ಪಂಜಾಬಿನಲ್ಲಿರುವ ನವಾನಶಹರ್ ತನ್ನ ಸುತ್ತ - ಮುತ್ತಲಿನಲ್ಲಿರುವ ನಯನ ಮನೋಹರವಾದ ಪರಿಸರ ಹಾಗು ಆಹ್ಲಾದಕರವಾದ ವಾತಾವರಣದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧವಾದ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುತ್ತಿದೆ. ಈ ಊರಿಗೆ ಸಮೀಪದಲ್ಲಿ ಹರಿಯುವ ಸಟ್ಲೇಜ್ ನದಿಯು ಇಲ್ಲಿನ ಪರಿಸರಕ್ಕೆ ಸೌಂದರ್ಯದ ಸ್ಪರ್ಶವನ್ನು ಮತ್ತು ಭೂಮಿಗೆ ಫಲವತ್ತತೆಯನ್ನು ಒದಗಿಸಿದೆ. ಅಲ್ಲಾವುದ್ಧೀನ್ ಖಿಲ್ಜಿಯಕಾಲದಲ್ಲಿ ( 1295-1316) ಆಫ್ಘನ್ ಸೇನಾಧಿಪತಿಯಾದ ನೌಶೆರ್ ಖಾನ್ ಈ ನವಾನಶಹರ್ ಅನ್ನು ನಿರ್ಮಾಣ ಮಾಡಿದನು. ಹೀಗಾಗಿ ನವಾನಶಹರ್ ಅನ್ನು ಆತನ ಹೆಸರಿಂದ ನೌಸರ್ ಎಂದು ಕರೆಯಲಾಗುತ್ತಿತ್ತು. ಆದರೆ 2008ರಲ್ಲಿ ಪಂಜಾಬಿನ ಮುಖ್ಯಮಂತ್ರಿ ಎಸ್. ಪ್ರಕಾಶ್ ಸಿಂಗ್ ಬಾದಲ್ ಅಧಿಕೃತವಾಗಿ ನವಾನಶಹರ್ ಎಂಬ ಹೆಸರಿಗೆ ಬದಲಾಗಿ ಶಹೀದ್ ಭಗತ್ ಸಿಂಗ್ ನಗರ್ ಎಂದು ಮರು ನಾಮಕರಣ ಮಾಡಿದರು.

ನವಾನಶಹರ್ ಹಾಗು ಸುತ್ತ- ಮುತ್ತಲಿರುವ ಪ್ರವಾಸಿ ತಾಣಗಳು

ಬದಲಾಯಿಸಿ

ನವಾನಶಹರ್ ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ನೌಶೆರ್ ಖಾನ್‍ನಿಂದ ನಿರ್ಮಾಣಗೊಂಡ ಐದು ಕೋಟೆಗಳು ಅಥವಾ ಹವೇಲಿಗಳು ಇಲ್ಲಿನ ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಗುರುದ್ವಾರ ನನಕ್ಸರ್, ಗುರುದ್ವಾರ ಗುರ್ ಪರ್ತಾಪ್, ಸನೆಹಿ ದೇವಾಲಯ ನವಾನಶಹರ್, ನಾಭ್ ಕನ್ವಾಲ್, ಕಿರ್ಪಾಲ್ ಸಾಗರ್ ಮತ್ತು ಗುರುದ್ವಾರ ಗುರ್ ಪಲಹ್ ( ಸೊಟ್ರನ್)ಗಳಂತಹ ದೇಶದ ಪ್ರಮುಖ ಗುರುದ್ವಾರಗಳು ನವಾನಶಹರಿನಲ್ಲಿ ನೆಲೆಗೊಂಡಿವೆ. ನವಾನಶಹರ್ ನೋಡುವುದರ ಜೊತೆಗೆ ಪ್ರವಾಸಿಗರು ಪಕ್ಕದಲ್ಲಿರುವ ಜಲಂಧರ್, ಲೂಧಿಯಾನ, ಹೊಶಿಯರ್ ಪುರ್ ಮತ್ತು ಶಿಮ್ಲಾಗಳಿಗೆ ಭೇಟಿ ನೀಡಬಹುದು.

ನವಾನಶಹರಿಗೆ ತಲುಪುವುದು ಹೇಗೆ

ಬದಲಾಯಿಸಿ

ನವಾನಶಹರ್ ನಗರಕ್ಕೆ ಸಮೀಪದ ನಗರಗಳಿಂದ ಮತ್ತು ರಾಜ್ಯಗಳಿಂದ ರಸ್ತೆ ಮತ್ತು ರೈಲು ಮಾರ್ಗವಾಗಿ ಸುಲಭವಾಗಿ ತಲುಪಬಹುದು. ಇಲ್ಲಿನ ಸಂಪರ್ಕ ವ್ಯವಸ್ಥೆಯು ಇದರ ಪ್ರವಾಸಿ ಆಕರ್ಷಣೆಯನ್ನು ಹೆಚ್ಚು ಮಾಡಿದೆ. ಲೂಧಿಯಾನವು ನವಾನಶಹರಿಗೆ ಸಮೀಪದ ವಿಮಾನ ನಿಲ್ದಾಣವನ್ನು ಹೊಂದಿದೆ. ಇದನ್ನು"ಶಹ್ನೆವಾಲ್ ವಿಮಾನ ನಿಲ್ದಾಣ" ಎಂದು ಕರೆಯುತ್ತಾರೆ[]. ಈ ವಿಮಾನ ನಿಲ್ದಾಣದಿಂದ ನವಾನಶಹರಕ್ಕೆ ಒಂದು ಗಂಟೆಯ ಪ್ರಯಾಣಾವಧಿಯಾಗುತ್ತದೆ.

ನವಾನಶಹರಕ್ಕೆ ಭೇಟಿ ನೀಡಲು ಅತ್ಯುತ್ತಮ ಕಾಲ

ಬದಲಾಯಿಸಿ

ನವಾನಶಹರದಲ್ಲಿ ಬಿಸಿಲಿನಿಂದ ಕೂಡಿದ ಬೇಸಿಗೆಗಳು, ಕೊರೆಯುವ ಚಳಿಯಿಂದ ಕೂಡಿದ ಚಳಿಗಾಲವು ಮತ್ತು ಆರ್ದ್ರತೆಯಿಂದ ಕೂಡಿದ ಮಳೆಗಾಲಗಳು ಕಂಡು ಬರುತ್ತವೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಮಾರ್ಚ್ ತಿಂಗಳ ನಡುವಿನ ಕಾಲ ಎಂದರೆ ಚಳಿಗಾಲವು ಅತ್ಯಂತ ಪ್ರಶಸ್ತವಾದ ಕಾಲವಾಗಿದೆ.[]

ಉಲ್ಲೇಖಗಳು

ಬದಲಾಯಿಸಿ