ಧರ್ಮ ಹಾಗು ಅವತಾರ

ಬದಲಾಯಿಸಿ

ಧರ್ಮದ ಉಗಮ

ಬದಲಾಯಿಸಿ

ನಿರಂತರ ಪರಿವರ್ಥನಶೀಲವಾದ ಜಗತ್ತಿನ ಹೋರಾಟದಲ್ಲಿ ಮಾನವ, ವಿಕಾಸಪರವಾದ ಮಾರ್ಗವನ್ನು ಸ್ಥುಲ ವಾಗಿ ಪರೀಕ್ಶಿಸಿದರೆ ಸಾಕು, ಸ್ಪಷ್ಟವಾದ ಚಿತ್ರಣವು ಮನದಟ್ಟಾಗುತ್ತದೆ. ದಟ್ಟಾರಣ್ಯಗಳಲ್ಲಿ, ಗುಹೆಗಳಲ್ಲಿ ವಾಸವಾಗಿದ್ದು ಹೀನ ಸಂಸ್ಕಾರವುಳ್ಳ ಮಾನವನೀಗ, ಭವ್ಯವಾದ ಕಟ್ಟದಗಳ ಮನೆಯಲ್ಲಿ ವಾಸವಾಗಿದ್ದು ಕೊಂಡು ಸುಸಂಸ್ಕ್ರುತನಾಗಿದ್ದಾನೆ ಅದರೊಂದಿಗೆ ತನಗೆ ಅವಶ್ಯಕವಾದ ಭಾಷೆಯನ್ನು ಬೆಳೆಸಿ ಕೊಂಡಿದ್ದಾನೆ.ಇವೆಲ್ಲ ಅಂಶಗಳನ್ನು ಚೆನ್ನಾಗಿ ಪರಿಶೀಲಿಸಿದರೆ ಒಂದಂಶ ಸ್ಪಷ್ಟವಾಗುತ್ತದೆ. ವಿಶ್ವದ ಸ್ರಷ್ಟಿಯ ರಂಗದ ಪ್ರಯೋಗ ಶಾಲೆಯಲ್ಲಿ ಮಾನವನೂ ಒಂದು ಪ್ರಾಣಿಯೇ ಸರಿ. ಆದರೆ ಆ ಇತರ ಪ್ರಾಣಿಗಳಿಗಿಂತ ಈತನು ವಿಶಿಷ್ಟತೆ ಅವನ ದೇಹ ರಚನೆಯಲ್ಲಿ ಕಂಡುಬರುವಂತೆ, ಅದರೊಳಗಿರುವ ಆಂತರಿಕ ಶಕ್ತಿಯ ವಿಚಾರಕ್ಕೂ ಆನ್ವಯವಗುತ್ತದೆ.ಇತರ ಪ್ರಾಣಿಗಳಿಗಿಂತ ಬರೆಯದ ರೀತಿಯಲ್ಲಿ ರೂಪುಗೊಳ್ಳ ತೊಡಗಿದವು.ಮಾನವನ ಅನಂತ ಹೋರಾಟಕ್ಕೆ ಕಾರಣವಾದ ಆ ಪ್ರಮುಖ ಶಕ್ತಿಯನ್ನು "ಅಂತರಂಗದ ಅವಲೋಕನ" ಎಂದು ಕರೆಯಬಹುದು. ಇತರ ಪ್ರಾಣಿಗಳಿಗಿರುವಂತೆ ಈತನಿಗೂ ದೈಹಿಕ ತೃಷೆಗಳೆಲ್ಲವೂ ಉಂಟು. ಅವುಗಳನ್ನು ಈಡೇರಿಸಿಕೊಳ್ಳುವ ಮತ್ತು ಜೀವನದಲ್ಲಿ ಅಡವಳಿಸಿಕೊಳ್ಳುವ ರೀತಿಯಲ್ಲಿ ಆತನ ವಿವೇಚನೆ, ವಿವೇಕಗಳು ಕಂಡುಬರುತ್ತವೆ. ಇವೇ ನಿಜವಾಗಿ ಮನುಷ್ಯನನ್ನು ಕೇವಲ ಫ್ರಾಣೆತ್ವದಿಂದ ಮೇಲೆತ್ತಿರುವ ಗುಣಗಳು.

ಧರ್ಮಎಂದರೇನು

ಬದಲಾಯಿಸಿ

ಧರ್ಮವೆಂದರೆ ಮಾತಲ್ಲ, ಸಿದ್ಧಾಂತವಲ್ಲ, ಶಾಸ್ತ್ರವೂ ಅಲ್ಲ . ಅದು ಕಲಿಯುವುದಲ್ಲ, ಪಡೆಯುವದು. ಧರ್ಮ ಶಬ್ದವನ್ನು ಬೇರೆ ಬೇರೆ ಅರ್ಥಗಳಲ್ಲಿಯು ಉಪಯೋಗಿಸಿರುವದು ಕಂಡು ಬರುತ್ತದೆ. ಕರ್ತವ್ಯ, ಆಚರ ಸ್ವಭಾವ ಈ ಎಲ್ಲ ಅತರ್ಥಗಳೂ ಇದಕ್ಕೆ ಬಂದಿವೆ. ಧರ್ಮದ ಬೇರುಗಳು ಮನುಷ್ಯನ ಮೂಲಭೂತವಾದ ಪ್ರವೃತ್ತಿ ಯಲ್ಲಿ ಅಡಗಿದೆ. ಆದಿಮಾನವನ ಧಾರ್ಮಿಕ ಕಲ್ಪನೆಗೆ ಸುತ್ತಲಿನ ಪ್ರಕೃತಿಯಲ್ಲಿ ಒಳ್ಗೊಂಡಿದೆ. ಆತನ ಬುದ್ಧಿ ಬೆಳೆದಂತೆ ಅನುಭವದ ಪರಿಧಿ ವಿಸ್ತಾರ ವಾದಂತೆ ಆತನ ದೈವತ್ವದ ಕಲ್ಪನೆಯೂ ಬೆಳೆಯುತ್ತ ಹೋಯಿತು. ಅಂತರಂಗ ಬಹಿರಂಗಗಳೆರಡರ ಸಮನ್ವಯ ಮತ್ತು ಸಾಮರಸ್ಯಗಳಿಂದ ಇಂದಿನ ಜೀವನ ಸುಗಮವಾಗ ಬೇಕೆಂಬ ಆಶೆಯವು ಮಹಾವಿಜ್ನನಿಯ ಮಾತುಗಳಲ್ಲಿ ಕಂಡುಬರುತ್ತದೆ

