ಧರ್ಮ ಜಾಗರಣ್ ಸಮಿತಿ (ಡಿಜೆಎಸ್) ಎಂಬುದು "ಧರಮ್ ಜಾಗರಣ್ ಸಮನ್ವಯ ಸಮಿತಿ" ಎಂಬ ಸಮನ್ವಯ ಸಮಿತಿಯೊಂದಿಗೆ ಭಾರತೀಯ ಹಿಂದುಗಳಾಗಿದ್ದ ಬೌದ್ದ, ಮುಸ್ಲಿಮ ಮತ್ತು ಕ್ರಿಶ್ಚಿಯನ್ನರನ್ನು ಮರಳಿ ಮಾತೃ ಧರ್ಮಕ್ಕೆ ಪರಿವರ್ತಿಸಲು, ಮತ್ತು ಧರ್ಮಾಂತರವನ್ನು ತಪ್ಪಿಸಲು ಸಮನ್ವಯದಿಂದ ಕೆಲಸ ಮಾಡುವ ಭಾರತೀಯ ಸಂಸ್ಥೆಯಾಗಿದೆ[] []. ಇದು ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಹಿಂದೂ ಧರ್ಮದ ಮೌಲ್ಯವನ್ನು ಎತ್ತಿಹಿಡಿಯಲು, ಧರ್ಮದ ಬಗ್ಗೆ ಶಿಕ್ಷಣ ನೀಡಲು, ಜನಸಾಮಾನ್ಯರಲ್ಲಿ ಧರ್ಮವನ್ನು ಜಾಗೃತಗೊಳಿಸಲು, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಹಿಂದೂಗಳನ್ನು ಒಗ್ಗೂಡಿಸಲು ಬದ್ಧವಾಗಿದೆ.  ಹಿಂದೂ ಧರ್ಮ ಮತ್ತು ಅದರ ಆಚರಣೆಗಳು, ಹಿಂದೂ ದೇವರು ಮತ್ತು ದೇವತೆಗಳ ಅವಹೇಳನ, ಮತ್ತು ಹಿಂದೂತ್ವದ ಬಗ್ಗೆ ತಪ್ಪು ಮಾಹಿತಿ ಕೊಡುವವರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಹಾಗೆಯೇ ರಾಷ್ಟ್ರೀಯ ಚಿಹ್ನೆಗಳು ಮತ್ತು ಆಸ್ತಿಗಳ ಘನತೆಯನ್ನು ರಕ್ಷಿಸಲು ಶ್ರಮಿಸುತ್ತಿದೆ[]

ಸನಾತನ ಧರ್ಮದ (ಹಿಂದೂ ಧರ್ಮ) ಶಾಶ್ವತ ಮೌಲ್ಯಗಳನ್ನು ಅಭ್ಯಾಸ ಮಾಡಲು, ಸಂರಕ್ಷಿಸಲು ಮತ್ತು ಪ್ರಚಾರ ಮಾಡಲು ಧರ್ಮದ ತತ್ವಗಳ ಮೇಲೆ ಸ್ಥಾಪಿಸಲಾದ ಹಿಂದೂ ರಾಷ್ಟ್ರವು ಸಂತೋಷದ, ಆರೋಗ್ಯಕರ, ಸಮೃದ್ಧ ಮತ್ತು ಸುರಕ್ಷಿತ ಜಗತ್ತಿಗೆ ಕಾರಣವಾಗುತ್ತದೆ ಎಂಬ ಗುರಿಯನ್ನು ಹೊಂದಿದೆ.

ಮೌಲ್ಯಗಳು

ಬದಲಾಯಿಸಿ

ಆಧ್ಯಾತ್ಮಿಕತೆಯು ಯಾವುದೇ ಚಟುವಟಿಕೆಯ ಮೂಲವಾಗಿದೆ. ದೈವಿಕ ಅನುಗ್ರಹದಿಂದ ಬೆಂಬಲಿತವಾದ ಪ್ರತಿಯೊಂದು ಯಶಸ್ವಿಯಾಗುತ್ತದೆ. ಆದ್ದರಿಂದ ಸಂಸ್ಥೆಯು ನಿಸ್ವಾರ್ಥ ಆಧ್ಯಾತ್ಮಿಕ ಅಭ್ಯಾಸವನ್ನು ಒಂದು ರೂಪವಾಗಿ ಧರ್ಮವಾಗಿ ಸೇವಿಸುಬೇಕು ಎಂದು ದೃಢವಾಗಿ ನಂಬುತ್ತದೆ.

ಧರ್ಮ ಜಾಗರಣೆ ಸಮಿತಿಯನ್ನು ಸಂಘ ಪರಿವಾರದ ಸದಸ್ಯ ಎಂದು ಪರಿಗಣಿಸಲಾಗಿದೆ, ಇದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಅರ್ ಎಸ್ ಎಸ್ ) ನೇತೃತ್ವದ ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆಯ ಪರಿವಾರ ಸಂಘಟನೆಯಾಗಿದೆ [] []. ದಲಿತ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುವ ಕ್ರಿಶ್ಚಿಯನ್ ಮಿಷನರಿಗಳ ವಿರುದ್ದ ಹೊರಾಡುತ್ತಾರೆ. ಮತಾಂತರಾನ್ನು ವಿವಿಧ ಪ್ರಚೋದನೆಗಳನ್ನು ನೀಡುವ ಮೂಲಕ ಮಾಡಲಾಗುತ್ತದೆ ಎಂದು ಆರೋಪಿಸುತ್ತಾರೆ [] [] [] []

ಉಲ್ಲೇಖಗಳು

ಬದಲಾಯಿಸಿ

 

ಟೆಂಪ್ಲೇಟು:Hindu Nationalism

  1. Nag, Udayan (12 December 2014). "RSS Body Dharam Jagran Samiti Sets Fixed Rates for Converting Muslims, Christians into Hindus". www.ibtimes.co.in.
  2. Munjal, Dhruv (4 April 2015). "Life after ghar wapsi in Agra". Business Standard India.
  3. https://www.hindujagruti.org/about-us
  4. "Dharm Jagran Samiti sparks fresh controversy, vows to create Hindu Rashtra by 2021". oneindia.com. 19 December 2014.
  5. Staff Reporter (21 December 2014). "DJS chief sparks fresh controversy". The Hindu – via www.thehindu.com.
  6. "To give a boost to 'ghar wapsi', RSS appoints Dharma Jagran in-charge". 3 April 2015.
  7. "New chief of RSS arm plays down 'ghar wapsi' drive". Hindustan Times. 4 March 2015.
  8. verma, amita (18 December 2014). "Dharm Jagran Samiti calls off mass conversion programme". Deccan Chronicle.
  9. "RSS asks Dharm Jagran to call off conversion drive in Aligarh on December 25: Sources". News18. 16 December 2014.