ನವೀನಶಿಲಾಯುಗದಲ್ಲಿ ಮಾನವ ಪ್ರಾರಂಭಿಕ ಶಿಲಾ ಪರಿರಕರಗಳನ್ನು ಒಂದು ಕಲ್ಲಿನಿಂದ ಇನ್ನೊಂದು ಕಲ್ಲಿಗೆ ಹೊಡೆದು ತಯಾರಿಸುತ್ತಿದ್ದು, ಶಿಲಾಪರಿಕರಗಳು ಗಡುಸು, ನಯವಲ್ಲದ ಮೇಲ್ಮೈ ಪಡೆದಿರುತ್ತಿದ್ದವು. ನಂತರದ ಹಂತದಲ್ಲಿಯೇ,ಒಂದು ಕಲ್ಲನು ಇನ್ನೊಂದು ಕಲ್ಲಿಗೆ ಉಜ್ಜುವ ಅಧವಾ ಗಡುಸು ಕಲ್ಲಿನ ಮೇಲೆ ಮೆದು ಕಲ್ಲನ್ನು ತಿರುಗಿಸುವ ಮೂಲಕ ನಯವಾದ ಮೇಲ್ಮೈನ ಪರಿಕರಗಳನ್ನು ಅಥವಾ ಉಪಕರಣಗಳನ್ನು ಮಾನವ ತಯಾರಿಸ ತೊಡಗಿದ. ಪರಿಣಾಮವಾಗಿ ಈ ಪರಿಕರಗಳು ನಯವಾದ ಮೇಲ್ಮೈ ಪಡೆದವು. ಈ ಕಲ್ಲಿನ ಪರಿಕರಗಳ ಕಾಲಮಾನವನ್ನು ಹೊಸ ಶಿಲಾಯುಗ ಅಥವಾ ನವಶಿಲಾಯುಗ ಎಂದು ಕರೆಯಲಾಗುತ್ತದೆ. ಹಿಂದಿನ ಹಳೆಶಿಲಾಯುಗ ಹಾಗೂ ಸೂಕ್ಷ್ಮಶಿಲಾಯುಗದ ಪರಿಕರಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದ್ದವು. [] ದಕ್ಷಿಣ ಭಾರತಕ್ಕೆ ಈ ಕಾಲಮಾನದ ಪ್ರಾರಂಭವನ್ನು ಕ್ರಿ ಪೂ ೩೦೦೦ಕ್ಕೆ ಆಲ್‍ಚಿನ್ ರು ಇರಿಸಿ ಬೂದಿದಿಬ್ಬಗಳ ಮಾದರಿಯ ನವಶಿಲಾಯುಗ ಎಂದು ಆಲ್‍ಚಿನ್‍ರು ಕರೆಯುತ್ತಾರೆ. ಇಲ್ಲಿದೊರೆತ ಪರಿಕರಗಳ ಬಗೆಗೆ ಮಾಹಿತಿ ಇಲ್ಲ.

ನವಶಿಲಾಯುಗದ ಪರಿಕರಗಳು.

ಮೊದಲ ನಯಗೊಳಿಸಿದ ಪರಿಕರಗಳು ತುಸು ನಂತರದಲ್ಲಿ (ಕ್ರಿ ಪೂ ೨೧೦೦) ಪಿಕ್ಲಿಹಾಳದಲ್ಲಿ ಕಂಡು ಬರುತ್ತವೆ. ಕೋಡೆಕಲ್ ಮತ್ತು ಉತ್ತನೂರುಗಳಲ್ಲಿ ಮೊದಲ ಹಂತದ ಮಡಕೆ ಅಥವಾ ಕುಂಬಾರಿಕೆ ಸಂಪ್ರದಾಯ ಕಂಡು ಬರುತ್ತದೆ. [] ಈ ಬೂದಿದಿಬ್ಬಗಳ ಕತೃಗಳ ಬಗೆಗೆ ಚರ್ಚೆ ನಡೆಯುತ್ತಿದೆ. [] ಇವು ಬಹುತೇಕ ಪಶುಸಂಗೋಪನೆಯ ಸಂಸ್ಕೃತಿಗಳೆಂದು ಭಾವಿಸಲಾಗಿದೆ. ಕರ್ನಾಟಕದಲ್ಲಿ ೪೨ ಮತ್ತು ಹೊಂದಿಕೊಂಡಂತೆ ಆಂಧ್ರದಲ್ಲಿ ೧೫ ಬೂದಿದಿಬ್ಬಗಳನ್ನು ಗುರುತಿಸಲಾಗಿದೆ. []

