ಧೌಲಿ ಒಡಿಶಾ ರಾಜ್ಯದ ಭುವನೇಶ್ವರದ ೮ ಕಿ.ಮಿ. ದಕ್ಷಿಣಕ್ಕೆ ದಯಾ ನದಿಯ ದಂಡೆಯ ಮೇಲೆ ಸ್ಥಿತವಾಗಿದೆ. ಇದು ಒಂದು ಗುಡ್ಡವಾಗಿದ್ದು ಪಕ್ಕದಲ್ಲಿ ವಿಶಾಲವಾದ ತೆರೆದ ಸ್ಥಳವಿದೆ. ಇದು ಒಂದು ಶಿಲಾರಾಶಿಯ ಮೇಲೆ ಕೆತ್ತಲಾದ ಸಾಮ್ರಾಟ್ ಅಶೋಕನ ಪ್ರಧಾನವಾದ ಶಾಸನಗಳನ್ನು ಹೊಂದಿದೆ. ಈ ಶಾಸನಗಳು ಗುಡ್ಡದ ಶಿಖರಕ್ಕೆ ಕರೆದೊಯ್ಯುವ ರಸ್ತೆಯ ಪಕ್ಕದಲ್ಲಿ ಇವೆ.

ಧೌಲಿಗಿರಿಯಲ್ಲಿ ಶಾಂತಿ ಸ್ತೂಪ
ಧೌಲಿಯಲ್ಲಿ ಅಶೋಕನ ಶಿಲಾಶಾಸನ. ಮುಂಭಾಗವು ಆನೆಯ ಆಕಾರದಲ್ಲಿದೆ.
ಧೌಲಿಯಲ್ಲಿ ಅಶೋಕನ ರಾಜಶಾಸನ.

ಧೌಲಿ ಗುಡ್ಡವು ಕಳಿಂಗ ಯುದ್ಧವು ನಡೆದ ಪ್ರದೇಶವೆಂದು ಭಾವಿಸಲಾಗಿದೆ.[]

ಇಲ್ಲಿ ಕಂಡುಬಂದಿರುವ ಶಿಲಾಶಾಸನಗಳಲ್ಲಿ ಸಂ. ೧-೯, ೧೪ ಮತ್ತು ಎರಡು ಪ್ರತ್ಯೇಕ ಕಲಿಂಗ ಶಾಸನಗಳು ಸೇರಿವೆ.[] ಕಲಿಂಗದ ಶಾಸನ ೬ರಲ್ಲಿ, ಅವನು "ಇಡೀ ವಿಶ್ವದ ಕಲ್ಯಾಣ"ಕ್ಕಾಗಿ ತನ್ನ ಕಾಳಜಿಯನ್ನು ವ್ಯಕ್ತಪಡಿಸುತ್ತಾನೆ. ಶಾಸನಗಳ ಮೇಲಿರುವ ಬಂಡೆಯಲ್ಲಿ ಕೊರೆದ ಆನೆಯು ಒಡಿಶಾದ ಅತ್ಯಂತ ಮುಂಚಿನ ಬೌದ್ಧ ಶಿಲ್ಪವಾಗಿದೆ. ಈ ಕಲ್ಲಿನ ಆನೆಯು ಕೇವಲ ಪ್ರಾಣಿಯ ಮುಂಭಾಗಗಳನ್ನು ತೋರಿಸುತ್ತದೆ, ಆದರೆ ಇದಕ್ಕೆ ರೂಪ ಮತ್ತು ಚಲನೆಯ ಸೂಕ್ಷ್ಮವಾದ ಭಾವವಿದೆ.[] ಇದು ಮೌರ್ಯರ ಕಲೆಯ ಕೆಲವೇ ಅವಶೇಷಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ.

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Kalinga War and its impact on Ashoks". India Video. Retrieved 2 April 2011.
  2. Lahiri, Nayanjot (2015). Ashoka in Ancient India (in ಇಂಗ್ಲಿಷ್). Harvard University Press. p. 425. ISBN 9780674915251.
  3. Singh, Upinder (2008). A History of Ancient and Early Medieval India: From the Stone Age to the 12th Century (in ಇಂಗ್ಲಿಷ್). Pearson Education India. p. 361. ISBN 9788131711200.

ಹೊರಗಿನ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಧೌಲಿ&oldid=1002260" ಇಂದ ಪಡೆಯಲ್ಪಟ್ಟಿದೆ