ನವಸಮಾಜ ನಿರ್ಮಾಣ ವೇದಿಕೆ
ನವಸಮಾಜಕ್ಕಾಗಿ ಹಂಬಲಿಸಿ ಕಾರ್ಯಪ್ರವೃತ್ತವಾಗಿರುವ ಒಂದು ಸಂಘಟನೆ ನವಸಮಾಜ ನಿರ್ಮಾಣ ವೇದಿಕೆ. ಜಾತಿ, ಧರ್ಮ, ವರ್ಗ, ವರ್ಣ, ಲಿಂಗ, ಪ್ರದೇಶಗಳಲ್ಲಿ ಹಂಚಿ ಹೋಗಿರುವ ಜಗತ್ತಿನ ಎಲ್ಲ ದುಡಿಯುವ ವರ್ಗದ ವಿಮೋಚನೆಯೇ ಅದರ ಪ್ರಧಾನ ಗುರಿ.
ಪರಿವಿಡಿ
ಪ್ರಸ್ತಾವನೆ
ಬದಲಾಯಿಸಿನವಸಮಾಜ ನಿರ್ಮಾಣ ವೇದಿಕೆಯು ಕರ್ನಾಟಕದಲ್ಲಿರುವ ಒಂದು ಶೋಷಿತ ಪರ ಸಂಘಟನೆ. ಇದು ೧೫ನೇ ಫೆಬ್ರವರಿ ೨೦೦೮ರಂದು ವಿದ್ಯಾರ್ಥಿಗಳ ಮೂಲಭೂತ ಸಮಸ್ಯೆಗಳನ್ನು ತೆಗೆದುಕೊಂಡು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು ಕಛೇರಿಯ ಮುಂದೆ ಧರಣಿಯನ್ನು ಮಾಡುವ ಮೂಲಕ ಅಧೀಕೃತವಾಗಿ ಸ್ಥಾಪನೆಯಾಯಿತು. ಈ ಧರಣಿಯ ನೇತೃತ್ವ ವಹಿಸಿದ್ದವರು ಬಿ.ಆರ್.ರಂಗಸ್ವಾಮಿ ಅವರು. ನಂತರದ ದಿನಗಳಲ್ಲಿ ನವಸಮಾಜ ನಿರ್ಮಾಣ ವೇದಿಕೆ ಎಂಬುದನ್ನು ಸಂಕ್ಷಿಪ್ತವಾಗಿ ಎನ್.ಎಸ್.ಎನ್.ವಿ. ಎಂಬುದಾಗಿ ಕರೆಯಲಾಗುತ್ತಿದೆ. ನವಸಮಾಜ ನಿರ್ಮಾಣ ವೇದಿಕೆಯು ಬಿ.ಆರ್.ರಂಗಸ್ವಾಮಿಯವರ ನೇತೃತ್ವದಲ್ಲಿ ಸ್ಥಾಪನೆಯಾಗಿ ಇಂದಿಗೂ ಕೂಡ ಮುಂದುವರಿಯುತ್ತಿದೆ. ನವಸಮಾಜ ನಿರ್ಮಾಣ ವೇದಿಕೆಯ ಧ್ಯೇಯವಾಕ್ಯಗಳೆಂದರೆ ಅಧ್ಯಯನ, ಆಚರಣೆ, ಐಕ್ಯತೆ ಎಂಬುದಾಗಿರುತ್ತದೆ. ಸಂಘಟನೆಯು ತನ್ನದೇ ಆದ ಪ್ರಣಾಳಿಕೆ ಹಾಗೂ ಸಂವಿಧಾನವನ್ನು ಹೊಂದಿದೆ. ನಾಗಮಂಗಲ ತಾಲ್ಲೂಕಿನ ಹಾಗೂ ಕರ್ನಾಟಕದ ಹಲವಾರು ಸಮಸ್ಯೆಗಳ ವಿರುದ್ಧ ರಾಜಿರಹಿತವಾಗಿ ಹೋರಾಟಗಳನ್ನು ಮಾಡಿಕೊಂಡು ಬಂದಿರುತ್ತದೆ. ಈಗ ಮೈಸೂರು, ಚಾಮರಾಜ ನಗರ, ಮಂಡ್ಯ,ಬೆಂಗಳೂರು ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸುತ್ತಿದೆ.
