ದುಷ್ಟತನ

(ದುಷ್ಟ ಇಂದ ಪುನರ್ನಿರ್ದೇಶಿತ)

ದುಷ್ಟತನವನ್ನು ಸಾಮಾನ್ಯವಾಗಿ ಕೇಡು ಅಥವಾ ಪಾಪಮಯತೆಯ ಸಮಾನಾರ್ಥಕ ಪದವೆಂದು ಪರಿಗಣಿಸಲಾಗುತ್ತದೆ. ದೇವತಾಶಾಸ್ತ್ರಜ್ಞರು ಹಾಗೂ ತತ್ವಶಾಸ್ತ್ರಜ್ಞರಲ್ಲಿ, ಇದು ಪ್ರಜ್ಞಾಪೂರ್ವಕವಾಗಿ ಹಾಗೂ ಮುಕ್ತ ಮನಸ್ಸಿನಿಂದ ಮಾಡಲಾದ ಕೇಡು ಎಂಬ ಹೆಚ್ಚು ನಿರ್ದಿಷ್ಟ ಅರ್ಥ ಹೊಂದಿದೆ.[೧] ಇದನ್ನು ದುಷ್ಟವಾಗಿರುವ ಸ್ಥಿತಿ ಅಥವಾ ಗುಣ ಎಂದೂ ಪರಿಗಣಿಸಬಹುದು.

"ಪಾಪವು ಕೇಡಿನ ಮೊದಲ ಹಂತ, ಸಾಂದರ್ಭಿಕ ದಿಶಾಹೀನತೆ. ಕೊನೆಯಿಲ್ಲದ ಸಂಭಾವ್ಯತೆಯು ಸಹಿಸಲಾರದಂತಿರಬಹುದು, ಇದು ಮನುಷ್ಯನು ಒಂದು ವಾಸ್ತವಿಕ, ಬದ್ಧವಾದ ಆಯ್ಕೆ ಮಾಡದಿರಲು, ಯಾವುದನ್ನಾದರೂ ಗ್ರಹಿಸುವುದಕ್ಕೆ, ತನ್ನನ್ನು ಚಿತ್ತವಿಕ್ಷೇಪಗೊಳಿಸುವುದಕ್ಕೆ ಮತ್ತು ಕೆಲಸದಲ್ಲಿ ನಿರತನಾಗುವುದಕ್ಕೆ ಕಾರಣವಾಗುವುದು. ದುಷ್ಟತನ ಕೇಡಿನ ಎರಡನೇ ಹಂತ, ಇದರಲ್ಲಿ ಬುದ್ಧಿ ಚಾಂಚಲ್ಯವನ್ನು ನಿಜವಾದ ಇಚ್ಛೆಯ ವಿರೂಪಗೊಂಡ ಪರ್ಯಾಯವಾಗಿ ಅಂಗೀಕರಿಸಲಾಗುತ್ತದೆ ಮತ್ತು ಇದು ವಿಶೇಷತೆಯಾಗಿಬಿಡುತ್ತದೆ". ಹೀಗಂತ ತತ್ವಶಾಸ್ತ್ರಜ್ಞ ಬೂಬರ್ ತನ್ನ ಕೃತಿಯಲ್ಲಿ ಹೇಳುತ್ತಾನೆ. ದುಷ್ಟತನವು ನಿಂದನಾರ್ಹತೆಯನ್ನು ಸೂಚಿಸುತ್ತದೆ.

