ನನ್ನ ನಿನ್ನ ನೆಂಟತನ

ನನ್ನ ನಿನ್ನ ನೆಂಟತನ - ಇಂದ್ರ ಕುಮಾರ್ ಎಚ್.ಬಿ. ಅವರ ಎರಡನೆಯ ಕಥಾ ಸಂಕಲನ. ಈ ಸಂಕಲನದಲ್ಲಿ ಹತ್ತು ಕಥೆಗಳಿವೆ.

ಚಿತ್ರ:11
ಚಿತ್ರ:NNN for Wiki.JPG
NNN for Wiki

ಕಥೆಗಳು

1. ಬೇಟೆ
2. ಚಮತ್ಕಾರ
3. ಬದುಕು
4. ಅಡ್ಡದಾರಿ
5. ಪ್ಲಾಟ್ ಫಾರಂ ನಂಬರ್ ಇಪ್ಪತ್ಮೂರು
6. ಚಹಾದ ಅಂಗಡಿ
7. ನನ್ನ ನಿನ್ನ ನೆಂಟತನ
8. ಕೊಡಗನೂರು ಕೆರೆ
9. ಅವನೂ ಅವಳೂ
10. ಹೋಮ್ ಸ್ವೀಟ್ ಹೋಂ
11. ಮುಸ್ಸಂಜೆ
12. ನಿಮ್ಮನೇಲಿ ಕರೆಂಟ್ ಇದೆಯಾ


ಕಥೆಗಳ ಸಾರಾಂಶ ಮತ್ತು ವಿಶ್ಲೇಷಣೆ

ಬೇಟೆ
ಸಾಲ ಕೊಡಿಸುತ್ತೇನೆಂದು ದಾಖಲೆಗಳು, ಹಣವನ್ನು ಕೊಂಡೊಯ್ದು ತಲೆಮರೆಸಿಕೊಂಡವನ ಮನೆ ಹುಡುಕಿ ಹೊರಟ ನಿರೂಪಕ ಮತ್ತವನ ಸ್ನೇಹಿತನಿಗೆ ಸಾಲಗಾರ ಸಿಗುತ್ತಾನೆಯೇ?


ಚಮತ್ಕಾರ
ಜೀವನದಲ್ಲಿ ನನಗೆಲ್ಲೂ ಗೆಲುವಿಲ್ಲ ಎಂದುಕೊಂಡು ಬದುಕು ಸಾಗಿಸುವ ಮೂರ್ಛೆ ರೋಗದ ವ್ಯಕ್ತಿಯ ಜೀವನವನ್ನು ಒಮ್ಮಿಂದೊಮ್ಮೆಲೆ ಬದಲಾಯಿಸುವಂತೆ ಪತ್ರವೊಂದು ಬರುತ್ತದೆ. ಈ ಭೂಮಿಯಲ್ಲಿ ನನಗ್ಯಾರೂ ಸ್ನೇಹಿತರಿಲ್ಲ ಎಂದು ಸಂಕಟಪಡುವವನ ಅತಿಯಾಗಿ ಪ್ರೀತಿಸುವಂತಹ ವ್ಯಕ್ತಿಯಿಂದ ಪತ್ರ ಬಂದಿದೆ.. ಅದರಿಂದ ಅವರ ಬೇಸರ, ದುಗುಡ ಕಡಿಮೆಯಾಗಿ ಅವನ ಬದುಕಲ್ಲಿ ಖುಷಿ ತುಂಬಿಕೊಳ್ಳುತ್ತಿದೆ.. ವಿಳಾಸ ಕೊಡದೇ, ಮುಖ ತೋರದೇ ಪತ್ರ ಬರೆಯುತ್ತಿರುವ ಹೆಣ್ಣು ಅಂತೂ ಒಂದು ದಿನ ಮನೆಗೆ ಕರೆಸಿಕೊಳ್ಳುತ್ತಾಳೆ. ಅಲ್ಲಿ...


ಬದುಕು
ವಯಸ್ಸಾದಂತೆ ಎಲ್ಲ ಕಡೆಗೂ ನಿಂದನೆಗೆ ಗುರಿಯಾಗಬೇಕಾಗುತ್ತದೆ. ಸ್ನೇಹಿತರೇ ಸ್ವಲ್ಪ ಮಟ್ಟಿಗೆ ಗೌರವವನ್ನೂ ಪ್ರೀತಿಯನ್ನೂ ಕೊಡುವಂತಹ ವ್ಯಕ್ತಿಗಳು. ವಯಸ್ಸಾದ ಸ್ನೇಹಿತರ ಗುಂಪಿನಲ್ಲಿ ನಡೆಯುವ ಜೀವನ್ಮುಖಿ ಚಟುವಟಿಕೆಗಳನ್ನು ತನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯುವ ವ್ಯಕ್ತಿ ವಿಶೇಷವಾಗಿ ಗ್ರಹಿಸಿದ್ದೇನು..


