ದ್ವಾರಕಾ ಪೀಠ
ದ್ವಾರಕಾ ಪೀಠ, ಆಥವಾ ದ್ವಾರಕಾ ಮಠ/ಶಾರದಾ ಮಠ/ಪೀಠ, ಪಶ್ಚಿಮಾಮ್ನಾಯ ಪೀಠವೆಂದು ಕರೆಯುತ್ತಾರೆ. ಆದಿ ಶಂಕರಭಗವತ್ಪಾದರು [೧] ಸ್ಥಾಪಿಸಿದ ನಾಲ್ಕು ಅತಿ ಪುರಾತನ ಮಠಗಳಲ್ಲೊಂದು. ಈ ಮಠವು ಗುಜರಾತ್ ರಾಜ್ಯದ ಕಡಲ ಸಮೀಪದಲ್ಲಿರುವ ದ್ವಾರಕಾನಗರದಲ್ಲಿದೆ. ಸಾಮವೇದಕ್ಕೆ ಪ್ರಾಧಾನ್ಯತೆ ಕೊಡುವ ಬಗ್ಗೆ ಶಂಕರರ ಮಠವಾಗಿತ್ತು. ಇದನ್ನು ಕಾಳಿಕಾಮಠವೆಂದೂ ಕರೆಯುತ್ತಾರೆ.
ಐತಿಹ್ಯ
ಬದಲಾಯಿಸಿಶ್ರೀ ಸಚ್ಚಿದಾನಂದ ತೀರ್ಥರು ಪುರಿಮಠದ ಹಾಗು ಜ್ಯೋತಿರ್ ಸಂಸ್ಥಾನಗಳಿಗೆ ಮಧ್ಯವರ್ತಿಯಾಗಿ ಸಹಾಯಮಾಡಿದರು. ಅವರು ೧೯೮೨ ರಲ್ಲಿ ಕೈವಲ್ಯವಾಸಿಗಳಾದರು. ಸ್ವಾಮಿ ಸ್ವರೂಪಾನಂದಸರಸ್ವತಿಯವರು [೨] ಉತ್ತರದ ಜ್ಯೋತಿರ್ಮಠದ ಮಠಾಧಿಪತಿಗಳ ಸ್ಥಾನಕ್ಕೆ ಒಬ್ಬ ಅಭ್ಯರ್ಥಿಯಾಗಿದ್ದರು. ೧೯೨೧ ರವರೆಗೆ ಶ್ರೀ ತ್ರಿವಿಕ್ರಮತೀರ್ಥರು ಮಠದ ಅಧಿಪತಿಗಳಾಗಿದ್ದರು. ನಂತರ ಭಾರತೀ ಕೃಷ್ಣತೀರ್ಥರು ಬಂದರು. ೧೯೨೫ ರಲ್ಲಿ ಪುರಿಮಠಕ್ಕೆ ಅವರನ್ನು ಆಹ್ವಾನಿಸಲಾಯಿತು. ಅವರ ಬಳಿಕ ತೆರವಾದ ಸ್ಥಾನವನ್ನು ಸ್ವಲ್ಪ ಸಮಯ ತುಂಬಲಾಗಲಿಲ್ಲ. ಸ್ವರೂಪಾನಂದ ಹಾಗೂ ಯೋಗೇಶ್ವರಾನಂದ ತೀರ್ಥರು ಕ್ರಮವಾಗಿ ಅಧಿಕಾರಕ್ಕೆ ಬಂದರು. ೧೯೪೫ ರಲ್ಲಿ ಶ್ರೀ ಅಭಿನವ ಸಚ್ಚಿದಾನಂದ ತೀರ್ಥರನ್ನು ಮಠಾಧಿಪತಿಗಳ ಹುದ್ದೆಗೆ ತರಲಾಯಿತು. ಮೂಲತಃ ಅವರು ಮೊದಲು ಕರ್ನಾಟಕದ ಮುಳಬಾಗಿಲು ಮಠದ ಅಧಿಪತಿಗಳ ಸ್ಥಾನದಲ್ಲಿದ್ದವರು. ಮುಳಬಾಗಿಲಿನ ಮಠವು ೧೭ ನೆಯ ಶತಮಾನದಲ್ಲಿ ದ್ವಾರಕಾ ಮಠದ ಶಾಖೆಯಾಗಿತ್ತು.[೩] ಅಭಿನವರು ಅಧಿಕಾರ ವಹಿಸಿಕೊಂಡಾಗ, ಎರಡು ಮಠಗಳ ಹಿಂದಿನ ಸಂಬಂಧಗಳು ಬಲಗೊಂಡವು.
