ನಾಗತಿಹಳ್ಳಿ ರಮೇಶ್

Nagathihalli Ramesh

ಜನನ: ೧೯೬೭ ಜೂನ್ ೧ ಜನ್ಮ ಸ್ಥಳ: ನಾಗತಿಹಳ್ಳಿ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ. ತಂದೆ: ರಂಗಪ್ಪ ತಾಯಿ: ಕೆಂಪವ್ವ
ನಾಗತಿಹಳ್ಳಿ ರಮೇಶ್
(ಹೆಸರಾಂತ ಕವಿಗಳು, ಬಹುಮುಖಿ ಚಿಂತಕರು, ಸಂಘಟಕರು, ಚಿತ್ರ ನಿರ್ದೇಶಕರು, ರಾಜಕೀಯ-ಸಾಮಾಜಿಕ ಕಾರ್ಯಕರ್ತರು ಹಾಗೂ ಕೃಷಿಕರು)
ಬದಲಾಯಿಸಿ

ಶ್ರೀ ನಾಗತಿಹಳ್ಳಿ ರಮೇಶ್ ತಂದೆ ರಂಗಪ್ಪ  ತಾಯಿ ಕೆಂಪವ್ವರ ಮಗನಾಗಿ 1967ರ ಜೂನ್ ಒಂದರಂದು ಹುಟ್ಟಿದ್ದು, ನಾಗತಿಹಳ್ಳಿ, ನಾಗಮಂಗಲ ತಾಲ್ಲೂಕು ,ಮಂಡ್ಯ ಜಿಲ್ಲೆಯಲ್ಲಿ.

ಗ್ರಾಮೀಣ ಭಾಗದ ಕಡುಬಡತನವನ್ನು ಕಣ್ಣಾರೆ ಕಂಡು ಉಂಡುಟ್ಟು ಬೆಳೆದವರು ಶ್ರೀ ನಾಗತಿಹಳ್ಳಿ ರಮೇಶ್. ವಿಜ್ಞಾನದ ವಿದ್ಯಾರ್ಥಿಯಾಗಿ, ಕಾcನೂನು ಪದವೀಧರರಾಗಿ ಅಸಾಧಾರಣ ಚರ್ಚಾಪಟುವಾಗಿ ಬೆಳೆದು150 ಚರ್ಚಾ ಸ್ಪರ್ಧೆಗಳಲ್ಲಿ ಬಹುಮಾನ ಗಿಟ್ಟಿಸಿದವರು.  ಕ್ರಿಯೆಯ ಹುಟ್ಟು ಪಡೆದ ಅವರ ಸೃಜನಶೀಲತೆ ಹಲವಾರು ಬೇರುಗಳತ್ತ ಹಬ್ಬುತ್ತಾ ಹರಿದಿದೆ; ಈಗಲೂ ಹರಿಯುತ್ತಿದೆ. 90ರ ದಶಕದ  ರಮೇಶ್ ರೂಪಿಸಿದ 'ಸ್ಪರ್ಧಾ ಪ್ರಪಂಚ' ಮಾಸಿಕ ಆ ಕ್ಷೇತ್ರಕ್ಕೆ ಹೊಸ ಮುಂಗಾಣ್ಕೆಯನ್ನು ಕೊಟ್ಟಿತು. ಪತ್ರಿಕೆಯಲ್ಲದೆ ಮುದ್ರಣ ಕ್ಷೇತ್ರಕ್ಕೂ ಕೈಹಾಕಿ ಅಲ್ಲಿಯೂ ಅಸಾಧಾರಣ ಯಶಸ್ಸು ಕಂಡ ರಮೇಶ್, ಅಲ್ಲಿಯೂ ಹೊಸ ಸಾಧ್ಯತೆಗಳನ್ನು ತೆರೆದರು.  ಕಿರುಚಿತ್ರ, ಪ್ತಕಾಶನ, ಸಾಕ್ಷ್ಯಚಿತ್ರ, ಪರಿಸರ ಚಿಂತನೆ, ವ್ಯವಸಾಯ,  ಸಿನಿಮಾಸಕ್ತಿ, ಬದ್ಧತೆಯ ರಾಜಕಾರಣದೊಡನಾಟ ಅವರ ಹಲವು ಕ್ಷೇತ್ರವಲಯಗಳು.

