ನಳಿನಿ ಜಯವಂತ್
ತನ್ನ ಸಹಜ ಸೌಂದರ್ಯ ಹಾಗೂ ಅಭಿನಯ ಕೌಶಲ್ಯಗಳಿಂದ ರಸಿಕರನ್ನು ಮುಗ್ಧಗೊಳಿಸಿ ಹಲವು ವರ್ಷಗಳ ಕಾಲ ರಂಜಿಸಿದ ಮರಾಠಿ ಅಭಿನೇತ್ರಿಯರಲ್ಲಿ ನಳಿನಿ ಜಯವಂತ್ ರವರ ಹೆಸರು ಪ್ರಥಮವಾಗಿ ಕಾಣಿಸಿಕೊಳ್ಳುತ್ತದೆ. ಅವರು ನಟಿಸಿದ ಹಲವಾರು ಚಿತ್ರಗಳಲ್ಲಿ, ಎಲ್ಲರನ್ನೂ ಚಿಂತನೆಗೆ ಪ್ರೇರೇಪಿಸುವ, ಸ್ತಬ್ಧಗೊಳಿಸುವ. ಮುನೀಮ್ ಜಿ ಚಿತ್ರದ ಗೀತೆ, ಇಂದಿಗೂ ಸಿನೆಮಾ ಪ್ರಿಯರ ನೆನಪಿನಲ್ಲಿ ಹಸಿರಾಗಿ ಉಳಿದಿದೆ.
ನಳಿನಿ ಜಯವಂತ್ | |
---|---|
Born | |
Died | 20 December 2010 | (aged 84)
Occupation | Actress |
'ಜೀವನ್ ಕೆ ಸಫರ್ ಮೆ ರಾಹಿ
ಮಿಲ್ತೇ ಹೈಂ ಬಿಚಡ್ ಜಾನೆ ಕೊ
ಔರ್ ದೇಜಾತೇ ಹೈಂ ಯಾದೇಂ
ತನ್ಹಾಯಿ ಮೆ ತಡ್ಪಾನೇ ಕೊಂ'..
ಪ್ರಾದೇಶಿಕ ಭಾಷೆಗಳಲ್ಲೂ ಅಭಿನಯಿಸಿದ 'ನಳಿನಿ'ಯವರು, ಕಾರ್ತಿಕ್ ಯೆಂಬ ಬಹುಚರ್ಚಿತ 'ಕನ್ನಡ ಚಿತ್ರ'ದಲ್ಲೂ ಅಭಿನಯಿಸಿದ್ದರು. ೪೦-೫೦ ರ ದಶಕದ ಅತ್ಯಂತ 'ಪ್ರಖ್ಯಾತ ಹಿಂದಿ ಚಿತ್ರರಂಗದ ನಟಿ'ಯೆಂದು ಹೆಸರುಗಳಿಸಿದ್ದರು. ಆಗಿನ ಕಾಲದ ಹೆಸರಂತ ಚಿತ್ರನಟಿ,ಶೋಭನಾ ಸಾಮರ್ಥ್ ರ ಚಿಕ್ಕಪ್ಪ, ನಳಿನಿಯವರ ತಂದೆ, ದಾದಾಸಾಹೇಬ್ ಜಯವಂತ್ ರವರು. ಶೋಭನಾರವರ ನಟನೆ, ನಳಿನರವರನ್ನು ಬಹಳವಾಗಿ ಆಕರ್ಷಿಸಿತ್ತು. ಅವರಂತೆಯೇ ತಾವೂ ಚಿತ್ರರಂಗದಲ್ಲಿ ಮಿಂಚಬೇಕೆಂಬ ಮಹದಾಶೆ ಬಾಲ್ಯದಿಂದಲೂ ಇತ್ತು. ಅದರೆ ದಾದಾಸಾಹೇಬ್ ಜಯವಂತ್ ರವರಿಗೆ ಮಗಳು ಚಿತ್ರರಂಗದಲ್ಲಿ ಕಾಲಿಡುವುದು ಸುತರಾಂ ಇಷ್ಟವಿರಲಿಲ್ಲ. ಚಿತ್ರರಂಗದಲ್ಲಿ ಹೆಣ್ಣು-ಗಂಡುಗಳ ಜೊತೆಗೂಡುವಿಕೆ, ಪ್ರಣಯ ಮುಂತಾದವುಗಳು ಅವರಿಗೆ ಸರಿಬೀಳುತ್ತಿರಲಿಲ್ಲ. ಆದರೆ ನಳಿನಿಯವರು ಯೌವ್ವನಕ್ಕೆ ಕಾಲಿಟ್ಟಾಗ, ಅವರ ಅಂಗ ಸೌಷ್ಠವ, ಹೊಳಪಿನ ಕಣ್ಣುಗಳು, ಬಿಳಿಯ ಆಕರ್ಷಕ ಮೈಬಣ್ಣ, ಅವಳ ಗೆಳತಿಯರನ್ನು ಹುಚ್ಚೆಬ್ಬಿಸಿತ್ತು. ಚಲನಚಿತ್ರ ಆಗಾಗಲೇ ಯುವ ಜನರನ್ನು ಅಯಸ್ಕಾಂತದಂತೆ ಆಕರ್ಷಿಸಿತ್ತು. ಮೇಲಾಗಿ ಮರಾಠಿ ಅಭಿನೇತ್ರಿ, ಶೋಭನಾ ಸಾಮರ್ಥ್ ಅವರಿಗೆಲ್ಲ ಒಬ್ಬ ರೋಲ್ ಮಾಡೆಲ್ ಆಗಿ ಕಂಡಿದ್ದರು. ಹಾಗಾಗಿ ಎಲ್ಲರೂ ಅವರನ್ನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಉಪದೇಶಮಾಡುತ್ತಿದ್ದರು. ನಳಿನಿಯವರ ತಂದೆಯವರು ಮಗಳಿಗೆ ಏರ್ಪಡಿಸಿದ್ದ ಮದುವೆಯ ಪರಿಸ್ಥಿತಿಯೂ ಕೂಡಿಬರಲಿಲ್ಲ. ಮನೆಯ ಆರ್ಥಿಕ ಪರಿಸ್ಥಿತಿಯೂ ಆಷ್ಟೇನೂ ಚೆನ್ನಾಗಿರದೆ ಬಹಳ ಕಷ್ಟದಿಂದ 'ಅಸ್ತು'ಯೆಂದರು.
ಮನೆಯ ವಾತಾವರಣ
ಬದಲಾಯಿಸಿ'ಮರಾಠಿ' ಮನೆಯಲ್ಲಿ ಆಡುತ್ತಿದ್ದ ಭಾಷೆ. ಚಿತ್ರರಂಗದಲ್ಲಿ ನಟಿಸಲು ಹಿಂದಿ ಹಾಗೂ ಉರ್ದು ಭಾಷೆಯ ತಿಳುವಳಿಕೆ ಅಗತ್ಯವಾಗಿತ್ತು. ಶೋಭನಾರವರ ಸಲಹೆಯಂತೆ ಚಿತ್ರರಂಗದಲ್ಲಿ ಅವಕಾಶಗಳಿಗೆ ಅರಸತೊಡಗಿದರು. ಸನ್, ೧೯೪೧ ರಲ್ಲಿ ಸಾಗರ್ ಮೂವಿಟೋನ್ ನಿರ್ಮಿಸಿದ ರಾಧಿಕಾ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು. ಆ ಸಂಸ್ಥೆಯ ಮಾಲೀಕರ ಮಗ, ವೀರೇಂದ್ರ ದೇಸಾಯ್ ದಿಗ್ದರ್ಶಕರಾಗಿದ್ದರು. ಅದೇ ಬ್ಯಾನರ್ ನಲ್ಲಿ ’ಅದಾಬ್ ಅರ್ಜ್’ ಎಂಬ ಮತ್ತೊಂದು ಚಿತ್ರದಲ್ಲಿಯೂ ನಾಯಕಿಯಾಗಿ ಅಭಿನಯಿಸಿದರು. ಆಗಿನ ಕಾಲದ ಪ್ರಖ್ಯಾತ ಚಿತ್ರ ನಿರ್ಮಾಪಕ, 'ಮೆಹ್ಬೂಬ್ ಖಾನ್', ನಳಿನಿಯ ಯೌವ್ವನ, ಸೌಂದರ್ಯ ಹಾಗೂ ನಟನಾ ಕೌಶಲ್ಯಕ್ಕೆ ಬೆರಗಾಗಿ ತಮ್ಮ ಚಿತ್ರ ಬೆಹೆನ್ ನಲ್ಲಿ ನಾಯಕಿಯ ಪಾತ್ರಕೊಟ್ಟರು. ಈ ಎರಡೂ ಚಿತ್ರಗಳಲ್ಲಿ ನಳಿನಿಯ ಅಭಿನಯ ಅತ್ಯಂತ ಮೆಚ್ಚುಗೆಗಳಿಸಿ ಆಕೆ ಜನಪ್ರಿಯತೆಯ ಶಿಖರವನ್ನೇರಿದಳು. ವೀರೇಂದ್ರ ದೇಸಾಯ್ ಜೊತೆಗೆ ವಿವಾಹವಾಯಿತು. ಆದರೆ ಅದು ಹೆಚ್ಚು ಕಾಲ ಉಳಿಯದೆ ಕೊನೆಗೆ ಗಂಡನಿಂದ ವಿಮೋಚನೆ ದೊರೆಯಿತು. ಇದಾದನಂತರ ನಳಿನಿಯವರು ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಮುಖ ಚಿತ್ರಗಳು ಹೀಗಿವೆ :
