ನಟ್ (nut) ಒಂದು ಸುರುಳಿಯಾಕಾರದ ಏಣು(ಥ್ರೆಡೆಡ್) ರಂಧ್ರವಿರುವ ಭದ್ರಪಡಿಸುವ ಸಾಧನ(fastener). ನಟ್ ಗಳು ಹೆಚ್ಚಾಗಿ ಯಾವಾಗಲೂ ಬೋಲ್ಟ್(bolt) ಜೊತೆಗಿನ ಸೇರಿ ಬಹಳ ಭಾಗಗಳ ಜೋಡಣೆಗೆ ಬಳಕೆಯಾಗುತ್ತದೆ. ಎರಡು ಭಾಗಗಳು ಅವುಗಳ ಏಣಿನ ಘ‍ರ್ಷಣೆಯ, ಬೋಲ್ಟಿನ ಸ್ವಲ್ಪ ಎಳೆತ ಮತ್ತು ಭಾಗಗಳ ಒತ್ತಡದ ಸಂಯೋಜನೆಯೊಂದಿಗೆ ಒಟ್ಟಿಗೆ ಸೇರಿಸಲ್ಪಡುತ್ತವೆ.

ಬೋಲ್ಟ್ ಜೊತೆ ಸೇರಿಸಿರುವ ನಟ್

ಕಂಪಿಸುವ ಮತ್ತು ತಿರುಗುವ ಉಪಯೋಗಗಳಲ್ಲಿ ನಟ್ ಗಳು ಕಳಚಿಕೊಳ್ಳಬಹುದು. ಇಂತಹ ಸಂಧರ್ಬದಲ್ಲಿ ಬಗೆಬಗೆಯ ಬಂಧಿಸುವ ಯಾಂತ್ರಿಕ ರಚನೆಗಳನ್ನು ಬಳಸಬಹುದು: ಅಂಟು, ಸುರಕ್ಷತಾ ಪಿನ್ಗಳು, ಲಾಕ್ ತಂತಿ(lockwire), ನೈಲಾನ್ ಒಳಪಡಿಸುವಿಕೆ, ಅಂಡಾಕಾರದ ಸುರುಳಿಯಾಕಾರದ ಏಣುಗಳು. ಬೋಲ್ಟ್ ನ ತಲೆಯಲ್ಲಿ ಇರುವಂತೆಯೇ ಷಡ್ಭುಜಾಕೃತಿಯ(hexagonal) ಆಕಾರವು ಅತೀ ಸಾಮಾನ್ಯ. ಬೋಲ್ಟ್ ನ ಆರು ಬದಿಗಳು ಉಪಕರಣಗಳ ಹಿಡಿತಕ್ಕೆ ಉತ್ತಮವಾದ ಜಾಗವನ್ನು ಒದಗಿಸುತ್ತವೆ. ಆದರೆ ಹೆಚ್ಚು ಮೂಲೆಗಳು ದುಂಡಾಗಿಸುವಿಕೆಯಲ್ಲಿ ದುರ್ಬಲವಾಗಿರುತ್ತವೆ. ಮುಂದಿನ ಬದಿಯನ್ನು ಪಡೆಯಲು ಇದು ಬರೀ ೧/೬ ಭಾಗದ ಆರ್ವತನೆಯನ್ನು ತೆಗೆದುಕೊಳ್ಳುತ್ತದೆ ಮತ್ತು ಹಿಡಿತವು ಸೂಕ್ತವಾಗಿರುತ್ತದೆ. ಅದಾಗ್ಯೂ ೬ಕ್ಕಿಂತ ಹೆಚ್ಚು ಬದಿಗಳಿರುವ ಬಹುಭುಜಾಕೃತಿಗಳು ಅಗತ್ಯಕ್ಕೆ ತಕ್ಕ ಆವರ್ತನವನ್ನು ನೀಡುವುದಿಲ್ಲ ಮತ್ತು ಆರಕ್ಕಿಂತ ಕಡಿಮೆ ಬದಿಗಳಿರುವ ಬಹುಭುಜಾಕೃತಿಗಳು ಒಂದು ಸಂಪೂರ್ಣ ಸುತ್ತು ಸುತ್ತಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಬೆರಳಿನ ಹೊಂದಾಣಿಕೆಗೆ ರೆಕ್ಕೆ ನಟ್ಗಳು(wing nuts) ಮತ್ತು ಸಿಗದಿರುವ ಜಾಗಗಳಿಗೆ ಬಂಧಿತ ನಟ್ಗಳು(captive nuts) ಮುಂತಾದ ಇತರೆ ವಿಶೇಷ ಆಕೃತಿಗಳು ಕೆಲವು ಅಗತ್ಯಗಳಿಗಾಗಿಯೇ ಇವೆ.