ಗುರುತಿಸುವಿಕೆ

ಬದಲಾಯಿಸಿ

ನೊತನ ಶಿಲಾಯುಗದ ಕೊನೆಯ ಭಾಗ (ನಿಯೋಲಿತಿಕ್ ಏಜ್). ಚಕ್ಕೆ ತೆಗೆದು ಮಾಡಿದ ಒರಟಾದ ಪೂರ್ವಶಿಲಾಯುಗದ ಆಯುಧಗಳಿಗಿಂತ ಬೇರಾದ, ಅಂಚುಗಳನ್ನು ಅಥವಾ ಇಡೀ ಆಯುಧಗಳನ್ನು ಕಲ್ಲು ಬಂಡೆಗಳ ಮೇಲೆ ತಿಕ್ಕಿ ನಯಗೊಳಿಸಿ ಬಳಸುತ್ತಿದ್ದುದು ಈ ಯುಗದ ವೈಶಿಷ್ಟ್ಯ. ಜಾನ್ ಲಬಕ್ (ಲಾರ್ಡ್ ಆವೆಬರಿ) 1865ರಲ್ಲಿ ನಿಯೋಲಿತಿಕ್ ಏಜ್ ಎಂಬ ಪದವನ್ನು ಮೊದಲಿಗೆ ಬಳಸಿದ. ಆಯುಧ ತಯಾರಿಕೆಯಲ್ಲಿ ಹೊಸ ವಿಧಾನಗಳನ್ನು ಬಳಸಿದುದನ್ನು ಅದು ಪ್ರಧಾನವಾಗಿ ಸೂಚಿಸುತ್ತದೆ. ನಯಗೊಳಿಸಿದ ಕಲ್ಲಿನ ಆಯುಧಗಳ ಬಳಕೆ ಮೊದಲ ಬಾರಿಗೆ ಮಣ್ಣಿನ ಪಾತ್ರೆಗಳ ತಯಾರಿಕೆ ಮತ್ತು ಉಪಯೋಗ, ಮೊದಲ ಹಂತದ ಬೇಸಾಯ ಮತ್ತು ಪ್ರಾಣಿಗಳ ಸಾಕಾಣಿಕೆ-ಇವು ಈ ಹಂತದ ವಿಶಿಷ್ಟ ಲಕ್ಷಣಗಳೆಂದು ಈಚಿನವರೆಗೂ ಪರಿಗಣಿಸಲಾಗಿತ್ತು. ಆದರೆ ಈಚಿನ 3-4 ದಶಕಗಳಿಂದ ಗೋರ್ಡನ್ ಚೈಲ್ಡ್ ಮುಂತಾದ ಪ್ರಾಕ್ತನ ವಿದ್ವಾಂಸರು ಅಂಥ ತಾಂತ್ರಿಕ ಲಕ್ಷಣಗಳಿಗಿಂತಲೂ ಸಾಂಸ್ಕೃತಿಕ ಹಿನ್ನೆಲೆಯನ್ನು ಸೂಚಿಸುವ ಆರ್ಥಿಕ ಸಾಮಾಜಿಕ ಅಂಶಗಳ ಆಧಾರದ ಮೇಲೆ ನವಶಿಲಾಯುಗದ ಸಂಸ್ಕೃತಿಯನ್ನು ಗುರುತಿಸುವುದು ಸೂಕ್ತವೆಂದು ವಾದಿಸಿದ್ದಾರೆ. ಅವರ ಪ್ರಕಾರ ಆಹಾರ ಸಂಗ್ರಹಣೆಯಲ್ಲಿ ತೊಡಗಿದ್ದ ಶಿಲಾಯುಗದ ಮಾನವ ಈ ಹಂತದಲ್ಲಿ ಆಹಾರೋತ್ಪಾದನೆಯತ್ತ ಮೊದಲ ಹೆಜ್ಜೆ ಇಟ್ಟ. ಪ್ರಕೃತಿಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವುದರ ಮೂಲಕ ಆರಂಭ ಹಂತದ ಬೇಸಾಯ, ಪಶು ಸಂಗೋಪನೆಗಳನ್ನು ರೂಢಿಸಿಕೊಂಡು, ತನ್ನ ಅಲೆಮಾರಿ ಜೀವನಕ್ರಮವನ್ನು ಬಿಟ್ಟು ಒಂದೆಡೆಯಲ್ಲಿ ನೆಲೆನಿಂತು ವಾಸಿಸುವಂತಾಯಿತು. ನೆಲೆನಿಂತ ಜೀವನದ ಫಲವಾಗಿ ಗ್ರಾಮೀಣ ಜೀವನ ಮತ್ತು ವಸತಿ ನಿರ್ಮಾಣಗಳು ರೂಢಿಗೆ ಬಂದುವು. ಧಾನ್ಯ, ಮಾಂಸ, ಮತ್ತಿತರ ಪಾನೀಯಗಳನ್ನೂ ಸಂಗ್ರಹಿಸಿಡಲು ಸುಟ್ಟಮಣ್ಣಿನ ಪಾತ್ರೆಗಳನ್ನು, ಬೆತ್ತದಲ್ಲಿ ಹೆಣೆದ ಬುಟ್ಟಿಗಳನ್ನು ತಯಾರಿಸಲಾರಂಭಿಸಿದ. ಇವೆಲ್ಲವುಗಳಿಂದ ಮಾನವ ಸಂಸ್ಕøತಿ ಪ್ರಗತಿಪಥದಲ್ಲಿ ಸಾಗಲು ಸಾಧ್ಯವಾಯಿತು. ಮಾನವನ ಜೀವನ ರೀತಿಯಲ್ಲಿ ತಲೆದೋರಿದ ಇಂಥ ಪ್ರಮುಖ ಬದಲಾವಣೆಗಳು ಅವನ ಸರ್ವತೋಮುಖ ಪ್ರಗತಿ ಮತ್ತು ನಾಗರಿಕತೆಗೆ ಭದ್ರಬುನಾದಿಯನ್ನೊದಗಿಸಿದವು. ಆದುದರಿಂದ ಚೈಲ್ಡ್ ಆ ಹಂತವನ್ನು ಆಹಾರೋತ್ಪಾದನಾಕ್ರಾಂತಿ ಮತ್ತು ಮಾನವ ಪ್ರಗತಿಯ ಮೊದಲ ದಿಟ್ಟಹೆಜ್ಜೆಯೆಂದು ವರ್ಣಿಸಿದ್ದಾನೆ.