ಪುಸ್ತಕಗಳು

ಬದಲಾಯಿಸಿ

ಅವರ 'ಸಮುದ್ರ ಮತ್ತು ಮಳೆ' ಕವಿತೆಗಳ ಕಟ್ಟು ಕನ್ನಡದಲ್ಲಿಯೇ ಹೊಸ ಸಂವೇದನೆ ಸ್ಫುರಿಸುವ ಸಂಕಲನ. ಸಮಾಜ, ವ್ಯಕ್ತಿಯೊಳಗಿನ ಅವಗುಣಗಳನ್ನೂ ಮಾನವೀಯ ನೆಲೆಗಟ್ಟಿನ ಮೂಲಕ ಮುಖಾಮುಖಿಯಾಗಬೇಕೆಂಬ ಆಶಯವುಳ್ಳದ್ದು. ಈ ಕೃತಿ ಇಂಗ್ಲಿಷ್ ನಲ್ಲಿ The sea and The rain (ಅನುವಾದ ಅಂಕುರ್ ಬೆಟಗೇರಿ) ಹೆಸರಿನಲ್ಲಿಯೂ 'ಸಾಗರ್ ಔರ್ ಬಾರಿಷ್'  (ಅನುವಾದ ಗಿರೀಶ್ ಜಕಾಪುರೆ) ಹೆಸರಿನಲ್ಲಿ ಹಿಂದಿಯಲ್ಲಿಯೂ ಪ್ರಕಟವಾಗಿದೆ. ಇವರ ಕವಿತೆಗಳು ಭಾರತದ ಕೆಲವು ಭಾಷೆಗಳಲ್ಲದೆ, ವಿದೇಶಿ ಭಾಷೆಗಳಿಗೂ ಅನುವಾದಗೊಂಡಿವೆಯಲ್ಲದೆ ಕೆಲವು ವಿಶ್ವವಿದ್ಯಾಲಯಗಳ ಪದವಿ ತರಗತಿಗಳಿಗೆ ಪಠ್ಯಗಳಾಗಿವೆ.

ಜೀವಭಾವ ಹಾಡುಗಳ ಆಲ್ಬಂ

ಬದಲಾಯಿಸಿ

ಅವರ ಕಾವ್ಯದಂತೆಯೇ ಅವರ ಸಮಾಜಮುಖಿ ಚಟುವಟಿಕೆಗಳೆಲ್ಲವೂ ಬುದ್ಧನ ಕಾರುಣ್ಯವನ್ನು ನೆನಪಿಸುತ್ತವೆ.  ಅವರ ಜೀವಪದಗಳಾದ 'ಅವ್ವ ', ತಿಳಿ', 'ಪದಪದ ಚರಿತ', 'ಜೀವಜೀವದ ಹಾಡು', ಬಯಲ ಕನ್ನಡಿ', 'ಮನದ ಮಿಂಚು', 'ಒಳಿತು',' ಮಳೆಕಾವು,  ಮುಂತಾದ ಹಾಡುಗಳ ಆಲ್ಬಮ್ಗಳು  ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಹೊಸ ಛಾಪನ್ನೇ ಮೂಡಿಸಿವೆ. ಈ ಜೀವಪದಗಳ ಸರಣಿಯನ್ನು ರೂಪಿಸುವಲ್ಲಿ ನಾಗತಿಹಳ್ಳಿ ರಮೇಶ್ ವಹಿಸಿರುವ ಶ್ರಮ ಅಪಾರ. ಇವುಗಳಲ್ಲಿ 'ಬೇರುಗಳತ್ತ' ಕೃತಿ ಇಂಗ್ಲಿಷ್ ನಲ್ಲಿ The Roots ಎಂಬ ಹೆಸರಿನಲ್ಲಿಯೂ 'ತಿಳಿ' pure ಎಂಬ ಹೆಸರಿನಲ್ಲಿಯೂ 'ಜೀವಜೀವದ ಹಾಡು' Song of every life ಹೆಸರಿನಲ್ಲಿಯೂ ತಯಾರಾಗಿ ಹೊರ ಬಂದಿವೆ. 'ಜೀವಜೀವದ ಹಾಡು' ಕೃತಿಯನ್ನು ತಮಿಳಿನಲ್ಲಿ ನಲ್ಲತಂಬಿ ಅನುವಾದಿಸಿದ್ದು 'ಉಯಿರಿನ್ ಉಯಿರು ಪಾಟ್ಟು' ಎಂಬ ಹೆಸರಿನಲ್ಲಿ ಹೊರಬಂದಿದೆ.

