You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

ಪರಿಚಯ ಬದಲಾಯಿಸಿ

ಬಸವನಮತ್ತೀಕೆರೆ ಕುಣೀಗಲ್ ತಾಲ್ಲೂಕಿನಲ್ಲಿದೆ.ದೊಡ್ಡಮ್ಮನ ಹಬ್ಭ ಎಂದು ಹೆಸರಿದ್ದರೂ ಒಂದೇ ದಿನದಲ್ಲಿ ಮೂರು ಹೆಣ್ಣು ದೇವತೆಗಳ ಹಭ್ಭ ಆಗುತ್ತದೆ. ಒಂದೆ ಗುಡಿ ಮತ್ತು ಪಟದಲ್ಲಿ ಮೂರು ದೇವರುಗಳ ಚೆತ್ರವಿರುತ್ತದೆ. ದೊಡ್ದೇವರಿಗೆ ಆರತಿ ತರುವಾಗ ಸಾಮಾಜಿಕ ಅಂತಸ್ತ್ತಿನ ಪರಿಪಾಲನೆಯನ್ನು ಕಾಣಬಹುದು. ಮೊದಲು ಒಕ್ಕಲಿಗರ ಆರತಿಗಳು. ಡಮ್ಮ,ದುರ್ಗಮ್ಮ,ಚಿಕ್ಕಮ್ಮ ಈ ಮೂರು ದೇವತೆಗಳು.ದೊಡ್ಡಮ್ಮನಿಗೆ ಕೋಣ ಅತ್ಯಂತ ಪ್ರಿಯವದ ಆಹರ.ಚಿಕ್ಕಮ್ಮ ಅಪ್ಪಟ ಸಸ್ಯಹಾರಿ.ಯಾಕೆಂದರೆ ಎದು ಲಿಂಗದ ದೇವರು.ದುರ್ಗಮ್ಮ ಮಾಂಸಹಾರಿಯಾದರೂ ಕೋಣವೇ ಬೇಕು ಅಂತ ಪಟ್ಟುಹಿಡಿಯುವುದಿಲ್ಲ.ಅದೇ ಹೇಳುವಂತೆ "ನಾಲ್ಕು ಕಾಲಿನಬೇಟೆ ಯಾವುದಾದರು ಸಾಕು. ಭಕ್ತರು ಏನು ತಿನ್ನುತ್ತಾರೋ ಅದನ್ನೇ ನಾನೂ ತಿನ್ನುತ್ತೇನೆ" ಎನ್ನುತ್ತದೆ . ಆದರೆ ಸಸ್ಯಹಾರಿ ಚಿಕ್ಕಮ್ಮ ಮಾತ್ರ ಬಲಿಕೊಡುವಾಗ ದೂರಹೋಗಿ ಅತ್ತಕಡೆ ಮುಖ ಮಾಡಿಕೊಂಡು ನಿಲ್ಲುತ್ತದೆ.

ದೇವರಿಗೆ ಆರತಿ ತರುವಾಗ ಸಾಮಾಜಿಕ ಅಂತಸ್ತ್ತಿನ ಪರಿಪಾಲನೆಯನ್ನು ಕಾಣಬಹುದು. ಮೊದಲು ಒಕ್ಕಲಿಗರ ಆರತಿಗಳು. ನಂತರ ಹೊಲೆಯ ಆರತಿಗಳು. ಆವರ ಹಿಂದೆ ಆದಿಜಾಂಬವರ ಆರತಿಗಲೂ. ಅದಾರೆ ಈಗ ಇದು ಸ್ವಲ್ಪ ಗೊಂದಲವನ್ನ ಉಂಟುಮಾಡಿದೆ. ಪ್ರತಿವರ್ಷ ಆದಿ ಕರ್ನಟಕರು ಕೋಣವನ್ನು ಕಡಿಯುತ್ತಿದ್ದರು. ಆದರೆ ಪಟ್ಟಣಕ್ಕೆ ಹೋಗಿಬಂದ ಅವರ ಪಂಗಡದವರ ಪ್ರಯತ್ನದಿಂದ ಎರದಡು ವರ್ಷದ ಹಿಂದೆ ಅದು ನಿಂತು ಹೋಯಿತು.ಒಕ್ಕಲಿಗರು ಒತ್ತಾಯಿಸಿದರೂ ಆದಿಕರ್ನಟಕರು ಕೋಣ ಕಡಿಯುವುದಿಲ್ಲ.ಆದಿ ಜಾಂಬವರು ಇವರನ್ನು "ನೀವೂ ತೆನ್ನಲ್ಲ, ತಿನ್ನೋರ್ಗೊ ತಿನ್ಗೊಡ್ಸಲ್ಲ ನಾವಾದ್ರೊ ಕಡೀತೀವಿ ಬುಡಿ" ಎಂದು ಒತ್ತಾಯ ಮದುತಿದ್ದಾರೆ.