ನಟ್‍ಗಳು ಸಂಬಂದಪಟ್ಟ ಬೋಲ್ಟ್ ಗಳಿಗೆ ಜೊತೆಯಾಗುವಂತೆ ಬಲ ದರ-ನಿರ್ಧರಣೆ(strength ratings)ಗಳೊಂದಿಗೆ ಶ್ರೇಯಾಂಕಿತವಾಗಿರುತ್ತವೆ. ಉದಾಹರಣೆಗೆ, ಒಂದು ಐಎಸ್ಒ ಪ್ರಾಪರ್ಟಿ ವರ್ಗ ೧೦ರ ನಟ್ ಒಂದು ಐಎಸ್ಒ ಪ್ರಾಪರ್ಟಿ ವರ್ಗ ೧೦.೯ರ ಬೋಲ್ಟ್ ಪ್ರೂಫ್ ಬಲ ಹೊರೆ ಕಳಚಹಿಕೊಳ್ಳದಂತೆ ಬೆಂಬಲಿಸುವುದು. ಇದೇ ರೀತಿ ಪ್ರೂಫ್ ಬಲದ(proof strength) ಒಂದು ಎಸ್ಎಇ ವರ್ಗ ೫ ಬೋಲ್ಟ್ ನ್ನು ಒಂದು ಎಸ್ಎಇ ೫ ನಟ್ ಬೆಂಬಲಿಸುವುದು.

ಮನೆ ಬಳಕೆಯ ವಸ್ತು(household hardware) ಆವೃತ್ತಿಗಳಿಂದ ಹಿಡಿದು ವಿಶೇಷವಾಗಿರುವ ಕೈಗಾರಿಕೆಗಳವರೆಗೆ ನಿರ್ದಿಷ್ವ‍ವಾಗಿ ವಿನ್ಯಾಸಗೊಳಿಸಲ್ಪಟ್ಟಿರುವ(engineered) ವಿವಿಧ ತಾಂತ್ರಿಕ ಮಾನಕ(technical standards)ಗಳ ಅವಶ್ಯಕತೆಗಳಿಗೆ ತಕ್ಕಂತೆ ಬಹಳ ವಿಧವಾದ ನಟ್ ಗಳು ಇವೆ.

ಸಿಡ್ನಿ ಹಾರ್ಬರ್ ಸೇತುವೆಯ ನಟ್

ವಿಧಗಳು

ಬದಲಾಯಿಸಿ
 
ಎಡದಿಂದ ಬಲಕ್ಕೆ:ವಿಂಗ್, ಷಡ್ಭುಜಕೃತಿಯ, ಷಡ್ಭುಜಾಕೃತಿಯ ಫ್ಲಾಂಜ್ ಮತ್ತು ಸ್ಲ್ಯಾಬ್ ವೆಲ್ಡ್ ನಟ್‍ಗಳು
 