ಹೆಸರಿನ ಮೂಲ
ಬದಲಾಯಿಸಿನವಸಮಾಜ ನಿರ್ಮಾಣ ವೇದಿಕೆ ಎಂಬ ಹೆಸರನ್ನು ಸೂಚಿಸಿದವರು ಸಂಘಟನೆಯ ರಾಜ್ಯಪ್ರಧಾನ ಕಾರ್ಯದರ್ಶಿಗಳಾದ ಬಿ.ಆರ್.ರಂಗಸ್ವಾಮಿಯವರು. 2003ರಲ್ಲಿ ಕೆಲವು ಪ್ರಗತಿಪರ ಗೆಳೆಯರೆಲ್ಲಾ ಸೇರಿ ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನಲ್ಲಿ ಮಾನವ ಸೌಹಾರ್ದ ವೇದಿಕೆ ಎಂಬ ಸಂಘಟನೆಯೊಂದನ್ನು ಕಟ್ಟಿದ್ದರು, ಇಲ್ಲಿ ಮುಖ್ಯವಾಗಿ ವಕೀಲರಾದ ಜೀರಹಳ್ಳಿ ರಮೇಶ್‍ಗೌಡ, ಬಿ.ಪಿ.ಮುನಿರಾಜು, ಬಿ.ಆರ್.ರಂಗಸ್ವಾಮಿ ಸೇರಿದಂತೆ ಇನ್ನೂ ಹಲವಾರು ಜನ ಸ್ನೇಹಿತರು ಸೇರಿ ಈ ವೇದಿಕೆಯೂ ನಿರ್ಮಾಣವಾಗಿತ್ತು. ಆಗತಾನೆ ಬೆಳ್ಳೂರಿನ ನೆಮ್ಮದಿಯನ್ನು ಕೆಡಿಸಲು ಆರ್.ಎಸ್.ಎಸ್. ಎಂಬ ಕೋಮುವಾದಿ, ಬ್ರಾಹ್ಮಣವಾದಿ ಸಂಘಟನೆ ತನ್ನ ಫ್ಯಾಸಿಸ್ಟ್ ಅಜೆಂಡಾವನ್ನು ಜಾರಿಗೊಳಿಸಲು ದಲಿತ ಹಾಗೂ ಶೂದ್ರರನ್ನೆ ಬಳಸಿಕೊಳ್ಳತೊಡಗಿತು, ಅಷ್ಟೆ ಅಲ್ಲಾ ದಲಿತರ ಕೈಯಲ್ಲೇ ದಲಿತರಾದ ಮೋಟಮ್ಮರ ಪ್ರತಿಕೃತಿಯನ್ನು ದಹಿಸಿದರು(ಮೋಟಮ್ಮ ಆ ಸಂದರ್ಭದಲ್ಲಿ ಪ್ರವೀಣ್ ಭಾಯ್ ತೊಗಾಡಿಯಾ ಕರ್ನಾಟಕಕ್ಕೆ ಕಾಲಿಟ್ಟರೇ ಅವನ ಕಾಲು ಮುರಿಸುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದರು), ಅಂಬೇಡ್ಕರ್ ಅವರು ನಿಧನರಾದ ದಿನವಾದ ಡಿಸೆಂಬರ್ 6ರಂದು ದಲಿತರಿಗೆ ಶೋಕದ ದಿನವಾಗಿದೆ ಆದರೇ ಅವತ್ತಿನ ದಿನದಂದು ವಿಜಯೋತ್ಸವವನ್ನು ದಲಿತರು ಪಟಾಕಿ ಸಿಡಿಸಿ ಆಚರಿಸುವಂತೆ ಮಾಡಿದರು (ಡಿಸೆಂಬರ್ 6ರಂದು ಬಾಬರ್ ಮಸ್ಜೀದ್ ಧ್ವಂಸ ಮಾಡಿದ ನೆನಪಿಗೆ) ಕೊನೆಗೆ ಶೋಭಾಯಾತ್ರೆಯ ನೆಪದಲ್ಲಿ ಮುಸ್ಲಿಂರ ಅಂಗಡಿ ಮುಗ್ಗಟ್ಟುಗಳ ಗಾಜುಗಳನ್ನು ದಪ್ಪ ಕಲ್ಲುಗಳಿಂದ ಚಿದ್ರಗೊಳಿಸಿದರು, ಇಲ್ಲಿ ಮುಸ್ಲಿಂರಂತೆ ಕಾಣುವ ಹಿಂದೂಗಳ ಅಂಗಡಿಗಳನ್ನು ಧ್ವಂಸ ಮಾಡಿದರು. ಈ ಎಲ್ಲಾ ಬೆಳವಣಿಗೆ ಫಲವೇ ಮಾನವ ಸೌಹಾರ್ದ ವೇದಿಕೆ. ನಂತರ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡು ಹಲವಾರು ಸಭೆ ಸಮಾರಂಭಗಳನ್ನು ನಡೆಸಿದೆವು, ಹೋರಾಟದ ಹಾಡುಗಳನ್ನು ಕಲಿತೆವು ಹೀಗೆ ಮುಂದುವರೆದ ಸಂಘಟನೆಯನ್ನು ಒಂದು ವಿಶಾಲವಾದ ತಳಹದಿಯ ಮೇಲೆ ನಿರ್ಮಾಣ ಮಾಡಲು ಅದಕ್ಕೊಂದು ಅರ್ಥಪೂರ್ಣ ಹೆಸರೊಂದನ್ನು ಹುಡುಕಲು ಪ್ರಾರಂಭಿಸಿದೆವು, ಆಗ ಬಿ.ಆರ್.ರಂಗಸ್ವಾಮಿಯವರು ಹಲವಾರು ಸಲಾ ಎಲ್ಲಾ ದಿಕ್ಕಿನಲ್ಲೂ ಯೋಚಿಸಿ ನಮ್ಮ ಮುಂದಿನ ಸಮಾಜವನ್ನು ಹೊಸದಾಗಿ ಕಟ್ಟುವ ಅಗತ್ಯವಿದೆ ಎಂದು ನವಸಮಾಜ ನಿರ್ಮಾಣ ವೇದಿಕೆ ಎಂಬ ಹೆಸರನ್ನು ಸೂಚಿಸಿದರು. ಆದರೆ ಕೆಲವರಿಗೆ ಯಾಕೋ ಈ ಹೆಸರು ಇಷ್ಟವಾಗಲಿಲ್ಲ! ಈ ಹೆಸರು ಅತಿ ಉದ್ದವಾಯಿತು ಎಂದು ತಳ್ಳಿಹಾಕಿದರು, ಅವರೂ ಕೂಡ ಸೂಕ್ತ ಹೆಸರನ್ನು ಸೂಚಿಸಲು ವಿಫಲವಾದರು. ನಂತರದ ದಿನಗಳಲ್ಲಿ ಸಂಘಟಕರಲ್ಲಿ ವೈಮನಸ್ಸು ಹೆಚ್ಚಾಗಿ ಮಾನವ ಸೌಹಾರ್ದ ವೇದಿಕೆ ತಟಸ್ಥವಾಯಿತು, ಪರಿಣಾಮ ಕಾರ್ಯಕರ್ತರೆಲ್ಲಾ ತಮ್ಮ ತಮ್ಮ ಸೀಮಿತ ದಾರಿಗೆ ಹಿಂತಿರುಗಿದರು. ಆದರೆ ಹುಟ್ಟು ಹೋರಾಟಗಾರರಾದ ಬಿ.ಆರ್.ರಂಗಸ್ವಾಮಿಯವರು ಮಾತ್ರ ಹೋರಾಟದಿಂದ ಹಿಮ್ಮುಖರಾಗದೆ ನವಸಮಾಜ ನಿರ್ಮಾಣ ವೇದಿಕೆಯನ್ನು ಕಟ್ಟಿದರು. ಪ್ರಸ್ತುತ ಸಂಘಟನೆಯು ಬಡವರ ಪರವಾದ ಒಂದು ಪ್ರಾಮಾಣಿಕ ಧ್ವನಿ ರಾಜ್ಯದಾದ್ಯಂತ ಮಾರ್ಧ್ವನಿಸುತ್ತಿದೆ.
