ದಿಶಾ ಮದನ್
ದಿಶಾ ಮದನ್ ಭಾರತೀಯ ನಟಿ ಮತ್ತು ಸಾಮಾಜಿಕ ಮಾಧ್ಯಮ ವ್ಯಕ್ತಿತ್ವ ಆಗಿದ್ದಾರೆ. ಅವರು ಕನ್ನಡ ಭಾಷೆಯ ದೂರದರ್ಶನ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ತಮ್ಮ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ.
ದಿಶಾ ಮದನ್ | |
---|---|
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ನಟಿ, ನೃತ್ಯಗಾರ್ತಿ |
ಸಕ್ರಿಯ ವರ್ಷಗಳು | 2009, 2014–ಪ್ರಸ್ತುತ |
ಸಂಗಾತಿ |
ಶಶಾಂಕ್ ವಾಸುಕಿ ಗೋಪಾಲ್
(m. ೨೦೧೭) |
ಮಕ್ಕಳು | 2 |
ವೈಯಕ್ತಿಕ ಜೀವನ
ಬದಲಾಯಿಸಿಇವರು ಶಶಾಂಕ್ ವಾಸುಕಿ ಗೋಪಾಲ್ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ವಿಯಾನ್ ಶಶಾಂಕ್ ವಾಸುಕಿ ಎಂಬ ಮಗನು 27 ಜುಲೈ 2019 ರಂದು ಜನಿಸಿದರು ಮತ್ತು ಅವಿರಾ ವಾಸುಕಿ ಎಂಬ ಮಗಳು 1 ಮಾರ್ಚ್ 2022 ರಂದು ಜನಿಸಿದರು [೧] [೨].
ವೃತ್ತಿ ಜೀವನ
ಬದಲಾಯಿಸಿದಿಶಾ ಮದನ್ ಡ್ಯಾನ್ಸಿಂಗ್ ಸ್ಟಾರ್‌ನ ಮೊದಲ ಸೀಸನ್‌ನೊಂದಿಗೆ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದರು. 2014 ರಲ್ಲಿ ಸುನಾಮಿ ಕಿಟ್ಟಿ ಜೊತೆಗೆ ಈ ಸೀಸನ್ ಪ್ರಶಸ್ತಿಯನ್ನು ಗೆದ್ದಿದ್ದರು. ಆದರೆ ಕನ್ನಡ ಕಿರುತೆರೆಗೆ ಬರುವ ಮೊದಲು ದಿಶಾ ಹಿಂದಿ ಕಿರುತೆರೆಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸೀಸನ್ 4ರಲ್ಲಿ ಭಾಗವಹಿಸಿದ್ದರು[೩]. ಅಷ್ಟೇ ಅಲ್ಲದೆ 2014ರಲ್ಲಿ ಪ್ರಸಾರಗೊಂಡ ಕುಲವಧು ಎಂಬ ಕನ್ನಡ ಧಾರಾವಾಹಿಯಲ್ಲಿ ವಚನ ಪಾತ್ರವನ್ನು ನಿರ್ವಹಿಸಿದ್ದರು. ಆದರೆ, ತನ್ನ ತಂದೆಯ ವ್ಯವಹಾರದಲ್ಲಿ ಸಹಾಯ ಮಾಡಲು ಈ ಧಾರಾವಾಹಿಯನ್ನು ಅರ್ಧದಲ್ಲೇ ತೊರೆದರು [೪].
ಇವರು musical.ly ಎಂಬ ಆಪ್‌ನಲ್ಲಿ, ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದ ಮೊದಲ ಭಾರತೀಯರಾಗಿದ್ದರು [೫]. ಜುಲೈ 2018 ರ ಹೊತ್ತಿಗೆ ಇವರು 2.6 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು [೫].
2018 ರಲ್ಲಿ, ಅವರು ಅರವಿಂದ್ ಅಯ್ಯರ್ ಅವರೊಂದಿಗೆ ಹೇಟ್ ಯು ರೋಮಿಯೋ ಎಂಬ ವೆಬ್ ಸರಣಿಯಲ್ಲಿ ನಟಿಸಲು ಸಿದ್ಧರಾಗಿದ್ದರು, ಅದು ಇನ್ನೂ ಬಿಡುಗಡೆಯಾಗಬೇಕಿದೆ [೬] [೭] [೮]. 2020 ರಲ್ಲಿ, ಬಿಡುಗಡೆಯಾದ ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ಸುದ್ದಿ ವರದಿಗಾರರಾಗಿ ನಟಿಸಿದ್ದಾರೆ [೯] [೧೦] . ಹಂಬಲ್ ಪೊಲಿಟಿಷಿಯನ್ ನಾಗಾರಾಜ್ ಎಂಬ ವೆಬ್ ಸರಣಿಯ ಸೀಕ್ವೆಲ್‌ನಲ್ಲಿಯೂ ಅವರು ಪಾತ್ರವನ್ನು ನಿರ್ವಹಿಸಿದ್ದಾರೆ [೧೧].
