ನಾಚಿಕೆ
ನಾಚಿಕೆ ಎಂದರೆ ಭಯ, ಆರಾಮದ ಕೊರತೆ, ಅಥವಾ ಮುಜುಗರದ ಅನಿಸಿಕೆ, ವಿಶೇಷವಾಗಿ ಒಬ್ಬ ವ್ಯಕ್ತಿಯು ಇತರ ಜನರ ಜೊತೆಗೆ ಇರುವಾಗ. ಇದು ಸಾಮಾನ್ಯವಾಗಿ ಹೊಸ ಸಂದರ್ಭಗಳಲ್ಲಿ ಅಥವಾ ಪರಿಚಯವಿಲ್ಲದ ಜನರೊಂದಿಗೆ ಉಂಟಾಗುತ್ತದೆ. ನಾಚಿಕೆಯು ಕಡಿಮೆ ಆತ್ಮಾಭಿಮಾನವಿರುವ ಜನರ ಗುಣಲಕ್ಷಣವಾಗಿರಬಹುದು. ನಾಚಿಕೆಯ ಹೆಚ್ಚು ಬಲವಾದ ರೂಪಗಳನ್ನು ಸಾಮಾನ್ಯವಾಗಿ ಸಾಮಾಜಿಕ ಆತಂಕ ಅಥವಾ ಸಾಮಾಜಿಕ ಭೀತಿ ಎಂದು ಸೂಚಿಸಲಾಗುತ್ತದೆ. ಇತರ ಜನರು ಒಬ್ಬ ವ್ಯಕ್ತಿಯ ವರ್ತನೆ ಬಗ್ಗೆ ಏನೆಂದುಕೊಳ್ಳುತ್ತಾರೊ ಎಂಬುವ ಹೆಚ್ಚಾಗಿ ಅಹಂನಿಂದ ಚಾಲಿತವಾದ ಭಯವು ನಾಚಿಕೆಯ ಪ್ರಧಾನ ನಿರ್ಧಾರಕ ಗುಣಲಕ್ಷಣವಾಗಿರುತ್ತದೆ. ಪರಿಣಾಮವಾಗಿ, ನಕಾರಾತ್ಮಕ ಪ್ರತಿಕ್ರಿಯೆಗಳ ಭಯದಿಂದ, ನಗಿಸಿಕೊಳ್ಳುವ, ಅವಮಾನಗೊಳ್ಳುವ ಅಥವಾ ಪ್ರೋತ್ಸಾಹಿತನಾಗುವ, ಟೀಕೆ ಅಥವಾ ತಿರಸ್ಕಾರದ ಭಯದಿಂದ ಆ ವ್ಯಕ್ತಿಯು ತಾನು ಏನು ಮಾಡಲು ಅಥವಾ ಹೇಳಲು ಬಯಸುತ್ತಾನೊ ಅದರ ಬಗ್ಗೆ ಭಯಗೊಳ್ಳುತ್ತಾನೆ. ಬದಲಾಗಿ ನಾಚುವ ವ್ಯಕ್ತಿಯು ಸರಳವಾಗಿ ಸಾಮಾಜಿಕ ಸಂದರ್ಭಗಳನ್ನು ತಪ್ಪಿಸುವುದನ್ನು ಆಯ್ದುಕೊಳ್ಳಬಹುದು.[೧]
ಸಾಮಾಜಿಕ ಕೌಶಲ್ಯಗಳ ಬೆಳವಣಿಗೆಯು ನಾಚಿಕೆಯ ಒಂದು ಮುಖ್ಯವಾದ ಅಂಶವಾಗಿದೆ. ಮಕ್ಕಳು ಪರಿಣಾಮಕಾರಿ ಪರಸ್ಪರ ಸಾಮಾಜಿಕ ಕ್ರಿಯೆ ನಡೆಸುವಲ್ಲಿ ಸಂಪೂರ್ಣವಾಗಿ ಸಮರ್ಥರು ಎಂದು ಶಾಲೆಗಳು ಮತ್ತು ಹೆತ್ತವರು ನಿಶ್ಯಂಕೆಯಿಂದ ಊಹಿಸಿಕೊಂಡಿರಬಹುದು. (ಓದುವುದು ಮತ್ತು ಬರೆಯುವುದರಿಂದ ಭಿನ್ನವಾಗಿ) ಸಾಮಾಜಿಕ ಕೌಶಲ್ಯಗಳ ತರಬೇತಿಗೆ ಯಾವುದೇ ಆದ್ಯತೆ ನೀಡಲಾಗುವುದಿಲ್ಲ ಮತ್ತು ಪರಿಣಾಮವಾಗಿ, ತರಗತಿಯಲ್ಲಿ ಭಾಗವಹಿಸುವ ಮತ್ತು ಸಮಾನಸ್ಕಂಧರೊಂದಿಗೆ ಸಂವಹನ ನಡೆಸುವ ತಮ್ಮ ಸಾಮರ್ಥ್ಯವನ್ನು ವಿಕಸಿಸಿಕೊಳ್ಳಲು ನಾಚುವ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದಿಲ್ಲ. ನಾಚುವ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಮಾತನಾಡುವಂತೆ ಮೃದುವಾಗಿ ಪ್ರೋತ್ಸಾಹಿಸಲು, ಇತರ ಮಕ್ಕಳೊಂದಿಗೆ ಗೆಳೆತನ ಬೆಳೆಸಿಕೊಳ್ಳುವ ಸಲುವಾಗಿ ಶಿಕ್ಷಕರು ಕಡಿಮೆ ನೇರವಾದ ಮತ್ತು ಬೆದರಿಸುವ ರೀತಿಯಲ್ಲಿ ಸಾಮಾಜಿಕ ಕೌಶಲ್ಯಗಳನ್ನು ರೂಪಿಸಬಹುದು ಮತ್ತು ಪ್ರಶ್ನೆಗಳನ್ನು ಕೇಳಬಹುದು.
ನಾಚಿಕೆಯ ಆರಂಭಿಕ ಕಾರಣ ಬದಲಾಗುತ್ತದೆ. ತಾವು ನಾಚಿಕೆಯು ಕನಿಷ್ಠಪಕ್ಷ ಭಾಗಶಃ ಆನುವಂಶಿಕವಾಗಿದೆ ಎಂಬುದನ್ನು ಬೆಂಬಲಿಸುವ ಆನುವಂಶಿಕ ಮಾಹಿತಿಯನ್ನು ಪತ್ತೆಹಚ್ಚಿದ್ದೇವೆ ಎಂದು ವಿಜ್ಞಾನಿಗಳು ನಂಬುತ್ತಾರೆ. ಆದರೆ ಒಬ್ಬ ವ್ಯಕ್ತಿಯ ನಾಚಿಕೆಗೆ ಅವರು ಬೆಳೆದ ಪರಿಸರವೂ ಜವಾಬ್ದಾರವಾಗಿರಬಹುದು ಎಂದು ಸೂಚಿಸುವ ಸಾಕ್ಷ್ಯವೂ ಇದೆ. ಇದರಲ್ಲಿ ಮಕ್ಕಳ ಶೋಷಣೆ, ವಿಶೇಷವಾಗಿ ಅಪಹಾಸ್ಯದಂತಹ ಭಾವನಾತ್ಮಕ ಶೋಷಣೆ ಸೇರಿದೆ. ಒಬ್ಬ ವ್ಯಕ್ತಿಯು ಶಾರೀರಿಕ ಆತಂಕ ಪ್ರತಿಕ್ರಿಯೆಯನ್ನು ಅನುಭವಿಸಿದ ನಂತರ ನಾಚಿಕೆ ಹುಟ್ಟಿಕೊಳ್ಳಬಹುದು; ಇತರ ಸಮಯಗಳಲ್ಲಿ, ನಾಚಿಕೆಯು ಮೊದಲು ಬೆಳೆದು ನಂತರ ಆತಂಕದ ಶಾರೀರಿಕ ಲಕ್ಷಣಗಳನ್ನು ಉಂಟುಮಾಡುತ್ತದೆ ಎಂದು ತೋರುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Lua error in ಮಾಡ್ಯೂಲ್:Citation/CS1/Configuration at line 2123: attempt to index a boolean value.