ಧ್ಯೆಯೋದ್ದೇಶಗಳು
ಬದಲಾಯಿಸಿ1.ದಲಿತರ ಜೀವಹಿಂಡುತ್ತಿರುವ ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಬಡತನ, ಮೂಢನಂಬಿಕೆ, ದಮನ, ದೌರ್ಜನ್ಯ, ಕೊಲೆ ಮುಂತಾದವುಗಳ ವಿರುದ್ಧ ಸಂಘಟಿತ ಹೋರಾಟ ಮಾಡುವುದು. ಖಾಸಗೀ ಕ್ಷೇತ್ರದಲ್ಲಿಯು ಮೀಸಲಾತಿಗಾಗಿ ಹೋರಾಡುವುದು.
2.ಮಹಿಳೆಯರ ಮುಖ್ಯ ಸಮಸ್ಯೆಗಳಾದ ಪುರುಷಾಧಿಪತ್ಯ, ವರದಕ್ಷಿಣೆ ಕಿರುಕುಳ ಹಾಗೂ ಕೊಲೆ, ಅಸಮಾನತೆ, ಕೌಟುಂಬಿಕ ಹಿಂಸೆ, ಲೈಂಗಿಕ ಕಿರುಕುಳ, ಶಿಶು-ಭ್ರೂಣಹತ್ಯೆ, ಬಾಲ್ಯವಿವಾಹ, ಬಲವಂತದವಿವಾಹ, ದೇವದಾಸಿಪದ್ದತಿ, ಸತಿಪದ್ದತಿ, ಜಾತಿಶೋಷಣೆ, ಆ್ಯಸಿಡ್ ಧಾಳಿ, ಸೆಕ್ಸ್ ಉದ್ಯಮ, ಮಹಿಳೆಯರನ್ನು ಬೆತ್ತಲೆಗೊಳಿಸಿ ಸರಕಾಗಿಸಿರುವ ಜಾಹಿರಾತುಗಳು, ಸಿನಿಮಾಗಳು, ಟಿ.ವಿ.ಗಳು, ಪತ್ರಿಕೆಗಳು, ಇಂಟರ್ನೆಟ್ ವಬ್‍ಸೈಟ್‍ಗಳು, ಮೊಬೈಲ್‍ಗಳು ಮುಂತಾದವುಗಳ ವಿರುದ್ಧ ಸ್ತ್ರೀ-ಪುರುಷರಲ್ಲಿ ಜಾಗೃತಿ ಮೂಡಿಸಿ ಐಕ್ಯ ಹೋರಾಟ ಕಟ್ಟುವುದು.
3.ಜಾತಿ ಮತ್ತು ವರ್ಗ ತಾರತಮ್ಯಗಳ ವಿರುದ್ಧ ಏಕಕಾಲದಲ್ಲಿ ಸಮರ ಸಾರುವುದು.