ಷಡ್ಭುಜಕೃತಿಯ ನಟ್‍ಗಳು
ಹೆಸರು ಚಿತ್ರ ವಿವರಣೆ
ಆಕ್ರಾನ್ ನಟ್ (Acorn nut) (cap nut)  
ಬ್ಯಾರೆಲ್ ನಟ್ (Barrel nut)  
ಕೇಜ್ ನಟ್ (Cage nut)  
ಕ್ಲಿಪ್ ಆನ್ ನಟ್ (Clip-on nut)
ಕಪ್ಲಿಂಗ್ ನಟ್ (Coupling nut)  
ಕ್ರಾಸ್ ಡೊವೆಲ್ ನಟ್ (Cross dowel)  
ಫಾಂಜ್ ನಟ್ (Flange nut ) (collar nut)  
ಇನ್ಸರ್ಟ್ ನಟ್ (Insert nut)  
ಸೆಕ್ಸ್ ಬೋಲ್ಟ್ (Sex bolt)  
ಸ್ಪ್ಲಿಟ್ ನಟ್ (Split nut)
ಸ್ಲೀವ್ ನಟ್ (Sleeve nut)
ಸ್ಕ್ವೇರ್ ನಟ್ (Square nut)  
ಸ್ಡ್ಯಾಕ್ಡ್ ನಟ್ (Staked) (for plastic)
ಸ್ವೇಗ್ ನಟ್ (Swage nut)  
ಟೀ-ನಟ್ (T-nut)  
ಟೀ-ಸ್ಲಾಟ್ ನಟ್ (T-slot nut)/T-groove nut
ವೆಲ್ಡ್ ನಟ್ (Weld nut)  
ವೆಲ್ ನಟ್ (Well nut)
ವಿಂಗ್ ನಟ್ (Wing nut)  

ಲಾಕ್ ನಟ್ (Locknut)

ಬದಲಾಯಿಸಿ
  • ಕ್ಯಾಸ್ಟೆಲೇಟೆಡ್ ನಟ್ (Castellated nut)
  • ಡಿಸ್ಟೋರ್ಟೆಡ್ ಥ್ರೆಡ್ ಲಾಕ್ ನಟ್ (Distorted thread locknut)
    • ಸೆಂಟರ್ ಲಾಕ್ ನಟ್ (Centerlock nut)
    • ಎಲಿಪ್ಟಿಕಲ್ ಆಫ್ಸೆಟ್ ಲಾಕ್ ನಟ್ (Elliptical offset locknut)
    • ಟಾಪ್ ಲಾಕ್ ನಟ್ (Toplock nut)
  • ಇಂಟರ್ಫೇಸಿಂಗ್ ಥ್ರೆಡ್ ನಟ್ (Interfering thread nut)
    • ಟೇಪರ್ಡ್ ಥ್ರೆಡ್ ನಟ್ (Tapered thread nut)
  • ಜಾಮ್ ನಟ್ (Jam nut)
  • ಜೆಟ್ ನಟ್ (Jet nut)
  • ಕೆಪ್ಸ್ ನಟ್ (Keps nut)
  • ನೈಲಾಕ್ ಪ್ಲೇಟ್ ನಟ್ (Nyloc plate nut)
  • ಪಾಲಿಮರ್ ಇನ್ಸರ್ಟ್ ನಟ್ (Polymer insert nut)
  • ಸೆರ್ರೇಟೆಡ್ ಫೇಸ್ ನಟ್ (Serrated face nut)
  • ಸೆರ್ರೇಟೆಡ್ ಫ್ಲಾಂಜ್ (Serrated flange nut)
  • ಸ್ಪೀಡ್ ನಟ್ (Speed nut)
  • ಸ್ಪ್ಲಿಟ್ ಬೀಮ್ ನಟ್ (Split beam nut)

ಷಡ್ಭುಜಾಕೃತಿಯ ಮೆಟ್ರಿಕ್ ನಟ್‍ಗಳ ಪ್ರಮಾಣೀಕೃತ ಗಾತ್ರಗಳು

ಬದಲಾಯಿಸಿ
 
ನಟ್ ಉಲ್ಲೇಖನ

ಗಮನಿಸಿ, ವ್ರೆಂಚ್ ಗಾತ್ರಗಳು ಕೈಗಾರಿಕಾ ಮಾನದಂಡಗಳಿಗಿಂತಾ ವಿಭಿನ್ನವಾಗಿರುತ್ತವೆ. ಉದಾಹರಣೆಗೆ, ವ್ರೆಂಚ್ ಗಾತ್ರದ ಭದ್ರಕಗಳನ್ನು ಜಪಾನಿನವರು ತಯಾರಿಸುವ ಕಾರುಗಳಲ್ಲಿ ಜೆಐಎಸ್ ಮಾನದಂಡಗಳನ್ನು ಅನುಸರಿಸಲು ಉಪಯೋಗಿಸುತ್ತಾರೆ.

