ದ ಕ್ಯಾಶ್ ಫಾರ್ಮಸಿ, ಬೆಂಗಳೂರು

’ದ ಕ್ಯಾಶ್ ಫಾರ್ಮಸಿ,’(The Cash Pharmacy) ಬೆಂಗಳೂರಿನ 'ಕಂಟೋನ್ಮೆಂಟ್' ವಲಯದಲ್ಲಿ 'ಸೇಂಟ್ ಮಾರ್ಕ್ಸ್ ರಸ್ತೆ'ಯಲ್ಲಿ ಸುಮಾರು ೯೪ ವರ್ಷಗಳಿಂದಲೂ ಅಸ್ತಿತ್ವದಲ್ಲಿರುವ ಈ ಔಷಧಿಗಳನ್ನು ತಯಾರಿಸುವ ಅಂಗಡಿ.

ಬೆಂಗಳೂರಿನ 'ಗವರ್ನಮೆಂಟ್ ಬಸ್' ನಲ್ಲಿ ಪ್ರಯಾಣಿಸುವಾಗ 'ಕ್ಯಾಶ್ ಫಾರ್ಮಸಿ' ಕಣ್ಣಿಗೆ ಬೀಳುತ್ತದೆ ಬದಲಾಯಿಸಿ

ಹಲವಾರು ದಶಕಗಳಿಂದ ಮೌನವಾಗಿ, ತನ್ನ ಅಕ್ಕಪಕ್ಕಗಳಲ್ಲಿನ ಆಗುಹೋಗುಗಳನ್ನು ವೀಕ್ಷಿಸುತ್ತಾ ಮೂಕಸಾಕ್ಷಿಯಾಗಿ ನಿಂತಿದೆ. 'ಕ್ಯಾಶ್ ಫಾರ್ಮಸಿ' ೨,೫೦೦ ಚ.ಆಡಿಗಳ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ 'ಔಷಧಗಳನ್ನು ತಯಾರಿಸುವ ಹಾಗೂ ಮಾರುವ ಅಂಗಡಿ,'ಈಗ ನಗರದ ಪ್ರಮುಖ ಚಟುವಟಿಕೆಗಳ ಕೇಂದ್ರದ ಮಧ್ಯಭಾಗದಲ್ಲಿದೆ.

ಬ್ರಿಟಿಷ್ ಸದ್ಗೃಹಸ್ಥ ಕ್ಯಾಶ್'ಯೆಂಬುವರಿಂದ 'ಕ್ಯಾಶ್ ಫಾರ್ಮಸಿ' ಶುರುವಾಯಿತು ಬದಲಾಯಿಸಿ

ಎಲ್ಲಾ ವಿಧದ ಕಾಯಿಲೆಗಳಿಗೆ ಬೇಕಾದ ಔಷಧಿಗಳು ಇಲ್ಲಿ ದೊರೆಯುತ್ತವೆ. ನಗರದ ಇತರೆ ಜಾಗಗಳಿಂದ ಇಲ್ಲಿಗೆ ಬರುತ್ತಾರೆ. ಬೇರೆ ಎಲ್ಲೂ ದೊರೆಯದ. 'ಬ್ರಿಟಿಷ್ ಸದ್ಗೃಹಸ್ಥ ಕ್ಯಾಶ್,' ಎಂಬಾತನಿಂದ, ೧೯೦೮ ರಲ್ಲಿ ಸ್ಥಾಪಿತವಾಯಿತು. ಆಮೇಲೆ ಅದರ ನಿರ್ವಹಣೆ ಡಾ ಎಮ್.ಎನ್ ಮಹಾದೇವನ್ ನಡೆಸಿಕೊಂಡುಹೋಗುತ್ತಿದ್ದಾರೆ. ೧೯೫೫ ರಲ್ಲಿ ಜಿ. ರಾಜಗೋಪಾಲ್ ಎಂಬವರು ಖರೀದಿಸಿದರು. ಆಗ ಬೆಂಗಳೂರಿನಲ್ಲಿ ಕೆಲವೇ ಒಳ್ಳೆಯ ಔಷಧಿ ಅಂಗಡಿಗಳಿದ್ದವು. ಅವರ ಮನೆಯ ವ್ಯಾಪಾರ-ಪ್ರಕ್ರಿಯೆ ಅಲ್ಲಿ ಸೇರಿಸಲಾಯಿತು. ಈಗ ಜಿ. ರಾಜೆಂದ್ರ ಪ್ರಸಾದ್ ಅದನ್ನು ಇನ್ನೂ ಉತ್ತಮಪಡಿಸಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

