ನಥಾನ್ ಲಿಯೋನ್
ನಥಾನ್ ಮೈಕೇಲ್ ಲಿಯೋನ್, ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ. ಆಸ್ಟ್ರೇಲಿಯಾದ ಬಲಗೈ ಆಫ್ ಬ್ರೇಕ್ ಬೌಲರ್ ಹಾಗೂ ಕೆಳ ಕ್ರಮಾಂಕದ ಬಲಗೈ ಬ್ಯಾಟ್ಸ್ಮನ್. ದೇಶೀಯ ಕ್ರಿಕೆಟ್ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ನ್ಯೂ ಸೌತ್ ವೇಲ್ಸ್ ತಂಡಗಳಿಗೆ ಆಡುತ್ತಾರೆ.[೧]
ಆರಂಭಿಕ ಜೀವನ
ಬದಲಾಯಿಸಿಲಿಯೋನ್ ರವರು ನವಂಬರ್ ೨೦, ೧೯೮೭ರಲ್ಲಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನ ಯಂಗ್ನಲ್ಲಿ ಜನಿಸಿದರು. ನಥಾನ್ ರವರು ತಮ್ಮ ಬಾಲ್ಯದಲ್ಲಿ ಕ್ಯಾಂಬೇರ್ರಾಗೆ ಬಂದು ಎ ಸಿ ಟಿ ಕ್ರಿಕೆಟ್ ನ ೧೭ರ ವಯೋಮಿತಿ ತಂಡದಲ್ಲಿ ಹಾಗೂ ೧೮ರ ವಯೋಮಿತಿ ತಂಡದಲ್ಲಿ ಅಡಲಾರಂಭಿಸಿದರು. ಇವರು ಯೂನಿವರ್ಸಿಟಿ ಹಾಗೂ ಜಿಲ್ಲಾ ಮಟ್ಟದ ಕ್ರಿಕೆಟ್ ತಂಡದಲ್ಲಿ ಆಡಿದರು. ನಂತರ ಮಾರ್ಕ್ ಹಿಗ್ಗ್ಸ್ ರವರ ಮಾರ್ಗದರ್ಶನದಲ್ಲಿ ಆಫ್ ಬ್ರೇಕ್ ಬೌಲಿಂಗ್ ಕಲಿತರು.[೨]
ವೃತ್ತಿ ಜೀವನ
ಬದಲಾಯಿಸಿಲಿಯೋನ್ ರವರು ಫೆಬ್ರವರಿ ೧೦, ೨೦೧೧ರಂದು ಪರ್ತ್ ನಲ್ಲಿ ಸೌತ್ ಆಸ್ಟ್ರೇಲಿಯಾ ಹಾಗೂ ವೆಸ್ಟರ್ನ್ ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯದ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.[೩]
ಅಂತರರಾಷ್ಟ್ರೀಯ ಕ್ರಿಕೆಟ್
ಬದಲಾಯಿಸಿಅಗಸ್ಟ್ ೩೧, ೨೦೧೧ ಗ್ಯಾಲೇಯಲ್ಲಿ ಶ್ರೀಲಂಕಾ ವಿರುಧ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೪] ಮಾರ್ಚ್ ೦೮, ೨೦೧೨ರಂದು ಅಡಿಲೇಡ್ ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೂರನೇ ಫೈನಲ್ ಏಕದಿನ ಪಂದ್ಯದಿಂದ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪನೆ ಮಾಡಿದರು.[೫] ಜನವರಿ ೨೨, ೨೦೧೬ ರಂದು ಮೆಲ್ಬರ್ನ್ನಲ್ಲಿ ಭಾರತದ ವಿರುದ್ಧ ನಡೆದ ಎರಡನೇ ಟಿ-೨೦ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ನಲ್ಲಿ ಪಾದಾರ್ಪಣೆ ಮಾಡಿದರು.[೬]
ಪಂದ್ಯಗಳು
ಬದಲಾಯಿಸಿ- ಏಕದಿನ ಕ್ರಿಕೆಟ್ : ೨೯ ಪಂದ್ಯಗಳು[೭]
- ಟೆಸ್ಟ್ ಕ್ರಿಕೆಟ್ : ೮೯ ಪಂದ್ಯಗಳು
- ಟಿ-೨೦ ಕ್ರಿಕೆಟ್ : ೦೨ ಪಂದ್ಯಗಳು
ವಿಕೇಟಗಳು
ಬದಲಾಯಿಸಿ- ಏಕದಿನ ಪಂದ್ಯಗಳಲ್ಲಿ : ೨೯
- ಟೆಸ್ಟ್ ಪಂದ್ಯಗಳಲ್ಲಿ : ೩೫೭
- ಟಿ-೨೦ ಪಂದ್ಯಗಳಲ್ಲಿ : ೦೧
ಉಲ್ಲೇಖಗಳು
ಬದಲಾಯಿಸಿ- ↑ https://www.cricbuzz.com/profiles/7850/nathan-lyon
- ↑ http://www.espncricinfo.com/magazine/content/story/529959.html
- ↑ https://www.espncricinfo.com/series/8043/scorecard/474039/western-australia-vs-south-australia-sheffield-shield-2010-11
- ↑ https://www.espncricinfo.com/series/12795/scorecard/516212/sri-lanka-vs-australia-1st-test-australia-tour-of-sri-lanka-2011
- ↑ https://www.espncricinfo.com/series/8531/scorecard/518970/australia-vs-sri-lanka-3rd-final-commonwealth-bank-series-2011-12
- ↑ https://www.espncricinfo.com/series/11188/scorecard/895819/australia-vs-india-2nd-t20i-india-tour-of-australia-2015-16
- ↑ http://www.espncricinfo.com/australia/content/player/272279.html