- ರಾಧಿಕಾ (೧೯೪೧)
- ಫಿರ್ ಭಿ ಅಪ್ನಾ ಹೈ (೧೯೪೬)
- ಅನೌಖಾ ಪ್ಯಾರ್ (೧೯೪೮)
- ಸಂಗ್ರಾಮ್ (೧೯೫೦)
- ನೌಜವಾನ್ (೧೯೫೧), ಪ್ರೇಮ್ ನಾಥ್ ನಾಯಕ ನಟ
- ಸಮಾಧಿ (೧೯೫೦) ಅಶೋಕ್ ಕುಮಾರ್ ಜೊತೆ, ಅತ್ಯಂತ ಹೆಸರುವಾಸಿಯಾಯಿತು.
- ರಾಹಿ (೧೯೫೨), ಕೆ.ಎ.ಅಬ್ಬಾಸ್ ರವರ ಚಿತ್ರ,
- ನೌ ಬಹಾರ್
- ಕವಿ (೧೯೫೪)
- ಚಿಂಗಾರಿ (೧೯೫೫) ಈ ಚಿತ್ರದಲ್ಲಿ ಹಾಡಿದ್ದಾರೆ ಸಹಿತ.
- ಮುನೀಮ್ ಜಿ (೧೯೫೫), ದೇವಾನಂದ್ ನಾಯಕ ನಟ
- ಶೇರೂ (೧೯೫೭)
- ಕಾಫ್ಲಾ (೧೯೫೨), ಅಶೋಕ್ ಕುಮಾರ್ ನಾಯಕ ನಟ
- ನಾಝ್ ವಿದೇಶದಲ್ಲಿ ಚಿತ್ರೀಕರಣಗೊಂಡ ಪ್ರಥಮ ಹಿಂದಿ ಚಿತ್ರ.
- ಸಲೋನಿ ಅಶೋಕ್ ಕುಮಾರ್ ಜೊತೆ ನಾಯಕಿಯಾಗಿ ನಟಿಸಿದ್ದರು.
ಮತ್ತಿತರ ಚಿತ್ರಗಳು
ಬದಲಾಯಿಸಿ- ಏಕ್ ನಝರ್ ರೆಹಮಾನ್ ನಾಯಕ ನಟ
- ಶಿಕಸ್ತ್ (೧೯೫೩) ದಿಲೀಪ್ ಕುಮಾರ್ ನಾಯಕ ನಟ. ರಮೇಶ್ ಸೈಗಾಲ್ ರವರ ಚಿತ್ರ.
- ಬಾಪ್ ಬೇಟಿ (೧೯೫೪)
- ಹಮ್ ಸಬ್ ಚೋರ್ ಹೈ (೧೯೫೬)
- ದುರ್ಗೇಶ್ ನಂದಿನಿ (೧೯೫೬)
- ಆವಾಜ್ (೧೯೫೬)
- ಮಿಸ್ಟರ್ ಎಕ್ಸ್ (೧೯೫೭)
- ಬಾಂಬೆ ರೇಸ್ ಕೋರ್ಸ್ (೧೯೬೫)
- ನಾಸ್ತಿಕ್ ಅಜಿತ್ ನಾಯಕ ನಟ (೧೯೫೪)
- ಮುಕದ್ದರ್ (೧೯೫೦), ಸಜ್ಜನ್ ನಾಯಕನಟ, ಕಿಶೋರ್ ಕುಮಾರ್ ಜೊತೆ
- ರೈಲ್ವೆ ಪ್ಲಾಟ್ ಫಾರ್ಮ್ (೧೯೫೫), ಸುನಿಲ್ ದತ್
- ಗುಂಜನ್ ತ್ರಿಲೋಕ್ ಕಪೂರ್ ಮತ್ತು ಬಲ್ರಾಜ್ ಸಹಾನಿ
- ಜಾದೂ (೧೯೫೧), ಸುರೇಶ್ ನಾಯಕನಟ
- ನಿರ್ದೋಶ್, ಮುಖೇಶ್ ಜೊತೆ ಹಾಡಿಯೂ ಇದ್ದಾರೆ. ರಾಜ್ ಕಪೂರ್ ಒಬ್ಬರನ್ನು ಬಿಟ್ಟು,ಆ ಕಾಲದ ಹೆಸರಾಂತ ನಾಯಕನಟರೊಂದಿಗೆ ಅಭಿನಯಿಸಿದ್ದಾರೆ.