ಪ್ರಶಸ್ತಿಗಳು

ಬದಲಾಯಿಸಿ

'ಬೇರುಗಳತ್ತ'  ಕೃತಿಗೆ 16 ಅಂತರರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿರುವುದು ಇದರ ಹೆಚ್ಚುಗಾರಿಕೆ. ಇಂತಹ ಕ್ರಿಯಾಶೀಲ ರಮೇಶ್ ಅವರನ್ನು ನೂರಾರು ಪ್ರಶಸ್ತಿಗಳು ಅರಸಿ ಬಂದಿವೆ. ಕಲೆ, ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ, ಪರಿಸರ ಕಾಳಜಿಗಾಗಿ ಕರ್ನಾಟಕ ರಾಜ್ಯ ಸರ್ಕಾರದಿಂದ 'ರಾಜ್ಯ ಯುವ ಪ್ರಶಸ್ತಿ', ಪರಿಸರ ಕಾಳಜಿಗಾಗಿ ರಾಜ್ಯ ಸರ್ಕಾರದಿಂದ 'ಪರಿಸರ ಪ್ರಶಸ್ತಿ','ಕುವೆಂಪು ಸಾಹಿತ್ಯರತ್ನ ಪ್ರಶಸ್ತಿ', 'ವಿಶ್ವಾತ್ಮ ಪ್ರಶಸ್ತಿ','ಕನ್ನಡದ ಕಣ್ವ ಬಿಎಂಶ್ರೀ' ಪ್ರಶಸ್ತಿ, 'ಕುವೆಂಪು- ಬೇಂದ್ರೆ ಜೀವಾಳ ಪ್ರಶಸ್ತಿ', 'ಪ್ರಜಾ ಪ್ರತಿಭೆ ಪ್ರಶಸ್ತಿ', 'ನೆಲದ ಸಿರಿ ಜೀವನ್ಮುಖಿ ಪ್ರಶಸ್ತಿ', 'ನಾಡಚೇತನ ಪ್ರಶಸ್ತಿ', 'ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ  ಪ್ರಶಸ್ತಿ' 'ಕರ್ನಾಟಕ ಪ್ರಜಾ ರತ್ನ ಪ್ರಶಸ್ತಿ', ತಮ್ಮ ಬಾಳಸಂಗಾತಿ ಎಂ. ಶೋಭಾರಮೇಶ್  ಅವರೊಂದಿಗೆ 'ಜೀವ ಸಾಂಗತ್ಯ' ಪ್ರಶಸ್ತಿ  'ಕುವೆಂಪು ಆದರ್ಶ ದಂಪತಿ' ಪ್ರಶಸ್ತಿ ಮುಂತಾದವು ಅವರ ಜೋಳಿಗೆಯ ಘನತೆಯನ್ನು ಹೆಚ್ಚಿಸಿವೆ.ಇತ್ತೀಚೆಗೆ ಅವರ ಸಾಹಿತ್ಯಕ, ಸಾಂಸ್ಕೃತಿಕ,ಸಾಮಾಜಿಕ  ಕಾಳಜಿಯನ್ನು ಅಭಿನಂದಿಸಿ ಒಡಿಸ್ಸಾ ಸರ್ಕಾರದ ವತಿಯಿಂದ 'ಕಳಿಂಗ ವಿಶ್ವಚೇತನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ' ನೀಡಿ ಗೌರವಿಸಿದೆ.

