ದೇಶಗಳ ಆಟ

ಆಡಲು ಬೇಕಾಗುವ ವಸ್ತುಗಳು – ಕೋಲು

ಆಟದ ವಿವರಣೆ

ಇದೊಂದು ಹಳೆ ಆಟ. ರಾಜರು ತಮ್ಮ ಅಕ್ಕ ಪಕ್ಕದ ದೇಶಗಳನ್ನು ವಶಪಡಿಸಿಕೊಳ್ಳವ ವಿಷಯವನ್ನಾಧರಿಸಿ ಬೆಳೆದು ಬಂದಂತಹ ಆಟ ದೇಶಗಳ ಆಟ

ಆಡುವ ವಿಧಾನ

·        ಮೊದಲಿಗೆ ಒಂದು ಚೌಕವನ್ನು ಬಿಡಿಸಿ ಅದರಲ್ಲಿ 4 ಚೌಕಗಳು ಬರುವಂತೆ ಅಡ್ಡಕ್ಕೆ ಹಾಗೂ ಉದ್ದಕ್ಕೆ ಗೆರೆಗಳನ್ನು ಎಳೆಯಬೇಕು.

·        ಈ ಆಟವನ್ನಾಡಲು 4 ಜನರು ಬೇಕು, ಈ 4 ಜನರು ಒಂದೊಂದು ಚೌಕದಲ್ಲಿ ನಿಂತಿರಬೇಕು, ಹಾಗೂ ಅಲ್ಲಿಗ ಒಂದಒಂದು ಹೆಸರನ್ನು ನೀಡಬೇಕು.

·        ಆ 4 ಜನರಲ್ಲಿ ಒಬ್ಬನು ಒಂದು ಕೋಲನ್ನು ತೆಗೆದುಕೊಂಡು ಅವನನ್ನು ಹೊರತುಪಡಿಸಿ ಉಳಿದ ಮೂರು ವ್ಯಕ್ತಿಗಳಲ್ಲಿ ಒಬ್ಬನನ್ನು ಆರಿಸಿಕೊಂಡು ಆ ವ್ಯಕ್ತಿ ನಿಂತಿರುವ ಸ್ಥಳಕ್ಕೆ ಎಸೆಯಬೇಕು.ಆಗ ಹೆಸರನ್ನುಕರೆಸಿಕೊಂಡವನನ್ನು ಹೊರತು ಪಡಿಸಿ ಉಳಿದವರು ಓಡಬೇಕು.ಅದೇ ಸಮಯದಲ್ಲಿ ಹೆಸರನ್ನು ಕರೆಸಿಕೊಂಡವನು ಸ್ಟೋಪ್ ಎಂದು ಹೇಳಬೇಕು.

·        ಓಡುತ್ತಿದ್ದವರು ಇದ್ದಲ್ಲಿಯೇ ನಿಂತು ಕೊಳ್ಳಬೇಕು.

·        ಸ್ಟೋಪ್ ಎಂದಾತನು ತನ್ನ ಹತ್ತಿರದಲ್ಲಿರುವವರಿಗೆ ಕೋಲನ್ನು ಎಸೆಯಬೇಕು. ಆ ಕೋಲು ಆತನಿಗೆ ತಾಗಿದಲ್ಲಿ ಆತನ ದೇಶವನ್ನು ತನ್ನ ದೇಶದಲ್ಲಿ ನಿಂತು ಎಷ್ಟು ಸಾಧ್ಯವೋ ಅಷ್ಟು ವಶಪಡಿಸಿಕೊಳ್ಳಬೇಕು.

·        ಒಂದು ವೇಳೆ ಕೋಲು ತಾಗದಿದ್ದಲ್ಲಿ ಆತನು ಯಾರಿಗೆ ಕೋಲನ್ನೆಸಿದಿದ್ದಾನೊ ಆತನು ಕೋಲೆಸೆದವನ ದೇಶವನ್ನು ಅದೇ ರೀತಿಯಲ್ಲಿ ಅಳೆದು ವಶಪಡಿಸಿಕೊಳ್ಳಬೇಕು.ಯಾರಿಗೆ ಹೆಚ್ಚು ಜಾಗ ಸಿಗುತ್ತದೊ ಅವರು ಜಯಶೀಲರಾಗುತ್ತಾರೆ

ಮಾಹಿತಿ ಸಂಗ್ರಹಣೆ – ನಾಗಮಣಿ ಆರ್

           ಆಲಂಬ ಮಾಲೂರು

"https://kn.wikipedia.org/w/index.php?title=ದೇಶಗಳಾಟ&oldid=1153462" ಇಂದ ಪಡೆಯಲ್ಪಟ್ಟಿದೆ