ದಿ ನ್ಯೂ ಮಂತ್ಲಿ ಮ್ಯಾಗಜ಼ೀನ್

ದಿ ನ್ಯೂ ಮಂತ್ಲಿ ಮ್ಯಾಗಜ಼ೀನ್ ೧೮೧೪ ರಿಂದ ೧೮೮೪ ರವರೆಗೆ ಪ್ರಕಟವಾದ ಬ್ರಿಟಿಷ್ ಮಂತ್ಲಿ ಮ್ಯಾಗಜ಼ೀನ್ ಆಗಿದೆ. ಇದನ್ನು ಹೆನ್ರಿ ಕೋಲ್ಬರ್ನ್ ಸ್ಥಾಪಿಸಿದರು ಮತ್ತು ೧೮೪೫ ರವರೆಗೆ ಅವರು ಪ್ರಕಟಿಸಿದರು.

ಇತಿಹಾಸ

ಬದಲಾಯಿಸಿ

ಕೋಲ್ಬರ್ನ್ ಮತ್ತು ಫ್ರೆಡೆರಿಕ್ ಶೋಬೆರ್ಲ್ ೧೮೧೪ ರಲ್ಲಿ, ಸರ್ ರಿಚರ್ಡ್ ಫಿಲಿಪ್ಸ್ ಅವರ ಮಂತ್ಲಿ ಮ್ಯಾಗಜ಼ೀನ್‌ಗೆ ಪ್ರತಿಸ್ಪರ್ಧಿಯಾಗಿ ನ್ಯೂ ಮಂತ್ಲಿ ಮ್ಯಾಗಜ಼ೀನ್ ಮತ್ತು ಯುನಿವರ್ಸಲ್ ರಿಜಿಸ್ಟರ್ ಅನ್ನು "ವೈರಲೆಂಟ್ಲಿ ಟೋರಿ" [] ಎಂಬುದಾಗಿ ಸ್ಥಾಪಿಸಿದರು. ಇದರಲ್ಲಿ "ಡಬಲ್-ಕಾಲಮ್ ಸ್ವರೂಪ ಮತ್ತು ಸಮಗ್ರ ವಿಷಯಗಳು ಯುನಿವರ್ಸಲ್ ರಿಜಿಸ್ಟರ್‌ನೊಂದಿಗೆ ಜೆಂಟಲ್‌ಮ್ಯಾನ್ಸ್ ಮ್ಯಾಗಜೀನ್ ಅನ್ನು ಸಂಯೋಜಿಸಿವೆ".[]

ಏಪ್ರಿಲ್ ೧೮೧೯ ರ ಮ್ಯಾಗಜ಼ೀನ್‌ನಲ್ಲಿ ಜಾನ್ ಪೊಲಿಡೋರಿಯವರ ಗೋಥಿಕ್ ಕಾದಂಬರಿ ದಿ ವ್ಯಾಂಪೈರ್ ಅನ್ನು ಪ್ರಕಟಿಸಿತು. ಇದು ಇಂಗ್ಲಿಷ್‌ನ ಗದ್ಯವಾದ ರಕ್ತಪಿಶಾಚಿ ಸಾಹಿತ್ಯದ ಮೊದಲ ಗಮನಾರ್ಹ ತುಣುಕಾಗಿದ್ದು, ಇದಕ್ಕೆ ಸ್ಫೂರ್ತಿ ನೀಡಿದ ಲಾರ್ಡ್ ಬೈರನ್‌ರವರನ್ನು ಆಪಾದಿಸಿತು.

