಳೂರಿನಲ್ಲಿ ಹೆಚ್ಚಾಗಿ ಮಾಡುತ್ತಾರೆ. ಏಕೆಂದರೆ ಹಳ್ಳಿ ಜನರು ನಾಟಿ ಕೋಳಿಗಳ ಸಾಕಣೆ ಮಾಡುತ್ತಾರೆ. ಆಟಿ ತಿಂಗಳಲ್ಲಿ ಹೆಚ್ಚಾಗಿ ನಾಟಿ ಕೋಳಿ ಸಾರನ್ನ ಮಾಡುತ್ತಾರೆ.[]

ನಾಟಿ ಕೋಳಿ ಸಾರು
ಸಮಾನ ಭಕ್ಷ್ಯಗಳುಕೋಳಿ ಸಾರು

ಬೇಕಾಗುವ ಸಾಮಾಗ್ರಿಗಳು

ಬದಲಾಯಿಸಿ
  • ನಾಟಿ ಕೋಳಿ ಚಿಕನ್ - 1/2 ಕೆಜಿ
  • ಎಣ್ಣೆ - 1/4 ಕಪ್
  • ಚಕ್ಕೆ - 1 ತುಂಡು
  • ಬಿರಿಯಾನಿ ಎಲೆಗಳು - 1
  • ಏಲಕ್ಕಿ - 4
  • ಈರುಳ್ಳಿ - 2 (ಹೆಚ್ಚಿದ)
  • ಕರಿಬೇವಿನ ಎಲೆಗಳು - ಸ್ವಲ್ಪ
  • ಉಪ್ಪು - ರುಚಿಗೆ ತಕ್ಕಂತೆ
  • ಅರಿಶಿನ ಪುಡಿ - 1 tsp
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಚಮಚ
  • ಚಿಕನ್ ಮಸಾಲಾ ಪುಡಿ - 3-4 ಚಮಚ
  • ದೊಡ್ಡ ಟೊಮ್ಯಾಟೊ - 4 (ಕತ್ತರಿಸಿದ)
  • ತೆಂಗಿನಕಾಯಿ - 1 ಕಪ್
  • ಸೋಂಪು - 1 ಚಮಚ
  • ನೀರು - ಅಗತ್ಯಕ್ಕೆ []
  • ಕೊತ್ತಂಬರಿ - ಸ್ವಲ್ಪ

ಮಾಡುವ ವಿಧಾನ

ಬದಲಾಯಿಸಿ

ಮೊದಲು ಮಿಕ್ಸರ್ ಜಾರ್ ಗೆ ತೆಂಗಿನತುರಿ ಮತ್ತು ಸೋಂಪು ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಂಡು ಪಕ್ಕಕ್ಕೆ ಇಡಿ.

  • ನಂತರ ಚಿಕನ್ ಅನ್ನು ಅರಿಶಿನ ಪುಡಿಯಿಂದ ಚೆನ್ನಾಗಿ ತೊಳೆದು ಪಕ್ಕಕ್ಕೆ ಇರಿಸಿ.
  • ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಚಕ್ಕೆ, ಬಿರಿಯಾನಿ ಎಲೆ, ಏಲಕ್ಕಿ ಹಾಕಿ ಒಗ್ಗರಣೆ ಮಾಡಿ.
  • ನಂತರ ಈರುಳ್ಳಿ ಮತ್ತು ಕರಿಬೇವಿನ ಸೊಪ್ಪು ಹಾಕಿ 5 ನಿಮಿಷ ಚೆನ್ನಾಗಿ ಹುರಿಯಿರಿ.
  • ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರಿಶಿನ ಪುಡಿ ಹಾಕಿ ಈರುಳ್ಳಿ ಬಣ್ಣ ಬದಲಾಗುವವರೆಗೆ ಹುರಿಯಿರಿ.
  • ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದು ನಿಮಿಷ ಹುರಿಯಿರಿ, ಇದಕ್ಕೆ ಚಿಕನ್ ಮಸಾಲಾ ಸೇರಿಸಿ ಮತ್ತು ಒಂದು ನಿಮಿಷ ಬೆರೆಸಿ.
  • ನಂತರ ಟೊಮೆಟೊ ಹಾಕಿ ಮೃದುವಾಗುವವರೆಗೆ ಹುರಿಯಬೇಕು.
  • ನಂತರ ತೊಳೆದ ಚಿಕನ್ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತು ಚಿಕನ್ ಜೊತೆ ಎಲ್ಲಾ ಮಸಾಲೆಗಳು ಸೇರಿಕೊಳ್ಳುವವರೆಗೆ ಚೆನ್ನಾಗಿ ಬೆರೆಸಬೇಕು.
  • ನಂತರ ಸ್ವಲ್ಪ ನೀರು ಸುರಿಯಿರಿ, ಪಾತ್ರೆ ಮುಚ್ಚಿ ಮತ್ತು 30-35 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಚಿಕನ್ ಅನ್ನು ಬೇಯಿಸಬೇಕು.

ಮೇಲಕ್ಕೆ ತೇಲುವಂತಿರಬೇಕು.[]

ತುಳುವಿನಲ್ಲಿ ನಾಟಿ ಕೋಳಿ ಸಾರು

ಬದಲಾಯಿಸಿ
  • ಊರ್ದ ಕೋರಿ ಸಾರ್.

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಮಂಗಳೂರಿನ ನಾಟಿ ಕೋಳಿ ಸಾರು". Retrieved 15 July 2024.
  2. "Karnataka style koli saaru / kozhi saaru, Chicken curry recipe – Kannamma Cooks". 5 July 2024. Retrieved 15 July 2024.
  3. "ನಾಟಿ ಕೋಳಿ ಸಾರು". Retrieved 15 July 2024.