ನಮಸ್ಕಾರ

ಸಾಮಾನ್ಯ ಮಾತನಾಡುವ ಭಾರತೀಯ ಮೌಲ್ಯಮಾಪನ ಅಥವಾ ವಂದನೆ

ನಮಸ್ಕಾರ(ಉಚ್ಚಾರಣೆːlisten ) ಹಿಂದೂ ಸಂಪ್ರದಾಯದಲ್ಲಿ ಶುಭಾಶಯದ ಒಂದು ಗೌರವಯುತ ರೂಪ, ಮತ್ತು ಭಾರತೀಯ ಉಪಖಂಡದಲ್ಲಿ, ಮುಖ್ಯವಾಗಿ ಭಾರತ ಹಾಗೂ ನೇಪಾಳದಲ್ಲಿ ಮತ್ತು ಭಾರತದಿಂದ ಚದುರಿದ ಭಾರತೀಯರಲ್ಲಿ ಕಂಡುಬರುತ್ತದೆ. ಅದನ್ನು ವಂದನೆ ಮತ್ತು ಬೀಳ್ಕೊಡುಗೆ ಎರಡಕ್ಕೂ ಬಳಸಲಾಗುತ್ತದೆ. ನಮಸ್ಕಾರವನ್ನು ಸಾಮಾನ್ಯವಾಗಿ ಸ್ವಲ್ಪ ಬಗ್ಗಿ ಮತ್ತು ಕೈಗಳನ್ನು ಒಂದಕ್ಕೊಂದು ಒತ್ತಿ, ಅಂಗೈಗಳು ಸ್ಪರ್ಶಿಸಿ ಮತ್ತು ಬೆರಳುಗಳು ಮೇಲ್ಮುಖವಾಗಿ ಇದ್ದು, ಹೆಬ್ಬೆರಳುಗಳನ್ನು ಎದೆಗೆ ಹತ್ತಿರವಿರಿಸಿ ಹೇಳಲಾಗುತ್ತದೆ. ಈ ಸನ್ನೆಯನ್ನು ಅಂಜಲಿ ಮುದ್ರೆ ಅಥವಾ ಪ್ರಣಾಮಾಸನ ಎಂದು ಕರೆಯಲಾಗುತ್ತದೆ. ಈ ಶುಭಾಶಯವನ್ನು ಸನ್ನೆಯಿಲ್ಲದೆಯೂ ಹೇಳಬಹುದು ಅಥವಾ ಸನ್ನೆಯನ್ನು ಮಾತಾಡದೆ ಮಾಡಬಹುದು, ಎಲ್ಲದರ ಅರ್ಥವೂ ಒಂದೇ.

ನಮಸ್ಕಾರ ಸನ್ನೆ

ನಮಸ್ಕಾರ ಶಬ್ದಕ್ಕೆ ಅಭಿವಂದನೆ, ನಮನ, ಪ್ರಣಾಮ, ಶರಣು ಪರ್ಯಾಯ ಶಬ್ದಗಳು.

"https://kn.wikipedia.org/w/index.php?title=ನಮಸ್ಕಾರ&oldid=996602" ಇಂದ ಪಡೆಯಲ್ಪಟ್ಟಿದೆ