ದೇವಯಾನಿ ಚೌಬಾಲ್ (೧೯೪೨ - ೧೩ ಜುಲೈ ೧೯೯೫) ಒಬ್ಬ ಭಾರತೀಯ ಪತ್ರಕರ್ತೆ ಮತ್ತು ಅಂಕಣಕಾರ್ತಿ. ೧೯೬೦ ಮತ್ತು ೧೯೭೦ ರ ದಶಕದಲ್ಲಿ ಜನಪ್ರಿಯ ಬಾಲಿವುಡ್ ಚಲನಚಿತ್ರ ನಿಯತಕಾಲಿಕೆ ಸ್ಟಾರ್ ಮತ್ತು ಸ್ಟೈಲ್‌ನಲ್ಲಿ "ಫ್ರಾಂಕ್ಲಿ ಸ್ಪೀಕಿಂಗ್" ಎಂಬ ತಮ್ಮ ಪಾಕ್ಷಿಕ ಅಂಕಣಕ್ಕಾಗಿ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ಅವರು ಈವ್ಸ್ ವೀಕ್ಲಿಗಾಗಿ ಸಹ ಬರೆದಿದ್ದಾರೆ. [] []

ತಮ್ಮ ಸ್ಟಾರ್ ಮತ್ತು ಸ್ಟೈಲ್ ಅಂಕಣದಲ್ಲಿ ರಾಜೇಶ್ ಖನ್ನಾ ಅವರನ್ನು ಸೂಪರ್ ಸ್ಟಾರ್ ಎಂದು ಉಲ್ಲೇಖಿಸಿದ ಮೊದಲ ಪತ್ರಕರ್ತೆ ಇವರು. []

ಜೀವನಚರಿತ್ರೆ

ಬದಲಾಯಿಸಿ

ಚೌಬಾಲ್ ಅವರು ಮಹಾರಾಷ್ಟ್ರದ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಮುಂಬೈನಲ್ಲಿ ಶ್ರೀಮಂತ ನ್ಯಾಯವಾದಿ ಆಗಿದ್ದರು. ಚೌಬಾಲ್ ಒಬ್ಬ ಚಲನಚಿತ್ರ ಗಾಸಿಪ್ ಪತ್ರಕರ್ತೆ, ಮತ್ತು ಭಾರತೀಯ ಚಲನಚಿತ್ರ ಪತ್ರಿಕೋದ್ಯಮದಲ್ಲಿ ವಿಷಕಾರಿ ವಿಷಯಗಳನ್ನು ತಮ್ಮ ಅಂಕಣಗಳಲ್ಲಿ ಬಹಳಷ್ಟು ಬರೆದುಕೊಂಡ ಮೊದಲಿಗರಲ್ಲಿ ಒಬ್ಬರು. ಅವರ ಆಗಮನದವರೆಗೂ ಭಾರತೀಯ ಚಲನಚಿತ್ರ ಪತ್ರಿಕೋದ್ಯಮವು ಆರೋಪ ಮತ್ತು ಗಾಸಿಪ್‌ಗಳಿಂದ ಮುಕ್ತವಾಗಿತ್ತು. ಅವರು ಸ್ಟಾರ್ ಮತ್ತ್ತು ಸ್ಟೈಲ್ ಎಂಬ ಜನಪ್ರಿಯ ಚಲನಚಿತ್ರ ನಿಯತಕಾಲಿಕದಲ್ಲಿ ಬರೆದಿದ್ದಾರೆ. []

ಅವರು ಸಾಕಷ್ಟು ವಿಶ್ವಾಸಾರ್ಹತೆಯನ್ನು ಹೊಂದಿದ್ದರು ಮತ್ತು ಅವರ "ಗಾಸಿಪ್" ("ಪ್ರಾಂಕ್ಲಿ ಸ್ಪೀಕಿಂಗ್" ಎಂಬ ಅಂಕಣದಲ್ಲಿ ವಿತರಿಸಲಾಗಿದೆ) ಯಾವಾಗಲೂ ಸಂಶೋಧನೆ ಮತ್ತು ವಿಶ್ವಾಸಾರ್ಹ ಮೂಲಗಳನ್ನು ಹೊಂದಿತ್ತು. ಈವ್ಸ್ ವೀಕ್ಲಿಯಲ್ಲಿ ಸಹ ಅವರ ಅಂಕಣವನ್ನು ಪ್ರಕಟಿಸಲಾಗಿತ್ತು.

ಚೌಬಾಲ್ ತನ್ನ ಇಂಗ್ಲಿಷ್ ಕೃತಿಗಳಲ್ಲಿ "ಬದನ್ಸ್" (ದೇಹಗಳು) ಮತ್ತು "ಕಚ್ರಾ" (ಕಸ) ನಂತಹ ಪದಗಳೊಂದಿಗೆ ಹಿಂಗ್ಲಿಷ್ (ಹಿಂದಿ ಹಾಗೂ ಇಂಗ್ಲಿಷ್‌ನ ಮಿಶ್ರಣ) ಅನ್ನು ಬಳಸಿದ ಮೊದಲ ಬರಹಗಾರ್ತಿ. ಶೋಭಾ ಡೆ ನಂತರ ತಮ್ಮ ಕಾದಂಬರಿಗಳಲ್ಲಿ ಹಿಂಗ್ಲಿಷ್ ಅಂಶಗಳನ್ನು ಬಳಸಲಾರಂಭಿಸಿದರು. [] []

ನಂತರದ ಜೀವನದಲ್ಲಿ ಅವರು ೧೯೮೫ ರಲ್ಲಿ ಪಾರ್ಶ್ವವಾಯುವಿಗೆ ಒಳಗಾದರು. ಇದರ ನಂತರ ಅವರು ಓಡಾಡಲು ಹೆಚ್ಚಾಗಿ ಗಾಲಿಕುರ್ಚಿಯನ್ನು ಬಳಸುತ್ತಿದ್ದರು ಮತ್ತು ನಂತರ ಹಾಸಿಗೆ ಹಿಡಿದರು. ಆದಾಗ್ಯೂ ಅವರು ೧೯೯೫ ರಲ್ಲಿ ೫೩ ನೇ ವಯಸ್ಸಿನಲ್ಲಿ ಸಾಯುವವರೆಗೂ ತಮ್ಮ ಅಂಕಣವನ್ನು ಬರೆಯುವುದನ್ನು ಮುಂದುವರೆಸಿದರು.[]

ಉಲ್ಲೇಖಗಳು

ಬದಲಾಯಿಸಿ
  1. Singh, Kuldip (28 July 1995). "Obituary: Devyani Chaubal". The Independent. Retrieved 13 May 2015.
  2. "Devyani Choubal: Feisty journalist who 'terrorised' Bollywood". Daily Bhaskar. 27 February 2013. Retrieved 13 May 2015.
  3. Ayaz, Shaikh (23 June 2012). "The Loneliest Superstar Ever". OPEN. Retrieved 13 May 2015.
  4. ೪.೦ ೪.೧ ೪.೨ Singh, Kuldip (28 July 1995). "Obituary: Devyani Chaubal". The Independent. Retrieved 13 May 2015.Singh, Kuldip (28 July 1995). "Obituary: Devyani Chaubal". The Independent. Retrieved 13 May 2015.
  5. Kasbekar, Asha (2006). Pop Culture India!: Media, Arts, and Lifestyle. ABC-CLIO. p. 93. ISBN 978-1851096367. Retrieved 13 May 2015.