ದೃಷ್ಟಿರೇಖೆ
ದೃಷ್ಟಿರೇಖೆ ಎಂದರೆ ನೇರರೇಖೆಯಲ್ಲಿ ಯಾವುದೇ ಅಡಚಣಗಳಿಲ್ಲದೆ, ಕಣ್ಣಿಗೆ ಕಾಣುವಂತೆ ಇರುವುದು. ವಿದ್ಯುದಯಸ್ಕಾಂತೀಯ ಅಲೆಗಳು ಪಸರಿಸುವ ಒಂದು ವಿಧಕ್ಕೆ ದೃಷ್ಟಿರೇಖೆ ಪ್ರಸರಣ ಎಂದು ಕರೆಯಲಾಗುತ್ತದೆ. ವಿದ್ಯುದಯಸ್ಕಾಂತೀಯ ಅಲೆಗಳು ವಾತಾವರಣದಲ್ಲಿ ಸಾಗುವ ಹಾದಿಯಲ್ಲಿ ಅಡಚಣೆಗಳಿದ್ದರೆ ಈ ಅಲೆಗಳು ಪ್ರತಿಫಲನ ಅಥವಾ ಹೀರುವಿಕೆಗೊಳಗಾಗುತ್ತವೆ. ಇದರಿಂದಾಗಿ ದಿಗಂತದಿಂದಾಚೆಗೆ ಅವುಗಳ ಪ್ರಸರಣ ಸಾಧ್ಯವಾಗುವುದಿಲ್ಲ.
ರೇಡಿಯೋ ಅಲೆಗಳು ಎಲ್ಲಾ ವಿದ್ಯುದಯಸ್ಕಾಂತೀಯ ಅಲೆಗಳಂತೆ ನೇರ ರೇಖೆಗಳಲ್ಲಿ ಸಾಗುತ್ತವೆ. ಅಲ್ಪ ತರಂಗಗಳ (VLF, LF, MF) ಅಲೆಗಳು ಭೂಮಿಯ ಮೇಲ್ಮೈಯನ್ನು ಸವರಿಕೊಂಡು ಪಯಣಿಸುತ್ತವೆ. ಉಚ್ಚ ತರಂಗಗಳ (HF)ಅಲೆಗಳು ವಾಯುಮಂಡಲಕ್ಕೆ ಬಡಿದು ಪ್ರತಿಫಲನಕ್ಕೊಳಕ್ಕಾಗಿ ಹಿಂದಿರುಗುತ್ತವೆ. ಆದರೆ ಅತಿ ಉಚ್ಚ ತರಂಗಗಳು (VHF, UHF) ನೇರರೇಖೆಯಲ್ಲಿ ಸಾಗುತ್ತವೆ. ಪ್ರೇಷಕ ಹಾಗೂ ಅಭಿಗ್ರಾಹಕದ ನಡುವೆ ಯಾವುದೇ ಅಡಚಣೆಗಳಿದ್ದರೆ ಈ ಅಲೆಗಳು ಮುಂದೆ ಪಯಣಿಸಲು ಅಸಾಧ್ಯವಾಗುತ್ತದೆ.