ಚಲನಚಿತ್ರಗಳ ಪಟ್ಟಿ
ಬದಲಾಯಿಸಿವರ್ಷ | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು |
---|---|---|---|
2020 | ಫ್ರೆಂಚ್ ಬಿರಿಯಾನಿ | ಮಾಲಿನಿ |
ದೂರದರ್ಶನ
ಬದಲಾಯಿಸಿವರ್ಷ | ಶೀರ್ಷಿಕೆ | ಪಾತ್ರ | ವಾಹಿನಿ | ಟಿಪ್ಪಣಿಗಳು |
---|---|---|---|---|
2009 | ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸೀಸನ್ 4 | ಸ್ಪರ್ಧಿ | ಝೀ ಟಿವಿ | |
2014 | ಡ್ಯಾನ್ಸಿಂಗ್ ಸ್ಟಾರ್ | ಸ್ವತಃ | ಈಟಿವಿ ಕನ್ನಡ | ವಿಜೇತ |
2014 | ಕುಲವಧು | ವಚನ | ಕಲರ್ಸ್ ಕನ್ನಡ | [೧೨] |
2024 | ಲಕ್ಷ್ಮಿ ನಿವಾಸ | ಭಾವನಾ | ಜೀ ಕನ್ನಡ | [೧೩] |
ವೆಬ್ ಸರಣಿ
ಬದಲಾಯಿಸಿವರ್ಷ | ಶೀರ್ಷಿಕೆ | ಪಾತ್ರ | ಓಟಿಟಿ | ಟಿಪ್ಪಣಿಗಳು |
---|---|---|---|---|
2022 | ಹೇಟ್ ಯು ರೋಮಿಯೋ | ಚಾರ್ವಿ | ಟಾಕೀಸ್ ಆಪ್ | |
2022 | ಹಂಬಲ್ ಪೊಲಿಟೀಶನ್ ನೊಗ್ ರಾಜ್ | ಸಿಮ್ಮಿ | ವೋಟ್ | ವೆಬ್ ಸರಣಿ |
ಉಲ್ಲೇಖಗಳು
ಬದಲಾಯಿಸಿ- ↑ "Disha Madan shares a picture of her baby boy". The Times of India. 29 July 2019.
- ↑ "Soon-to-be-mom Disha Madan shares tips for other ladies expecting a child". The Times of India. 2 May 2019.
- ↑ "ರಾಷ್ಟೀಯ ಮಟ್ಟದಲ್ಲಿ ಬಾಲಿವುಡ್ ನಟರಿಂದ ಭೇಷ್ ಎನಿಸಿಕೊಂಡಿದ್ದ ನಟಿ ದಿಶಾ ಮದನ್!". ವಿಜಯ ಕರ್ನಾಟಕ. Retrieved 9 ಜುಲೈ 2024.
- ↑ "Actress Disha Madan takes up #dalgonacoffee challenge". The Times of India. 8 April 2020.
- ↑ ೫.೦ ೫.೧ Dua, Mansi (4 July 2018). "Move over YouTube, Musical.ly is the latest fad for upcoming vloggers". The Indian Express.
- ↑ Yerasala, Ikyatha (14 August 2018). "Disha gets 'web'bed!". Deccan Chronicle.
- ↑ Suresh, Sunayana (9 August 2018). "Disha Madan makes her acting debut opposite Aravinnd Iyer". The Times of India.
- ↑ Sharadhaa, A. (18 July 2020). "French Biriyani will remain special film for me: Disha Madan". The New Indian Express.
- ↑ Yerasala, Ikyatha (13 January 2019). "Disha Madan's Kannada film industry debut". Deccan Chronicle.
- ↑ "Disha Madan nominates fellow actors for #TheBengaluruSongChallenge". The Times of India. 20 July 2020.
- ↑ Sharadhaa, A. (17 July 2020). "French Biriyani will remain special film for me: Disha Madan". Cinema Express.
- ↑ S. M., Shashiprasad (27 April 2017). "Amrutha Ramamoorthi: Curly-haired queen of drama!". Deccan Chronicle.
- ↑ "Disha Madan returns to small screen after a decade!". Zeenews India. Retrieved 27 November 2023.