’ನಾಸ್ತಿಕ್’ ಕೊನೆಯ ಚಿತ್ರ
ಬದಲಾಯಿಸಿನಳಿನಿ ಜಯವಂತ್ ನಟಿಸಿದ ಎರಡು ನಾಸ್ತಿಕ್ ಚಿತ್ರಗಳಲ್ಲಿ, ಮೊದಲನೆಯ ಚಿತ್ರ,(೧೯೫೪)ನಾಯಕಿಯ ಪಾತ್ರದಲ್ಲಿ, ನಂತರ,’ನಾಸ್ತಿಕ್’(೧೯೮೩) ಚಿತ್ರದಲ್ಲಿ 'ಅಮಿತಾಭ್ ಬಚ್ಚನ್' ರವರ ತಾಯಿಯ ಪಾತ್ರ ಮಾಡಿದನಂತರ, ಚಿತ್ರರಂಗದಿಂದ ದೂರಸರಿದರು. ಹಿಂದಿ ಚಿತ್ರರಂಗದ ಜೀವಾಳವೆನಿಸಿದ ಚಿತ್ರಗೀತೆಗಳು ಬಹಳ ಕಾಲ ನೆನಪಿನಲ್ಲಿ ಉಳಿಯುವಂತಹದು. ಲತಾ ಮಂಗೇಶ್ಕರ್ ರವರು ತಮ್ಮ ಕಂಠದಾನಮಾಡಿದ, ಹಾಗೂ ನಳಿನಿ ಜಯವಂತ್ ಅಭಿನಯಿಸಿದ ಗೀತೆಗಳು ಇಂದಿಗೂ ಹೃದಯಸ್ಪರ್ಶಿಯಾಗಿವೆ. ಸನ್,೧೯೮೩ ಯ ಬಳಿಕ, ನಳಿನ ಜಯವಂತ್ ರವರು, ತಾವೇತಾವಾಗಿ, ಒಬ್ಬರೇ ಇರಲು ಇಚ್ಛಿಸಿದರು. ಅವರು ಜನರೊಂದಿಗೆ ಬೆರೆಯುವುದನ್ನೇ ಬಿಟ್ಟರು. ಅವರ ಸಂಗಡಿಗರೆಂದರೆ,ಪಾಮೊರೇನಿಯನ್, ಮತ್ತು ಟೆರ್ರಿಯರ್ಸ್ ನಾಯಿಗಳು. ಅವುಗಳ ಜೊತೆ ಎಷ್ಟು ಸ್ನೇಹವನ್ನಿಟ್ಟುಕೊಂಡಿದ್ದರೆಂದರೆ,ನಾಯಿಗಳಿಗೆ ತಿನ್ನಿಸದೆ ಆವರು ಊಟವನ್ನೂ ಮಾಡುತ್ತಿರಲಿಲ್ಲ. ಅವರೆಲ್ಲಿ ಹೋದರೂ ನಾಯಿಗಳು ಇರಲೇ ಬೇಕಾಗಿತ್ತು.
'ನಳಿನಿ ಜಯವಂತ್ 'ರ, ಚಿತ್ರಗಳಲ್ಲಿ ಅವರಿಗೆ ಸಿಕ್ಕ 'ಗೀತೆಗಳು' ಇಂದಿಗೂ ಅಮರವಾಗಿವೆ
ಬದಲಾಯಿಸಿ- ನೌಜವಾನ್ ಚಿತ್ರದ, ’ಥಂಡಿ ಹವಾಯೇಂ
ಲೆಹರಾಕೆ ಆಯೇಂ ಋತು ಹೈ ಜವಾಂ ತುಮ್ ಕೊ ಯಹಾಂ ಕೈಸೇ ಬುಲಾಯೇಂ
- ನೌ ಬಹಾರ್ ಚಿತ್ರದ, 'ಏರೀ ಮೈ ತೊ
ಪ್ರೇಮ್ ದಿವಾನೀಂ
- ಮುನೀಮ್ ಜಿ ಚಿತ್ರದ, 'ಘಾಯಲ್ ಹಿರನಿಯಾ ಮೆ
ಬನ್ ಬನ್ ಡೋಲೂಂ
- ಕಾಲಾಪಾನಿ ಚಿತ್ರದ, 'ನಝರ್ ಲಾಗೀ ತೊರೇ ಬಂಗಲೆ ಪರ್
- ಸಮಾಧಿ ಚಿತ್ರದ, 'ಗೋರೆ ಗೋರೆ
ಯೆ ಬಾಂಕೆ ಚೋರೆ..
