ನವಕರ್ನಾಟಕ ಕೈಪಿಡಿ ರಂಗಭೂಮಿ (ಪುಸ್ತಕ)

ಶ್ರೀ ಎನ್. ಎಸ್. ವೆಂಕಟರಾಮ್ ಯವರು ಬರೆದ "ನವಕರ್ನಾಟಕ ರಂಗಭೂಮಿ ಕೈಪಿಡಿ" ಪುಸ್ತಕ. ಇದು ರಂಗಭೂಮಿಯ ಪ್ರಾಯೋಗಿಕ ಮಾರ್ಗದರ್ಶಿ.

ನವಕರ್ನಾಟಕ ಕೈಪಿಡಿ ರಂಗಭೂಮಿ (ಪುಸ್ತಕ)
ಲೇಖಕರುಎನ್. ಎಸ್. ವೆಂಕಟರಾಮ್
ದೇಶಭಾರತ
ಭಾಷೆಕನ್ನಡ
ವಿಷಯರಂಗಭೂಮಿ
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೨, ೨ನೆ ಮುದ್ರಣ
ಪುಟಗಳು೨೦೮
ಐಎಸ್‍ಬಿಎನ್978-81-7302-468-9


ರಂಗಭೂಮಿ ಒಂದು ಜೀವಂತ ಕಲೆ. ಸಮಕಾಲೀನ ಸ್ಥಿತಿಗತಿಗಳಿಗೆ ಭಾವನಾತ್ಮಕವಾಗಿ ಮತ್ತು ವಿಚಾರಾತ್ಮಕವಾಗಿ ಸ್ಪಂದಿಸುತ್ತ ಹೊಸ ಹೊಸ ಪ್ರಯೋಗಗಳಿಗೆ ಪ್ರೇರೇಪಿಸುತ್ತ ನಿರಂತರವಾಗಿ ಸಕ್ರಿಯವಾಗಿಸುತ್ತ ಹೋಗುವ ಮಾಧ್ಯಮ. ಇಲ್ಲಿ ಪ್ರಯೋಗವೇ ಪರಂಪರೆಯಾಗಿದೆ. ಬದುಕಿನ ಪ್ರತಿಯೊಂದು ದಿನವೂ ಇಲ್ಲಿ ಪ್ರಯೋಗಾಭ್ಯಾಸ.

ಇಲ್ಲಿ ಪ್ರತಿಪಾದಿಸಿದ ವಿಷಯಗಳು ಹತ್ತಾರು. ಅವುಗಳೆಲ್ಲದರ ಬಗ್ಗೆ ಕೂಲಂಕಷವಾಗಿ ಲೇಖಕರು ಚರ್ಚಿಸಿದ್ದಾರೆ. ಕ್ರಮವಾಗಿ ಪಾಶ್ಚಾತ್ಯ, ಭಾರತೀಯ ಮತ್ತು ಕನ್ನಡ ರಂಗಭೂಮಿಯ ಪ್ರಯೋಗ ಇತಿಹಾಸಗಳನ್ನು ವಿವರಿಸಿದ ಮೇಲೆ ನೇರವಾಗಿ ಪ್ರಯೋಗ ಪದ್ಧತಿಗಳಿಗೇ ಕೈ ಹಾಕಿದ್ದಾರೆ. ಆರು ಪಾಶ್ಚಾತ್ಯ ರಂಗಪದ್ಧತಿಗಳು, ಅಖಾಡ, ಸಂಪ್ರದಾಯಿಕ, ಏಕಕಾಲಿಕ, ಬಹುಘಟಕ, ನಾಟಕೀಯ ಮತ್ತು ಯಥಾರ್ಥ ರಂಗಪದ್ಧತಿಗಳನ್ನು ವಿಶದಪಡಿಸಿದ್ದಾರೆ. ಜತೆಯಲ್ಲಿ ವಾಸ್ತವೋತ್ತರ ರಂಗಶೈಲಿಗಳನ್ನು ವಿವರಿಸಿದ್ದಾರೆ.

ಆಧುನಿಕ ರಂಗಭೂಮಿಯ ಸಂಧರ್ಭದಲ್ಲಿ ನಡೆಯುತ್ತಿರುವ ನೂರಾರು ವಾದಗಳ ಬಗ್ಗೆಯೂ, ಲೇಖಕರು ತಮ್ಮ ನಿಲುವನ್ನು ಈ ಮಾತುಗಳಲ್ಲಿ ಸ್ಪಷ್ಟಪಡಿಸಿಕೊಂಡಿದ್ದಾರೆ.

ಬಾಹ್ಯ ಸಂಪರ್ಕ

ಬದಲಾಯಿಸಿ