೧೮೨೧ ರಲ್ಲಿ ಕೋಲ್ಬರ್ನ್‌ರವರ ಪತ್ರಿಕೆಯನ್ನು ಹೆಚ್ಚು ಸಾಹಿತ್ಯಕ ಮತ್ತು ಕಡಿಮೆ ರಾಜಕೀಯ ಗಮನದೊಂದಿಗೆ ಮರುರೂಪಿಸಿದರು. ಅದನ್ನು ನ್ಯೂ ಮಂತ್ಲಿ ಮ್ಯಾಗಜ಼ೀನ್ ಮತ್ತು ಲಿಟರರಿ ಜರ್ನಲ್ ಎಂದು ಮರುನಾಮಕರಣ ಮಾಡಿದರು. ಕವಿ ಥಾಮಸ್ ಕ್ಯಾಂಪ್ಬೆಲ್ ಅದನ್ನು ನಾಮಮಾತ್ರವಾಗಿ ಸಂಪಾದಿಸಿದರು. ಆದರೆ, ಹೆಚ್ಚಿನ ಸಂಪಾದನೆಯನ್ನು ಉಪ-ಸಂಪಾದಕರಾದ ಸೈರಸ್ ರೆಡ್ಡಿಂಗ್‌ರವರು ಮಾಡಿದರು. ಕೋಲ್ಬರ್ನ್‌ರವರು ಕೊಡುಗೆದಾರರಾದ: ಸಿಡ್ನಿ ಮೋರ್ಗನ್, ಥಾಮಸ್ ಚಾರ್ಲ್ಸ್ ಮೋರ್ಗನ್, ಪೀಟರ್ ಜಾರ್ಜ್ ಪ್ಯಾಟ್ಮೋರ್, ಮೇರಿ ಶೆಲ್ಲಿ, ಚಾರ್ಲ್ಸ್ ಲ್ಯಾಂಬ್, ಲೀ ಹಂಟ್, ಸ್ಟೆಂಡಾಲ್, ಥಾಮಸ್ ನೂನ್ ಟಾಲ್ಫೋರ್ಡ್, ಲೆಟಿಟಿಯಾ ಎಲಿಜಬೆತ್ ಲ್ಯಾಂಡನ್, ಫೆಲಿಸಿಯಾ ಹೇಮನ್ಸ್, ಉಗೊ ಫೋಸ್ಕೊಲೊ, ರಿಚರ್ಡ್ ಲಾಲರ್ ಶೆಲ್, ಮೇರಿ ರಸೆಲ್ ಮಿಟ್ಫೋರ್ಡ್, ಎಡ್ವರ್ಡ್ ಬುಲ್ವರ್, ಜೇಮ್ಸ್ ಮತ್ತು ಹೊರೇಸ್ ಸ್ಮಿತ್ ಮತ್ತು ವಿಲಿಯಂ ಹಜ್ಲಿಟ್[] ಉತ್ತಮ ವೇತನ ನೀಡಿದರು. ಲಂಡನ್ ನಿಯತಕಾಲಿಕದಲ್ಲಿ ಪ್ರಾರಂಭವಾದ ಹಜ್ಲಿಟ್ ಅವರ "ಟೇಬಲ್-ಟಾಕ್" ಪ್ರಬಂಧಗಳು ೧೮೨೧ ರ ಉತ್ತರಾರ್ಧದಿಂದ ಹೊಸ ಮಾಸಿಕದಲ್ಲಿ ಹಾಗೂ ೧೮೨೨ ರಲ್ಲಿ "ದಿ ಫೈಟ್" ಪ್ರಬಂಧದಲ್ಲಿಯೂ ಕಾಣಿಸಿಕೊಂಡವು.[] ಅವರ ಸರಣಿ "ದಿ ಸ್ಪಿರಿಟ್ಸ್ ಆಫ್ ದಿ ಏಜ್" ಪ್ರಬಂಧದ ನಂತರ ಇತರ ಮೂಲಗಳು ಸ್ಪಿರಿಟ್ ಆಫ್ ದಿ ಏಜ್ (೧೮೨೫) ಪುಸ್ತಕದಲ್ಲಿ ಮರುಪ್ರಕಟಿಸಲ್ಪಟ್ಟಿತು.[]