4.ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಮೇಲೆ ಆಕ್ರಮಣ ನಡೆಸುತ್ತಿರುವ ಕೋಮುವಾದಿ, ಜಾತಿವಾದಿ, ಬ್ರಾಹ್ಮಣ್ಯವಾದಿಗಳನ್ನು ಮಟ್ಟಹಾಕುವುದು.
5.ವಿದ್ಯಾರ್ಥಿ/ನಿಯರ ಸಮಸ್ಯೆಗಳಾದ ಜಾತಿಶೋಷಣೆ, ಧರ್ಮಾಂಧತೆ, ಮೂಢನಂಬಿಕೆ, ಕೋಮುವಾದವನ್ನು ಬೆಳೆಸುವ ಪಠ್ಯಪುಸ್ತಕಗಳು ಮತ್ತು ಅವನ್ನು ಭೋದಿಸುವ ಮಡಿವಂತ ಶಿಕ್ಷಕರು, ಶಿಕ್ಷಣದ ವ್ಯಾಪಾರಿಕರಣ ಹಾಗೂ ಖಾಸಗೀಕರಣ, ಮೀಸಲಾತಿ ನಿರಾಕರಣೆ, ಫೀ ಹೆಚ್ಚಳ ಹಾಗೂ ಹಾಸ್ಟೆಲ್ ಸಮಸ್ಯೆ, ಜನವಿರೋಧಿ ಶಿಕ್ಷಣ ವ್ಯವಸ್ಥೆ ಮುಂತಾದ ಕಾಲೇಜು ಸಮಸ್ಯೆಗಳ ವಿರುದ್ಧ ರಾಜಿರಹಿತವಾಗಿ ಹೋರಾಡುವುದು ಮತ್ತು ಪ್ರಜಾತಾಂತ್ರಿಕ ಹಾಗೂ ವೈಜ್ಞಾನಿಕ ಶಿಕ್ಷಣ ವ್ಯವಸ್ಥೆಗಾಗಿ ಹೋರಾಡುವುದು.
6.ಯುವಕ-ಯುವತಿಯರನ್ನು ದಿಕ್ಕು ತಪ್ಪಿಸುತ್ತಿರುವ ದುಷ್ಟ ರಾಜಕೀಯ ಪಕ್ಷಗಳನ್ನು ಹಾಗೂ ಅವುಗಳ ಮುಖಂಡರುಗಳು, ಸಿನಿಮಾ ಹಾಗೂ ಟಿ.ವಿ ಮಾಧ್ಯಮಗಳು, ವಿದೇಶಿ-ದೇಶಿ ಸೌಂದರ್ಯ ಸಾಧನಗಳು, ಅಶ್ಲೀಲ ವೆಬ್‍ಸೈಟ್‍ಗಳು ಮುಂತಾದವುಗಳ ವಿರುದ್ಧ ರಾಜಿರಹಿತ ಹೋರಾಡುವುದು.
7.ರೈತವಿರೋಧಿ ನೀತಿಯನ್ನು ಹಾಗೂ ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಮನ, ಅನ್ಯಾಯ, ಅಕ್ರಮ ಮತ್ತು ಜಾಗತೀಕರಣ ಹಾಗೂ ಖಾಸಗೀಕರಣದಂತಹ ಜನವಿರೋಧಿ ನೀತಿ ವಿರುದ್ಧ ಹೋರಾಡುವುದು.
8.ಪರಿಸರನಾಶ ಮತ್ತು ಪರಿಸರ ವಿರೋಧಿ ಯೋಜನೆಗಳ ವಿರುದ್ಧ ರಾಜಿರಹಿತ ಹೋರಾಟ ಮಾಡುವುದು.