ಧರ್ಮದ ಕಲ್ಪನೆ

ಬದಲಾಯಿಸಿ

ಧರ್ಮದ ಕಲ್ಪನೆಯು ಲೋಕದ ಕಲ್ಯಾಣಕ್ಕಾಗಿ, ಸರ್ವಜನರ ಹಿತಕ್ಕಾಗಿ ಆತ್ಮೋನ್ನತಿಗಗಿ ಯವ ಮಾರ್ಗವನ್ನು ಅನುಸರಿಸಬೇಕು ಎಂಬುದನ್ನು ವಿವಿಧ ಮತ ಪ್ರಚಾರಕರು ಬೆರೆ ಬೆರೆ ರೀತಿಗಳಲ್ಲಿ ಹೇಳಿದ್ದಾರೆ ಅವರು ಸೂಚಿಸಿರುವ ವಿಧಾನಗಳು ಭಿನ್ನ ಭಿನ್ನ ವಾಗಿ ಕಂಡು ಬಂದರೂ ಅವರೆಲ್ಲರ ಗುರಿ ಒಂದೇಯಾಗಿದೆ . ಆದರೆ ಧರ್ಮಿಕ ಜೀವನವು ಅವಶ್ಯವೆಂದೆ ತೊರುವುದು.

ಎಲ್ಲ ಧರ್ಮಗಳ ಸಮನ್ವಯ ನಿರೀಕ್ಷ್ನನೆ

ಬದಲಾಯಿಸಿ

ವಿಶ್ವದಲ್ಲಿಯ ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುವಧು ಎಲ್ಲ ಧರ್ಮಗಳ ಹೆಗ್ಗುರಿಯಾಗಿದೆ .ಪ್ರತಿಯೊಂದು ಧರ್ಮವನ್ನು ನಿರೀಕ್ಶಿಸಿದಾಗ ಆಯಾ ಧರ್ಮಗಳ ಪ್ರವಾದಿಗಳು ಪರಮಾತ್ಮನ ಅನುಗ್ರಹವನ್ನು ಪಡೆದುಕೊಂಡೇ ಧರ್ಮದ ಉಪದೆಶವನ್ನು ಮಾಡಬೇಕು ಎಂದು ಸಾರಿದ್ದಾರೆ. ಅಂತೆಯೇ ಕ್ರಿಶ್ಚಿಯನ್ ಧರ್ಮ, ಜ್ಜೈನ ಧರ್ಮ, ಹಿಂದೂ ಧರ್ಮ ಹಾಗೂ ಇಸ್ಲಂ ಧರ್ಮಗಳು ಎಂದು ಮುಖ್ಯವಾಗಿ ವಿಂಗಡಿಸಲಾಗಿದೆ.

