ವಿದುಷಿ. ನಂದಿನಿ ಈಶ್ವರ್

(ನಂದಿನಿ ಈಶ್ವರ್ ಇಂದ ಪುನರ್ನಿರ್ದೇಶಿತ)

'ನಂದಿನಿ ಈಶ್ವರ್', ಕಲಾವಂತ ಪರಿವಾರದಲ್ಲಿ ಜನಿಸಿದವರು. ಮನೆಯಲ್ಲಿ ಎಲ್ಲರೂ ಕಲಾವಿದರೆ. ಅಂತಹ ಪರಿಸರದಲ್ಲಿ ಬೆಳೆದ ನಂದಿನಿ, ನೃತ್ಯದ ಎಲ್ಲಾ ಪ್ರಾಕಾರಗಳಲ್ಲೂ ಪರಿಣತಿಯನ್ನು ಗಳಿಸಿ, ಶ್ರೇಷ್ಠ ಗುರುಗಳ ಬಳಿ ವಿದ್ಯಾಭ್ಯಾಸಮಾಡಿ ನಿಷ್ಣಾತರಾದರು. ವೀಣಾವಾದನದಲ್ಲೂ ಹೆಸರಾದರು. ಮಗ, 'ವಿದ್ವಾನ್ ರೋಹಿತ್ ಈಶ್ವರ್' ಜೊತೆ ಹಲವಾರು ನೃತ್ಯ ರೂಪಕಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ್ದಾರೆ. 'ಸೈನ್ಸ್ ಆಫ್ ಡಾನ್ಸ್ ; ಎಸ್ಸೆನ್ಸ್ ಆಫ್ ತ್ಯಾಗರಾಜಾಸ್ ಪಂಚರತ್ನ ಕೃತೀಸ್' ಎಂಬ ಜನಪ್ರಿಯ ಕಮ್ಮಟವನ್ನು ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ನಡೆಸಿಕೊಟ್ಟರು. ಇದು ಅಲ್ಲಿನ ಜನರಿಗೆ ಬಹಳ ಮುದಕೊಟ್ಟ ನಾಟ್ಯ ಕಾರ್ಯಾಗಾರವೆಂದು ಇಂದಿಗೂ ನೆನೆಸಿಕೊಳ್ಳುತ್ತಾರೆ. 'ಭಾರತೀಯ ನೃತ್ಯ ಶಾಸ್ತ್ರದ ಬೆಳವಣಿಗೆ'ಯ ಬಗ್ಗೆ ಹಲವಾರು ಸಂಶೋದನ ಪತ್ರಗಳನ್ನು ದೇಶವಿದೇಶಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ನಂದಿನಿಯವರು, ಭರತ ನಾಟ್ಯ, ಒಡಿಸ್ಸಿ, ಕಥಕ್, ನೃತ್ಯ ಪ್ರಕಾರಗಳ ಬಗ್ಗೆ ಹಲವಾರು ಕಾರ್ಯಾಗಾರಗಳನ್ನು ನಿಯಮಿತವಾಗಿ ತಮ್ಮ ರಾಸವೃಂದ ನಾಟ್ಯ ಶಾಲೆಯಲ್ಲಿ ನಡೆಸಿಕೊಂಡುಬರುತ್ತಿದ್ದಾರೆ. ಇದಲ್ಲದೆ, ಒಡಿಸ್ಸಿ, ಮಣಿಪುರಿ ಕಥಕ್, ಮೋಹಿನಿ ಅಟ್ಟಂ, ರಬೀಂದ್ರ ನಾಟ್ಯ, ಮತ್ತು ಸಾಂಪ್ರದಾಯಕ ನಾಟ್ಯಕಲೆಯ ಬಗ್ಗೆ ಕಮ್ಮಟಗಳನ್ನು ವರ್ಷವಿಡೀ ಹಮ್ಮಿಕೊಂಡಿದ್ದಾರೆ.

ಚಿತ್ರ:Nandinieswar.jpg
'ನಂದಿನಿ ಈಶ್ವರ್'