ದ್ವಾರಕಾ ಮಠ.(ಪಶ್ಚಿಮಾಮ್ನಾಯ)
ಬದಲಾಯಿಸಿ- ತ್ರಿವಿಕ್ರಮ ತೀರ್ಥ (೧೯೨೧ ರವರೆಗೆ)
- ಭಾರತೀಕೃಷ್ಣ ತೀರ್ಥ (೧೯೨೧-೧೯೨೫)
- ಸ್ವರೂಪಾನಂದ ತೀರ್ಥ (೧೯೨೫ -)
- ಯೋಗೇಶ್ವರಾನಂದ ತೀರ್ಥ (-೧೯೪೫)
- ಅಭಿನವ ಸಚ್ಚಿದಾನಂದ ತೀರ್ಥ (೧೯೪೫-೧೯೮೨) - ಇವರು ಪುರಿ ಮತ್ತು ಜ್ಯೋತಿರ್ಮಠದ ಸ್ವಾಮಿಗಳನ್ನು ನಿಯುಕ್ತಿಮಾಡುವ ಕ್ರಿಯೆಯಲ್ಲಿ ಬಹಳ ಮಹತ್ವದ ಪಾತ್ರವಹಿಸಿದ್ದರು. ಕೈವಲ್ಯಧಾಮದಲ್ಲಿ ಆದಿಶಂಕರಾಚಾರ್ಯರ(ಕೇದಾರನಾಥದ ಸಮೀಪ) ಮಠದ ಸ್ಥಾಪನೆಯಲ್ಲಿ ಬಹಳ ಶ್ರಮವಹಿಸಿದರು.
ಆಕರ ಗ್ರಂಥ
ಬದಲಾಯಿಸಿ- Global Encyclopaedia of Indian Philosophy, Volume 1 N.K.Singh, and A.P.Mishra
- Jump up^ Dvaraka Peeth, located in the west, and Sringeri Sharada Peetham, located in the south, are both called "Sharada Peeth".[2]
ಉಲ್ಲೇಖಗಳು
ಬದಲಾಯಿಸಿ- ↑ ಆದಿಶಂಕರಾಚಾರ್ಯರು ಸ್ಥಾಪಿಸಿದ ಮಠಗಳ ಇತಿಹಾಸ
- ↑ About Shree Swaroopanand Saraswati Maharaj
- ↑ "[indology: resources for indological scholarship]". Archived from the original on 2018-10-12. Retrieved 2017-01-13.
- Jump up^ nn 1964, p. 12.
- Jump up^ Singh & Mishra 2010, p. 322.
- [Jump up^ Pasricha, Prem C. (1977) The Whole Thing the Real Thing, Delhi Photo Company, p. 59-63]
- ^ Jump up to:a b Unknown author (May 5, 1999) archived here. Accessed: 2012-08-30. or here%5D The Monastic Tradition #Advaita Vedanta web page, retrieved August 28, 2012
- Jump up^ Author unknown (2008) Swami Swarupananda Saraswati bio Web site of Swami Swarupananda Saraswati, retrieved August 4, 2012
- [Jump up^ Unknown author (2005) Indology The Jyotirmaṭha Śaṅkarācārya Lineage in the 20th Century, retrieved August 4, 2012]
- [nn (1964), Śāradā pīṭha pradīpa, Volumes 4-6, Indological Research Institute, Dwārka]
- Singh, N.K.; Mishra, A.P. (2010), Global Encyclopaedia of Indian Philosophy, Volume 1, Global Vision Publishing House
- [Śaṃkara Maṭha]s
- [Dvāraka PīṭhaGovardhana PīṭhaJyotirmaṭha PīṭhaŚārada Pīṭha]
- [Om symbol.svg]