9.ಕೋಮುವಾದ, ಜಾತಿವಾದ, ಸಾಮ್ರಾಜ್ಯಶಾಹಿ, ಮನುವಾದ, ಬಂಡವಾಳಶಾಹಿ, ಭೂಮಾಲಿಕವಾದ, ಅಧಿಕಾರಶಾಹಿ ಮುಂತಾದ ಪ್ರಜಾಪೀಡಕ ವಾದಗಳ ವಿರುದ್ಧ ರಾಜಿರಹಿತ ಹೋರಾಟ ಮಾಡುವುದು.
10.ದೇಶದ ಅಭಿವೃದ್ಧಿಗೆ ಮತ್ತು ಐಕ್ಯತೆಗೆ ಮಾರಕವಾದ ಎಲ್ಲಾ ಧರ್ಮ, ದೇವರು, ಪಂಥಗಳೊಳಗಿನ ಕುರುಡು ನಂಬಿಕೆಗಳನ್ನು ಧಿಕ್ಕರಿಸಿ ಧರ್ಮಾತೀತ, ಜಾತ್ಯಾತೀತ, ಮತಾತೀತ ವಿಶ್ವಮಾನವತೆಯ ನವ ಸಮಾಜಕ್ಕಾಗಿ ಹೋರಾಡುವುದು.
11.ಜಾತಿ-ಧರ್ಮವನ್ನು ಮೀರಿದ ಅಂತರ್ಜಾತಿಯ ವಿವಾಹ, ಅಂತರ್ಧಮಿಯ ವಿವಾಹ, ವಿಧವಾ ವಿವಾಹ, ಪ್ರಗತಿಪರ ಪ್ರೇಮ ವಿವಾಹಗಳನ್ನು ರಕ್ಷಿಸುವುದು ಮತ್ತು ಪ್ರೋತ್ಸಾಹಿಸುವುದು. ಅಂತರ್ಜಾತಿಯ ಮದುವೆಯಾಗುವ ತಂದೆ-ತಾಯಿಗಳಿಗೆ ಸಿಗುವ ಸವಲತ್ತುಗಳು ಅವರ ಮಕ್ಕಳಿಗೂ ಸಿಗುವಂತೆ ಒತ್ತಾಯಿಸಿ ಹೋರಾಡುವುದು.
12.ಭ್ರಷ್ಟಾಚಾರ, ರಾಜಕಾರಣಿಗಳ ದುರಾಡಳಿತ, ಜನವಿರೋಧಿ ಕಾನೋನುಗಳು, ಪೊಲೀಸ್ ಧೌರ್ಜನ್ಯಗಳು, ಅಧಿಕಾರಿಗಳ ದುರಾಡಳಿತ, ಪ್ರಭುತ್ವ ಪ್ರಾಯೋಜಿತ ಸಂಘ-ಸಂಸ್ಥೆಗಳ ಜನವಿರೋಧಿ ಕೆಲಸಗಳು ಮುಂತಾದವುಗಳ ವಿರುದ್ಧ ಪ್ರಜಾ ಸಮರ ಸಾರುವುದು.
13.ಜಗತ್ತಿನ ಎಲ್ಲಾ ಮಾನವತಾವಾದಿಗಳ, ಸಮತಾವಾದಿಗಳ, ಸ್ವಾತಂತ್ರ್ಯ ಪ್ರೇಮಿಗಳ, ಜನಪರ ಹೋರಾಟಗಾರರು, ವಿಚಾರವಾದಿಗಳ ವಿಚಾರಗಳನ್ನು ಧೀರ್ಘ ಚರ್ಚೆಗೊಳಪಡಿಸಿ ಪ್ರಸ್ತುತವಾಗಿರುವ ಅಂಶಗಳನ್ನು ಅಳವಡಿಸಿಕೊಳ್ಳುವುದು.
14.ಮೂರ್ತಿಪೂಜೆ, ವ್ಯಕ್ತಿಪೂಜೆ, ಗ್ರಂಥಪೂಜೆ ಮುಂತಾದ ಪೂಜೆಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸಿ ಹೋರಾಟ ಕಟ್ಟುವುದು.