  • ಇತ್ತೀಚೆಗೆ ಅವರ ಸಾಹಿತ್ಯಕ, ಸಾಂಸ್ಕೃತಿಕ, ಸಾಮಾಜಿಕ ಕಾಳಜಿಯನ್ನು ಅಭಿನಂದಿಸಿ ಒಡಿಸ್ಸಾ ಸರ್ಕಾರದ ವತಿಯಿಂದ 'ಕಳಿಂಗ ವಿಶ್ವಚೇತನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ' ನೀಡಿ ಗೌರವಿಸಿದೆ. ಡಾ.ಶ್ರೀ ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಪೀಠಾಧ್ಯಕ್ಷರು: ಶ್ರೀ ದುರ್ದಂಡೇಶ್ವರ ಮಹಂತ ಶಿವಯೋಗಿಗಳ ಮಠ, ಶ್ರೀ ಕ್ಷೇತ್ರ ಬೇಬಿ ಮಠ , ಬೇಬಿ ಗ್ರಾಮ, ಚಿನಕುರಳಿ ಬಳಿ, ಪಾಂಡವ ಪುರ ತಾಲ್ಲೂಕು,ಮಂಡ್ಯ ಜಿಲ್ಲೆ ಮತ್ತು ಚಂದ್ರವನ ಆಶ್ರಮ ಪಶ್ಚಿಮವಾಹಿನಿ, ಶ್ರೀರಂಗಪಟ್ಟಣ,ಮಂಡ್ಯ ಜಿಲ್ಲೆ. ಇವರು ಶ್ರೀ ಜಗಜ್ಯೋತಿ ಬಸವೇಶ್ವರರು ಮತ್ತು ಮಹಾಚೇತನ ಶ್ರೀ ಮರಿದೇವರು ಶಿವಯೋಗಿ ಶ್ರೀ ಸ್ಮರಣೆಯಲ್ಲಿ "ಜೀವನದಿ" ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ -2019 ಪ್ರಥಮ ಬಾರಿಗೆ ಆರಂಭಿಸಿದ್ದು ನಾಗತಿಹಳ್ಳಿ ರಮೇಶ್ ಅವರಿಗೆ ಮೊದಲು ನೀಡಿ ಗೌರವಿಸಿದೆ.
  • 2022 ದಿನಾಂಕ 20 ನೇ ಮಾರ್ಚ್ 2022 ಋಷಿಕೇಶ, ಉತ್ತರಖಾಂಡ ರಾಜ್ಯ ಭಾರತ ಸರ್ಕಾರ ಮತ್ತು ಉತ್ತರಖಾಂಡ ಸರ್ಕಾರದ ಸಹಯೋಗದಲ್ಲಿ ಭಾರತ ದೇಶದ ಮಹಾನ್ ಚೇತನ ಶ್ರೀ ಬಿಪಿನ್ ರಾವತ್ ( ಮಾಜಿ ಪ್ರಧಾನರು: ಭಾರತ ಸೇನೆ ) ಸ್ಮರಣಾರ್ಥ ಸ್ಥಾಪಿಸಿದ ವಿಶ್ವ ಭಾರತೀಯ ಜೀವ ಜ್ಯೋತಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ 2022ರ ಮೊದಲ ಪ್ರಶಸ್ತಿಯನ್ನು ಶ್ರೀ ನಾಗತಿಹಳ್ಳಿ ರಮೇಶ್ ಅವರಿಗೆ ನೀಡಿ ಗೌರವಿಸಿದೆ.
  • 2022