ಕ್ರಿಶ್ಚಿಯನ್ ಧರ್ಮ

ಬದಲಾಯಿಸಿ

ಈ ಧರ್ಮವು ವಿಶಾಲವಾದ, ಸಾಮಾನ್ಯ ಜನರನ್ನು ಆ ದೇವನು ವಾಸವಾಗಿರುವ ಸಾಮ್ರಾಜ್ಯ ಕ್ಕೆ ಮುಟ್ಟಿಸುವ ಧರ್ಮವಾಗಿದೆ. 'ಅಜ್ಞಾನ ಅಂಧಕಾರದಲ್ಲಿ ಬಳಲುವ ಜೀವಿಗಳನ್ನು ಉಧ್ದರಿಸಲಿಕ್ಕೆ ದೇವರು ನನ್ನನ್ನು ಕಳಿಸಿದ್ದಾನೆ' ಎಂದು ಯೇಸುಕ್ರಿಸ್ತನು ಹೇಳಿದ್ದಾನೆ. ನಾವೆಲ್ಲರೂ ಆ ದೇವರ ಮಕ್ಕಳು. ದೇವರು ನಮ್ಮನ್ನು ಈ ಲೋಕದಲ್ಲಿ ಹುಟ್ಟೈಸಿದ್ದಾನೆ. ನಮ್ಮೊಂದಿಗೆ ಅರಿವು, ಮರೆವು ಅಥವಾ ಜ್ಞಾನ, ಅಜ್ಞಾನ ಇವೆಲ್ಲವನ್ನೂ ಕೊಟ್ಟು ಕಳಿಸಿದ್ದಾನೆ ನಮ್ಮ ಜೇವನಕ್ಕೆ ಅಂಟಿಕೊಂಡಿರುವ ಪ್ರತಿಯೊಂದು ಕಾರ್ಯವೂ ಆ ದೇವಕಾರ್ಯವೆಂದು ಭವಿಸಿ, ಭಯ ಭಕ್ತಿಯಿಂದ ಆಚರಿಸ ಬೇಕು. ನಮಗರಿಯದೇ ಎಷ್ಟೋ ಕಾರ್ಯಗಳು ನಮ್ಮಿಂದ ನೆರವೇರುತ್ತಿವೆ. ಅವುಗಳಿಂದ ಅನಂತ ತಪ್ಪುಗಳೂ ಆಗುತ್ತವೆ . ಆದ್ದರಿಂದ ಪ್ರತಿಯೊಂದು ಕಾರ್ಯವನ್ನು ಮಾಡುವಾಗ, ಕಾರ್ಯ ಮುಗಿಸುವಾಗ ದೇವರನ್ನು ಪ್ರಾರ್ಥಿಸಬೇಕು. ದೇವರು ಪ್ರೀತಿಯೇ ತಾನಾಗಿದ್ದಾನೆ. ಕಾರಣ ಎಲ್ಲರನ್ನು ಪ್ರೀತಿಯಿಂದ ಕಾಣಬೇಕು. ಸಾಮಾನ್ಯ ಜನತೆಯನ್ನು ಈ ರೀತಿ ಸಂತೈಸಿದ್ದಾನೆ "Blessed are the poor in the spirit, for theirs is the kingdom of heaven" ,"Blessed are they that mourn- for they shall be comforted". ಈ ಧರ್ಮದ ಅನುಯಾಯಿಗಳು ಜನಸಾಮಾನ್ಯರಿಗಾಗಿ ಮಾಡಿರುವ ಮಿಶನರಿ ಕಾರ್ಯಗಳು ವಿಶ್ವಕ್ಕೇವಂದ್ಯವಾಗಿವೆ, ಸ್ತುತಿಗೆ ಅರ್ಹವಾಗಿವೆ. ಇವೆಲ್ಲ ಅಂಶಗಳನ್ನು ಗಮನಿಸಿದಲ್ಲಿ ಕ್ರಿಶ್ಚಿಯನ್ ದರ್ಮದ ಬಗ್ಗೆ ಎಲ್ಲರಿಗೂ ಅದರ ಅಭಿಮಾನ ಮೂಡಿಬರುತ್ತದೆ. ಆದರೆ ಅದರಲ್ಲಿಯ ಕೆಲವು ಪ್ರವಾದಿಗಳು ಅನ್ಯಧರ್ಮಗಳನ್ನು ನಿಂದಿಸಿ ತಮ್ಮದೇ ಶ್ರೇಷ್ಟ್ಟವೆಂದು ಪ್ರಚಾರಮಾಡಿ, ಜನರನ್ನು ಆರ್ಥಿಕ ಬಲಿಗೆ ಆಹ್ವಾನಿಸಿ ಧರ್ಮಾಂತರವನ್ನು ಮಾಡುತ್ತಿರುವದನ್ನು ಆ ಸತ್ಯ ಯೇಸುದೇವ ಕೇಳಿದರೆ ಧುಂಂಖಪಡುವದಿಲ್ಲವೇ?

ಜೈನಧರ್ಮ

ಬದಲಾಯಿಸಿ

ಜೈನಧರ್ಮವು ಪಾಪರಹಿತವಾದ, ಪರಪೀಡೆಯಿಲ್ಲದ, ಪುಣ್ಯಾಚರಣೆಯ ಧರ್ಮವಾಗಿದೆ. ಉಪವಾಸ, ತಪಸ್ಸು, ಧ್ಯಾನ ಮೊದಲಾದವುಗಳಿಗೆ ಈ ಧರ್ಮದಲ್ಲಿ ಅಗ್ರ ಪ್ರಾಶಸ್ತ್ಯ ವಿದೆ. ಯಾವುದರಿಂದ ಸ್ವರ್ಗಮೋಕ್ಷಗಳ ಸಿದ್ದಿಯು ನಿಶ್ಚಯವಾಗಿ ಆಗುವದೋ ಅದೇ ಧರ್ಮವು. ಪಂಡಿತರ ಸೊತ್ತಾಗಿದ್ದ ಧರ್ಮ ಗ್ರಂಥಗಳನ್ನು ಓದಿ ಅರಿಯುವಷ್ಟು ಅವು ಸುಲಭವಾಗಿರಲಿಲ್ಲ. ಅಂಥ ಕಾಲದಲ್ಲಿ ಜ್ಞಾನಪಿಪಾಸೆಯಿಂದ ಬಳಲುವ ಜನಸಮುದಾಯದ ಕೋರಿಕೆಯನ್ನು ಈಡೇರಿಸಲು ಮಹಾವೀರನಿಂದ ಜೈನ ಧರ್ಮವು ಉಗಮವಾಯಿತು. ಜೈನ ಧರ್ಮವು ಬಹಳ ಬಿಗಿಯಾದ ಧರ್ಮ. ಆಚರಣೆಯ ದೃಷ್ಟಿಯಿಂದ ನೋಡಿದರೆ ಅದೇನು ಸರಳವಾದ ಧರ್ಮವಲ್ಲ. ಜೈನ ಧರ್ಮದ ಮುಖ್ಯ ತತ್ವಗಳಾದ ಅಹಿಂಸೆ, ಅನೃತ, ನಿರ್ವಂಚನೆ, ಪರಸ್ತ್ರೀವ್ಯಾಮೋಹ ಇಲ್ಲದಿರುವಿಕೆ, ಮಹತ್ವಾಕಾಂಕ್ಷೆಯಿಲ್ಲದಿರುವಿಕೆ ಎಂಬ ಪಂಚ ಮಹಾವ್ರತಗಳು. ಜೈನ ಧರ್ಮದಲ್ಲಿ ಆಡಂಬರಕ್ಕೆ , ಆಕರ್ಷಣೆಗೆ ಆಸ್ಪದವಿಲ್ಲ. ತಮ್ಮ ಧರ್ಮ ಇನ್ನೂ ವಿಶಾಲಗೊಳ್ಳಬೇಕೆಂಬ ಭಾವನೆಯಿಂದ ಅನ್ಯ ಧರ್ಮವನ್ನು ಹಳಿದು ಡಧರ್ಮಾಂತರ ಮಾಡಿ ಕೊಂಡದ್ದು ಎಲ್ಲಿಯೂ ಕಂಡುಬಂದಂತೆ ತೋರುವದಿಲ್ಲ ಪರರ ತಾವಾಗಿಯೇ ಮೆಚ್ಚಿ ಈ ಧರ್ಮವನ್ನು ಸ್ವೀಕರಿಸಿದ್ದಾರೆ. ಧರ್ಮಿಕ ಜಾಗ್ರತಿಯನ್ನು ಮೇಲಿಂದ ಮೇಲೆ ಮಾಡುತ್ತಿರುವದು ಅವ್ಯಾಹತವಾಗಿ ಸಾಗಿ ಬಂದಿದೆ. ಅಂತೆಯೇ ಈ ಧರ್ಮದ ಅನುಯಾಯಿಗಳು ತಮ್ಮ ಎಲ್ಲ ಪವಿತ್ರಮಯವಾದ ಭಕ್ತಿಯನ್ನು ಕಾಯಕದಲ್ಲಿರಿಸಿ ಸುಖಜೀವಿಗಳಾಗಿ ಬಾಳುತ್ತಿದ್ದಾರೆ.

ಇಸ್ಲಾಂ ಧರ್ಮ

ಬದಲಾಯಿಸಿ

ಇಸ್ಲಾಂ ಧರ್ಮವು ಸೃಷ್ಟಿಯ ಉತ್ಪತ್ತಿಯೊಂದಿಗೆ ಬೆಳೆದು ಬಂದಿದೆ ಎಂಬುವುದು ಅವರ ವಿಚಾರದ ಗುರಿಯಾಗಿ. ಈ ಧರ್ಮದ ಮೂಲ ಪ್ರವಾದಿಗೆ ಪೈಗಂಬರನೆಂದು ಹೆಸರು. ಈ ಧರ್ಮದ ದೃಷ್ಟಿ ಯಲ್ಲಿ ಪೈಗಂಬರ ಎಂಬುವದು ಉನ್ನತವಾದ, ಪವಿತ್ರವಾದ ಪದವಿಯಾಗಿದೆ. ಯಾವ ಮತ ಪ್ರವರ್ತಕನಿಂದ ಇಸ್ಲಾಂ ಧರ್ಮದ ಉನ್ನತಿಯಾಗಿ, ಆಧರ್ಮದ ಅನುಯಾಯಿಗಳಲ್ಲಿ ದೇವರ ಬಗ್ಗೆ ಭಯ ಭಕ್ತಿಯೂ, ಪವಿತ್ರ ಭಾವನೆಗಳೂ ನೆಲೆ ಗೊಂಡು ಜನರು ಸುಖಿಗಳಾಗಿ ಬಾಳುವರೋ ಅಂಥ ಧರ್ಮಾತ್ಮನಿಗೆ, ಮೂಲದೇವನ ಆಜ್ನೆಯಂತೆ ದೇವದೂತನು ಪೈಗಂಬರನೆಓಬ ಪದವಿಯನ್ನು ದಯಪಾಲಿಸುತ್ತಾನೆಂಬ ಕಲ್ಪನೆಯಿದ.ಈ ಇಸ್ಲಾಂ ಧರ್ಮವು ಐದು ಮುಖ್ಯ ತತ್ವಗಳಿಂದ ಯುಕ್ತವಗಿದೆ.ದೇವರು ಒಬ್ಬನೇ ಎಂದು ಮನ್ನಿಸುವದು.ಯಾವಾಗಲೂ ಸತ್ಯವನ್ನೇ ಮಾತನಾಡುವದು,ದುಷ್ಟ ಕಾರ್ಯಗಲನ್ನು ಮಾಡದಿರುವದು, ಮಧ್ಯಪಾನ ಮಾಡದಿರುವದು,ಪರಸ್ತ್ರೀ ವ್ಯಮೋಹವನ್ನು ಬಿಡುವದು.ಈ ಧರ್ಮದ ಅನುಯಾಯಿಗಳಾದವರು ಮೇಲಿನ ತತ್ವಳನ್ನು ಚಾಚೂ ತಪ್ಪದೇ ಆಚರಿಸುವದಲ್ಲದೆ,ತಮ್ಮ ಜೀವೆನದುದ್ದಕ್ಕೂ ಅಳಾವಡಿಸಿಕೊಂಡು ನಡೆಯಬೇಕಾದ ಐದು ಸೂಚನೆಗಳನ್ನು ಪರಿಪಾಲಿಸ ಬೇಕಾಗಿ ಕಟ್ಟಪ್ಪಣೆಯನ್ನು ಮಾಡಿರುವದು ಕಂಡುಬಂದಿದೆ.