ಚಾರ್ಲ್ಸ್ ನೈಟ್‌ನ ಲಂಡನ್ ನಿಯತಕಾಲಿಕವು ೧೮೨೯ ರಲ್ಲಿ ನ್ಯೂ ಮಂತ್ಲಿ‌ಯೊಂದಿಗೆ ವಿಲೀನಗೊಂಡಿತು ಮತ್ತು ಅದೇ ವರ್ಷದಲ್ಲಿ ರಿಚರ್ಡ್ ಬೆಂಟ್ಲೆಯವರು ಕೋಲ್ಬರ್ನ್‌ರವರ ವ್ಯವಹಾರದಲ್ಲಿ ಪಾಲುದಾರರಾದರು. ೧೮೩೦ ರಲ್ಲಿ, ರೆಡ್ಡಿಂಗ್ ರಾಜೀನಾಮೆ ನೀಡಿದ ನಂತರ, ಕ್ಯಾಂಪ್ಬೆಲ್ ಸ್ವತಃ ನಿಯತಕಾಲಿಕವನ್ನು ಸಂಪಾದಿಸಲು ಸಾಧ್ಯವಾಗಲಿಲ್ಲ ಮತ್ತು ಸ್ಯಾಮ್ಯುಯೆಲ್ ಕಾರ್ಟರ್ ಹಾಲ್‌ರವರು ಒಂದು ವರ್ಷದವರೆಗೆ ಸಂಪಾದಕರಾದರು. ೧೮೩೧ ರಲ್ಲಿ, ಕಾದಂಬರಿಕಾರರಾದ ಎಡ್ವರ್ಡ್ ಬುಲ್ವರ್ ಅದರ ಸಂಪಾದಕರಾದರು ಹಾಗೂ "ಮೂಲಭೂತವಾಗಿ ಅರಾಜಕೀಯವಾದ ಸಾಹಿತ್ಯಿಕ ಪತ್ರಿಕೆಯನ್ನು ಸುಧಾರಣೆಯ ಅಂಗವಾಗಿ ಪರಿವರ್ತಿಸಿದರು".[] ಸ್ಯಾಮ್ಯುಯೆಲ್ ಕಾರ್ಟರ್ ಹಾಲ್‌ರವರು ರಾಜಕೀಯ ಕನ್ಸರ್ವೇಟಿವ್ ಪಕ್ಷದ ಉಪಸಂಪಾದಕರಾಗಿ ಉಳಿದು ಬುಲ್ವರ್ ಅವರ ಪ್ರಯತ್ನಗಳನ್ನು ವಿರೋಧಿಸಿದರು. ಹೀಗಾಗಿ, ಬುಲ್ವರ್‌ರವರು ೧೮೩೩ ರಲ್ಲಿ, ರಾಜೀನಾಮೆ ನೀಡಿದರು. ಹಾಲ್‌ರವರು ಮತ್ತೊಮ್ಮೆ ಸಂಪಾದಕತ್ವವನ್ನು ವಹಿಸಿಕೊಂಡರು. ಕೊಡುಗೆ ನೀಡಿದವರಲ್ಲಿ ಕ್ಯಾಥರೀನ್ ಗೋರ್, ಅನ್ನಾ ಮಾರಿಯಾ ಹಾಲ್, ಲೆಟಿಟಿಯಾ ಎಲಿಜಬೆತ್ ಲ್ಯಾಂಡನ್, ಫೆಲಿಸಿಯಾ ಹೇಮನ್ಸ್, ಕ್ಯಾರೋಲಿನ್ ನಾರ್ಟನ್, ಥಾಮಸ್ ಹೇನ್ಸ್ ಬೇಲಿ ಮತ್ತು ಥಿಯೋಡರ್ ಎಡ್ವರ್ಡ್ ಹುಕ್‌ರವರು ಸೇರಿದ್ದಾರೆ.

೧೮೩೭ ರ ಮ್ಯಾಗಜ಼ೀನ್‌ ಅನ್ನು ನ್ಯೂ ಮಂತ್ಲಿ ಮ್ಯಾಗಜ಼ೀನ್ ಮತ್ತು ಹ್ಯೂಮರಿಸ್ಟ್ ಎಂದು ಮರುನಾಮಕರಣ ಮಾಡಲಾಯಿತು. ಇದು ಬೆಂಟ್ಲೆ ಮಿಸೆಲನಿಯವರ ಸವಾಲನ್ನು ಎದುರಿಸಿತು ಹಾಗೂ ಈಗ ಥಿಯೋಡರ್ ಹುಕ್‌ರವರು ಸಂಪಾದಿಸಿದ್ದಾರೆ. ಇದು ಲೀ ಹಂಟ್, ಡೌಗ್ಲಾಸ್ ಜೆರೊಲ್ಡ್, ಫ್ರೆಡೆರಿಕ್ ಮಾರಿಯಟ್, ಫ್ರಾನ್ಸಿಸ್ ಟ್ರೋಲೋಪ್, ಚಾರ್ಲ್ಸ್ ರಾಬರ್ಟ್ ಫಾರೆಸ್ಟರ್ ಮತ್ತು ಡಬ್ಲ್ಯೂ.ಎಂ.ಠಾಕ್ರೆ ಅವರ ಕೊಡುಗೆಗಳನ್ನು ಪ್ರಕಟಿಸಿತು. ೧೮೪೧ ರಲ್ಲಿ, ಹುಕ್ ಅವರ ಮರಣದ ನಂತರ, ಥಾಮಸ್ ಹುಡ್‌ರವರು ೧೮೪೩ ರವರೆಗೆ ಸಂಪಾದಣೆಯನ್ನು ಮುಂದುವರಿಸಿದರು.[]