ಕುರುಹುಗಳು

ಬದಲಾಯಿಸಿ

ಈ ಕ್ರಾಂತಿಯ ಮೊದಲ ಕುರುಹುಗಳು ಪಶ್ಚಿಮ ಏಷ್ಯದ ಇರಾಕ್, ಪ್ಯಾಲಿಸ್ಟೈನ್ ಮತ್ತು ಸಿರಿಯ ಪ್ರದೇಶಗಳಲ್ಲಿ ಕ್ರಿ.ಪೂ. 9ನೆಯ ಸಹಸ್ರಮಾನದಲ್ಲಿ ತಲೆದೋರುತ್ತವೆ. ಕ್ರಮೇಣ ಇತರ ಪ್ರದೇಶಗಳಿಗೂ ಹಬ್ಬುತ್ತದೆ. ಈಜಿಪ್ಟಿನಲ್ಲಿ ಕ್ರಿ.ಪೂ. 6-5ನೆಯ ಸಹಸ್ರಮಾನಗಳಲ್ಲೂ ಇರಾನಿನಲ್ಲಿ ಕ್ರಿ. ಪೂ. 7-6ನೆಯ ಸಹಸ್ರಮಾನಗಳಲ್ಲೂ ಮೆಡಿಟರೇನಿಯನ್ ಭೂಭಾಗದಲ್ಲಿ ಕ್ರಿ.ಪೂ. 5ನೆಯ ಸಹಸ್ರ ಮಾನದಲ್ಲೂ ಯೂರೋಪಿನಲ್ಲಿ ಕ್ರಿ.ಪೂ. 4ನೆಯ ಸಹಸ್ರಮಾನದಲ್ಲೂ ನವಶಿಲಾಯುಗ ಸಂಸ್ಕøತಿಯ ಕುರುಹುಗಳು ಕಾಣಬರುತ್ತವೆ. ಆದರೆ ಈ ಎಲ್ಲ ಪ್ರದೇಶಗಳಲ್ಲೂ ಆಯಾ ಕಾಲಗಳಲ್ಲಿ, ಚೈಲ್ಡನ ಸ್ಪಷ್ಟೀಕರಣಕ್ಕೆ ಸರಿಹೊಂದುವ ಗ್ರಾಮೀಣ ಜೀವನ ಆರಂಭವಾಯಿತೆಂದು ಹೇಳಲು ಸಾಧ್ಯವಿಲ್ಲ.

