ಡಾ. ದೇವರ ಕೊಂಡಾರೆಡ್ಡಿ ಕನ್ನಡ ಭಾಷೆಯ ವಿದ್ವಾಂಸರು , ಶಾಸನ ಶಾಸ್ತ್ರಜ್ಞರು , ವಾಸ್ತುಶಿಲ್ಪ , ಶಾಸ್ತ್ರ ಸಾಹಿತ್ಯದಲ್ಲಿ ಪರಿಣಿತರು, ಸಂಶೋಧಕರು ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ಮಾರ್ಗದರ್ಶಿಗಳಾಗಿ, ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ.

ಜನನ ಸಂಪಾದಿಸಿ

ಇವರು ೧೯೪೮ ರ ಮೇ ೧೦ ರಂದು ಬೆಂಗಳೂರಿನ ಅನೇಕಲ್ ತಾಲೂಕಿನ ವಣಕನಹಳ್ಳಿಯಲ್ಲಿ ಜನಿಸಿದರು. ತಂದೆ ಮುನಿಸ್ವಾಮಿರೆಡ್ಡಿ, ತಾಯಿ ತಿಮ್ಮಕ್ಕ.

ಶಿಕ್ಷಣ ಸಂಪಾದಿಸಿ

ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದರು.ನಂತರ ೧೯೯೩ ರಲ್ಲಿ ತಲಕಾಡಿನ ಗಂಗರ ದೇವಾಲಯಗಳು: ಒಂದು ಅಧ್ಯಯನಎಂಬ ವಿಷಯ ಪ್ರೌಢ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿಯನ್ನು ನೀಡಿತು.

ವೃತ್ತಿ ಜೀವನ ಸಂಪಾದಿಸಿ

ಇವರು ಕನ್ನಡ ಉಪನ್ಯಾಸಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ, ಕರ್ನಾಟಕ ಗೆಜೆಟಿಯರ್ ಇಲಾಖೆಯಲ್ಲಿ ಅನ್ವೇಷಕರಾಗಿ ಕೆಲಸ ಮಾಡಿದರು. ನಂತರ ಕನ್ನಡ ವಿಶ್ವವಿದ್ಯಾಲಯದ ಶಾಸನ ಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ.

ಶಾಸನಗಳ ಲಿಪಿ ಮತ್ತು ಪಠ್ಯ ವಿಶ್ಲೇಷಣೆಯಲ್ಲಿ ಅವರು ನುರಿತಿದ್ದಾರೆ. ಹಲ್ಮಿಡಿ ಶಾಸನ ಮತ್ತು ತಮಟಕಲ್ಲು ಶಾಸನಗಳನ್ನು ಕುರಿತು ಅವರು ಮಾಡಿರುವ ವಿಶ್ಲೇಷಣೆ ವಿಶಿಷ್ಟವಾದುದು. ಅವರ 'ತಲಕಾಡಿನ ಗಂಗರ ದೇವಾಲಯಗಳು: ಒಂದು ಅಧ್ಯಯನ' ಎಂಬ ಪ್ರೌಢ ಪ್ರಬಂಧವು ಶಾಸನಗಳ ಹಿನ್ನೆಲೆಯಲ್ಲಿ ಮಾತ್ರವಲ್ಲದೆ, ವ್ಯಾಪಕ ಕ್ಷೇತ್ರಕಾರ್ಯದ ಮೂಲಕ ರಚಿತವಾದ ಒಂದು ಮೌಲಿಕ ಕೃತಿ. ಗಂಗರ ಶಿಲ್ಪಕಲೆಯ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರು ದೇವರಕೊಂಡರೆಡ್ಡಿ.

ಹಂಪಿಯ ಕನ್ನಡ ವಿ.ವಿಯ ಪರವಾಗಿ ಕ್ಷೇತ್ರಕಾರ್ಯ ನಡೆಸಿ ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ್ ಮತ್ತು ಬಾಗಲಕೋಟೆ ಜಿಲ್ಲೆಗಳ ಶಾಸನ ಸಂಪುಟಗಳನ್ನು ಪ್ರಕಟಿಸಿದ್ದಾರೆ. ಲಿಪಿಯ ಹುಟ್ಟು ಮತ್ತು ಬೆಳವಣಿಗೆ ಅವರ ಇನ್ನೊಂದು ಕೃತಿಯಾಗಿದ್ದು ಜಗತ್ತಿನ ಎಲ್ಲ ಲಿಪಿಗಳ ಹಿನ್ನೆಲೆಯಲ್ಲಿ ಲಿಪಿಯ ಹುಟ್ಟು ಮತ್ತು ಬೆಳವಣಿಗೆಯನ್ನು ಕುರಿತು ಹೇಳುತ್ತದೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.

ಕೃತಿಗಳು ಸಂಪಾದಿಸಿ

 • ಲಿಪಿಯ ಹುಟ್ಟು ಮತ್ತು ಬೆಳವಣಿಗೆ
 • ಗಂಗರ ಶಿಲ್ಪಕಲೆ
 • ಕರ್ನಾಟಕ ಶಾಸನಗಳಲ್ಲಿ ಶಾಪಾಶಯ
 • ಶ್ರವಣ ಬೆಳಗೊಳದ ಬಸದಿಗಳ ವಾಸ್ತುಶಿಲ್ಪ
 • ಶಾಸ್ತ್ರ ಸಾಹಿತ್ಯ
 • ಕರ್ನಾಟಕ ಜೈನ ಶಾಸನಗಳು (೪ ಸಂಪುಟಗಳು)
 • ತುಳುನಾಡಿನ ಜೈನ ಶಾಸನಗಳು
 • ಬನ್ನೇರುಘಟ್ಟ ದರ್ಶನ
 • ಹಂಪಿ ಸಂಪುಟ: ಕಲೆ, ಕ್ರೀಡೆ, ಕೌಶಲ

ಡಾಕ್ಟರ್ ಪದವಿ ಸಂಪಾದಿಸಿ

 • ತಲಕಾಡಿನ ಗಂಗರ ದೇವಾಲಯಗಳು: ಒಂದು ಅಧ್ಯಯನ (೧೯೯೩)

ಅಭಿನಂದನ ಗ್ರಂಥ ಸಂಪಾದಿಸಿ

 • ಗುಣ ಮಧುರ

ಪ್ರಶಸ್ತಿಗಳು ಸಂಪಾದಿಸಿ

ಉಲ್ಲೇಖಗಳು ಸಂಪಾದಿಸಿ