ಹಿಂದೂ ಧರ್ಮ

ಬದಲಾಯಿಸಿ

ಹಿಂದೂ ಧರ್ಮವು ಸದ್ಯ ಅಸ್ತಿತ್ವದಲ್ಲಿರುವ ಧರ್ಮಗಳಲ್ಲಿಯೇ ಅತ್ಯಂತ ಪ್ರಾಚೀನವಾದವಾಗಿ.ಹಿಂದೂ ಎನ್ನುವುದು ಇತರ ಧರ್ಮಗಳಾದ ಮುಸ್ಲಿಂ,ಬೌದ್ಧ,ಜೈನ ಇತ್ಯಾದಿಗಳಂತೆ ಯಾವುದೇ ವ್ಯಕ್ತಿಯ ಅಥವಾ ಧಾರ್ಮಿಕ ಸಂಪ್ರದಾಯದವನ್ನು ಆಧರಿಸಿದ ಹೆಸರಾಗಿರದೆ,ಒಂದು ಸಮುದಾಯದ ಹೆಸರಾಗಿದೆ. ಸಿಂದೂ ನದಿ ಬಯಲಿನಲ್ಲಿ ವಾಸಿಸುವ ಜನಸಮುದಾಯಕ್ಕೆ ಸಿಂಧೂ ಎಂದು,ಅದು ಕ್ರಮೇಣ ಭಾಷಾ ಸ್ಥಿತ್ಯಂತರಗಳಿಂದಾಗಿ ಹಿಂದೂವಾಗಿದೆ.(ಈ ರೀತೀ ವಲಸೇ ಬಂದವರು ಆರ್ಯರು).ಆರ್ಯರು ಇಲ್ಲಿಗೇ ಬರುವವೇಳೆಗೆ ಸಿಂದೂಸಂಪ್ರದಾಯದ ಜನ, ನಾಗರಿಕತೆಯಲ್ಲಿ ಎಂತೋ ಅಂತೆಯೇ ಧರ್ಮದಲ್ಲಿಯೂ ಪ್ರಬುದ್ದ ಚೇತನರಾಗಿ ಸುಸಂಸ್ಕೃತ ಜೀವನವನ್ನು ನಡೆಸುತ್ತಿದ್ದರು.ಹಿಂದೂ ಧರ್ಮದಲ್ಲಿ ಧರ್ಮ,ಅರ್ಥ,ಕಾಮ ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳಿದ್ದು,ಪ್ರತಿಯೊಬ್ಬ ಹಿಂದೂ ತನ್ನ ಬದುಕಿನಲ್ಲಿ ಈ ನಾಲ್ಕು ಪುರುಷಾರ್ಥಗಳ ಸಿದ್ಧಿಯನ್ನು ಪಡೆದಾಗ ಮಾತ್ರ ಆತನ ಬದುಕು ಸಾರ್ಥಕ್ಯ ಗಳಿಸಲು ಸಾಧ್ಯ ಎಂದು ಧರ್ಮಗ್ರಂಥಗಳು ಹೇಳುತ್ತವೆ.

ಹಿಂದೂ ಜ್ಞಾನಪರಂಪರೆಯಲ್ಲಿ ಶ್ರುತಿ ಮತ್ತು ಸ್ಮೃತಿಯೆಂಬ ಎರಡು ಅಭ್ಯಾಸಗಳಿದ್ದು,ಶ್ರುತಿಯು ಕೇಳಿಸಿಕೊಳ್ಳುವುದಕ್ಕೆ ಸಂಬಂಧಿಸಿದ್ದಾಗಿದ್ದರೆ, ಸ್ಮೃತಿಯು ಕೇಳಿದ್ದನ್ನು ದಾಖಲಿಸುವುದಾಗಿದೆ. ಹಿಂದೂ ಧರ್ಮದ ಜ್ಞಾನಪರಂಪರೆಯಲ್ಲಿ ವೇದ (ಅಂದರೆ ಜ್ಞಾನ)ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಋಗ್ವೇದ,ಯಜುರ್ವೇದ,ಸಾಮವೇದ ಮತ್ತು ಅಥರ್ವಣವೇದ ಎಂಬ ನಾಲ್ಕು ವೇದಗಳು ಹಿಂದೂಧರ್ಮದ ಐತಿಹ್ಯವನ್ನು ಅರಿಯುವಲ್ಲಿ ಪ್ರಮುಖವಾಗುತ್ತವೆ.