ಅತ್ಯಲ್ಪ ರಂಧ್ರ
ವ್ಯಾಸ, D (mm)
ಮಟ್ಟ,
P (mm)
ಫ್ಲ್ಯಾಟ್ಗಳು ಅಕ್ರಾಸ್,
A/F (mm)
ಬಾಹ್ಯ ವ್ಯಾಸ;

ಮೂಲೆಗಳಲ್ಲಿ ಅಡ್ಡಲಾಗಿ,
A/C (mm)

ಎತ್ತರ, H (mm)
೧ನೇ
ಆಯ್ಕೆ
೨ನೇ
ಆಯ್ಕೆ
ಒರಟಾದ ಶ್ರೇಷ್ಟ ಐಎಸ್ಒ ಡಿಐಎನ್ ಜೆಐಎಸ್ ಹೆಕ್ಸ್ ನಟ್ ಜಾಮ್ ನಟ್ ನೈಲಾನ್ ನಟ್
1 0.25 2.5
1.2 0.25
1.4 0.3
1.6 0.35 3.2
1.8 0.35
2 0.4 4 1.6 1.2 -
2.5 0.45 5 2 1.6 -
3 0.5 5.5 6.4 2.4 1.8 4
3.5 0.6 6
4 0.7 7 7 7 8.1 3.2 2.2 5
5 0.8 8 8 8 9.2 4 2.7 5
6 1 0.75 10 10 10 11.5 5 3.2 6
7 1 11 5.5 3.5 -
8 1.25 1 13 13 12 15 6.5 4 8
10 1.5 1.25 or 1 16 17 14 19.6 8 5 10
12 1.75 1.5 or 1.25 18 19 17 22.1 10 6 12
14 2 1.5 21 22 19 11 7 14
16 2 1.5 24 24 22 27.7 13 8 16
18 2.5 2 or 1.5 27 15 9 18.5
20 2.5 2 or 1.5 30 30 34.6 16 10 20
22 2.5 2 or 1.5 32
24 3 2 36 41.6 19
27 3 2 41
30 3.5 2 46 53.1 24
33 3.5 2
36 4 3 55 63.5 29
39 4 3
42 4.5 3
45 4.5 3
48 5 3
52 5 4
56 5.5 4
60 5.5 4
64 6 4