ಇತಿಹಾಸದಾದ್ಯಂತ ಜನರ ಜೀವನಗಳಲ್ಲಿ ಅಧಿಕಾರವನ್ನು ಸಾಮಾನ್ಯವಾಗಿ ತುಂಬಾ ಅಪಾಯದ ಹಾಗೂ ವಿನಾಶಕಾರಿ ಅಂಶವಾಗಿ ಕಾಣಲಾಗುತ್ತದೆ. ಅದು ಸಮಾಜಕ್ಕೆ ಹುಣ್ಣಾಗಿದೆ ಅಥವಾ ನೀವು ಇಚ್ಛಿಸಿದರೆ ದುಷ್ಟವೂ ಆಗಿದೆ. ವಾಸ್ತವಿಕವಾಗಿ ಅಧಿಕಾರವು ಸ್ವತಃ ನೈತಿಕವಾಗಿ ತಟಸ್ಥವಾಗಿರುತ್ತದೆ ಎಂದು ಕೆಲವು ಸಿದ್ಧಾಂತವಾದಿಗಳು ನಂಬುತ್ತಾರೆ. ಅಧಿಕಾರದ ಪರಿಣಾಮಗಳು ಅದನ್ನು ಒಳ್ಳೆಯದಾಗಿ ಕಾಣಲಾಗುತ್ತದೆಯೊ ಅಥವಾ ಇಲ್ಲವೊ ಎಂಬುದನ್ನು ನಿರ್ಧರಿಸುತ್ತವೆ. ಆಗ ಅಧಿಕಾರದಲ್ಲಿರುವವರನ್ನು ತಮ್ಮ ಸ್ವಭಾವದಲ್ಲಿ ದುಷ್ಟರು ಎಂದೂ ಕಾಣಲಾಗುವುದಿಲ್ಲ, ಬದಲಾಗಿ ಅಧಿಕಾರಕ್ಕಾಗಿ ಅವಸರವು ಅಧಿಕಾರವನ್ನು ದುಷ್ಟ ಭಾವನೆಯಾಗಿ ಕಾಣುವಂತೆ ಮಾಡುತ್ತದೆ. ಸಮೀಕರಣದಲ್ಲಿ ಮನುಷ್ಯರು ದುಷ್ಟರಾಗಿದ್ದರೆ ಈಡಿನಲ್ಲಿರುವ ಸಮಸ್ಯೆಗಳಿಗೆ ನೈತಿಕ ಸುಧಾರಣೆಯು ಪರಿಹಾರವಾಗುತ್ತದೆ ಎಂದು ಸಿದ್ಧಾಂತವಾದಿಗಳು ನಂಬುತ್ತಾರೆ. ಕೊನೆಯಲ್ಲಿ, ಅಧಿಕಾರ ಅಥವಾ ಮನುಷ್ಯ ದುಷ್ಟರಲ್ಲ, ಬದಲಾಗಿ ಅಧಿಕಾರದ ಪರಿಣಾಮಗಳು ಅದು ದುಷ್ಟವಾಗುವುದಕ್ಕೆ ಕಾರಣವಾಗುತ್ತವೆ.

ಎರಡು ವಿಭಿನ್ನ ಬಗೆಯ ದುಷ್ಟತನಗಳಿವೆ ಎಂದು ಕೆಲವರು ವಾದಿಸುತ್ತಾರೆ. ಒಂದು ನೈಸರ್ಗಿಕ ದುಷ್ಟತನ. ಈ ಬಗೆಯ ದುಷ್ಟತನವನ್ನು ತಡೆಯಲಾಗುವುದಿಲ್ಲ, ಉದಾಹರಣೆಗೆ ಭೂಕಂಪಗಳು, ಚಂಡಮಾರುತಗಳು ಮತ್ತು ಇತರ ಪ್ರಕಾರಗಳ ನೈಸರ್ಗಿಕ ವಿಕೋಪಗಳು. ನೈತಿಕ ದುಷ್ಟತನ ಎರಡನೇ ಪ್ರಕಾರದ ದುಷ್ಟತನ. ಈ ಬಗೆಯ ದುಷ್ಟತನವನ್ನು ಮಾನವರು ಮಾಡುತ್ತಾರೆ ಮತ್ತು ವಾದಯೋಗ್ಯವಾಗಿ ಇವನ್ನು ತಡೆಯಬಹುದು. ಇವೆರಡರ ನಡುವಿನ ಪ್ರತ್ಯೇಕತೆಗೆ ಪ್ರತಿಕ್ರಿಯೆ ಕಾರಣವಾಗುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. Rosenbaum, Ron (September 30, 2011). "The End of Evil?". Slate. Retrieved 2011-10-10.
"https://kn.wikipedia.org/w/index.php?title=ದುಷ್ಟತನ&oldid=791841" ಇಂದ ಪಡೆಯಲ್ಪಟ್ಟಿದೆ