ಹಿಂದೂ ಧರ್ಮವು ಧಾರ್ಮಿಕ,ದಾರ್ಶನಿಕ ಮತ್ತು ತಾತ್ವಿಕ ಸಿದ್ಧಾಂತಗಳಿಂದ ರೂಪುಗೊಂಡಿದ್ದು,ಇದರ ಮೂಲಸಿದ್ಧಾಂತ ಕರ್ಮಸಿದ್ಧಾಂತವಾಗಿದೆ. ಇದಲ್ಲದೆ, ಕರ್ತೃ-ಕಾರಣ ಸಂಬಂಧ, ಮರುಜನ್ಮದ ಕುರಿತು ನಂಬಿಕೆ ಮತ್ತು ಹುಟ್ಟು ಸಾವುಗಳೆಂಬ ಆದಿ ಅಂತ್ಯಗಳನ್ನು ಒಳಗೊಂಡಿರುವ ಜೀವನಚಕ್ರ ಮುಂತಾದವು ಕೂಡ ಇದರಲ್ಲಿ ಸೇರಿದೆ.ಪ್ರತಿಯೊಬ್ಬ ಹಿಂದೂ ತನ್ನ ಜೀವನದಲ್ಲಿ ಬ್ರಹ್ಮಚರ್ಯ,ಗೃಹಸ್ಥ,ವಾನಪ್ರಸ್ಥ ಮತ್ತು ಸನ್ಯಾಸ ಎಂಬ ನಾಲ್ಕು ಅವಸ್ಥೆಗಳನ್ನು ದಾಟುತ್ತಾನೆ ಎನ್ನುವುದು ಹಿಂದೂ ಧರ್ಮದ ಆದರ್ಶ ನಂಬಿಕೆಯಾಗಿದೆ. ಹಿಂದೂ ಧರ್ಮದಲ್ಲಿ ಆಸ್ತಿಕರು,ಆಜ್ಞೇಯತಾವಾದಿಗಳು,ನಾಸ್ತಿಕರು ಎಂದು ಹಲವು ಗುಂಪಿಗೆ ಸೇರಿದವರನ್ನು ಗುರುತಿಸಬಹುದಾದರೂ ಈಗಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಕರನ್ನು ಕಾಣಬಹುದಾಗಿರುವ ಈ ಧರ್ಮದ ಹೆಚ್ಚಿನ ದರ್ಶನಗಳು ನಾಸ್ತಿಕವಾದದಿಂದ ರೂಪುಗೊಂಡಿರುವುದು ಇತರ ಧರ್ಮಗಳಿಗಿಂತ ಈ ಧರ್ಮವನ್ನು ವಿಶಿಷ್ಟವನ್ನಾಗಿಸುತ್ತದೆ.ಬೌದ್ಧ,ಜೈನ ಮತ್ತು ಸಿಖ್ ಧರ್ಮಗಳಿಗೆ ಹಿಂದೂ ಧರ್ಮವೇ ಮೂಲವಾಗಿರುವುದು ಈ ಧರ್ಮದ ಹೆಗ್ಗಳಿಕೆಯಾಗಿದೆ.

ವೇದ ಯುಗ

ಬದಲಾಯಿಸಿ

ಈ ವೇದ ಯುಗದ ಅವಧಿಯಲ್ಲಿ ಮಂತ್ರಗಳು, ಬ್ರಾಹ್ಮಣಗಲಳು, ಆರಣ್ಯಕಗಳು ಮತ್ತು ಉಪನಷತ್ತುಗಳು ಕ್ರಮವಾಗಿ ಬೆಳೆದು ಬಂದವು.ಉಪನಿಷತ್ತಿನ ಋಷಿಗಲು ತಮ್ಮ ಅನ್ವೇಷಣೆಯನ್ನು ಅಂತರಂಗದ ಕಡೆಗೆ ತಿರುಗಿಸಿದರು.ದೇಹದಲ್ಲಿ ಏಲ್ಲಕ್ಕೂ ಮಿಗಿಲಾದ ಶಕ್ತಿಯೊಂದಿದೆ ಏಂಬುದನ್ನು ಅವರು ಕಂಡುಕೊಂಡರು.ಅಂತೆಯೇ ಆ ಶಕ್ತಿಯು ಇಡೀ ಸೃಷ್ಟಿಗೆ ಕಾರಣವಾಗಿ ಅದನ್ನೆಲ್ಲಾ ವ್ಯಾಪಿಸಿರುವ ಅನುಭವವನ್ನು ಉಪನಿಷತ್ತುಗಳು ಕಂಡುಕೊಂಡವು.

ಕಾವ್ಯಗಲ ಕಾಲ

ಬದಲಾಯಿಸಿ

ಭರತಖಂಡವು ಹಿಂದೂ ಧರ್ಮದ ಜಾಗ್ರತಿಯ ಅನೇಕ ಸೆಳೆತಗಳಿಗೆ ಒಳಗಾಗಿತ್ತು.ಇತರ ಜನಾಂಗದವರು ಆರ್ಯರ ವಲಯದೊಳಗೆ ಬರತೊಡಗಿದರು.ಅವರವರ ಪ್ರಭಾವದಿಂದ ಧಾರ್ಮಿಕ ಕಲ್ಪನೆಗಳು ಬದಲಾಗತೊಡಗಿದವು.

ಪುರಾಣಗಳ ಕಾಲ

ಬದಲಾಯಿಸಿ

ಅನಂತಮುಖವಾಗಿ ಧಾರ್ಮಿಕ ರಂಗದಲ್ಲಿ ಜಾಗ್ರತಿಯುಂಟಾಯಿತು.ವರ್ಣಗಳ ತಾರತಮ್ಯವಿಲ್ಲದೆ ಏಲ್ಲರೂ ಓದಬಹುದಾದ ಗ್ರಂಥಗಳಲ್ಲಿ ವೇದಗಳ, ಹಾಗೂ ಉಪನಿಷತ್ತುಗಳ ಸಾರವನ್ನೆಲ್ಲಾ ಅಡಗೊಳಿಸಲು ಪ್ರಯತ್ನಿಸಿದರು.ಅದರ ಫಲವಾಗಿಯೇ ಅನೇಕ ಪುರಾಣಗಳು ಹುಟ್ಟಿದವು.ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಉದಯವಾದವು.ಪುರಾಣ ಅನ್ನುವ ಮಾತು ಹಳೆಯದು ಏಂಬ ಅರ್ಥವನ್ನು ಸೂಚಿಸುತ್ತದೆ. ಕ್ರಿಸ್ತಶಕ ಪ್ರಾರಂಭದ ವೇಳೆಗಾಗಲೇ ಕೆಲವು ಪುರಣಗಳು ರಚಿತವಾಗಿದ್ದವೆನ್ನ ಬಹುದು. ಮುಂದೆ ಪುರಾಣ ಸಾಹಿತ್ಯ ಬಹು ಸಮೃದ್ಧವಾಗಿ ಬೆಳೆಯಿತು.