ಭಾರತದ ವಾಯವ್ಯ ಗಡಿಪ್ರದೇಶ, ಆಫ್ಘಾನಿಸ್ತಾನ ಬಲೂಚಿಸ್ತಾನ, ಮತ್ತು ಸಿಂಧ್ ಪ್ರದೇಶಗಳಲ್ಲಿ ಕ್ರಿ.ಪೂ. 5ನೆಯ ಸಹಸ್ರಮಾನದ ಕೊನೆಯ ಭಾಗದಲ್ಲಿ ಈ ಗ್ರಾಮೀಣ ಜೀವನದ ಕುರುಹುಗಳು ಕಂಡುಬರುತ್ತವೆ. ಕ್ರಿ.ಪೂ. 3ನೆಯ ಸಹಸ್ರಮಾನದ ವೇಳೆಗೆ ಕಾಶ್ಮೀರ, ಪೂರ್ವಭಾರತ ಮತ್ತು ಕರ್ನಾಟಕ-ಆಂಧ್ರ ಪ್ರದೇಶಗಳಲ್ಲಿ ಈ ಸಂಸ್ಕøತಿಯ ಹೆಜ್ಜೆಗಳನ್ನೂ ಗುರುತಿಸಲಾಗಿದೆ.


ಟಿಪ್ಪಣಿಗಳು

ಬದಲಾಯಿಸಿ
  1. Prehistory, Irfan Habib, section ೩, Neolithic Revolution
  2. pp ೧೨೨-೧೨೩ Bridget and Raymond Allchin, The Rise of civilization in India and Pakistan, Cambridge University Press, First South Asian Edition, ೧೯೯೬
  3. ೩.೦ ೩.೧ ಅನುಬಂಧ ೧, ಪು ೧೮೪-೨೦೩, ಕರ್ನಾಟಕ ಚರಿತ್ರೆ ಸಂಪುಟ ೧, ಸಂಪಾದಕರು -ಪ್ರೊ. ಅ. ಸುಂದರ, ಕನ್ನಡ ವಿಶ್ವವಿದ್ಯಾಲಯ , ಹಂಪಿ, ೧೯೯೭ ಉಲ್ಲೇಖ ದೋಷ: Invalid <ref> tag; name "source1" defined multiple times with different content

ಪರಾಮರ್ಶನಗಳು

ಬದಲಾಯಿಸಿ
  • ಭಾರತ ಉಪಖಂಡದ ಆಧುನಿಕಪೂರ್ವ ಚರಿತ್ರೆ, ಸಂಪಾದಕರು ವಿಜಯ್ ಪೂಣಚ್ಚ ತಂಬುಡ,ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೦
  • ಕರ್ನಾಟಕದ ಸಂಕ್ಷಿಪ್ತ ಇತಿಹಾಸ, ಡಾ. ಸೂರ್ಯನಾಥ ಕಾಮತ್, ಎಂ. ಸಿ. ಸಿ ಪಬ್ಲಿಕೇಷನ್ಸ್,ಬೆಂಗಳೂರು, ೨೦೧೦
  • Prehistory, Irfan Habib,Tulika Books, New Delhi, ೨೦೦೨
  • The Rise of civilization in India and Pakistan,Bridget and Raymond Allchin, Cambridge University Press, First South Asian Edition, ೧೯೯೬
  • ಕರ್ನಾಟಕ ಚರಿತ್ರೆ ಸಂಪುಟ ೧, ಸಂಪಾದಕರು -ಪ್ರೊ. ಅ. ಸುಂದರ, ಕನ್ನಡ ವಿಶ್ವವಿದ್ಯಾಲಯ , ಹಂಪಿ, ೧೯೯೭

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  • McNamara, John (2005). "Neolithic Period". World Museum of Man. Archived from the original on 2008-04-30. Retrieved 2013-12-29. {{cite web}}: Cite has empty unknown parameter: |7= (help)
  • Rincon, Paul (11 May 2006). "Brutal lives of Stone Age Britons". BBC News. {{cite news}}: Cite has empty unknown parameter: |1= (help)
  • Current Directions in West African Prehistory – McIntosh & McIntosh (1983) Archived 2016-05-22 at the Portuguese Web Archive
  • Vincha Neolithic Script
  • UB Préhistoire — Enseignements sur le Néolithique
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: