ದೇವಿ ಜಗದಂಬಿ ದೇವಾಲಯ

ದೇವಿ ಜಗದಂಬಿ ದೇವಾಲಯ ಅಥವಾ ಜಗದಾಂಬಿಕಾ ದೇವಾಲಯವು ಭಾರತದ ಮಧ್ಯ ಪ್ರದೇಶ ರಾಜ್ಯದ ಖಜುರಾಹೊದಲ್ಲಿರುವ ಸುಮಾರು ೨೫ ದೇವಾಲಯಗಳ ಗುಂಪಿನಲ್ಲಿ ಒಂದಾಗಿದೆ. ಖಜುರಾಹೊ ವಿಶ್ವ ಪರಂಪರೆಯ ತಾಣವಾಗಿದೆ. ಖಜುರಾಹೊದ ದೇವಾಲಯಗಳನ್ನು ಚಂದೇಲ ರಾಜವಂಶದ ಅರಸರು ೧೦ ಮತ್ತು ೧೨ನೇ ಶತಮಾನಗಳ ನಡುವೆ ಕಟ್ಟಿಸಿದರು.

ಉತ್ತರಕ್ಕಿರುವ ಗುಂಪಿನಲ್ಲಿರುವ ದೇವಿ ಜಗದಾಂಬಿಕಾ ದೇವಾಲಯವು ಖಜುರಾಹೊದ ಅತ್ಯಂತ ನಯವಾಗಿ ಅಲಂಕೃತ ದೇವಾಲಯಗಳಲ್ಲಿ ಒಂದಾಗಿದೆ. ಇದಕ್ಕೆ ದೇವಿಗೆ ಸಂಬಂಧಿಸಿದ ಹಿಂದೂ ದೇವತೆಯಾದ ಜಗದಾಂಬಿಕಾಳ ಹೆಸರು ನೀಡಲಾಗಿದೆ. ದೇವಾಲಯದ ಪ್ರಧಾನಭಾಗವನ್ನು ಕೆತ್ತನೆಗಳ ಮೂರು ಪಟ್ಟಿಗಳು ಸುತ್ತುವರಿದಿವೆ. ಗರ್ಭಗೃಹದಲ್ಲಿ ದೇವಿಯ (ದೇವತೆ) ಬೃಹತ್ ವಿಗ್ರಹವಿದೆ.[]

ಉಲ್ಲೇಖಗಳು

ಬದಲಾಯಿಸಿ
  1. "Jagadambika temple". Archived from the original on 19 June 2017. Retrieved 2006-09-22.

ಹೊರಗಿನ ಕೊಂಡಿಗಳು

ಬದಲಾಯಿಸಿ