ದ್ಯುತಿ ಶಕ್ತಿ
ಬೆಳಕಿನ ಕಿರಣಗಳು ಪರಸ್ಪರ ಆಕರ್ಷಿಸುವ ಅಥವಾ ವಿಕರ್ಷಿಸುವ ವಿದ್ಯಮಾನಕ್ಕೆ ದ್ಯುತಿ ಶಕ್ತಿ ಎಂದು ಹೆಸರು. ಈ ಬಲವು ಬೆಳಕಿನ ಕಿರಣಗಳಿಗೆ ಲಂಬವಾಗಿರುವ ಅಕ್ಷದ ಉದ್ದಕ್ಕೂ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ಸಮಾನಾಂತರ ಕಿರಣಗಳು ಕೇಂದ್ರೀಕೃತವಾಗಬಹುದು ಅಥವಾ ದೂರವಾಗಬಹುದು. ದ್ಯುತಿ ಶಕ್ತಿಯು ಸೂಕ್ಷ್ಮ ಸ್ತರದಲ್ಲಿ ಕೆಲಸ ಮಾಡುತ್ತದೆ. ಪ್ರಸ್ತುತ ದೊಡ್ಡ ಮಟ್ಟದಲ್ಲಿ ಇದನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. ಎಲೆಕ್ಟ್ರಿಕಲ್ ಇಂಜಿನಿಯರ್ ಹಾಂಗ್ ಟ್ಯಾಂಗ್ ನೇತೃತ್ವದ ಯೇಲ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಇದನ್ನು ಕಂಡುಹಿಡಿದಿದೆ.[೧]
ಉಲ್ಲೇಖಗಳು
ಬದಲಾಯಿಸಿ- ↑ Top 100 Stories of 2009 #83: Like Magnets, Light Can Attract and Repel Itself, Discover magazine, from the January–February 2010 special issue; published online December 21, 2009