ದಿನಾಂಕ 24 ಏಪ್ರಿಲ್‍ನ 2022 ನವದೆಹಲಿ, ಭಾರತ. ಭಾರತ ಸರ್ಕಾರ ಹಾಗೂ ದೆಹಲಿ ಸರ್ಕಾರಗಳ ಸಹಯೋಗದೊಂದಿಗೆ ಸಬ್ ಕಿ ಪಾಠಶಾಲಾ, ಮದರ್ ಅರ್ತ್ ಮಿಡೀಯಾ ಹೌಸ್ ಹಾಗೂ ಯುನಿವರ್ಸಲ್ ಸೋಲ್ ಟ್ರೀ ಫೌಂಡೇಶನ್ ವತಿಯಿಂದ ದೇಶದ ಹಳ್ಳಿ ಹಳ್ಳಿಗಳ ಸಾತ್ವಿಕ ಬಲ ಮಹಾತ್ಮ ಗಾಂಧೀಜಿ ಹಾಗೂ ದೇಶದ ಹಳ್ಳಿ ಹಳ್ಳಿಗಳ ಆದಿಮ ಬಲ ಬಾಬಾ ಸಾಹೇಬ್ ಅಂಬೇಡ್ಕರ್ ಈ ನೆಲದ ಈ ಇಬ್ಬರು ದಿವ್ಯಚೇತನಗಳ ಸ್ಮರಣಾರ್ಥವಾಗಿ ಪ್ರತಿಷ್ಠಾಪಿಸಿ 2022ನೇ ಸಾಲಿನಲ್ಲಿ ಕೊಡಮಾಡುತ್ತಿರುವ 'ಭಾರತೀಯ ಕಾರುಣ್ಯ ವಿಶ್ವ ಹೃದಯ' 2022ನೇ ಸಾಲಿನ ಅತ್ಯುತ್ತಮ ಪ್ರಥಮ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾದ ಕರ್ನಾಟಕದ ನಮ್ಮ ಹೆಮ್ಮೆಯ ಕವಿ, ಚಿಂತಕ, ಕಿರುಚಿತ್ರ ನಿರ್ಮಾಣಕಾರರು, ಕೃಷಿಕರು, ರಾಜಕೀಯ ಹಾಗು ಸಾಮಾಜಿಕ ಕಾರ್ಯಕರ್ತರು ಹಾಗೂ ಬಹುಮುಖಿ ಪ್ರತಿಭಾವಂತರಾದ ಶ್ರೀ ನಾಗತಿಹಳ್ಳಿ ರಮೇಶ್ ಅವರು ಪುರಸ್ಕೃತರಾಗಿ ಗೌರವಕ್ಕೆ ಒಳಗಾದುದು ನಮ್ಮ ರಾಜ್ಯಕ್ಕೆ ಹೆಮ್ಮೆಯ ವಿಷಯ.


  • 2022

ದಿನಾಂಕ 22 ಮೇ,2022 ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಮೈಸೂರು ,ಕರ್ನಾಟಕ ರಾಜ್ಯ. ಅವಧೂತ ದತ್ತ ಪೀಠದ ವತಿಯಿಂದ ಕೊಡುವ ಪ್ರತಿಷ್ಠಿತ ಆಸ್ಥಾನ ರಚಾಯಿತ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ 2022 ಶ್ರೀ ಗಣಪತಿ ಸಚ್ಚಿದಾನಂದ ಮಹಾ ಸ್ವಾಮೀಜಿ ಕೃಪಾಶೀರ್ವಾದದಿಂದ ಪಡೆದಿರುತ್ತಾರೆ .

  • 2022

ಚಿರು, ರಾಜಸ್ತಾನ ರಾಜ್ಯ. ದಿನಾಂಕ 6/8/2022 ರ ಶನಿವಾರದಂದು ರಾಜಸ್ಥಾನದ ಚುರುವಿನಲ್ಲಿ ಅಜಾದ್ ಕಾ ಅಮೃತ ಮಹೋತ್ಸವದ ಅಂಗವಾಗಿ ಶ್ರೀ ಮಹಾರಾಣಾ ಪ್ರತಾಪ್ ಜಿ ಹಾಗೂ ಶ್ರೀ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಸ್ಮರಣಾರ್ಥವಾಗಿ ಭಾರತ ಸರ್ಕಾರ ಹಾಗೂ ರಾಜಸ್ಥಾನ ಸರ್ಕಾರದ ಸಹಯೋಗದೊಂದಿಗೆ ಆಪ್ನಿ ಪಾಠಶಾಲಾ ಕೊಡಮಾಡಿದ 'ಭಾರತೀಯ ವೀರ್ತಾ ಏಕತಾ' ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾಗಿವರು.