೧೮೪೫ ರಲ್ಲಿ ಕೋಲ್ಬರ್ನ್‌ರವರು ಈ ನಿಯತಕಾಲಿಕವನ್ನು ವಿಲಿಯಂ ಹ್ಯಾರಿಸನ್ ಐನ್ಸ್ವರ್ತ್‌ರವರಿಗೆ £೨೫೦೦ ಕ್ಕೆ ಮಾರಾಟ ಮಾಡಿದರು. ಈ ಹಿಂದೆ ನಿಯತಕಾಲಿಕವನ್ನು ಬೆಂಟ್ಲೆ ಮಿಸೆಲನಿಯವರು ಸಂಪಾದಿಸಿದ್ದರು ಮತ್ತು ಈಗ ವಿಲಿಯಂ ಹ್ಯಾರಿಸನ್ ಐನ್ಸ್ವರ್ತ್‌ರವರು ತಮ್ಮದೇ ಆದ ನಿಯತಕಾಲಿಕವನ್ನು ಸಂಪಾದಿಸಿದ್ದಾರೆ. ಐನ್ಸ್ವರ್ತ್‌ರವರು ತಮ್ಮ ಸೋದರಸಂಬಂಧಿಯಾದ ವಿಲಿಯಂ ಫ್ರಾನ್ಸಿಸ್ ಐನ್ಸ್ವರ್ತ್ ಅವರೊಂದಿಗೆ ನ್ಯೂ ಮಂತ್ಲಿಯನ್ನು ಉಪ-ಸಂಪಾದಕರಾಗಿ ಸಂಪಾದಿಸಿದರು. ನಂತರ, ೧೮೭೧-೭೯ ರವರೆಗೆ ವಿಲಿಯಂ ಫ್ರಾನ್ಸಿಸ್ ಐನ್ಸ್ವರ್ತ್‌ರವರು ಸಂಪಾದಕರಾಗಿದ್ದರು.

ಶೀರ್ಷಿಕೆಗಳು

ಬದಲಾಯಿಸಿ

ವರ್ಷಗಳಲ್ಲಿ, ಮ್ಯಾಗಜ಼ೀನ್ ಹಲವಾರು ಶೀರ್ಷಿಕೆಗಳನ್ನು ಹೊಂದಿತ್ತು. ಇವುಗಳು ಆನ್‌ಲೈನ್‌ನ ನಿಯತಕಾಲಿಕಗಳಲ್ಲಿ ಒಳಗೊಂಡಿರುತ್ತವೆ:[]

  • ನ್ಯೂ ಮಂತ್ಲಿ ಮ್ಯಾಗಜ಼ೀನ್ ಮತ್ತು ಯೂನಿವರ್ಸಲ್ ರಿಜಿಸ್ಟರ್ - ಫೆಬ್ರವರಿ ೧೮೧೪ ರಿಂದ ಡಿಸೆಂಬರ್ ೧೮೨೦.
  • ನ್ಯೂ ಮಂತ್ಲಿ ಮ್ಯಾಗಜ಼ೀನ್ ಮತ್ತು ಲಿಟರರಿ ಜರ್ನಲ್ - ಜನವರಿ ೧೮೨೧ ರಿಂದ ಡಿಸೆಂಬರ್ ೧೮೩೬.
  • ನ್ಯೂ ಮಂತ್ಲಿ ಮ್ಯಾಗಜ಼ೀನ್ ಮತ್ತು ಹಾಸ್ಯಗಾರ - ಜನವರಿ ೧೮೩೭ ರಿಂದ ಡಿಸೆಂಬರ್ ೧೮೫೨.
  • ನ್ಯೂ ಮಂತ್ಲಿ ಮ್ಯಾಗಜ಼ೀನ್ - ಜನವರಿ ೧೮೫೩ ರಿಂದ ಡಿಸೆಂಬರ್ ೧೮೮೧.
  • ನ್ಯೂ ಮಂತ್ಲಿ - ಜನವರಿಯಿಂದ ಅಕ್ಟೋಬರ್ ೧೮೮೨.