ಷಡ್ಭುಜಾಕೃತಿಯ ಎಸ್ಎಈ ನಟ್‍ಗಳ ಪ್ರಮಾಣೀಕೃತ ಗಾತ್ರಗಳು

ಬದಲಾಯಿಸಿ
ಯುಟಿಎಸ್
ಗಾತ್ರ
ಅತ್ಯಲ್ಪ ರಂಧ್ರ
ವ್ಯಾಸ, D
ಮಟ್ಟ, P ಫ್ಲ್ಯಾಟ್ಗಳು ಅಕ್ರಾಸ್,
A/F
ಮೂಲೆಗಳಲ್ಲಿ ಅಡ್ಡಲಾಗಿ,
A/C
ಎತ್ತರ, H
ಒರಟಾದ (ಯುಎನ್‍ಸಿ) ಶ್ರೇಷ್ಟ (ಯುಎನ್‍ಎಫ್) ಹೆಚ್ಚು ಶ್ರೇಷ್ಟ (ಯುಎನ್‌ಇಎಫ್) ಹೆಕ್ಸ್ ನಟ್ ಜಾಮ್ ನಟ್ ನೈಲಾನ್ ನಟ್
(in) (mm) (in) (mm) (in) (mm) (in) (mm) (in) (mm) (in) (mm) (in) (mm) (in) (mm) (in) (mm)
#0 532 0.1563 3.969
#1 532 0.1563 3.969
#2 0.086 2.1844 316 0.1875 4.763 5.18 1.65
#3 316 0.1875 4.763 5.10 1.85
#4 0.1120 2.8448 14 0.2500 6.35 7.05 2.25
#6 0.1380 3.5052 516 0.3125 7.938 8.95 2.85
#8 0.1640 4.1656 1132 0.3440 8.731 0.386 9.80 3.05
#10 0.1900 4.8260 38 0.3750 9.525 0.461 11.70 3.10
#12 0.2160 5.4864 716 0.4375 11.113
14 14 0.250 6.350 716 0.4375 11.113
516 516 0.3125 7.9375 12 0.5000 12.700 0.577
38 38 0.375 9.525 916 0.5620 14.288 0.650
716 716 1116 0.6750 17.463
12 12 0.500 12.70 34 0.7500 19.050 0.866
916 916 78 0.8750 22.225
58 58 1516 0.9375 23.813 1.083
34 34 0.750 1+18 1.1250 28.575 1.299
78 78 1+516 1.3125 33.338
1 1 1 25.40 1+12 1.5000 38.100 1.653

ವರ್ಗೀಕರಣಗಳು

ಬದಲಾಯಿಸಿ
ಮೆಟ್ರಿಕ್ / ಆಂಗ್ಲ ಗಾತ್ರದ ನಟ್‍ಗಳ ಯಾಂತ್ರಿಕ ವಿಶೇಷಣಗಳು[]

ಕಚ್ಚಾ-ಮಾಲು

ಪುರಾವೆ ಶಕ್ತಿ ಕನಿಷ್ಠ ಕರ್ಷಕ ಇಳುವರಿ ಸಾಮರ್ಥ್ಯ ಕನಿಷ್ಠ ಕರ್ಷಕ ಅಂತಿಮ ಶಕ್ತಿ ನಟ್ ವರ್ಗ
ಐಎಸ್ಒ 898 (ಮೆಟ್ರಿಕ್)
ಕಡಿಮೆ ಅಥವಾ ಮಧ್ಯಮ ಇಂಗಾಲದ ಉಕ್ಕಿನ 380 MPa (55 ksi) 420 MPa (61 ksi) 520 MPa (75 ksi) 5
ಮಧ್ಯಮ ಇಂಗಾಲದ ಉಕ್ಕಿನ Q&T 580 MPa (84 ksi) 640 MPa (93 ksi) 800 MPa (116 ksi) 8
ಮಿಶ್ರಿತ ಉಕ್ಕು ಕ್ಯು&ಟಿ 830 MPa (120 ksi) 940 MPa (136 ksi) 1040 MPa (151 ksi) 10
ಎಸ್ಎಈ J995 (ಆಂಗ್ಲ)
ಕಡಿಮೆ ಅಥವಾ ಮಧ್ಯಮ ಇಂಗಾಲದ ಉಕ್ಕಿನ 55 ksi (379 MPa) 57 ksi (393 MPa) 74 ksi (510 MPa) 2
ಮಧ್ಯಮ ಇಂಗಾಲದ ಉಕ್ಕಿನ ಕ್ಯು&ಟಿ 85 ksi (586 MPa) 92 ksi (634 MPa) 120 ksi (827 MPa) 5
ಮಿಶ್ರಿತ ಉಕ್ಕು ಕ್ಯು&ಟಿ 120 ksi (827 MPa) 130 ksi (896 MPa) 150 ksi (1034 MPa) 8