  • 2022

17ನೇ ಸೆಪ್ಟೆಂಬರ ಮಥುರ, ಉತ್ತರ ಪ್ರದೇಶ ರಾಜ್ಯ. ಭಾರತ ಸರ್ಕಾರ ಸಂಸ್ಕೃತಿ ಸಚಿವಾಲಯ ಹಾಗೂ ಉತ್ತರ ಪ್ರದೇಶ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಜೀವಾತ್ಮ ಫೌಂಡೇಶನ್ ಆಲಿಗಡ , ಉತ್ತರ ಪ್ರದೇಶ ಮತ್ತು ಚೈತನ್ಯ. ಸಾಂಸ್ಕೃತಿಕ ಪ್ರತಿಷ್ಠಾನ, ಮಥುರ, ಉತ್ತರ ಪ್ರದೇಶ ಮೊದಲ ಬಾರಿ ಕೊಡಮಾಡುತ್ತಿರುವ 'ಶ್ರೀ ಕೃಷ್ಣ ಪ್ರೇಮಾಮೃತಂ ಸಮ್ಮಾನ್' ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಕ್ಕೆ ಕರ್ನಾಟಕ ರಾಜ್ಯದ ಪ್ರಸಿದ್ಧ ಕವಿ, ಚಿಂತಕ, ಪತ್ರಕರ್ತ,ಸಾಮಾಜಿಕ ಹಾಗೂ ರಾಜಕೀಯ ಕಾರ್ಯಕರ್ತ, ಕಿರುಚಿತ್ರ ನಿರ್ಮಾಣಗಾರ, ಅತ್ಯುತ್ತಮ ವಾಗ್ಮಿಯೂ, ಸಂಗೀತ ಪ್ರಿಯಕರ, ಕೃಷಿಕರೂ ಆದ ಶ್ರೀ ನಾಗತಿ ಹಳ್ಳಿ ರಮೇಶ್ ಅವರಿಗೆ ಶ್ರೀಕೃಷ್ಣ ಜನ್ಮ ಭೂಮಿ ಮಥುರಾದಲ್ಲೀ ನೀಡಿ ಗೌರವಿಸಿಲಾಗಿದೆ.


  • 2022

ದಿನಾಂಕ: 16 ನೇ ನವೆಂಬರ್ 2022 ಸ್ಥಳ: ಬಹಲ್ ಆಡಿಟೋರಿಯಂ, ಗ್ರಾಮ ಬಹಲ್, ಭಿವಾನಿ ಜಿಲ್ಲೆ, ಹರಿಯಾಣ ರಾಜ್ಯ. ಏಕಂ ಸತ್ಯಂ, ಹರಿಯಾಣವಿ ಸಂಸ್ಕೃತಿ ವೇದಿಕೆ, ಸುಪ್ತ ಪ್ರಜ್ಞೆ ಮೀಡಿಯಾ ಹೌಸ್ ಹಾಗೂ ಭಹಲ್ ಯುವ ಏಕತಾ ಮಂಚ್ ಸಂಯುಕ್ತ ಅಶ್ರಯದಲ್ಲಿ ಭಾರತ ಸ್ವಾತಂತ್ರ್ಯ ಅಮೃತೋತ್ಸವದ ಆಚರಣೆಯ ಅಂಗವಾಗಿ ಮರಳಿ ಹಳ್ಳಿಗೆ ಹಂಬಲದಿಂದ ಕಲ್ಪನಾತ್ಮಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಅಖಂಡ ಭಾರತದ. ಮಣ್ಣಿನ ಮಗ (ಭೂಮಿಪುತ್ರ) ಶಹೀದ್-ಇ-ಆಜಂ ಶ್ರೀ ಭಗತ್ ಸಿಂಗ್ ಜಿ ಅವರ ತ್ಯಾಗ ಬಲಿದಾನ ಸ್ಮರಣೆಯಲ್ಲಿ ಸೇರಿ ಕ್ರಾಂತಿವೀರ್ ಜೀವ್ ಚೇತನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ 2022 ಸ್ಥಾಪಿಸಲಾಗಿದೆ. ( ಈ ಪ್ರಶಸ್ತಿಯು 50000 ರೂಪಾಯಿಯ ನಗದು, ಪ್ರಶಸ್ತಿ ಪ್ರಮಾಣ ಪತ್ರ, ಸ್ಮರಣ ಫಲಕದ ಗೌರವಾರ್ಪಣೆ ಒಳಗೊಂಡಿದೆ) ಈ ಪ್ರಶಸ್ತಿಯನ್ನು ಶ್ರೀ ನಾಗತಿಹಳ್ಳಿ ರಮೇಶ್ (ಪ್ರಸಿದ್ಧ ಕವಿ, ಚಿಂತಕ, ಚಲನಚಿತ್ರ ನಿರ್ಮಾತ, ಪರಿಸರ, ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತ ಹಾಗೂ ಕೃಷಿಕ, ಕರ್ನಾಟಕ) ಅವರಿಗೆ ನೀಡಿ ಗೌರವಿಸಿದ್ದಾರೆ.