'ಕ್ಯಾಶ್ ಫಾರ್ಮಸಿ'ಯ 'ಬಳಕೆದಾರರ ಸೇವೆಗಳು ಬದಲಾಯಿಸಿ

ಅಂಟುಜಾಡ್ಯಗಳಿಗೆ ಹಚ್ಚಲು ಬೇಕಾದ ಹಲವು ಬಗೆಯ ಮುಲಾಮುಗಳನ್ನು, ಹಾಗೂ ಬೇರೆಬೇರೆ ಪ್ರಕಾರದ ಬ್ಯೂಟಿ-ಲೋಶನ್, ಮತ್ತು ಇನ್ನಿತರ ಉಪಯೋಗಕ್ಕೆ ಬೇಕಾಗುವ ಲೋಶನ್ ಗಳ ತಯಾರಿಕೆಯ ಕಾರ್ಯವಿಧಿಗಳು ಇಲ್ಲಿ ಅತ್ಯುತ್ತಮವಾಗಿವೆಯೆಂದು ಡಾಕ್ಟರ್ ಗಳು ಮತ್ತು ಔಶಧಿವಲಯದಲ್ಲಿ ಕೆಲಸಮಾಡುವವರ ಅಭಿಪ್ರಾಯವಾಗಿದೆ.

ಚರ್ಮ ರೋಗಕ್ಕೆ ಬಳಸುವ ಮುಲಾಮುಗಳು ಬದಲಾಯಿಸಿ

ಡಾ.ಪ್ರಸಾದ್ ರವರ ಅಭಿಪ್ರಾಯದಂತೆ, ಚರ್ಮದ ರೋಗಗಳ ಉಪಚಾರದಲ್ಲಿ ಇಲ್ಲಿನ ಹೆಸರಾಂತ ಮುಲಾಮು ಮತ್ತು ಲೋಶನ್ ಗಳನ್ನು ಬಳಸಲಾಗುತ್ತದೆ. ೬೫ ವರ್ಷವಯಸ್ಸಿನ ಡಾ. ರಾಜೇಂದ್ರ ಪ್ರಸಾದ್ ಪೆಟ್ರೋಲಿಯಮ್ ಜೆಲ್ಲಿಯನ್ನು ಬಳಸಿಕೊಂಡು ತಯಾರಿಸಲಾಗುತ್ತಿರುವ ಮುಲಾಮುಗಳನ್ನು ತಯಾರಿಸುವ ಪದ್ಧತಿ ಬೆಂಗಳೂರು ಹಾಗೂ ಅದರ ಅಕ್ಕಪಕ್ಕದ ನಗರಗಳಿಂದ ಬಂದ ಗ್ರಾಹಕರ ಅಪೇಕ್ಶೆಯ ಪ್ರಕಾರವಿರುವುದರಿಂದ ಜನಪ್ರಿಯತೆ ಹೆಚ್ಚಾಗಿದೆ. ಇಲ್ಲಿಗೆ ಬರುವ ದೇಶದ ಗ್ರಾಹಕರ ಪೈಕಿ,ಸುಮಾರು ೧೦-೧೫ % ಜನ, ಇತರ ಪ್ರಾಂತಗಳಿಂದ ಬರುವವರ ಬೇಡಿಕೆಗಳೇ ಹೆಚ್ಚು.ಹೆಚ್ಚಿನ ಪ್ರಖರತೆ, ಮತ್ತು ತೀವ್ರತೆಗಳನ್ನು ಬಯಸಿದರೆ, ಅವರಿಗೆ ತಕ್ಕಹಾಗೆ ಮಾಡಿಕೊಡುವ ನಿಟ್ಟಿನಲ್ಲಿ ಹೆಸರಾಗಿದ್ದಾರೆ. ಬೆಳೆಯುತ್ತಿರುವ ಬೆಂಗಳೂರು ನಗರದ ೩,೦೦೦ ಕ್ಕೂ ಹೆಚ್ಚಿನ ರಿಟೇಲ್ ಔಷಧಿ-ಅಂಗಡಿಗಳ ಗುಂಪಿದ್ದರೂ ಕ್ಯಾಶ್ ಫಾರ್ಮಸಿಯ ಪ್ರತಿಷ್ಟೆ ಹಾಗೂ ಮಾರಾಟದಲ್ಲಿ ಕೊರತೆಕಾಣಿಸಿಲ್ಲ. ಸುಪ್ರಸಿದ್ಧ ಕಂಪೆನಿಗಳಿಗೆ ಮಾಡಿಕೊಡುವ ಕೆಲಸ, ಅತ್ಯಂತ ಭರವಸೆಯದ್ದಾಗಿರುವುದು ಅತಿಮುಖ್ಯ.

