ದೀಗುಜ್ಜೆ ಹಪ್ಪಳ
ದೀಗುಜ್ಜೆ ಹಪ್ಪಳವು ಒಂದು ಮಳೆಗಾಲದ ಆಹಾರವಸ್ತು ಜಾಸ್ತಿಯಾಗಿ ಆಟಿ ತಿಂಗಳಲ್ಲಿ ಉಪಯೋಗಿಸುತ್ತಾರೆ.ದೀಗುಜ್ಜೆಯು ಹಲಸನ್ನು ಹೋಲುವ ಕಾಯಿಯಾಗಿದೆ ಇದರ ಉಪಯೋಗ ಬಹಳಷ್ಟಿದೆ . ಇದರಿಂದ ಪಲ್ಯ ಸಾಂಬಾರ್ ಪೋಡಿ, ಚಿಪ್ಸ್ ಹಪ್ಪಳ ತಯಾರು ಮಾಡ ಬಹುದು.ದೀವಿ ಹಲಸು ದೊಡ್ಡ ಮರವಾಗುತ್ತದೆ
ದೀವಿ ಹಲಸಿನ ಹಪ್ಪಳ ಮಾಡಲು ಬೇಕಾಗುವ ಸಾಮಾನು
ಬದಲಾಯಿಸಿ- ದೀಗುಜ್ಜೆ
- ಉಪ್ಪು
- ನೀರು
- ಮೆಣಸಿನ ಹುಡಿ
ದೀವಿ ಹಲಸಿನ ಹಪ್ಪಳ ಮಾಡುವ ವಿಧಾನ
ಬದಲಾಯಿಸಿದೀವಿ ಹಲಸಿನ ಹಪ್ಪಳ ಮಾಡುಲು ಬೆಳೆದ ದೀಗುಜ್ಜೆ ಬೇಕಾಗುತ್ತದೆ.ದೀವಿ ಹಲಸನ್ನು ಜೀಗುಜ್ಜೆ ಅಂತಲೂ ಕರೆಯುತ್ತಾರೆ.ಪ್ರಕೃತಿಯಲ್ಲಿ ಸಿಗುವ ಹಲಸಿನ ಪ್ರಭೇದ[೧].ಇದನ್ನು ತರಕಾರಿಯಾಗಿಯು ಅಡುಗೆಯಲ್ಲಿಯು ಉಪಯೋಗಿಸುತ್ತಾರೆ.ಬೆಳೆದ ಜೀಗುಜ್ಜೆ ಆಯ್ದು ಕೊಂಡು ಸಿಪ್ಪೆ ತೆಗೆದು ತುಂಡು ಮಾಡಿಕೊಂಡು ನೀರು ಹಾಕದೆ ಹಬೆಯಲ್ಲಿ ೨೦ ನಿಮಿಷ ಬೇಯಿಸಬೇಕು. ಆಮೇಲೆ ಕಡೆಯುವ ಕಲ್ಲಿನಲ್ಲಿ ನೀರು ಉಪ್ಪು ಸೇರಿಸಿ ರುಬ್ಬಬೇಕು. ನಂತರ ಅದನ್ನು ಗೋಲಾಕಾರದಲ್ಲಿ ಉಂಡೆ ಮಾಡಬೇಕು.ಆಮೇಲೆ ಮಣೆಯ ಸಹಾಯದಿಂದ ಚಪ್ಪಟೆಯಾಗಿ ಒತ್ತಿ ನಂತರ ಇದನ್ನು ಚಾಪೆಯಲ್ಲಿ ಮೂರು ದಿನಗಳು ಬಿಸಿಲಲ್ಲಿ ಒಣಗಲು ಬಿಡಬೇಕು. ಇದು ಒಣಗಿದ ನಂತರ ಶೇಖರಿಸಿ ಇಟ್ಟು ಬೇಕಾದಾಗ ಎಣ್ಣೆಯಲ್ಲಿ ಕರಿದು ತಿನ್ನಬಹುದು.
reference
ಬದಲಾಯಿಸಿ