ದಿವೈರ್ ಕದನ - 1582
ಮೊದಲನೇ ದಿವೈರ್ ಕದನ - 1582 ರ ದಸರಾ (ವಿಜಯದಶಮಿ) ಸಂದರ್ಭದಲ್ಲಿ, ಮಹಾರಾಣಾ ಪ್ರತಾಪನು ದಿವೈರ್ ಮೇಲೆ ದಾಳಿ ಮಾಡಿದ. ಯುದ್ಧದಲ್ಲಿ ಮೊಘಲರು ಸೋತು ಪಲಾಯನ ಮಾಡಿದರು. ಸುಮಾರು 36,000 ಮೊಘಲ್ ಸೈನಿಕರು ಶರಣಾಗತರಾದರು. ಮೇವಾರಿನಲ್ಲಿದ್ದ ಮೊಘಲರ 36 ಗ್ಯಾರಿಸನ್ (ದಂಡಿನ ಪಟ್ಟಣ)ಗಳನ್ನು ಮುಚ್ಚಲಾಯಿತು. ಹೀಗಾಗಿ ದಿವೈರ್ ಯುದ್ದವು ರಜಪೂತರಿಗೆ ಅದ್ಬುತ ಯಶಸ್ಸುನ್ನು ಕೊಟ್ಟಿತ್ತು. ಒಂದು ಸಣ್ಣ ಕಾರ್ಯಾಚರಣೆಯಲ್ಲಿ ಪ್ರತಾಪನು ತನ್ನ ತಂದೆಯ ಕಾಲದಲ್ಲಿ ಕಳೆದು ಹೋದ ಚಿತ್ತೋರ್, ಅಜ್ಮೇರ್, ಮತ್ತು ಮಂಡಲಗಢವನ್ನು ಹೊರತು ಪಡಿಸಿ ಇಡೀ ಮೇವಾರ್ ಪ್ರಾಂತ್ಯವನ್ನು ಮರಳಿ ಪಡೆದನು. ಈ ವಿಜಯದ ನೆನಪಿಗಾಗಿ ನಿರ್ಮಿಸಿದ ಸ್ಮಾರಕವನ್ನು ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ರವರು ಜನವರಿ 10, 2012 ರಂದು ಉದ್ಘಾಟಿಸಿದರು[೧]
ಹಿನ್ನೆಲೆ
ಬದಲಾಯಿಸಿಹಲ್ದಿಘಾಟ್ ಕದನ ಯಾವುದೇ ನಿರ್ಣಯ ಕೊಡಲಿಲ್ಲ, ಈ ಕದನದಲ್ಲಿ ಮಹಾರಾಣ ಪ್ರತಾಪನಿಗೆ ಹಿನ್ನೆಡೆಯಾಯಿತು. ಮೊಘಲರು ಕುಂಭಲ್‌ಗಢ ಗೋಗುಂಡಾ, ಉದಯಪುರ ಮತ್ತು ಚಪ್ಪನ್ ಅನ್ನು ವಶಪಡಿಸಿಕೊಂಡರು. ಹಲ್ದಿಘಾಟ್ ಯುದ್ದದ ನಂತರ ಪ್ರತಾಪನ ಸೈನ್ಯದಲ್ಲಿ 7,000 ಸೈನಿಕರು ಮಾತ್ರ ಉಳಿದಿದ್ದರು. ಬಹುಸಂಖ್ಯಾತ ಮೊಘಲರನ್ನು ಬಯಲು ಯುದ್ದದಲ್ಲಿ ಹೋರಾಡಿ ಗೆಲ್ಲಲಾಗದು ಎಂದು ಅರಿತ ಪ್ರತಾಪ್ ಯುದ್ದ ತಂತ್ರವನ್ನು ಗೊರಿಲ್ಲಾ ತಂತ್ರಕ್ಕೆ ಬದಲಿಸಿಕೂಂಡನು. ಮೊಘಲರನ್ನು ಒಂದು ಕಡೆ ನೆಲೆಗೊಳ್ಳಲು ಬಿಡಲಿಲ್ಲ, ಉಪಟಳ ತಾಳಲಾರದೆ ಪ್ರತಾಪನನ್ನು ನಿಗ್ರಹಿಸಲು, ಅಕ್ಬರ್ ಪ್ರತಿ ಬಾರಿಯೂ 1 ಲಕ್ಷಕ್ಕೂ ಹೆಚ್ಚಿನ ಸೈನ್ಯವನ್ನು ಹಲವಾರು ಬಾರಿ ಕಾರ್ಯಾಚರಣೆಗೆ ಕಳುಹಿಸಬೇಕಾಯಿತು [೨]
1577: ಭಗವಾಬ್ದಾಸ್, ಮಾನ್ಸಿಂಗ್ ಜೊತೆಗೆ ಸಯ್ಯದ್ ಹಾಶಿಮ್, ಸಯ್ಯದ್ ಕಾಶಿಮ್, ಶಹಬಾಜ್ ಖಾನ್
1578: ಶಾಬಾಜ್ ಖಾನ್ ಜೊತೆಗೆ ಕಾಜಿ ಖಾನ್ ಬದ್ಕಾಶಿ, ಮಾನ್ಸಿಂಗ್, ಭಗವಾಂದಾಸ್
1579: ಮತ್ತೆ ಶಾಬಾಜ್ ಖಾನ್ (ಮೂರನೇ ಬಾರಿ ಮೇವಾಡ್ ಮೇಲೆ ದಾಳಿ)
1580: ರಹೀಮ್ ಖಂಖ್ನಾ (ಅಜ್ಮೀರ್) ಮತ್ತು ಇತರರು.