ದೊಡ್ಡಮ್ಮನೂ ಸಹಾ ಮೈಮೇಲೆ ಬಂದು ಕೋಣ ಕಡಿಯದ ಹೊಳಲೆಯರ ಆರತಿಗಳು ಮುಂದೆ ಬರಬಾರದೆಂದೂ ಕಡಿಯಲು ಸಿದ್ಥವಾಗಿರುವ ಆದಿಜಂಬವರ ಆರತಿಗಳು ಮುಂದೆ ಬರಬೇಕೆಂದೂ ಹೇಳುತ್ತಿದ್ದಾಳೆ.ಮೊದಲು ಹೊಲೆಯರ ಮನೆಯಲ್ಲಿದ್ದು ಈಗ ಒಕ್ಕಲಿಗರ ಮನೆಯಲ್ಲಿರುವ ಹೊಲೆಯರ ದೇವತೆ ದುರ್ಗವ್ವ ಮೈಮೇಲೆ ಬಂದು 'ನಿಮ್ಮಿಷ್ಟ' ಎಂದು ಹೇಳಿ ಭಕ್ಕರಿಗೇ ಆಯಕ್ಕನ್ನು ಬಿಟ್ಟುಕೊಟ್ಟಿದೆ. ಇದು ತೀವ್ರ ಸ್ವರೂಪವನ್ನು ತಳೆದು ನಾವು ಆರತಿಯನ್ನು ಮುಂದೆ ಒಯ್ಯಬೇಕೆಂದು ಪರಸ್ಪರ ಹೋಡೆದಾಟವೇ ನಡೆದು ಹೋಯಿತು. ಆದಿಕರ್ನಟಕರು ಮತ್ತು ಆದಿಜಾಂಬವರು ಪಾಲುಗೊಂಡು ಈ ಜಗಳ ಇನ್ನೂ ಮುಂದುವರಿಯುತ್ತಿದೆ.

ಹೊಳೆಗೆ ಹೋಗುವುದು ಬದಲಾಯಿಸಿ

ಹಬ್ಬದ ಮೊದಲದಿನ ದೇವರನ್ನು ಹೊತ್ತ ಪೂಜಾರಿಯು ಮುಂದಾಗಿ ಭಕ್ತಾದಿಗಳು ಹಿಂಬಾಲಿಸಿ ಹೊಳೆಗೆ ಬರುತರೆ. ಆಲ್ಲಿ ಪೊಜಾರಿಯ ಮೈಮೇಲೆ ದೇವರು ಬರತ್ತದೆ. ಆಗ ಬ್ರಹ್ಮಣರು ಬ್ಂದು ಮೂರು ದೇವರಿಗೂ ಪೂಜಿಯನ್ನು ಮಾದುತ್ತಾರೆ. ಅಲ್ಲಿಂದ ದೇವರನ್ನು ಊರ ಹೆಬ್ಬಾಗಿಲಿಗೆ ತರುತ್ತರೆ. ಅಲ್ಲೊಂದು ಧೂಳುಮರಿ ಹೊಡೆಯುತ್ತರೆ. ನಂತರ ಊರಿನ ನಾಲ್ಕು ದೇವಾಲಯಗಳಲ್ಲಿ ಈ ಮೂರು ದೇವರುಗಳ ಪೂಜೆ ಆಗುತ್ತದೆ. ದೇವಸ್ಧಾನಕ್ಕೆ ಈ ದೇವರುಗಳು ಬರತ್ತಿದ್ದಂತೆ ಇನ್ನೊಬ್ಬ ಪೂಜಾರಿ ಅಥವಾ ಒಕ್ಕಲಳಿಗ ಭಕ್ತ ಅಡ್ಲಿಗೆಯನ್ನು ತರುತತ್ತಾನೆ. ಅಡ್ಲಿಗೆಯಲ್ಲಿ ಚಿಕ್ಕಮ್ಮ ಎಂಬ ಲಿಂಗದ ದೇವರ ಇರುತ್ತದೆ.

ರಾಸಗೊಳು ಬದಲಾಯಿಸಿ

ಗುಡಿಯ ಮುಂದೆ ಕೋಣ ಕದಿದಾಗ ಅದರ ರಕ್ತವನ್ನು ಅನ್ನಕ್ಕೆ ಎರಚುತ್ತಾನೆ. ಮೇಲಕ್ಕೆ ಹೋದ ಅನ್ನ ಕೆಳಕ್ಕೆ ಬೀಳುವುದಿಲ್ಲವೆಂಬ ಹಾಗೂ ಅದನ್ನು ದೇವರುಗಳು ತಿನ್ನುವರೆಂಬ ನಂಬಕೆಯಿದೆ.