ಸ್ವಯಂ ಬಿಡಿಬಿಡಿಯಾಗುವುದನ್ನು ತಡೆಯಲು ಎರಡು ನಟ್ ಗಳ ಉಪಯೋಗ

ಬದಲಾಯಿಸಿ

ಸಾಮಾನ್ಯ ಉಪಯೋಗದಲ್ಲಿ ಒಂದು ನಟ್ ಮತ್ತು ಬೋಲ್ಟ್ ನ ಜೋಡಣೆಯು ಒಟ್ಟಿಗೆ ಇರುತ್ತದೆ ಏಕೆಂದರೆ, ಬೋಲ್ಟ್ ಪೂರ್ವ ಭಾರ ಎಂದು ಕರೆಯುವ ನಿರಂತರ ಕರ್ಷಕ ಬಿಗಿತ(tensile stress)ಕ್ಕೆ ಒಳಪಟ್ಟಿರುತ್ತದೆ. ಪೂರ್ವ ಭಾರವು ನಟ್ ನ ಏಣು(ಥ್ರೆಡ್) ಗಳನ್ನು ಬೋಲ್ಟ್ ನ ಏಣುಗಳಿಗೆ ವಿರುದ್ಧವಾಗಿ ಮತ್ತು ನಟ್ ನ ಮುಖವನ್ನು ಬೇರಿಂಗ್ ನ ಮೆಲ್ಮೈ ಗೆ ವಿರುದ್ಧವಾಗಿ ಸ್ಥಿರ ಬಲ(force)ದಿಂದ ಎಳೆಯುತ್ತದೆ. ಹಾಗಾಗಿ ನಟ್ ಈ ಮೆಲ್ಮೈಗಳ ನಡುವಿನ ಘರ್ಷಣೆಯಿಂದ(friction) ಹೊರಬರದೆ ತಿರುಗಲು ಸಾದ್ಯವಿಲ್ಲ. ಒಂದು ವೇಳೆ ಜೋಡಣೆಯು ಕಂಪನಕ್ಕೆ(vibration) ಒಳಪಟ್ಟರೆ ಚಲನೆಯ ಪ್ರತೀ ಆವರ್ತನದಲ್ಲೂ ಪೂರ್ವಭಾರದಲ್ಲಿ ಏರಿಕೆ ಮತ್ತು ಇಳಿಕೆಯಾಗುತ್ತದೆ. ಕಂಪನದ ಆವರ್ತನದ ಸಂದರ್ಭದಲ್ಲಿ ನಟ್ ನ ಬೋಲ್ಟ್ ಮತ್ತು ಬೇರಿಂಗ್ ಮೇಲ್ಮೈ ಜೊತೆಗಿನ ಸಂಪರ್ಕವನ್ನು ದೃಢವಾಗಿರಿಸಲು ಕನಿಷ್ಠ ಪೂರ್ವ ಭಾರವು ಸಾಕಾದೇ ಹೋದರೆ ನಟ್ ಸಡಿಲಗೊಳ್ಳುತ್ತದೆ.

