ನಮಾಜ಼್
ನಮಾಜ಼್ ಇಸ್ಲಾಮ್ ಮತದ ಐದು ಸ್ತಂಭಗಳಲ್ಲಿ ಒಂದಾಗಿದೆ. ಇದು ಪ್ರತಿಯೊಬ್ಬ ಮುಸ್ಲಿಮ್‍ನ ಕಡ್ಡಾಯದ ಧಾರ್ಮಿಕ ಕರ್ತವ್ಯವಾಗಿದೆ. ಇದು ಒಂದು ದೈಹಿಕ, ಮಾನಸಿಕ, ಹಾಗೂ ಆಧ್ಯಾತ್ಮಿಕ ಆರಾಧನೆಯ ಕ್ರಿಯೆಯಾಗಿದೆ. ಇದನ್ನು ಪ್ರತಿದಿನ ಐದು ಬಾರಿ ಸೂಚಿತ ಸಮಯಗಳಲ್ಲಿ ಮಾಡಲಾಗುತ್ತದೆ. ಈ ಧರ್ಮಾಚರಣೆಯಲ್ಲಿ, ಮೆಕ್ಕಾದಲ್ಲಿನ ಕಿಬ್ಲಾದ ಕಡೆಗೆ ಮುಖಮಾಡಿ, ಒಬ್ಬರು ನಿಲ್ಲುವುದು, ಬಾಗುವುದು, ಮತ್ತು ಅಡ್ಡಬೀಳುವುದು ಇರುತ್ತದೆ, ಮತ್ತು ನೆಲದ ಮೇಲೆ ಕುಳಿತುಕೊಳ್ಳುವುದರೊಂದಿಗೆ ಅಂತ್ಯವಾಗುತ್ತದೆ.[೧] ಪ್ರತಿ ಭಂಗಿಯ ಅವಧಿಯಲ್ಲಿ, ಒಬ್ಬರು ನಿರ್ದಿಷ್ಟ ಪಂಕ್ತಿಗಳು, ಪದಸಮುಚ್ಚಯಗಳು, ಹಾಗೂ ಪ್ರಾರ್ಥನೆಗಳನ್ನು ಪಠಿಸುತ್ತಾರೆ ಅಥವಾ ಓದುತ್ತಾರೆ.
ಉಲ್ಲೇಖಗಳು
ಬದಲಾಯಿಸಿ- ↑ "True Islam - Number of Salat". True Islam - Number of Salat. Archived from the original on 22 February 2016. Retrieved 2016-02-20.
{{cite web}}
: Unknown parameter|dead-url=
ignored (help)