ದಿಶಾ ವಾಕಾನಿ, (ಜನನ. ೧೭ ನೇ ಸೆಪ್ಟೆಂಬರ್ ೧೯೭೮) ಗುಜರಾತಿನ ಅಹ್ಮೆದಾಬಾದ್ ನಲ್ಲಿ ಬೆಳೆದರು. ಭಾರತೀಯ ಟೆಲಿವಿಶನ್ ಅಭಿನೇತ್ರಿ. ಹಿಂದೀಭಾಷೆಯ ಟೆಲಿವಿಶನ್ ಧಾರಾವಾಹಿಯಲ್ಲಿ ಅಭಿನಯಿಸಲು ಹೆಚ್ಚಿನ ಆಸಕ್ತಿ. ಬಾಲೀವುಡ್ ಚಿತ್ರದಲ್ಲೂ ನಟಿಸಿದ್ದಾರೆ. 'ಟೆಲಿವಿಶನ್ ಜಾಹಿರಾತಿನ ಚಿತ್ರಗಳು' ಅವರಿಗೆ ಪ್ರಿಯ. 'ಟೈಡ್ ಡಿಟರ್ಜೆಂಟ್ ಕಮರ್ಶಿಯಲ್' ನಲ್ಲೂ ಅವರು ಅಭಿನಯಿಸಿದ್ದಾರೆ. ಮುಂಬೈನ ಗೋರೆಗಾಂ ಉಪನಗರದಲ್ಲಿ ವಾಸ್ತವ್ಯ.

ದಿಶಾ ವಾಕಾನಿ
ಐಟೀಏ ಅವಾರ್ಡ್ ಸಮಾರಂಭದಲ್ಲಿ ದಿಶಾ ವಾಕಾನಿ
ಜನನ
ದಿಶಾ ವಾಕಾನಿ

ಟೆಂಪ್ಲೇಟು:ಜನಿಸಿದ ತಾರೀಖು ಮತ್ತು ವಯಸ್ಸು
ವೃತ್ತಿಅಭಿನೇತ್ರಿ
ಸಕ್ರಿಯ ವರ್ಷಗಳು೧೯೯೭–ಈಗಿನ ತನಕ.

'ಸಬ್ ಟೆಲಿವಿಶನ್ ಚಾನೆಲ್', ಹಿಂದಿ ಜನಪ್ರಿಯ ಧಾರಾವಾಹಿ, 'ತಾರಕ್ ಮೆಹ್ತಾ ಕ ಉಲ್ಟಾ ಚಷ್ಮಾ ಧಾರಾವಾಹಿ', ಯಲ್ಲಿ ಕಾಣಿಸಿಕೊಂಡಮೇಲೆ, 'ದಯಾಬೆಹೆನ್', 'ದಯಾ ಜೆಥಾಲಾಲ್ ಗಡ', ಎಂಬ ಹೆಸರಿಂದಲೂ ಈಗ ಪ್ರಸಿದ್ಧರು. 'ತಾರಕ್ ಮೆಹ್ತಾ ಕ ಉಲ್ಟಾ ಚಷ್ಮಾ ಧಾರಾವಾಹಿ,' ಯಲ್ಲಿ ಅಭಿನೇತ ದಿಲೀಪ್ ಜೋಶಿ, ಜೆಥಾಲಾಲ್ ಗಡನ ಪಾತ್ರವಹಿಸಿದ್ದಾರೆ. ಆತನ ಪತ್ನಿ,, 'ದಯಾ ಗಡರ ಪಾತ್ರ', 'ದಿಶಾ ವಾಕಾನಿ' ಮಾಡಿದ್ದಾರೆ. ಇಬ್ಬರ ಪಾತ್ರಗಳೂ 'ಟೆಲಿವಿಶನ್ ರಸಿಕ'ರಿಗೆ ಪ್ರಿಯವಾಗಿವೆ. 'ಸೀರಿಯಲ್' ನಲ್ಲಿ ದಯಾರ ಸೋದರ, ಸುಂದರ್ ಲಾಲ್ ನ ಪಾತ್ರವನ್ನು, 'ದಿಶಾವಾಕಾನಿ' ಯವರ, ಸ್ವಂತ ತಮ್ಮ, ಮಯೂರ್ ವಾಕಾನಿ,ಯೇ ಮಾಡಿದ್ದಾರೆ.