ಜನನ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

ನಂದಿನಿ, ೧೯೪೭ ರ ಆಗಸ್ಟ್ ೭ ರಂದು ಜನಿಸಿದರು. ಬಾಲ್ಯದಿಂದಲೇ ನಾಟ್ಯದಲ್ಲಿ ಬಹಳ ಆಸಕ್ತಿ ಇತ್ತು. ಅಜ್ಜಿ,, ಅಜ್ಜ,, ತಂದೆ, ಎಮ್. ಎಸ್. ಶ್ರಿಕಂಥಯ್ಯ,, ತಾಯಿ, ಎಮ್. ಎಸ್. ಶಾಂತಮ್ಮ ರವರ ಪ್ರೋತ್ಸಾಹ ಬಾಲಕಿಗೆ ಸದಾ ದೊರೆಯುತ್ತಿತ್ತು. ಮೈಸೂರು ವಿಶ್ವವಿದ್ಯಾಲಯದ ಬಿ. ಎಸ್. ಸಿ. ಪದವಿ ಗಳಿಸಿದರು. ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ, ಎಮ್. ಎ. ಪದವಿ ಹೊಂದಿದರು. ಡಾ.ಕೆ. ವೆಂಕಟಲಕ್ಷಮ್ಮ, ಲಲಿತ ದೊರೈ, ಮೈಸೂರಿನ ವೈ ಎನ್. ಸಿಂಹ, ಮೊದಲಾದ ದಿಗ್ಗಜರಿಂದ 'ಭರತನಾಟ್ಯ ನೃತ್ಯವಿದ್ಯೆ 'ಕಲಿತರು. ತದನಂತರ 'ದೆಹಲಿಯ ಗಂಧರ್ವ ಮಹಾ ವಿದ್ಯಾಲಯ'ದ 'ತೀರ್ಥರಾಮ್ ಆಜಾದ್' ರಿಂದ ಕಥಕ್ ನಾಟ್ಯವನ್ನೂ, ದೆಹಲಿ ಬ್ಯಾಲೆ ಗ್ರೂಪ್ ನಿರ್ದೇಶಕ 'ವಾಲ್ಮೀಕಿ ಬ್ಯಾನರ್ಜಿ'ಯವರಿಂದ ಮಣಿಪುರಿ ಮತ್ತು ಜಾನಪದ ನೃತ್ಯ, ಶೈಲಿಯನ್ನೂ 'ವೇದಾಂತಮ್ ಪ್ರಹ್ಲಾದ ಶರ್ಮ' ಮತ್ತು 'ವಸುಮತಿ ಗೋಪಾಲ ಕೃಷ್ಣಾ ಶರ್ಮ'ರಿಂದ ಕುಚಿಪುಡಿ ನಾಟ್ಯ ವನ್ನು ಕಲಿತರು. 'ಗುಜರಾತಿನ, ಹಿಮ್ಮತ್ ಸಿಂಹ ಚೌಹಾನ್ 'ರವರ ಸಾಭಿನಯವನ್ನು, ಮತ್ತು, ಎಮ್. ಜೆ. ಶ್ರೀನಿವಾಸಯ್ಯಂಗಾರ್ ರಿಂದ, ಎ. ಎಸ್. ಪದ್ಮರವರಿಂದ ವೀಣಾವಾದನವನ್ನೂ ಕಲಿತರು.

ರಾಸವೃಂದ ನೃತ್ಯಶಾಲೆ

ಬದಲಾಯಿಸಿ

'ರಾಸವೃಂದ ನಾಟ್ಯ ಶಾಲೆ'ಯನ್ನು ೧೯೮೦ ರಲ್ಲಿ ಸ್ಥಾಪನೆಮಾಡಿ, ನೂರಕ್ಕೂ ಹೆಚ್ಚು ಕಲಾವಿದರನ್ನು ತರಪೇತಿಗೊಳಿಸಿದ್ದಾರೆ. ಅವರ ಶಿಶ್ಯ-ಶಿಷ್ಯೆಯರು, 'ನೃತ್ಯ ನಾಟಕ'ಗಳನ್ನು ನಿರ್ದೇಶಿಸಿ ಹೆಸರುಗಳಿಸಿದ್ದಾರೆ.

ನಂದನ ನಮನ

ಬದಲಾಯಿಸಿ

ವಿದುಷಿ ನಂದನಿ ಈಶ್ವರ್, ತಮ್ಮ ಪ್ರೀತಿಯ ಅತ್ತೆ, ಕೆ. ಸರಸ್ವತಮ್ಮನವರ ಸ್ಮರಣೆಗೆ, ಒಂದು ಸುಂದರ ನೃತ್ಯ ಕಾರ್ಯಕ್ರಮವನ್ನು ನಡೆಸಿ, ಒಂದು ಅಪರೂಪದ ದಾಖಲೆಯನ್ನೇ ಸೃಷ್ಟಿಸಿದರು.

ಪ್ರಶಸ್ತಿಗಳು

ಬದಲಾಯಿಸಿ
  • ಮಣಿಪಾಲ್ ಅಕ್ಯಾಡೆಮಿ ಆಫ್ ಎಜ್ಯುಕೇಶನ್ ಸಂಸ್ಥೆಯಿಂದ 'ನಾಟ್ಯರತ್ನ,'
  • ಫಿಜಿ ದ್ವೀಪದ ಕಲಾವಂತರಿಗೆ ೩ ವರ್ಷ ಭರತನಾಟ್ಯ ತರಪೇತಿ ಕೊಟ್ಟುಬಂದರು. 'ಫಿಜಿ ದ್ವೀಪದ ತಂಬುವ ಸ್ವೀಕಾರ' ಮುಂತಾದ ಪ್ರಶಸ್ತಿಗಳು ದೊರೆತಿವೆ.
  • ಅನೇಕ ನೃತ್ಯ ನಾಟಕಗಳನ್ನು ನಿರ್ದೇಶಿಸಿದ್ದಾರೆ.
  • ೧೯೯೪ -೯೫ ರ ಸಾಲಿನ, ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿಯ 'ಕರ್ನಾಟಕ ಕಲಾ ತಿಲಕ' ಬಿರುದು ಮತ್ತು ಪ್ರಶಸ್ತಿ ದೊರೆತಿದೆ.

ನಂದಿನಿ ಈಶ್ವರ್ ರವರ ವೆಬ್ ಸೈಟ್ :


.