ತಯಾರಿ
ಬದಲಾಯಿಸಿಅಕ್ಬರ್ ಕಳುಹಿಸಿದ ಪ್ರತಿಯೊಬ್ಬ ಸರದಾರನು ಪ್ರತಾಪ್ ನನ್ನು ಸೆರೆಹಿಡಿಯುವಲ್ಲಿ ವಿಫಲರಾದರು. ಮಹಾರಾಣಾ ಯುದ್ದಮಾಡಲು ಸರಂಜಾಮುಗಳ ಕೊರತೆಯನ್ನು ಎದುರಿಸುತ್ತಿರುವಾಗ, ಅವನ ಮಂತ್ರಿ ಭಾಮಾಶಾ (ಅವನು ರಾಣಾನ ಮಂತ್ರಿಯಾಗಿದ್ದನು). ತನ್ನ ಪೂರ್ವಜರು ಸಂಗ್ರಹಸಿದ್ದ ಸಂಪತುನ್ನು ರಾಣಾನಿಗೆ ಕೊಟ್ಟನು. ಇದರ ಜೊತೆಗೆ ಪ್ರತಾಪ ಬಳಿಯಲ್ಲಿದ್ದ ಸಂಪತ್ತು 25,000 ಸೈನಿಕರ ನಿರ್ವಹಣೆಗೆ ಸಾಕಗಿತ್ತು. ತನ್ನ ಸೈನ್ಯವನ್ನು ಮರು ಸಂಘಟಿಸಿ ಪ್ರತಾಪನು ಅರಾವಳಿ ಬೆಟ್ಟದಲ್ಲಿರುವ ಮಂಕಿಯವಾಸ್ ಕಾಡಿನಲ್ಲಿ ಯುದ್ದ ತಂತ್ರವನ್ನು ರೂಪಿಸಿದನು. ದಿವೈರ್ ಮೇವಾರದ ಪ್ರವೇಶಸ್ಥಾನ, ದಿವೈರ್ ಕೊಟೆಯು ಮೇವಾರಕ್ಕೆ ನೈರ್ಸಗಿಕ ಕೊಟೆಯಾಗಿತ್ತು.
ಯುದ್ದ
ಬದಲಾಯಿಸಿಪ್ರತಾಪನು ತನ್ನ ಸೈನ್ಯವನ್ನು ಎರಡು ಗುಂಪುಗಳಾಗಿ ವಿಂಗಡಿಸಿದನು, ಒಂದು ತಂಡವನ್ನು ಸ್ವಯಂ ತಾನೆ ಮುನ್ನೆಡೆಸುತ್ತ, ಮತ್ತೂಂದನ್ನು ಅವನ ಮಗ ಅಮರ್ ಸಿಂಗ್ ನೇತೃತ್ವದಲ್ಲಿ ಸಿದ್ದಪಡಿಸಿದನು. ಈ ಯುದ್ದದಲ್ಲಿ ಮೊಘಲರ ಸೈನ್ಯವನ್ನು ಅಕ್ಬರನ ಚಿಕ್ಕಪ್ಪ ಸುಲ್ತಾನ್ ಖಾನ್ ಮುನ್ನಡೆಸುತ್ತಿದ್ದನು. ಮಹಾರಾಣನ ಸೈನ್ಯವು ಕುಂಭಲ್‌ಗಢನಿಂದ ಈಶಾನ್ಯಕ್ಕೆ 40 ಕಿ.ಮಿ ದೂರದಲ್ಲಿರುವ ದಿವೈರ್ ಗ್ರಾಮದಲ್ಲಿದ್ದ ಮೊಘಲ್ ಹೊರಠಾಣೆ ಮೇಲೆ ದಾಳಿ ಮಾಡಿದನು.[೩][೪]
ಕದನದಲ್ಲಿ ಅಮರ್ ಸಿಂಗ್ ಮೊಘಲ್ ಸರದಾರನಾದ ಸುಲ್ತಾನ್ ಖಾನ್ ಮೇಲೆ ಈಟಿಯಿಂದ ದಾಳಿ ಮಾಡಿದ್ದು, ಆ ದಾಳಿಯ ಆಘಾತ ಎಷ್ಟಿತ್ತರೆಂದರೆ ಈಟಿಯು ಕುದುರೆ ಮತ್ತು ಅವನ ದೇಹವನ್ನು ತೂರಿಕೋಂಡು ನೆಲಕ್ಕೆ ಅಪ್ಪಲಿಸಿತು. ಹೊಡೆತ ಎಷ್ಟು ಬಲವಾಗಿತ್ತೇಂದರೆ ಯುದ್ದದ ನಂತರವು ಅವನ ದೇಹದಿಂದ ಈಟಿಯನ್ನು ಹೊರ ತಗೆಯಲು ಆಗಲಿಲ್ಲ. ಮತ್ತೋಂದೆಡೆ ಪ್ರತಾಪನು ಇನ್ನೋಬ್ಬ ಮೊಘಲ್ ಸರದಾರ ಬಹಲ್ಲೋಲ್ ಖಾನ್ ಮತ್ತು ಅವನ ಕುದುರೆಯನ್ನು ಒಂದೇ ಏಟಿಗೆ ಎರಡು ತುಂಡಾಗಿ ಕತ್ತರಿಸಿದನು. ಈ ಘಟನೆಯ ನಂತರ "ಮೇವಾರದ ಯೋಧರು ಕುದುರೆಯನ್ನು ಸವಾರರೋಂದಿಗೆ ಒಂದೇ ಏಟಿಗೆ ಕತ್ತರಿಸಿದರು" ಎಂಬ ನುಡಿ ಪ್ರಸಿದ್ದವಾಯಿತು.
