ನಾಗಾಂವ್ ಭಾರತದ ಮಹಾರಾಷ್ಟ್ರ ರಾಜ್ಯದ ಉತ್ತರ ಕೊಂಕಣ ಪ್ರದೇಶದಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಬೀಚ್ ಪಟ್ಟಣವಾಗಿದೆ. ಇದು ಅಲಿಬಾ‍ಗ್‍ನಿಂದ 9 ಕಿ.ಮಿ. ದೂರದಲ್ಲಿದೆ.[] ನಾಗಾಂವ್ ಬೀಚ್ ಮುಖ್ಯವಾಗಿ ಅದರ ಸ್ವಚ್ಛತೆ, ಜಲಕ್ರೀಡಾ ಚಟುವಟಿಕೆಗಳಿಂದಾಗಿ ಜನಪ್ರಿಯವಾಗಿದೆ. ಬೀಚ್ ಸುಮಾರು 3 ಕಿಮೀ ಉದ್ದವಿದೆ.[] ನಾಗಾಂವ್‌ನಲ್ಲಿ ಕೆಲವು ಸಣ್ಣ ಹೋಟೆಲ್‌ಗಳಿವೆ. ಉಳಿದ ಪ್ರದೇಶವು ಖಾಸಗಿ ಒಡೆತನದಲ್ಲಿದೆ. ಸ್ಥಳೀಯ ಜನರ ಒಡೆತನದ ಕುಟೀರಗಳಲ್ಲಿ ಉಳಿಯುವುದು ಅತ್ಯುತ್ತಮ ಆಯ್ಕೆಯಾಗಿದೆ.[]

ನಾಗಾಂವ್ ಬೀಚ್

ಸಾರಿಗೆ

ಬದಲಾಯಿಸಿ

ಮುಂಬೈ (78 ಕಿಮೀ ದೂರ) - ಗೋವಾ ಹೆದ್ದಾರಿಯಲ್ಲಿರುವ ಪನ್ವೇಲ್ - ಪೇಣ್ (30 ಕಿಮೀ ದೂರ) ಮೂಲಕ ಅಲಿಬಾಗ್ ತಲುಪಬಹುದು. ದೂರವು ಮುಂಬೈನಿಂದ ಸರಿಸುಮಾರು 114 ಕಿ.ಮೀ.

ದೋಣಿ ಸೇವೆಗಳು

ಬದಲಾಯಿಸಿ
 
ಮುಂಬೈ ಮಾಂಡ್ವಾ ಫೆರಿ

ಹತ್ತಿರದ ಬಂದರು ಕಾಪು ಮಾಂಡ್ವಾ ಆಗಿದ್ದು, ಅಲ್ಲಿಂದ ಗೇಟ್‌ವೇ ಆಫ್ ಇಂಡಿಯಾ, ಮುಂಬೈಗೆ ಜೋಡುದೋಣಿ/ಫೆರಿ ಸೇವೆಗಳು ಲಭ್ಯವಿವೆ. ಸಮೀಪದಲ್ಲಿರುವ ಮತ್ತೊಂದು ಬಂದರು ರೇವಾಸ್. ಅಲ್ಲಿಂದ ಮುಂಬೈನ ಭೌ ಚಾ ಧಕ್ಕಾಕ್ಕೆ ದೋಣಿ ಸೇವೆ ಲಭ್ಯವಿದೆ. ಅಲಿಬಾಗ್‌ನಲ್ಲಿರುವ ಮೀನುಗಾರರು ಸಮುದ್ರಯಾನ ಮಾಡುವ ಕಸ್ಟಮ್ ಬಂದರ್‌ನಲ್ಲಿ ಕಾಪು ಕೂಡ ಇದೆ.

ಉಲ್ಲೇಖಗಳು

ಬದಲಾಯಿಸಿ
  1. "Planning a quick getaway with friends or family? Head to Nagaon beach, Maharashtra". timesofindia-economictimes. Archived from the original on 2015-12-22. Retrieved 2022-11-26.
  2. "NAGAON-Village Panchayat". Archived from the original on 2019-12-21. Retrieved 2022-11-26.
  3. "Nagaon Eco Center". Archived from the original on 2018-02-11. Retrieved 2022-11-26.