ನಡತೆಯು (ಚಾರಿತ್ರ್ಯ) ಒಬ್ಬ ವ್ಯಕ್ತಿಯ ಸ್ಥಿರವಾದ ನೈತಿಕ ಗುಣಗಳ ಮೌಲ್ಯಮಾಪನ. ನಡತೆಯ ಪರಿಕಲ್ಪನೆಯು ಅನುಭೂತಿ, ಧೈರ್ಯ, ಸೈರಣೆ, ಪ್ರಾಮಾಣಿಕತೆ, ಹಾಗೂ ನಿಷ್ಠೆಯಂತಹ ಸದ್ಗುಣಗಳು, ಅಥವಾ ಒಳ್ಳೆ ವರ್ತನೆಗಳು ಅಥವಾ ಅಭ್ಯಾಸಗಳ ಉಪಸ್ಥಿತಿ ಅಥವಾ ಅಭಾವ ಸೇರಿದಂತೆ ವಿವಿಧ ಲಕ್ಷಣಗಳನ್ನು ಸೂಚಿಸಬಹುದು. ನಡತೆಯು ಮುಖ್ಯವಾಗಿ ಒಬ್ಬ ವ್ಯಕ್ತಿಯನ್ನು ಮತ್ತೊಬ್ಬನಿಂದ ವ್ಯತ್ಯಾಸ ಮಾಡುವ ಗುಣಗಳ ಸಮೂಹವನ್ನು ಸೂಚಿಸುತ್ತದೆ. ಸಾಂಸ್ಕೃತಿಕ ಮಟ್ಟದಲ್ಲಿ ಆದರೂ, ಒಂದು ಸಾಮಾಜಿಕ ಗುಂಪು ಬದ್ಧವಾಗಿರುವ ನೈತಿಕ ವರ್ತನೆಗಳ ಸಮೂಹವು ಇತರ ಗುಂಪುಗಳಿಂದ ವಿಶಿಷ್ಟವಾಗಿ ಒಗ್ಗೂಡಿಸುತ್ತದೆ ಮತ್ತು ಸಾಂಸ್ಕೃತಿಕವಾಗಿ ವ್ಯಾಖ್ಯಾನಿಸುತ್ತದೆ ಎಂದು ಹೇಳಬಹುದು. ಮನೋವಿಜ್ಞಾನು ಲಾರೆನ್ಸ್ ಪರ್ವಿನ್ ನಡತೆಯನ್ನು "ಅನೇಕ ಸನ್ನಿವೇಶಗಳಾದ್ಯಂತ ವರ್ತನೆಯನ್ನು ಕ್ರಿಯೆಗಳ ಸುಸಂಗತ ಮಾದರಿಗಳಲ್ಲಿ ವ್ಯಕ್ತಪಡಿಸಲು ಇರುವ ಸ್ವಭಾವ" ಎಂದು ವ್ಯಾಖ್ಯಾನಿಸುತ್ತಾರೆ.[] ಹಾಗೆಯೇ, ತತ್ತ್ವಶಾಸ್ತ್ರಜ್ಞ ಜಾರ್ಜ್ ನಡತೆಯನ್ನು "ಒಬ್ಬರ ನೈತಿಕ ಅಭ್ಯಾಸಗಳು ಮತ್ತು ಸ್ವಭಾವಗಳ ಸಂಕಲನ" ಎಂದು ಸೂಚಿಸುತ್ತಾರೆ.[]

ಉಲ್ಲೇಖಗಳು

ಬದಲಾಯಿಸಿ
  1. Pervin 1994, p. 108
  2. George, MI (August 2017). "What moral character is and is not". The Linacre quarterly. 84 (3): 261–274. doi:10.1080/00243639.2017.1338442. PMID 28912619.


"https://kn.wikipedia.org/w/index.php?title=ನಡತೆ&oldid=1251039" ಇಂದ ಪಡೆಯಲ್ಪಟ್ಟಿದೆ