ಸಸ್ಯಹಾರ,ಮಾಂಸಾಹಾರ ಬದಲಾಯಿಸಿ

ಅಡ್ಲಿಗೆಯನ್ನು ಹೊರುವವನು ಮೂರು ದಿವಸ ಉಪವಾಸವಿರಬೇಕು. ಅವನ ಮೈಮೆಲೆದೇವರು ಬಂದಾಗ ಮತ್ರಾ ಅವನು ಅಡ್ಲಿಗೆಯನ್ನು ಮುಟ್ತಿ ಎತ್ತಿಕೊಂಡು ಬರುತ್ತಾನೆ. ಇದು ಬಲಿ ಒಲ್ಲದ ದೇವರು. ಅದಕ್ಕೆ ಹೊಲಸು ಕಂಡರೆ ಆಗುವುದಿಲ್ಲ. ದುರ್ಗಮ್ಮ ಮತ್ತು ದೊಡ್ಡಮ್ಮನಿಗೆ ಕೋಣನ ಬಲಿಯನ್ನು ಕೊಡುತ್ತಾರೆ.

ಕೋಂಡದಾಟದ ದೇವರು ಬದಲಾಯಿಸಿ

ಕೊಂಡ ದಟುವಾಗ ಲಿಂಗದ ದೇವರಾದ ಚಿಕ್ಕಮ್ಮ ಮೊದಲು ಹೋಗುತ್ತದೆ. ಅದರ ಹಿಂದೆ ದೊಡ್ಡಮ್ಮ ಮತ್ತು ಹರಕೆ ಹೊತ್ತ ಬಕ್ತರು ಕೊಂಡ ಹಾಯುತ್ತಾರೆ. ಆದಿಕರ್ನಟಕರು.ಜಾಂಬವರು ಮತ್ತು ಅವರ ದೇವತೆಯಾದ ದುರ್ಗವ್ವ ಹಾಗೇ ನಿಮಿಷ ಅಲ್ಲೇ ನಿಂತಿದ್ದು ತಮ್ಮ ಕೇರಿಗೆ ಮರಳುತ್ತಾರೆ.

ಗಾವುಮರಿ ಬದಲಾಯಿಸಿ

ನಂತರ ದೇವರು ಬಂದ ಪೂಜಾರಿ ಒಂದು ಕುರಿಮರಿಯ ಕುತ್ತಿಗೆಯನ್ನು ಹಲ್ಲುಗಳಿಂದ ಸಿಗಿದು,ಸಾಯಿಸಿ ಅದರ ರಕ್ತವನ್ನು ಕುಡಿಯುತ್ತಾನೆ. ಅದರ ಕರುಳ ಸರವನ್ನು ತನ್ನ ಕೊರಳಿನ ಮಾಲೆಯಾಗಿ ನೇತುಹಕಿಕೊಳ್ಳುತ್ತಾನೆ. ಕೊಂಡ ಆದಮೇಲೆ ಎಲ್ಲಕಡೆಗಳಿಗೂ ತೀರ್ಥಹಾಕಿಸಿಕೊಂಡು ಭಕ್ತಾದಿಗಳು ಮರಳುತರೆ.

ದುರ್ಗಮ್ಮ ಬದಲಾಯಿಸಿ

ಮಧ್ಯಾಹ್ನ ಆದಿಕರ್ನಟಕರು ಪ್ರತ್ಯೇಕವಾಗಿ ದುರ್ಗಮ್ಮನ ಹಬ್ಬವನ್ನು ಮಾಡುತ್ತಾರೆ. ಎರಡು ಗಂಟೆಗೆ ಒಂದು ಮರಿಯೊಂದಿಗೆ ಆರತಿ ವಾದ್ಯಸಮೇತ ಊರಾಚೆಯ ಒಂದು ತಿಟ್ಟಿನ ಮೇಲಕ್ಕೆ ಹೋಗುತಾರೆ. ದೇವರು ಮೈಮೇಲೆ ಬಂದ ಕೊಡಲೇ ಮರಿಯನ್ನು ಬಲಿಕೊಡಬೇಕು. ಆ ರಕ್ತವನ್ನು ಕಂಡಂತೆ ಕ್ರಮಕ್ರಮವಾಗಿ ದೇವರು ತಣ್ಣಗಾಗುತ್ತದೆ. ತಿಟ್ಟಿಗೆ ಕುಣಿಯುತ್ತ ಹೋದವರು ಕುಣಿಯುತ್ತ ಹಿಂದಿರುತ್ತಾರೆ. ಸಾಯಂಕಾಲ ಇವರು ಮನೆಗಳಲ್ಲಿ ಬಾಡುಹಿಟ್ತು.

ಮುಳಕಟ್ಟಮ್ಮ ಬದಲಾಯಿಸಿ

ಅದಿಜಾಂಬವರೂ ಸಹಾ ಪ್ರತ್ಯೇಕವಾಗಿ ಮುಳಕಟ್ಟಮ್ಮನ ಹಬ್ಬವನ್ನು ಮಾಡುತ್ತಾರೆ. ಅವರ ಮೂಡ್ಲಸೀಳು ಎಂಬ ಹೊದಲ ಕಡೆ ಹೋಗಿ ಪೊಜೆ ಮಾಡಿಕೊಳ್ಳುತ್ತಾರೆ