'ಲೈಫ್ ಸೇವಿಂಗ್ ಡ್ರಗ್ಸ್' ತಯಾರಿಕೆಯಲ್ಲಿ ಅತಿ-ಪ್ರಖ್ಯಾತರು ಬದಲಾಯಿಸಿ

ಜೀವ ಉಳಿಸುವ ಡ್ರಗ್ ಗಳ ತಯಾರಿಕೆಯನ್ನು ಕ್ಯಾಶ್ ಫಾರ್ಮಸಿ ಅನೇಕ ವರ್ಷಗಳಿಂದ ಮಾಡಿಕೊಂದು ಬಂದಿದೆ. ಅವುಗಳ ಸರಬರಾಜು, ತುಂಬಾ ಚೆನ್ನಾಗಿ ನಡೆದಿದೆ. ಹಣಕ್ಕಾಗಿ ಕಳಪೆ ಪದಾರ್ಥಗಳನ್ನು ಬಳಸಿ ಗೌರವವನ್ನು ಹಾಳುಮಾಡಿಕೊಳ್ಳುವುದನ್ನು ಕ್ಯಾಶ್ ಫಾರ್ಮಸಿಯ ಮಾಲಿಕರು ಒಪ್ಪುವುದಿಲ್ಲ. ಹಾಗಾಗಿ 'ಕ್ಯಾಷ್ ಫಾರ್ಮಸಿ' ಎಂದರೆ, ಒಳ್ಳೆಯ ಗುಣಮಟ್ಟದ ಮುಲಾಮು, ಲೋಶನ್ ಹಾಗೂ ಔಶಧಿ ಸಾಮಗ್ರಿಗಳೆಂದು ದಕ್ಷಿಣ ಭಾರತದಲ್ಲಿ ಹೆಸರಾಗಿದೆ. ಪೂರ್ತಿ ಭಾರತದಲ್ಲೇ ಹೆಸರುಮಾಡಿದೆ. ಪ್ರತಿದಿನವೂ ನಗರದ ೫೦೦ ಕ್ಕೂ ಹೆಚ್ಚು ರೀಟೇಲ್ ಗ್ರಾಹಕರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಸರಾಸರಿ, ೧೦ ಜನ ಫಾರ್ಮಸಿ-ತಜ್ಞರು, 'ಕ್ಯಾಶ್ ಫಾರ್ಮಸಿ'ಯ ಔಷಧಿ ಸಾಮಗ್ರಿಗಳನ್ನು ಮಾರುವ-ಸ್ಥಳದಲ್ಲಿ ಹಾಜರಿದ್ದು, ಸೇವೆಸಲ್ಲಿಸುತ್ತಿದ್ದಾರೆ.