ನವಿಲಚಂದ್ರ ಎಸ್ಟೇಟ್

ನವಿಲಚಂದ್ರ ಎಸ್ಟೇಟ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ಇರುವುದು. ಮುಖ್ಯ ಪೇಟೆಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದೆ. ಇದು ಬಹಳ ಎತ್ತರದ ಜಾಗದಲ್ಲಿದೆ. ಈಎಸ್ಟೇಟ್ ನ ಒಂದು ಭಾಗಕ್ಕೆ ಹೋದರೆ ಅಲ್ಲಿ ಮಾಲಿಕನ ಮನೆ ಇದೆ.

ಇಲ್ಲಿನ ಮಳೆ ಬೆಳೆ,: ಪ್ರಾಣಿ ಪಕ್ಷಿಗಳ ವಿವರಣೆ ಬದಲಾಯಿಸಿ

  • ಬೇಸಿಗೆಯ ಮಳೆ ಇಲ್ಲಿ ಬಹಳ ಕಡಿಮೆ. ಆದರೆ ಗುಡುಗು ಸಿಡಿಲಂತೂ ಭಯಂಕರವಾಗಿ ಇರುತ್ತದೆ. ಬಹಳ ಎತ್ತರದ ಜಾಗ ಆದ್ದರಿಂದ ಆರ್ಭಟಿತ ಸ್ವಲ್ಪ ಜೋರಾಗಿ ಇರುತ್ತದೆ. ಎಲ್ಲೋ ದೂರದಲ್ಲಿ ಮಳೆ ಸುರಿಯುತ್ತಿದ್ದರೂ ಅದನ್ನು ಇಲ್ಲಿಂದ ಕಾಣಬಹುದು. ಬೇಸಿಗೆಯಲ್ಲಿ ನೀರು ಹೊಡೆಯದಿದ್ದರೆ ಗಿಡಗಳು ಒಣಗಿ ಸೊರಗುತ್ತವೆ. ಆದರೆ ಮಳೆಗಾಲದಲ್ಲಿ ಸುರಿಯುವ ಅತಿಯಾದ ಮಳೆಗೆ ಕೊಳೆ ರೋಗ ಬರುವ ಸಾಧ್ಯತೆ ಇದೆ.
  • ಇಲ್ಲಿ ಅಡಿಕೆ, ಕಾಫೀ, ಮೆಣಸು, ಸಿಲ್ವರ್ ಇಲ್ಲಿನ ಅತಿ ಮುಖ್ಯ ಬೆಳೆ. ಬಾಳೆ, ಕಿತ್ತಳೆ, ದಾಳಿಂಬೆ, ತೊಂಡೆಕಾಯಿ, ಬಸಳೆ, ನುಗ್ಗೆ, ನಿಂಬೆ ಇಲ್ಲಿನ ಸಣ್ಣ ಬೆಳೆಗಳು. ಸೀಬೆ, ಗೇರಣ್ಣು, ಹಲಸು, ನೇರಳೆ, ನೆಲ್ಲಿಕಾಯಿ ಮುಂತಾದ ಮರಗಳೂ ಇದೆ. ಬೀಟೆ, ಸಾಗುವಾನೆ, ಉಪ್ಪಳ, ನಂದಿ, ಆಲದ ಮರ ಮುಂತಾದ ಕಾಡು ಮರಗಳಿವೆ.
  • ಎಸ್ಟೇಟ್ ನ ಒಂದು ಬದಿಗೆ ೭೦೦ ಎಕರೆಯ ಮತ್ತೊಂದು ಎಸ್ಟೇಟ್ ಇದೆ..ಇನ್ನು ಮೂರು ಕಡೆ ಕಾಡೆ ಇರುವುದು. ಆದ್ದರಿಂದ ಕಾಡು ಪ್ರಾಣಿಗಳ ಕಾಟ ಸ್ವಲ್ಪ ಜಾಸ್ತಿ. ನವಿಲುಗಳ ಹಿಂಡೇ ಇದೆ ಗಿಳಿ, ಆಡ್ಲಕ್ಕಿ, ಮರಕುಟುಕ ಇನ್ನೂ ಹಲವಾರು ರೀತಿಯ ಹಕ್ಕಿಗಳು ಇವೆ. ಕಡ, ಕುರ್ಕ, ಜಿಂಕೆ, ಮೊಲ, ಹಂದಿ, ಮುಳ್ಳು ಹಂದಿ, ಕಾಡುಕೋಣ ಮುಂತಾದ ಪ್ರಾಣಿಗಳಿವೆ.

ಇಲ್ಲಿನ ಪ್ರಕೃತಿ ಸೌಂದರ್ಯ ಬದಲಾಯಿಸಿ

ಇಲ್ಲಿನ ಎತ್ತರದ ಜಾಗದಿಂದ ಬಹಳ ದೂರದ ಒಂದು ದ್ರುಶ್ಯವನ್ನು ಕಾಣಬಹುದು. ಚಳಿಗಾಲದಲ್ಲಂತೂ ಇನ್ನೂ ಚಂದ. ಮಂಜಿನ ಮಧ್ಯಯದಿಂದ ಹುಟ್ಟಿಬರುವ ಸೂರ್ಯನನ್ನು ನೋಡಲು ಎರಡು ಕಣ್ಣು ಸಾಲದು. ಇಲ್ಲಿಂದ ಸುಮಾರು ಆರು ಏಳು ಗುಡ್ಡಗಳು ಕಾಣುತ್ತವೆ. ಕೊಪ್ಪ ಹಾಗೂ ತೀರ್ಥಹಳ್ಳಿ ಪೇಟೆ ಕೂಡ ಕಾಣುತ್ತದೆ. ಅಲ್ಲದೆ ಗುಣವಂತಿ, ಕೂಸುಗೊಳ್ಳಿ ಎಂಬ ಪುಟ್ಟ ಗ್ರಾಮದ ಜನರ ಮನೆ ಹಾಗೂ ಅವರ ಹೊಲ ಎಲ್ಲವೂ ಈ ಎಸ್ಟೇಟ್ ನಿಂದ ನೋಡಿದರೆ ಹಸಿರು ಹಾಸಿಗೆಯ ಮಧ್ಯೆ ಮಧ್ಯೆ ಗೋಪುರಗಳು ಇರುವಂತೆ ಕಾಣುತ್ತದೆ. ಒಟ್ಟಾರೆ ನವಿಲಚಂದ್ರ ವಾಸಿಗರಿ ಗಂತೂ ಸ್ವರ್ಗದ ಸವಿಯೇ ಸಿಗುತ್ತದೆ...!!