ಸಾಮಾನ್ಯ ಕಾನೂನಿನ ವ್ಯಾಪ್ತಿಯಲ್ಲಿ, ದೋಷವಿಮುಕ್ತಿ (ಖುಲಾಸೆ) ಎಂದರೆ ಆರೋಪಿಯು ಒಂದು ಅಪರಾಧದ ಆಪಾದನೆಯಿಂದ ಮುಕ್ತನೆಂದು (ಅಪರಾಧಿಕ ಕಾನೂನಿಗೆ ಸಂಬಂಧಪಟ್ಟ ಮಟ್ಟಿಗೆ) ದೃಢಪಡಿಸುವುದು. ಖುಲಾಸೆಯ ಅಂತ್ಯತೆಯು ಕಾನೂನುವ್ಯಾಪ್ತಿಯ ಮೇಲೆ ಅವಲಂಬಿಸಿರುತ್ತದೆ. ಅಮೇರಿಕದಂತಹ ಕೆಲವು ದೇಶಗಳಲ್ಲಿ, ಖುಲಾಸೆಯು (ಆರೋಪಿತನನ್ನು ಮತ್ತಷ್ಟು ಸಿಕ್ಕಿಸುವ ಹೊಸ ಸಾಕ್ಷ್ಯಾಧಾರಗಳು ಕಾಣಿಸಿಕೊಂಡರೂ) ಅದೇ ಅಪರಾಧಕ್ಕೆ ಆರೋಪಿಯ ಮರುವಿಚಾರಣೆಯನ್ನು ತಡೆಹಿಡಿಯುವ ಕಾರ್ಯನಿರ್ವಹಿಸುತ್ತದೆ. ಅಪರಾಧಿಕ ವಿಚಾರಣೆಯ ಮೇಲೆ ಖುಲಾಸೆಯ ಪರಿಣಾಮವು, ಅದು ನ್ಯಾಯದರ್ಶಿ ಮಂಡಳಿಯ ತೀರ್ಪಿನಿಂದ ಬಂದಿದ್ದರೂ ಅಥವಾ ಆರೋಪಿತನನ್ನು ಬಿಡುಗಡೆ ಮಾಡುವ ಯಾವುದೇ ಬೇರೆ ನಿಯಮದ ಜಾರಿಯಿಂದ ಆಗಿದ್ದರೂ, ಅದೇ ಆಗಿರುತ್ತದೆ. ಇತರ ದೇಶಗಳಲ್ಲಿ, ಪ್ರತಿವಾದಿಯು ದೋಷ ನಿರ್ಣಯದ ವಿರುದ್ಧ ಹೇಗೆ ಮನವಿ ಸಲ್ಲಿಸಬಹುದೊ ಅದೇ ರೀತಿ ಫಿರ್ಯಾದಿ ಪಕ್ಷವು ದೋಷವಿಮುಕ್ತಿಯ ವಿರುದ್ಧ ಮನವಿ ಸಲ್ಲಿಸಬಹುದು.

ಸ್ಕಾಟ್‍ಲಂಡ್‍ನ ಕಾನೂನಿನಲ್ಲಿ ಎರಡು ಬಗೆಯ ಖುಲಾಸೆಯ ತೀರ್ಪುಗಳಿವೆ: ತಪ್ಪಿತಸ್ಥನಲ್ಲ ಮತ್ತು ಸಾಬಿತಾಗಿಲ್ಲ.[] ಆದರೆ "ಸಾಬೀತಾಗಿಲ್ಲ" ಎಂಬ ತೀರ್ಪು ಇಮ್ಮಡಿ ಗಂಡಾಂತರಕ್ಕೆ ಕಾರಣವಾಗುವುದಿಲ್ಲ.

ಉಲ್ಲೇಖಗಳು

ಬದಲಾಯಿಸಿ
  1. Bray, Samuel (2005). "Not Proven: Introducing a Third Verdict". University of Chicago Law Review. 72 (4): 1299–1300. SSRN 1339222.