ಧಮಾಪುರ್ ಅಣೆಕಟ್ಟು

ಧಮಾಪುರ್ ಅಣೆಕಟ್ಟು ಭಾರತದ ಮಹಾರಾಷ್ಟ್ರ ರಾಜ್ಯದ ಸಿಂಧುದುರ್ಗ್ ಜಿಲ್ಲೆಯಲ್ಲಿದೆ. ಇದನ್ನು 1530 ರಲ್ಲಿ ಗ್ರಾಮಸ್ಥರು ಮತ್ತು ವಿಜಯನಗರ ರಾಜವಂಶದ ಮಾಂಡಲೀಕನಾಗಿದ್ದ ನಾಗೇಶ್ ದೇಸಾಯಿ ನಿರ್ಮಿಸಿದರು. ಇದು ಮಣ್ಣಿನ ಅಣೆಕಟ್ಟು. ಅಣೆಕಟ್ಟಿನ ಹಿಂದೆ ಇರುವ ಸರೋವರವು ಈ ಜಿಲ್ಲೆಯ ಅತಿ ದೊಡ್ಡ ಸರೋವರಗಳಲ್ಲಿ ಒಂದು.[] ಈ ಸರೋವರವು ವರ್ಷಪೂರ್ತಿ ನೀರನ್ನು ಪಡೆಯುತ್ತದೆ ಮತ್ತು ವರ್ಷವಿಡೀ ತುಂಬಿರುತ್ತದೆ.

ಧಮಾಪುರ್ ಸರೋವರ
ಅಧಿಕೃತ ಹೆಸರುಧಮಾಪುರ್ ಸರೋವರ
ಸ್ಥಳಮಾಲ್ವನ್, ಸಿಂಧುದುರ್ಗ್, ಮಹಾರಾಷ್ಟ್ರ
ಅಕ್ಷಾಂಶ ರೇಖಾಂಶ16°02′03″N 73°35′36″E / 16.0340796°N 73.5932042°E / 16.0340796; 73.5932042
ಕಟ್ಟುವಿಕೆ ಪ್ರಾರಂಭ1530
ಉದ್ಘಾಟನಾ ದಿನಾಂಕ1600[]
ಯಜಮಾನ್ಯಮಹಾರಾಷ್ಟ್ರ ಸರ್ಕಾರ, ಭಾರತ
Dam and spillways
Type of damಮಣ್ಣಿನ ಅಣೆಕಟ್ಟು
ಇಂಪೌಂಡ್ಸ್ಸ್ಥಳೀಯ ನದಿ
ಎತ್ತರ11 m (36 ft)
ಉದ್ದ271 m (889 ft)
Dam volume2,687 km3 (645 cu mi)
Reservoir
ಒಟ್ಟು ಸಾಮರ್ಥ್ಯ2,441 km3 (586 cu mi)
Surface area1,150 km2 (440 sq mi)

ನಿರ್ದಿಷ್ಟ ವಿವರಣೆ

ಬದಲಾಯಿಸಿ

ಒಂದು ಕಣಿವೆಯನ್ನು ಮಣ್ಣಿನ ದಂಡೆಯಿಂದ ಒಡ್ಡು ಕಟ್ಟುವ ಮೂಲಕ ಇದನ್ನು ರಚಿಸಲಾಗಿದೆ. ಅಣೆಕಟ್ಟು ಗಣನೀಯವಾಗಿ ಸೋರುತ್ತದಾದರೂ, ಇದು ವರ್ಷಪೂರ್ತಿ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಹೂಳು ತುಂಬಿಕೊಳ್ಳುವ ಯಾವುದೇ ಪ್ರವೃತ್ತಿಯನ್ನು ತೋರಿಸುವುದಿಲ್ಲ. ಇದು ಸುಮಾರು 500 ಎಕರೆಗಳಿಗೆ ನೀರುಣಿಸುತ್ತದೆ, ಅವುಗಳಲ್ಲಿ ನಲವತ್ತು ತೋಟ ಮತ್ತು ಉಳಿದ ಭತ್ತದ ಭೂಮಿ.

ಜೀವವೈವಿಧ್ಯ

ಬದಲಾಯಿಸಿ

ಧಮಾಪುರ್ ಸರೋವರವು ಪ್ಲವಕಗಳ ಸಮೃದ್ಧ ಜೀವವೈವಿಧ್ಯವನ್ನು ಹೊಂದಿದೆ. ಪ್ರಾಣಿಪ್ಲವಕ ಮತ್ತು ಸಸ್ಯಪ್ಲವಕ ಎರಡೂ ಇವೆ. ಇವು ಚಳಿಗಾಲದಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತವೆ. ಪ್ರಾಣಿಪ್ಲವಕಗಳಿಗೆ ಹೋಲಿಸಿದರೆ, ಧಮಾಪುರ್ ಸರೋವರದಲ್ಲಿ ಸಸ್ಯಪ್ಲವಕಗಳು ಗಮನಾರ್ಹವಾಗಿ ಸಮೃದ್ಧವಾಗಿವೆ.

ಉದ್ದೇಶ

ಬದಲಾಯಿಸಿ
  • ನೀರಾವರಿ
  • ಕುಡಿಯುವುದು
  • ಮೀನುಗಾರಿಕೆ

ಉಲ್ಲೇಖಗಳು

ಬದಲಾಯಿಸಿ
  1. "Dhamapur D03651". Archived from the original on 13 April 2013. Retrieved 4 March 2013.
  2. https://timesofindia.indiatimes.com/city/mumbai/dhamapur-lake-in-maharashtras-sindhudurg-district-to-receive-whis-award/articleshow/79508108.cms