ಸಂಪಾದಕರು

ಬದಲಾಯಿಸಿ

ನ್ಯೂ ಮಂತ್ಲಿ ಮ್ಯಾಗಜ಼ೀನ್‌ನ ಸಂಪಾದಕತ್ವವು ಉಪಸ್ಥಾನ ಅಥವಾ ಬಳಕೆಯಿಂದ ಜಟಿಲವಾಗಿದೆ. ಥಿಯೋಡರ್ ಹುಕ್, ಥಾಮಸ್ ಹುಡ್, ಐನ್ಸ್ವರ್ತ್ ಇವರಲ್ಲಿ ಐನ್ಸ್ವರ್ತ್‌ರವರು ಮಾತ್ರ ಬೌಂಡ್ ಸಂಪುಟದ ಶೀರ್ಷಿಕೆ ಪುಟಗಳಲ್ಲಿ ಹೆಸರಿಸಲ್ಪಟ್ಟಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
  1. David Higgins, 'The New Monthly Magazine', The Literary Encyclopedia, 22 October 2006.
  2. 'Introduction', Wellesley Index to Periodical Literature
  3. 'Introduction', Wellesley Index to Periodical Literature; Higgins, The Literary Encyclopedia.
  4. New Monthly Magazine Vol 3, 1822 page 102 at Google Books
  5. Higgins, The Literary Encyclopedia.
  6. Introduction, Wellesley Index to Victorian Periodicals
  7. 'Introduction', Wellesley Index to Periodical Literature. According to the ODNB, the transcendentalist Francis Barham (1808–1871) edited the paper at around this time: "Two hundred pounds invested in the New Monthly Magazine procured him the joint editorship with John Abraham Heraud, the poet and dramatist. Anne Taylor, "Barham, Francis Foster (Alist Francis Barham) (1808–1871)", Oxford Dictionary of National Biography, Oxford University Press, 2004, accessed 4 January 2008. Heraud's ODNB entry has him editing the Monthly Magazine from 1839 to 1842, but does not mention the New Monthly.
  8. List of periodical titles, retrieved 10 June 2010 (Scroll down to see title listings for The New Monthly, listed below The New London Magazine and above The New Quarterly Magazine
  9. {{cite encyclopedia  |encyclopedia=Oxford Dictionary of National Biography  |edition=online  |publisher=Oxford University Press  |ref=harv  |last    =Banerji  |last1    =  |author  =  |author1  =  |authors  =  |first    =Nilanjana  |first1  =  |authorlink  =  |author-link  =  |HIDE_PARAMETER10=  |authorlink1  =    |last2    =  |author2  =  |first2    =  |authorlink2  =  |HIDE_PARAMETER16=  |last3    =  |author3  =  |first3    =  |authorlink3  =  |HIDE_PARAMETER21=  |title    =Shoberl, Frederic  |title    =  |url      =  |doi        =  |origyear    =  |year        =  |date        =  |month      =  |HIDE_PARAMETER30=  |HIDE_PARAMETER31=  |separator  =  |mode        =    |doi=10.1093/ref:odnb/25450 }} (Subscription or UK public library membership required.)
  10. "Samuel Carter Hall". www.ricorso.net.
  11. 1839–1840 Francis Foster Barham edited with John Abraham Heraud, according to Thompson Cooper's DNB article on Barham; contradicted by the ODNB biography of Heraud which says it was the Monthly Magazine 1839–1842, though supported by the ODNB biography of Barham.

ಮತ್ತಷ್ಟು ಓದಿ

ಬದಲಾಯಿಸಿ

ಈ ಪ್ರಕಟಣೆಯ ಹಿಂದಿನ ಅನೇಕ ಆವೃತ್ತಿಗಳು ಈಗ ಆನ್‌ಲೈನ್‌ನಲ್ಲಿ ಲಭ್ಯವಿದೆ. ನಂತರದ, ಪರಿಮಾಣ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಅನುಕ್ರಮವಾಗಿರುತ್ತದೆ. ಹಿಂದಿನ ಪ್ರಕಟಣೆಗಳಲ್ಲಿ, ಕೆಳಗೆ ಪಟ್ಟಿ ಮಾಡಲಾದ ಉದಾಹರಣೆಗಳ ಪ್ರಕಾರ, ೧೮೨೨ ರಂತಹ ಒಂದೇ ವರ್ಷದಲ್ಲಿ ಅನೇಕ ಸಂಪುಟ ಸಂಖ್ಯೆಯ ಕನಿಷ್ಠ ಒಂದು ಉದಾಹರಣೆಯನ್ನು ಕಾಣಬಹುದು. ಈ ಪಟ್ಟಿಯು ಬಳಸಿದ ಶೀರ್ಷಿಕೆಗಳನ್ನು ವಿವರಿಸುತ್ತದೆ ಮತ್ತು ಪ್ರಕಾಶನ ಆವರ್ತನದ ಸೂಚನೆಯನ್ನು ನೀಡುತ್ತದೆ.

ಬಾಹ್ಯ ಕೊಂಡಿ

ಬದಲಾಯಿಸಿ