ನಂತರ
ಬದಲಾಯಿಸಿತಮ್ಮ ಸರದಾರರಿಗಾದ ಗತಿಯನ್ನು ಕಂಡು 36,00 ಮೊಘಲ್ ಸೈನಿಕರು ಶರಣರಾದರು[೫]. ಮೇವಾರ್ ಪ್ರಂತ್ಯದ ಮೊಘಲರ 36 ಗ್ಯಾರಿಸನ್ (ದಂಡಿನ ಪಟ್ಟಣ)ಗಳನ್ನು ಮುಚ್ಚಲಾಯಿತು. ಹೀಗಾಗಿ ದಿವೈರ್ ಯುದ್ದವು ರಜಪೂತರಿಗೆ ಅದ್ಬುತ ಯಶಸ್ಸುನ್ನು ಕೊಟ್ಟಿತ್ತು. ಒಂದು ಸಣ್ಣ ಕಾರ್ಯಾಚರಣೆಯಲ್ಲಿ ಪ್ರತಾಪನು ತನ್ನ ತಂದೆಯ ಕಾಲದಲ್ಲಿ ಕಳೆದು ಹೋದ ಚಿತ್ತೋರ್, ಅಜ್ಮೇರ್, ಮತ್ತು ಮಂಡಲಗಢವನ್ನು ಹೊರತು ಪಡಿಸಿ ಇಡೀ ಮೇವಾರ್ ಪ್ರಾಂತ್ಯವನ್ನು ಮರಳಿ ಪಡೆದನು. ಯುದ್ದದ ನಂತರವೂ ಅಕ್ಬರನು ತನ್ನ ಸೈನೆಯನ್ನು ಪ್ರತಾಪನ ವಿರುದ್ದ ಕಳಿಸುವುದನ್ನು ಮುಂದುವರಿಸಿದನು, ಆದರೆ ಪ್ರತಿ ಬಾರಿಯ ಧಾಳಿಯನ್ನು ಹಿಮ್ಮೇಟಿಸಲಾಯಿತು. ಅಕ್ಬರನು ತಾನೆ ಮೇವಾರಕ್ಕೆ ಬಂದು 6 ತಿಂಗಳುಗಳ ಕಾಲ ಬಿಟ್ಟುಬಿಡದೆ ಪ್ರಯತ್ನಿಸಿದನು. ಕೊನೆಗೆ ಗದ್ಯಂತರವಿಲ್ಲದೆ ಆಗ್ರಾಗೆ ಮರಳಿದನು.
ಸಹಾ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ https://udaipurblog.com/do-you-know-about-the-maharana-pratap-vijay-smarak-in-dewair.html
- ↑ Team (2017-08-20). "1582: Battle of Dewair". RajRAS | RAS Exam Preparation (in ಅಮೆರಿಕನ್ ಇಂಗ್ಲಿಷ್). Retrieved 2024-07-09.
- ↑ Mackenzie, Hector; Battle, W.H (1901). "ST. THOMAS'S HOSPITAL". The Lancet. 158 (4084): 1582–1584. doi:10.1016/s0140-6736(00)44677-5. ISSN 0140-6736.
- ↑ Qanungo, Kalika Ranjan (1960). Studies in Rajput History (in ಇಂಗ್ಲಿಷ್). S. Chand.
- ↑ https://kreately.in/when-36000-mughals-surrendered-to-maharana-pratap-in-battle-of-dewair/