ಷಡ್ದರ್ಶನಗಳು

ಬದಲಾಯಿಸಿ

ಭಾಷ್ಯಗಳೂ, ಪಂಥ ಗಳೂ ಬೆಳೆಯುತ್ತಲೇ ಬಂದವು. ಅವುಗಳಲ್ಲಿ ಮುಖ್ಯವಾಗಿ ಶೈವ, ಶಾಕ್ತ, ವೈಷ್ಣವ ಇವು ಹಿಂದು ಧರ್ಮದ ಮೂರು ಪ್ರಬಲ ಶಾಖೆಗಳಾಗಿದ್ದು ಕ್ರಮೇಣ ಸಾಕ್ತಪಂಥ ಹಿಂದಾಗಿ ಶೈವ, ವೈಷ್ಣಾ ವಗಳು ಮುಖ್ಯವಾಗಿ ಉಳಿದವು.ಹನ್ನೆರಡನೆಯ ಶತಮಾನದಿಂದೀಚೆಗೆ ಶಿವಶರಣರ ವಚನ ಸಾಹಿತ್ಯದಿಂದ ವೀರಶೈವ ಧರ್ಮವು ಒಂದು ಶಾಖೆಯ ಮತಧರ್ಮವೆಂಬ ಹೆಸರಿನಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿ. ವೇದ, ಉಪನಿಷತ್ತುಗಳ ಸಾರ ಸಂಗ್ರಹವನ್ನು ವಚನ ರೂಪದಲ್ಲಿ ಕ್ರೋಢೀಕರಿಸಿ, ಜೀವ ಭಾವದಿಂದ ಆತ್ಮ ಪರ ಮಾತ್ಮರ ಸಾಮರಸ್ಯದವರೆಗಿನ ತಿರುಳನ್ನು ವಿಶ್ವಕ್ಕೆ ಸಾರಿ ಸಪ್ರಮಾಣಭೂತವಾದ ಆರನೆಯ ವೇದವಾದೆ ಎನ್ನ ಬಹುದು.

ವಿಶ್ವಜನಾಂಗಕ್ಕೆ ಶರಣರ ಧರ್ಮ ಸಂದೇಶ

ಬದಲಾಯಿಸಿ

ಶರಣರಲ್ಲಿ ಕುಲದ ಛಲವಿಲ್ಲ, ಜಾತಿಯ ಚಾಲವನ್ನು,, ಸರ್ವರನ್ನು ಕರುಣಿಸಿ ಪೋರೆಯುವ ಹೃದಯ ವೈಶಾಲ್ಯ ಅವರದು. ಶರಣರು ಧರ್ಮಿಕ ವಿವೇಚನೆಯಲ್ಲಿ ಆಧುನಿಕ ಯುಗ ಮನೋಧರ್ಮಕ್ಕೆ ಅತ್ಯಂತ ಮೆಚ್ಚುಗೆಯಾಗುವ ಅಂಶವೆಂದರೆ ಸ್ವತಂತ್ರ ವಿಚಾರಶೀಲತೆ. ಅಂಧಶ್ರದ್ದೆಗೆ ಅವರೆಂದೂ ಪುರಸ್ಕಾರ ಕೊಟ್ಟವರಲ್ಲ. ನೇರವಾಗಿ ತಮ್ಮ ಅರಿವಿಗೆ ಮತ್ತು ಅನುಭವಕ್ಕೆ ಬಾರದುದನ್ನು ಅವರು ಒಪ್ಪಲಿಲ್ಲ.

ಅವತಾರದ ಕಲ್ಪನೆ

ಬದಲಾಯಿಸಿ

ಈ ಕರ್ಮಭೂಮಿಯಲ್ಲಿ ವಿಷ್ಣು , ರುದ್ರರು ಅವತರಿಸಿ ಧರ್ಮಸಾಮ್ರಾಜ್ಯವನ್ನು ಸ್ಥಾಪಿಸಿ ಮಾನವ ವರ್ಗಕ್ಕೆ ಮಾರ್ಗ ದರ್ಶನ ಮಾಡಿದ್ದಾರೆ. ಇದರಂತೆ ಇನ್ನುಳಿದ ಧರ್ಮ್,ಅಗಳ್ಲ್ಲಿ ಇಷ್ಟು ಮಹತ್ವ ಪೂರ್ಣವಾದ ಅವತಾರದ ಕಲ್ಪನೆಗಳು ಬಂದಿಲ್ಲ . ಅಘಟಿತ ಘಟನಾಶಕ್ತಿಯಿಂದ ಬಂದ ಕಾರಣಪುರುಷರನ್ನು ಅವತಾರಿಕರು ಎಂದು ಮನ್ನಿಸುವದೂ, ಪೂಜಿಸುವದೂ, ಉಪಾಸನೆಯನ್ನು ಮಾಡುವದೂ, ರೂಡಿಯಾಗಿದೆ.