ನಾಗತಿಹಳ್ಳಿ ರಮೇಶ್ ಅವರ ಬಗ್ಗೆ ಅಭಿಪ್ರಾಯಗಳು

ಬದಲಾಯಿಸಿ

ಪ್ರೀತಿಯ ನಾಗತಿಹಳ್ಳಿ ರಮೇಶ್ ಅವರ ಸಾಂಸ್ಕೃತಿಕ ಪ್ರತಿಭತ್ವವನ್ನು , ಸಾಹಿತ್ಯಕ ಮಾನವೀಯ ಸೃಜನಶೀಲತೆಯನ್ನು ಗುರುತಿಸುತ್ತ ಒರಿಸ್ಸಾದ ಜ್ಞಾನ ಫೀಠ ಪುರಸ್ಕೃತ,ಪದ್ಮ ವಿಭೂಷಣ, ಹಿರಿಯ ಕವಿ ಸೀತಾಕಾಂತ ಮಹಾಪಾತ್ರ ತಮ್ಮ ಸ್ಪಷ್ಟ ನುಡಿಗಳಲ್ಲಿ ಹೀಗೆ ಹೇಳಿದಾರೆ,

" Hearty Congratulations dear Ramesh for your being honoured ' Kalinga Vishwa Chethana ' Rashtriya prashshsthi puraskar' by Odisha's government  and Kalinga  Foundation on your life time achievements in literary accomplishments of very significant level.It is matter of Pride for our Odisha -  Karnataka! You are a symbol of all India literary excellence and United Spirit of the human sensibilities and  creativity of Pan-India diversity and its cultural roots and regional richness! I wish you all the best and hope one day you will be a recipient of Jnana Peetha Award,if people there really appreciate your talents and multi-faceted dimensions of your poems and musical rendition of your soothing and socially relevant focus of original insights!! All the best in the years/decades ahead in your creative pursuits!! 
                             - Sitakant Mahapatra
  • Sri Nagathihalli ramesh is a good friend of mine for two decades. He is a well-known philanthropist who has always wibed for the needy.He is an upcoming Kannada poet who has explored several dimensions of the mother image in his poetry.He has also edited a monthly magazine titled Spardha Prapancha for a decade which was quite popular among the students and the youth in general. Haling from a rural background, Nagathihalli Ramesh has a fair amount of knowledge about the problems of rural India and has been quite concerned about the problems of the farmers and the down trodden.Besides lending a helping hand to many poor families,he has also nurtured many talented budding writers across Karnataka and has published their writings .Exploring the possibilities of the visual media, he has also directed a few documentary films which are quite sensible and reflect in their own way the angst of India of the post -globalization era .The rare enthusiasm, commitment, insights,qualities of leadership and deep concerns of Nagathihalli Ramesh could be very useful for any institution or organization which could make use of his energy and channelise this rare energy

towards the best causes of our society.

                          - Dr.NATARAJ HULIYAR