ನರ್ವಾರ್ ಕೋಟೆ
ನರ್ವಾರ್ ಕೋಟೆಯು ಮಧ್ಯಪ್ರದೇಶದ ಶಿಪುರಿ ಜಿಲ್ಲೆಯವ ನರ್ವಾರ್‌ನಲ್ಲಿದೆ. [೧] ಈ ಕೋಟೆಯು ೮ ಕಿಮೀ² ಪ್ರದೇಶದಲ್ಲಿದೆ. ನೆಲಮಟ್ಟದಿಂದ ಸುಮಾರು ೫೦೦ ಅಡಿಗಳಷ್ಟು ಎತ್ತರದಲ್ಲಿದೆ. ಇದು ವಿಂಧ್ಯ ಶ್ರೇಣಿಯ ಕಡಿದಾದ ಇಳಿಜಾರಿನ ಮೇಲೆ ನಿಂತಿದೆ. ಕಚ್ವಾಹ ರಜಪೂತರು ೧೦ ನೇ ಶತಮಾನದಲ್ಲಿ ನರ್ವಾರ್ ಅನ್ನು ಆಕ್ರಮಿಸಿಕೊಂಡಾಗ ಕೋಟೆಯನ್ನು ನಿರ್ಮಿಸಿದರು (ಅಥವಾ ಪುನರ್ನಿರ್ಮಿಸಿದರು) ಎಂದು ಹೇಳಲಾಗುತ್ತದೆ. ಕಚ್ವಾಹ ರಜಪೂತ, ಪ್ರತಿಹಾರ ರಜಪೂತ ಮತ್ತು ತೋಮರ ರಜಪೂತರು ೧೨ ನೇ ಶತಮಾನದಿಂದ ೧೬ ನೇ ಶತಮಾನದಲ್ಲಿ ಮೊಘಲರು ವಶಪಡಿಸಿಕೊಳ್ಳುವವರೆಗೂ ನರ್ವಾರ್ ಅನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು. ಇದನ್ನು ೧೯ನೇ ಶತಮಾನದ ಆರಂಭದಲ್ಲಿ ಮರಾಠಾದ ಮುಖ್ಯಸ್ಥ ಸಿಂಧಿಯಾ ವಶಪಡಿಸಿಕೊಂಡನು.
ಉಲ್ಲೇಖಗಳು
ಬದಲಾಯಿಸಿ- ↑ "Census of India 2001: Data from the 2001 Census, including cities, villages and towns (Provisional)". Census Commission of India. Archived from the original on 2004-06-16. Retrieved 2008-11-01.
ಬಾಹ್ಯ ಕೊಂಡಿಗಳು
ಬದಲಾಯಿಸಿ- Media related to ನರ್ವಾರ್ ಕೋಟೆ at Wikimedia Commons