ಅಡ್ಡದಾರಿ
ನಿರೂಪಕನಿಗೆ ದೂರದೂರಿನಲ್ಲಿ ವರ್ಗವಾಗದೆ ಉಳಿದ ಹೆಂಡತಿಯಿಂದ ಆತಂಕದ ಕರೆ ಬರುತ್ತದೆ. ಹೆಂಡತಿಯ ತಮ್ಮ ಎಲ್ಲೋ ಏನೋ ಅವಗಢ ಮಾಡಿಕೊಂಡು ತಲೆಮರೆಸಿಕೊಂಡು ಓಡಲು ಯತ್ನಿಸುತ್ತಿದ್ದಾನೆ.. ಸಧ್ಯಕ್ಕೆ ನಿರೂಪಕ ತನ್ನ ಒಂಟಿಕೋಣೆಯಲ್ಲಿ ಅವನ ಕರೆಸಿಕೊಂಡು ಗುಪ್ತವಾಗಿ ಇರಿಸಿಕೊಳ್ಳುವ ಒಪ್ಪಿಗೆ ನೀಡುತ್ತಾನಾದರೂ ಅವನದ್ದೂ ಹೋರಾಟದ ಬದುಕು.. ಜೀವ ಕೈಯಲ್ಲಿ ಹಿಡಿದು ದುಡ್ಡಿಲ್ಲದೆ ಕುಡಿಯಲು ನೀರಿಲ್ಲದೆ ಹಸಿವಿನಿಂದ ಓಡುತ್ತಲೇ ಮಹಾರಾಷ್ಟ್ರದ ತುದಿಯಲ್ಲಿಂದ ಆಗಾಗ ಕರೆ ಮಾಡುತ್ತಿದ್ದವನು.. ನಿರೂಪಕನ ಬಳಿ ಬರುತ್ತಾನೆಯೇ, ಅವನು ಮಾಡಿದಂತಹ ತಪ್ಪು ಏನು, ಅವನು ಸಿಕ್ಕಿಕೊಳ್ಳುತ್ತಾನೆಯೇ?


ಪ್ಲಾಟ್ ಫಾರಂ ನಂಬರ್ ಇಪ್ಪತ್ಮೂರು
ಮದುವೆಯಾಗಿ ಸಂಸಾರದಲ್ಲಿ ಕರಗಿಹೋಗಿದ್ದವನ ಫೋನ್ ಕರೆಯೊಂದು ಎಚ್ಚರಿಸಿ, ಅವನ ಗತಕಾಲದ ಪ್ರೇಮವನ್ನು ನೆನಪಿಸಿ, ಆ ಪ್ರೇಮದ ಹುಡುಗಿ ತನ್ನ ಕಾಣಲು ಬರುವಂತೆ ಕಥಾನಾಯಕನಿಗೆ ಹೇಳಿ ಅವನ ಬೆಂಗಳೂರಿಗೆ ಕರೆಸಿಕೊಳ್ಳುವುದು. ಸಿಟಿಬಸ್ ನಿಲ್ದಾಣದ 23ನೆಯ ಪ್ಲಾಟ್ ಫಾರಂ ನಲ್ಲಿ ಕೂತು ಅವಳು ಬರುವುದನ್ನು ಮೆಸೇಜ್ ಕಾಲ್ ಮೂಲಕ ತಿಳಿದುಕೊಳ್ಳುತ್ತಾ ಬಹಳ ವರ್ಷಗಳ ನಂತರ ಎದುರುಗೊಳ್ಳುವ ಆತಂಕವನ್ನೂ, ಈ ಭೇಟಿ ಬದುಕನ್ನು ಬದಲಿಸಬಹುದಾದ ಬಗ್ಗೆ ಭಯವನ್ನೂ ಅದುಮಿಟ್ಟುಕೊಂಡವನ ಗಮನ ಸೆಳೆಯುವ ಹೋಮೋಸೆಕ್ಸ್ ಅಜ್ಜ ಹೇಳುವುದೇನು?


ಚಹಾದ ಅಂಗಡಿ
..


ನನ್ನ ನಿನ್ನ ನೆಂಟತನ
..


ಕೊಡಗನೂರು ಕೆರೆ
..


ಅವನೂ ಅವಳೂ
..


ಹೋಮ್ ಸ್ವೀಟ್ ಹೋಂ

ಕಥೆ.

ಮುಸ್ಸಂಜೆ

ಕಥೆ.

ನಿಮ್ಮನೇಲಿ ಕರೆಂಟ್ ಇದೆಯಾ

ಕಥೆ.




ಪುರಸ್ಕಾರಗಳು
ಈ ಕಥಾ ಸಂಕಲನದ 'ಬೇಟೆ' ಕಥೆಯು ಎಂ.ವ್ಯಾಸ ಸ್ಮರಣಾರ್ಥ ತರಂಗ ಕಥಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಗಳಿಸಿದೆ.
ಈ ಕಥಾ ಸಂಕಲನಕ್ಕೆ ಬೆಳಗಾವಿಯ ಜನ್ನಾ ಸನದಿ ಪ್ರಶಸ್ತಿ ಹಾಗೂ ಕ.ಸಾ.ಪ ಹಾಗೂ ಬೆಂ.ಮ.ಸಾ.ಸಂಸ್ಥೆಯ 'ಅರಳು' ಪ್ರಶಸ್ತಿ ಲಭಿಸಿದೆ.