ಸಾಮಾಜಿಕ ಸನ್ನಿವೇಶದಲ್ಲಿ, ನಂಬಿಕೆ (ವಿಶ್ವಾಸ) ಪದವು ಹಲವಾರು ಅರ್ಥಗಳನ್ನು ಹೊಂದಿದೆ.[] ನಂಬಿಕೆ ವ್ಯಾಖ್ಯಾನಗಳು ಸಾಮಾನ್ಯವಾಗಿ ಮುಂದೆ ಹೇಳಲಾದ ಅಂಶಗಳನ್ನು ಲಕ್ಷಣಗಳಾಗಿ ಹೊಂದಿರುವ ಸನ್ನಿವೇಶವನ್ನು ಸೂಚಿಸುತ್ತವೆ: ಒಂದು ಪಕ್ಷವು (ವಿಶ್ವಾಸಿ) ಮತ್ತೊಂದು ಪಕ್ಷದ (ವಿಶ್ವಸ್ತ) ಕ್ರಿಯೆಗಳ ಮೇಲೆ ಅವಲಂಬಿಸಲು ಸಿದ್ಧವಿರುತ್ತದೆ; ಸನ್ನಿವೇಶವು ಭವಿಷ್ಯದಲ್ಲಿ ನಡೆಯುವಂತದ್ದಾಗಿರುತ್ತದೆ. ಜೊತೆಗೆ, ವಿಶ್ವಾಸಿಯು ವಿಶ್ವಸ್ತನು ನೆರವೇರಿಸುವ ಕ್ರಿಯೆಗಳ ಮೇಲೆ (ಸ್ವಯಂಪ್ರೇರಿತವಾಗಿ ಅಥವಾ ಒತ್ತಾಯಪೂರ್ವಕವಾಗಿ) ನಿಯಂತ್ರಣವನ್ನು ಬಿಟ್ಟು ಬಿಡುತ್ತಾನೆ. ಪರಿಣಾಮವಾಗಿ, ವಿಶ್ವಾಸಿಯು ವಿಶ್ವಸ್ತನ ಕ್ರಿಯೆಗಳ ಫಲಿತಾಂಶಗಳ ಬಗ್ಗೆ ಅನಿಶ್ಚಿತನಾಗಿರುತ್ತಾನೆ; ಅವನು ಕೇವಲ ನಿರೀಕ್ಷೆಗಳನ್ನು ಬೆಳೆಸಿಕೊಂಡು ಮೌಲ್ಯಮಾಪನ ಮಾಡಬಲ್ಲನು. ವಿಶ್ವಸ್ತನು ಅಪೇಕ್ಷಿಸಿದಂತೆ ವರ್ತಿಸದಿದ್ದರೆ ಅನಿಶ್ಚಿತತೆಯು ವಿಶ್ವಾಸಿಗೆ ಆಗುವ ಹಾನಿ ಅಥವಾ ವೈಫಲ್ಯದ ಅಪಾಯವನ್ನು ಒಳಗೊಳ್ಳುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. McKnight, D. H., and Chervany, N. L. (1996). The Meanings of Trust. Scientific report, University of Minnesota. Error in webarchive template: Check |url= value. Empty.
"https://kn.wikipedia.org/w/index.php?title=ನಂಬಿಕೆ&oldid=1090097" ಇಂದ ಪಡೆಯಲ್ಪಟ್ಟಿದೆ