ಈ ಸಮಸ್ಯೆಯನ್ನು ತಡೆಯಲು ವಿಶೇಷ ಲಾಕಿಂಗ್ ನಟ್ಗಳು(locking nuts) ಅಸ್ತಿತ್ವದಲ್ಲಿದ್ದಿವೆ, ಆದರೆ ಕೆಲವೊಮ್ಮೆ ಎರಡನೇ ನಟ್ ಸೇರಿಸಬೇಕಾಗುತ್ತದೆ. ಈ ತಂತ್ರದ ಮೇಲೆ ಭರವಸೆ ಇಡಲು ಪ್ರತಿಯೊಂದು ನಟ್ ಅನ್ನು ಸರಿಯಾದ ತಿರುಗುಬಲ(torque)ಕ್ಕೆ ಬಿಗಿಮಾಡಬೇಕು. ಒಳಗಿನ ನಟ್ ಅನ್ನು ಹೊರಗಿನ ನಟ್ಟಿನ ತಿರುಗುಬಲದ ಅರ್ಧದಷ್ಟು ಬಿಗಿಗೊಳಿಸಬೇಕು. ಹೊರಗಿನ ನಟ್ ಪೂರ್ತಿ ಭ್ರಮಣ ಶಕ್ತಿಯನ್ನು ಉಪಯೋಗಿಸಿಕೊಂಡು ಬಿಗಿಯಾಗುತ್ತಿರುವಾಗ ಇದನ್ನು ಒಂದು ರಿಂಚ್(wrench) ಸ್ಥಳದಲ್ಲಿ ಹಿಡಿದಿಟ್ಟುಕೊಳ್ಳಬೇಕು. ಈ ವ್ಯವಸ್ಥೆಯು ಎರಡೂ ನಟ್ ಗಳ ನಡುವೆ ಇರುವ ಬೋಲ್ಟಿನ ಚಿಕ್ಕ ಭಾಗದಲ್ಲಿ ಕರ್ಷಕ ಬಿಗಿತವನ್ನು ಉಂಟುಮಾಡಿ ಅವುಗಳನ್ನು ಪರಸ್ಪರ ನೂಕುವಂತೆ ಮಾಡುತ್ತದೆ. ಒಂದು ವೇಳೆ ಮುಖ್ಯ ಜೋಡಣೆಯು ಕಂಪಿಸಿದರೂ ನಟ್ಗಳ ಥ್ರೆಡ್ ಮತ್ತು ಬೋಲ್ಟ್ ನ ಥ್ರೆಡ್ ನಡುವಿನ ಸಂಪರ್ಕವನ್ನು ಸ್ಥಿರವಾಗಿ ಇಡುವುದರ ಮೂಲಕ ನಟ್ ಗಳ ನಡುವಿನ ಒತ್ತಡ ನಿರಂತರವಾಗಿರುತ್ತದೆ ಮತ್ತು ತಾನಾಗಿಯೇ ಸಡಿಲವಾಗುವುದನ್ನು ತಡೆಯುತ್ತದೆ. ನಟ್ ನ ಜೋಡಣೆ ಸರಿಯಾಗಿದ್ದಾಗ, ಹೊರಗಿನ ನಟ್ ಜೋಡಣೆಯು ಪೂರ್ಣ ಒತ್ತಡವನ್ನು ಸಹಿಸಿಕೊಳ್ಳುತ್ತದೆ. ಒಳಗಿನ ನಟ್ ನ ಕಾರ್ಯವು ಕೇವಲ ಒಂದು ಸ್ವಲ್ಪವೇ ಹೆಚ್ಚುವರಿ ಶಕ್ತಿಯನ್ನು ಒದಗಿಸುವುದಾಗಿದೆ ಮತ್ತು ಇದು ಬಲವಾಗಿರುವ ಅಗತ್ಯವಿಲ್ಲ. ಹಾಗಾಗಿ ಜಾಮ್ ನಟ್(jam nut) ಎಂದು ಕರೆಯಲ್ಪಡುವ ತೆಳುವಾದ ನಟ್ ಕೂಡಾ ಬಳಸಬಹುದು.

ಇವನ್ನೂ ನೋಡಿ

ಬದಲಾಯಿಸಿ
  • ಬೋಲ್ಟೆಡ್ ಜಾಯಿಂಟ್ (Bolted joint)
  • ಪೈಪ್ ಕ್ಯಾಪ್ (Pipe cap)
  • ಸ್ಕ್ರೂ ಥ್ರೆಡ್ (Screw thread)
  • ಟ್ಯಾಪ್ (Tap)
  • ಟ್ಯಾಪ್ಡ್ ಹೋಲ್ (Tapped hole)
  • ಥ್ರೆಡೆಡ್ ಇನ್ಸರ್ಟ್ (Threaded insert)
  • ವಾಷರ್ (Washer)

ಉಲ್ಲೇಖಗಳು

ಬದಲಾಯಿಸಿ
  1. Bickford & Nassar 1998, p. 153.

ಗ್ರಂಥಸೂಚಿ

ಬದಲಾಯಿಸಿ
  • Bickford, John H.; Nassar, Sayed (1998), Handbook of bolts and bolted joints, CRC Press, ISBN 978-0-8247-9977-9.
"https://kn.wikipedia.org/w/index.php?title=ನಟ್&oldid=1085932" ಇಂದ ಪಡೆಯಲ್ಪಟ್ಟಿದೆ