ಅವತಾರದ ಸಾರಸಂಗ್ರಹ

ಬದಲಾಯಿಸಿ

ಕಾಲ್ಪನಿಕ ಸಾಕಾರ ದೇವರನ್ನು ಮೀರುವ ದೇವರಂತಿರುವ ಸಚೇತನರಾದ ಕೆಲವರು ಪ್ರಪಂಚಕ್ಕೆ ಬರುವರು.ಇಂಥ ವ್ಯಕ್ತಿಗಳು ನಾವು ಕಲ್ಪಿಸಿಕೊಳ್ಳುವ ಸಾಕಾರ ದೇವರ ರೂಪಕ್ಕಿಂತ ಶ್ರೇಷ್ಠರು.ಆದ್ದರಿಂದಲೇ ಮಹಾವೀರ, ಬುದ್ದ, ಬಸವಣ್ಣ, ಗುರುನಾನಕ, ಪೈಗಂಬರ, ಏಸುದೇವ, ರಾಮಕೃಷ್ಣ, ಪರಮಹಂಸ, ಗಾಂಧಿ ಮುಂತಾದವರನ್ನು ಅವತಾರವೆಂದು ಮಾನವಕೋಟಿಯು ಆದರಿಸುತ್ತರೆ.ಬಾಹ್ಯದಲ್ಲಿ ಅಸಾಧಾರಣವಾಗಿ ಏಲ್ಲಿಯಾದರೂ ಆದರಿಸುತ್ತದೆ.ಬಾಹ್ಯದಲ್ಲಿ ಅಸಧಾರನಣವಾಗಿ ಏಲ್ಲಿಯಾದರೂ ಆಧ್ಯಾತ್ಮಿಕ ಶಕ್ತಿ ಒಬ್ಬರಲ್ಲಿ ವ್ಯಕ್ತವಾದರೆ ಅದನ್ನು ಅವತಾರವೆಂದು ಆಯಾ ಧರ್ಮದ ಅನುಯಾಯಿಗಳು ಪೂಜೆಸಸುತ್ತ ಬಂದಿರುತ್ತಾರೆ. ಹಿಂದು ಧರ್ಮದಲ್ಲಿ ಇನ್ನೂ ಒಂದು ದೊಡ್ಡ ಕಲ್ಪನೆ ಎಂದರೆ ತಮ್ಮ ಸ್ವಯಂ ಕಠೋರವಾದ ಸಾಧನೆಯಿಂದ ಮಾನವನ ಉಚ್ಚತಮ ಗುರಿಯಾದ ಆತ್ಮ ಸಾಕ್ಷಾತ್ಕಾರದ ಅನುಭೂತಿಯನ್ನು ಪಡೆದು ತನ್ಮೂಲಕ ದುಃಖಿಗಳೂ, ದೀನರೂ, ದರಿದ್ರರೂ, ಪಾಪಿಗಳೂ ಹಾಗು ಅಜ್ಕ್ನಾನಿಗಳಾದ ಜೀವಿಗಳ ಹಿತಕ್ಕಾಗಿ, ದಯ ಹಾಗು ಪ್ರೀತಿಯಿಂದ ಜನಾಂಗದ ಹಿತಕ್ಕಾಗಿ, ಅವಿಶ್ರಾಂತವಾಗಿ ಸೇವಿಸಿದ ಈ ಮಹಾಮಹೆಮನನ್ನು ಅವನಿಂದ ಉಪಕೃತರಾದ ಮಾನವಕೋಟೆಯು ,ಈತನಿಗೆ ದೇವಮಾನವನೆಂದು, ಅವತಾರಿಕನೆಂದು, ಪ್ರತ್ಯಕ್ಷ ಕರ್ಮ ಭೂಮಿಗಿಳಿದ ದೈವೀಶಕ್ತಿ ಎಂದು ಪೂಜಿಸಿದರು. ನಮ್ಮ ಪೀಳಿಗೆಯು ನಿಸ್ವಾರ್ಥವಾಗಿ ಸೇವೆ ಮಾಡಲು ಬರುವಂತಹ ಈ ಅವತಾರಗಳಿಗೆ ಅನೋತ ಕೃತಜ್ಕ್ನತೆಗಳನ್ನು ಅರ್ಪಿಸಬೇಕು. ಈ ಧರ್ಮ ಹಾಗೂ ಅವತಾರ ಕಲ್ಪನೆಗಳ ಬಗ್ಗೆ ನಂಬಿಗೆ, ವಿಶ್ವಾಸ, ನಿಷ್ಠೆ ಎಂಬುವು ಮಾನವರಿಗೆ ಬೇಕು. ಎವುಗಳನ್ನ ವಲಂಬಿಸಿಯೇ ಲೋಕದ ಎಲ್ಲ ಕಾರ್ಯಗಳು ನಡೆಯೂತ್ತಿವೆ. ಈ ಕ್ರಮವನ್ನು ವಿಶ್ವದ ಮಾನವಕೋಟೆಯು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಬಾಳಬೇಕು ಇದರಿಂದ ಮಾನವನ ಏಳಿಗೆ ಪ್ರಪಂಚ ಉಧ್ದಾರವಾಗುವುದು

[]

ಉಲ್ಲೇಖನ

ಬದಲಾಯಿಸಿ
  1. ಧರ್ಮ ಹಾಗು ಅವತಾರ - ಆಯ್. ಆಯ್. ಕಲಕಣ್ಣನವರ್