ಪ್ರಾದೇಶಿಕ ಭಾಷೆಯ ಚಿತ್ರಗಳು
ಬದಲಾಯಿಸಿ- ಮುಂದು ಮಾಂಗೆ ಪ್ರೀತ್-(ಗುಜರಾತಿ)
- ಗಂಗೋತ್ರಿ-(ಜೋಧ್ ಪುರಿ)
ಕಿರುತೆರೆಯ ಧಾರಾವಾಹಿಗಳಲ್ಲಿ
ಬದಲಾಯಿಸಿ- ಮಿತವ
- ಬಿದಾಯಿ
- ಬಾಲಿಕಾ ಬಧು
ಸನ್, ೧೯೫೮ ರಲ್ಲಿ ದೇವಾನಂದ್ ನಿರ್ಮಿಸಿದ ಚಿತ್ರ ಕಾಲಾಪಾನಿಯಲ್ಲಿ ಓರ್ವ ನರ್ತಕಿಯಾಗಿ ಅಭಿನಯಿಸಿದ್ದಾರೆ. ಆದರೆ, ಬೆಸ್ಟ್ ಸಪೋರ್ಟಿಂಗ್ ಆಕ್ಟರ್ ಯೆಂಬ ಫಿಲ್ಮ್ ಫೇರ್ ಪ್ರಶಸ್ತಿ ದೊರೆಯಿತು.
ವಿವಾಹ
ಬದಲಾಯಿಸಿಪ್ರಭು ದಾಯಳ್ ಎಂಬ ದಿಗ್ದರ್ಶಕರೊಂದಿಗೆ ವಿವಾಹ ಮಾಡಿಕೊಂಡರು. ಕೆಲ ವರ್ಷಗಳ ಹಿಂದೆ ಆತ ತೀರಿಕೊಂಡರು. ಮುಂಬಯಿನ ಉಪನಗರ ಚೆಂಬೂರಿನ ಯೂನಿಯನ್ ಪಾರ್ಕ್ ನ ಬಂಗಲೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು.
ನಿಧನ
ಬದಲಾಯಿಸಿಗತಕಾಲದ ಖ್ಯಾತಿಪಡೆದ ೮೪ ವರ್ಷ ಪ್ರಾಯದ ನಟಿ, ನಳಿನಿ ಜಯವಂತ್, ತಮ್ಮ ಪತಿ ಪ್ರಭು ದಯಾಳ್ ರವರ ನಿಧನದ ಬಳಿಕ, ಏಕಾಂಗಿಯಾಗಿ ಜೀವಿಸುತ್ತಿದ್ದರು. ಸುದ್ದಿ ಮಾಧ್ಯಮಗಳಿಂದ ಆದಷ್ಟು ದೂರದಲ್ಲಿರಲು ಆಶಿಸುತ್ತಿದ್ದ ನಳಿನಿ ಜಯವಂತ್ ರವರು, ಸನ್, ೨೦೧೦ ರ, ಡಿಸೆಂಬರ್, ೨೧ ರಂದು, ತಮ್ಮ ಚೆಂಬೂರಿನ ಯೂನಿಯನ್ ಪಾರ್ಕ್ ನ ಬಂಗಲೆಯಲ್ಲಿ ನಿಧನರಾದರು.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- ೧. https://www.youtube.com/watch?v=LuCtgwQ0_Ks
- ೨. https://www.youtube.com/watch?v=-ki6Mzkb0GY
- ೩. https://www.youtube.com/watch?v=HCjtWv8-7Mc
- 'ಮರೆಯಾದ ಹಿಂದಿ ಚಲನಚಿತ್ರ ತಾರೆ ನಳಿನಿ ಜಯವಂತ್'-'ಕರ್ನಾಟಕ ಮಲ್ಲ ದಿನ ಪತ್ರಿಕೆ'ಯ, ಮುಖಾಂತರ ಅಂಕಣದಲ್ಲಿ, ಲೇಖಕರು, ಪ್ರಿಯತಮ, ಪು.೪